7th Pay Big Update: ಸರ್ಕಾರಿ ನೌಕರರಿಗೆ ಡಬಲ್ ಧಮಾಕ! ತುಟ್ಟಿಭತ್ಯೆ ಹೆಚ್ಚಳ ಜೊತೆಗೆ ಮತ್ತೊಂದು ಬಿಗ್​ ಗಿಫ್ಟ್​

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. ಈಗ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮನೆ ಬಾಡಿಗೆ ಭತ್ಯೆ ಕೂಡ ಹೆಚ್ಚಾಗಬಹುದು ಎಂದು ಬಹುತೇಕ ಮಾಧ್ಯಮಗಳು ವರದಿ ಮಾಡಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (Tuition Allowance) ಯನ್ನು ಶೇ.3 ಅಥವಾ ಶೇ.4 ರಷ್ಟು ಹೆಚ್ಚಿಸಲಾಗುತ್ತದೆ. ಕೇಂದ್ರ ಸರ್ಕಾರ (Central Government) ವು ವರ್ಷಕ್ಕೆ ಎರಡು ಬಾರಿ ಡಿಎ (DA)ಯನ್ನು ಹೆಚ್ಚಿಸುತ್ತದೆ. ಪ್ರತಿ ವರ್ಷ ಜನವರಿ (January) ಯಲ್ಲಿ ಮತ್ತು ಜುಲೈ (July) ನಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡಲಾಗುತ್ತದೆ. ಈ ವರ್ಷ ಜುಲೈನಲ್ಲಿ ಡಿಎ ಏರಿಕೆಯಾಗಲಿದೆ. ಈ ಬಾರಿ ನೌಕರರು ಮತ್ತು ಪಿಂಚಣಿ (Pension) ದಾರರಿಗೆ ಡಿಎ ಮತ್ತು ಡಿಆರ್ ಶೇ.5ರಷ್ಟು ಹೆಚ್ಚಳವಾಗಲಿದೆ ಎಂಬ ಸುದ್ದಿಯಾಗಿತ್ತು. ಡಿಎ ಹೆಚ್ಚಳ ಮಾಡುವಾಗ ಕೇಂದ್ರ ಸರ್ಕಾರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಡೇಟಾವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಡೇಟಾ ಉದ್ಯೋಗಿಗಳ ಡಿಎ ಹೆಚ್ಚಳವನ್ನು ನಿರ್ಧರಿಸುತ್ತದೆ. ಈ ಅಂಕಿಅಂಶಗಳ ಪ್ರಕಾರ, ಡಿಎ ವರ್ಷಕ್ಕೆ ಕೇವಲ 3 ಪ್ರತಿಶತ ಅಥವಾ 4 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಇದೀಗ ಮತ್ತೆ ಸರ್ಕಾರಿ ನೌಕರರಿಗೆ ಡಬಲ್​ ಧಮಾಕ ಸಿಕ್ಕಿದೆ ಅದೇನು ಅಂತೀರಾ ಮುಂದೆ ನೋಡಿ.

ತುಟ್ಟಿಭತ್ಯೆ ಜೊತೆಗೆ HRAಯಲ್ಲಿ ಹೆಚ್ಚಳ ಸಾಧ್ಯತೆ!

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. ಈಗ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮನೆ ಬಾಡಿಗೆ ಭತ್ಯೆ ಕೂಡ ಹೆಚ್ಚಾಗಬಹುದು ಎಂದು ಬಹುತೇಕ ಮಾಧ್ಯಮಗಳು ವರದಿ ಮಾಡಿವೆ. ಶೀಘ್ರದಲ್ಲೇ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) 38 ರಿಂದ 39 ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಸ್ತುತ, ತುಟ್ಟಿಭತ್ಯೆ 34% ದರದಲ್ಲಿ ನೀಡಲಾಗುತ್ತಿದೆ. ತುಟ್ಟಿ ಭತ್ಯೆಯ ಹೆಚ್ಚಳದ ಜೊತೆಗೆ, ಇತರ ಭತ್ಯೆಗಳೂ ಕೂಡ ಏರಿಕೆಯಾಗುವುದು ನಿಚ್ಚಳವಾಗಿದೆ. ಈ ಸುದ್ದಿ ಕೇಳಿ ಸರ್ಕಾರಿ ನೌಕರರು ಮುಖದಲ್ಲಿ ಸಂತಸ ಮೂಡಿದೆ.

ಮನೆ ಬಾಡಿಗೆಯು ಹೆಚ್ಚಿಸಿರೋದು ಡಬಲ್ ಖುಷಿ!

ಪ್ರತಿ 6 ತಿಂಗಳಿಗೊಮ್ಮೆ ತುಟ್ಟಿ ಭತ್ಯೆ ಏರಿಕೆಯಾಗುತ್ತಿದೆ, ಇನ್ನೊಂದೆಡೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮನೆ ಬಾಡಿಗೆ ಭತ್ಯೆ (HRA Hike) ಕೂಡ ಹೆಚ್ಚಾಗುವುದು ಬಹುತೇಕ ನಿಚ್ಚಳವಾಗಿದೆ.  ಸರ್ಕಾರ ಈಗಾಗಲೇ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ಇತ್ತೀಚಿನ AICPI ದತ್ತಾಂಶವನ್ನು ಆಧರಿಸಿ, ಉದ್ಯೋಗಿಗಳಿಗೆ DA ಈ ಬಾರಿ 5% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಎಐಸಿಪಿಐ ಅಂಕಿಅಂಶಗಳನ್ನು ಗಮನಿಸಿದರೆ, ಜನವರಿಯಲ್ಲಿ 125.1 ಅಂಕಗಳಿಷ್ಟಿತ್ತು. ಫೆಬ್ರವರಿಯಲ್ಲಿ 125 ಅಂಕಗಳು, ಮಾರ್ಚ್‌ ನಲ್ಲಿ 126 ಅಂಕಗಳು ಮತ್ತು ಏಪ್ರಿಲ್‌ನಲ್ಲಿ 127.7 ಅಂಕಗಳಿತ್ತು. ಹಣದುಬ್ಬರದಿಂದಾಗಿ ಎಐಸಿಪಿಐ ಅಂಕಿಅಂಶಗಳು ಹೆಚ್ಚುತ್ತಿವೆ.

ಇದನ್ನೂ ಓದಿ: Jio Recharge App ಡೌನ್​ಲೌಡ್​ ಮಾಡಿ, ಮನೆಯಲ್ಲೇ ಕೂತು ಸಿಂಪಲ್ಲಾಗಿ ಜೇಬು ತುಂಬಿಸಿಕೊಳ್ಳಿ!

2023 ರ ವೇಳೆಗೆ, ಉದ್ಯೋಗಿಗಳ HRA ಹೆಚ್ಚಾಗಲಿದೆ. ಆದರೆ, ಪ್ರಸ್ತುತ ಇರುವ ಶೇ.34ರಷ್ಟು ತುಟ್ಟಿಭತ್ಯೆಯಲ್ಲಿ ಶೇ.16 ರಷ್ಟು ಏರಿಕೆ ಕಂಡುಬಂದರೆ ಮಾತ್ರ ಇದು ಸಂಭವಿಸಲಿದೆ. ಜುಲೈ 2022 ರ ನಂತರ, ತುಟ್ಟಿ ಭತ್ಯೆಯು ಶೇಕಡಾ 4-5 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರಕಾರ ಶೇ.5ರಷ್ಟು ಡಿಎ ಹೆಚ್ಚಿಸಿದರೆ ಉದ್ಯೋಗಿಗಳಿಗೆ ಸಂತಸದ ಸುದ್ದಿ ಆಗಲಿದೆ. ಉದ್ಯೋಗಿಗಳು 39 ಪ್ರತಿಶತ ಡಿಎ ಪಡೆಯುತ್ತಾರೆ. ನೌಕರರಿಗೆ ಡಿಎ ಹೆಚ್ಚಾದಂತೆ ಪಿಂಚಣಿದಾರರಿಗೆ ಡಿಆರ್ ಕೂಡ ಹೆಚ್ಚಾಗುತ್ತದೆ. ಜುಲೈ 1 ರಂದು ಡಿಎ ಹೆಚ್ಚಳದ ಘೋಷಣೆಯನ್ನು ನೌಕರರು ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: ಇಷ್ಟು ದಿನ ಒಂದು ರೂಲ್ಸ್, ಜುಲೈ 1ರಿಂದ ಇನ್ನೊಂದು ರೂಲ್ಸ್​! ಡೆಬಿಟ್​-ಕ್ರೆಡಿಟ್​ ಕಾರ್ಡ್​ ಬಳಸುವವರೇ ಇತ್ತ ನೋಡಿ

DoPT ಪ್ರಕಾರ, ಕೇಂದ್ರೀಯ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆಯ (HRA) ಪರಿಷ್ಕರಣೆಯು ತುಟ್ಟಿ ಭತ್ಯೆಯ (DA) ಆಧಾರದ ಮೇಲೆ ಮಾಡಲಾಗುತ್ತದೆ. ಮುಂದಿನ ವರ್ಷದವರೆಗೆ ತುಟ್ಟಿಭತ್ಯೆಯಲ್ಲಿ ಮೂರು ಬದಲಾವಣೆಗಳಾಗುವುದು ಖಚಿತ. ಅಂದರೆ ಜುಲೈ 2022 ರಲ್ಲಿ ಹೆಚ್ಚಿಸಿದ ನಂತರ, DA ಮೂರು ಪಟ್ಟು ಹೆಚ್ಚು ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರ ಡಿಎ ಹೆಚ್ಚಳದ ಬಗ್ಗೆ ನಿರ್ಧರಿಸಿದರೆ, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.
Published by:Vasudeva M
First published: