ಈ 31 ಲಕ್ಷ ಜನರಿಗೆ ಉಡುಗೊರೆ ನೀಡಲು ಸಿದ್ಧವಾಗಿದೆ Modi Government: ಶೀಘ್ರದಲ್ಲೇ ಘೋಷಣೆ ಸಾಧ್ಯತೆ

ಕೇಂದ್ರ ಸರ್ಕಾರದ 31 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸಂತಸದ ಸುದ್ದಿ. ತುಟ್ಟಿಭತ್ಯೆ (DA Dearness Allowance) ಹೆಚ್ಚಿಸಿದ ನಂತರ ಈಗ ಈ ಉದ್ಯೋಗಿಗಳ ವಸತಿ ಭತ್ಯೆ (HRA House Rent Allowance) ಕೂಡ ಹೆಚ್ಚಾಗಬಹುದು ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇಂದ್ರ ಸರ್ಕಾರದ 31 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸಂತಸದ ಸುದ್ದಿ. ತುಟ್ಟಿಭತ್ಯೆ (DA Dearness Allowance) ಹೆಚ್ಚಿಸಿದ ನಂತರ ಈಗ ಈ ಉದ್ಯೋಗಿಗಳ ವಸತಿ ಭತ್ಯೆ (HRA House Rent Allowance) ಕೂಡ ಹೆಚ್ಚಾಗಬಹುದು ಎಂದು ವರದಿಯಾಗಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ (Central Govt Employees) ಶೀಘ್ರದಲ್ಲೇ ಈ ಉಡುಗೊರೆಯನ್ನು ಘೋಷಿಸಬಹುದು ಎನ್ನಲಾಗಿದೆ. ಸದ್ಯ ಕೇಂದ್ರ ನೌಕರರು ತಮ್ಮ ವೃತ್ತಿಗೆ ವರ್ಗಕ್ಕೆ ಅನುಗುಣವಾಗಿ ಶೇ.9, ಶೇ.18 ಮತ್ತು ಶೇ.27ರ ದರದಲ್ಲಿ ಎಚ್‌ಆರ್‌ಎ ಪಡೆಯುತ್ತಾರೆ. ಈ ಭತ್ಯೆ ಶೇ.3ರಷ್ಟು ಹೆಚ್ಚಳವಾಗುತ್ತೆ ಎನ್ನಲಾಗುತ್ತಿದೆ. ಈ ಹೆಚ್ಚಳದ ನಂತರ, ಎಚ್‌ಆರ್‌ಎ ದರಗಳು ಶೇಕಡಾ 10, ಶೇಕಡಾ 20 ಮತ್ತು ಶೇಕಡಾ 30 ಆಗಿರುತ್ತದೆ. ಈ ರೀತಿಯಾಗಿ ಕೇಂದ್ರ ನೌಕರರ ಕನಿಷ್ಠ ಎಚ್‌ಆರ್‌ಎ ಮತ್ತೆ ಶೇಕಡಾ 10 ಕ್ಕೆ ತಲುಪುತ್ತದೆ.

ತೆರಿಗೆ ಮತ್ತು ಹೂಡಿಕೆ ತಜ್ಞ ಬಲವಂತ್ ಜೈನ್ (Balavanth Jain) ಮಾತನಾಡಿ, ಎಚ್ ಆರ್ ಎ ಹೆಚ್ಚಿಸುವ ನಿರ್ಧಾರ ಕೈಗೊಂಡರೆ ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ಈ ನಿರ್ಧಾರವು ರಕ್ಷಣಾ ಕ್ಷೇತ್ರದ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅವರಿಗೆ ಸಂಬಳದಿಂದ ಭತ್ಯೆಗಳವರೆಗೆ ಪ್ರತ್ಯೇಕ ವ್ಯವಸ್ಥೆ ಇದೆ.

31 ಲಕ್ಷ ಜನರಿಗೆ ಸಿಗಲಿದೆ ಲಾಭ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 38 ಲಕ್ಷ ಹುದ್ದೆಗಳಿದ್ದು, ಪ್ರಸ್ತುತ 31.1 ಲಕ್ಷ ಜನರನ್ನು ನೇಮಕ ಮಾಡಲಾಗಿದೆ. ಆದ್ದರಿಂದ ಸರ್ಕಾರ ಎಚ್‌ಆರ್‌ಎ ಹೆಚ್ಚಿಸಿದರೆ ಈ 31.1 ಲಕ್ಷ ಜನರಿಗೆ ಇದರ ಲಾಭ ದೊರೆಯಲಿದೆ.

ಇದನ್ನೂ ಓದಿ:  PM Kisan: ನಿಯಮ ಬದಲಿಸಿದ ಸರ್ಕಾರ: ಮುಂದಿನ ಕಂತು ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ

ಎರಡು ಹಂತಗಳಲ್ಲಿ ಏರಿಕೆ ಸಾಧ್ಯತೆ!

HRA ಹೆಚ್ಚಿಸುವ ನಿರ್ಧಾರ ಅಷ್ಟು ಸುಲಭವಲ್ಲ. HRA ಅನ್ನು ಹೆಚ್ಚಿಸುವಂತೆ ವೇತನ ಆಯೋಗದ ಶಿಫಾರಸು ಮಾಡಿದೆ. ಏಳನೇ ವೇತನ ಆಯೋಗದ (7th Pay Commision) ಶಿಫಾರಸಿನ ಪ್ರಕಾರ, ಎಚ್‌ಆರ್‌ಎ ಸ್ಲ್ಯಾಬ್ ಅನ್ನು ಶೇಕಡಾ 30, 20 ಮತ್ತು 10 ರ ಬದಲಿಗೆ 24 ರಿಂದ 8 ಪ್ರತಿಶತಕ್ಕೆ ಇಳಿಸಲಾಗಿದೆ. ಎರಡು ಹಂತಗಳಲ್ಲಿ ಹೆಚ್ಚಿಸಬಹುದು ಎಂದು ಆಯೋಗ ಹೇಳಿತ್ತು.

ಮೊದಲ ಬಾರಿಗೆ ತುಟ್ಟಿಭತ್ಯೆ 50 ಪ್ರತಿಶತ ಆದಾಗ, 9-27 ಪ್ರತಿಶತದ ಸ್ಲ್ಯಾಬ್‌ನಲ್ಲಿ HRA ಅನ್ನು 1 ರಿಂದ 3 ಪ್ರತಿಶತದಷ್ಟು ಹೆಚ್ಚಿಸಬಹುದು. ಇದರ ನಂತರ, ತುಟ್ಟಿಭತ್ಯೆ 100 ಪ್ರತಿಶತ ಆದಾಗ, ಎರಡನೇ ಹಂತದಲ್ಲಿ HRA ಅನ್ನು ಹೆಚ್ಚಿಸಬಹುದು.

ಸರ್ಕಾರವು ಡಿಎಯನ್ನು ತುಂಬಾ ಹೆಚ್ಚಿಸಬಹುದು, ಆದಾಗ್ಯೂ, ಹಣದುಬ್ಬರದ ಪರಿಸ್ಥಿತಿಯನ್ನು ಪರಿಗಣಿಸಿ, ಸರ್ಕಾರವು ಎಚ್‌ಆರ್‌ಎ ಬದಲಾವಣೆಗೆ ಡಿಎ ಮಟ್ಟವನ್ನು 25 ಪ್ರತಿಶತ ಮತ್ತು 50 ಪ್ರತಿಶತಕ್ಕೆ ನಿಗದಿಪಡಿಸಿದೆ.

ಶೇ.34ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ನಿರ್ಧಾರ

ಕಳೆದ ವರ್ಷ ಜುಲೈನಲ್ಲಿ ಸರಕಾರ ಡಿಎಯನ್ನು ಶೇ.28ಕ್ಕೆ ಹೆಚ್ಚಿಸಿತ್ತು. 25ರಷ್ಟು ಮೀರಿದ್ದರಿಂದ ಎಚ್‌ಆರ್‌ಎಯನ್ನೂ ಹೆಚ್ಚಿಸಲಾಗಿದೆ. ಸುದ್ದಿ ಪ್ರಕಾರ, ಸರ್ಕಾರವು 34 ರಷ್ಟು ಡಿಎ ಹೆಚ್ಚಿಸಲು ಹೊರಟಿದೆ. ಇದು ಸಂಭವಿಸಿದಲ್ಲಿ, ಅದು 50 ಪ್ರತಿಶತವನ್ನು ದಾಟುತ್ತದೆ ಮತ್ತು ಎರಡನೇ ಬಾರಿಗೆ HRA ಅನ್ನು ಹೆಚ್ಚಿಸಲು ಮಾರ್ಗವನ್ನು ತೆರವುಗೊಳಿಸಲಾಗುತ್ತದೆ.

ಇದನ್ನೂ ಓದಿ:  Jharkhand Petrol Subsidy: ಜಾರ್ಖಂಡ್ ನಲ್ಲಿ ಪೆಟ್ರೋಲ್ ಬೆಲೆ ₹ 25 ಇಳಿಕೆ; ಈ ಯೋಜನೆ ಲಾಭ ಪಡೆಯೋದು ಹೇಗೆ?

ಲೆಕ್ಕಾಚಾರ ಹೇಗೆ?
7 ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ 18,000 ರೂ ಇದ್ದರೆ, ಕೇಂದ್ರ ಸರ್ಕಾರಿ ನೌಕರರು 3060 ರೂ.ಗಳ ಡಿಎ ಅನ್ನು 2021 ರ ಜೂನ್ ವರೆಗೆ 17 ಶೇಕಡಾ ದರದಲ್ಲಿ ಪಡೆಯುತ್ತಾರೆ. ಜುಲೈ 2021 ರಿಂದ, ಕೇಂದ್ರ ಸರ್ಕಾರಿ ನೌಕರರು ಶೇ 28ರಷ್ಟು ಡಿಎ ಪ್ರಕಾರ ಪ್ರತಿ ತಿಂಗಳು 5040 ರೂ. ಇದರರ್ಥ ನೌಕರರ ಮಾಸಿಕ ವೇತನದಲ್ಲಿ ರೂ 1980 ಹೆಚ್ಚಳ ಪಡೆಯಲಿದ್ದಾರೆ. ಇದೇ ಲೆಕ್ಕಚಾರದ ಅನ್ವಯ, ಪಿಂಚಣಿದಾರರ ಪಿಂಚಣಿಯನ್ನು ಸಹ ನಿರ್ಧರಿಸಲಾಗುವುದು
Published by:Mahmadrafik K
First published: