• Home
  • »
  • News
  • »
  • business
  • »
  • 7th Pay Commission: ದಸರಾ ಹಬ್ಬಕ್ಕೆ ಕೇಂದ್ರದಿಂದ ಬಿಗ್​ ಗಿಫ್ಟ್​, ನೌಕರರ ಮುಖದಲ್ಲಿ ಮಂದಹಾಸ ಮೂಡಿಸಿದ ಮೋದಿ!

7th Pay Commission: ದಸರಾ ಹಬ್ಬಕ್ಕೆ ಕೇಂದ್ರದಿಂದ ಬಿಗ್​ ಗಿಫ್ಟ್​, ನೌಕರರ ಮುಖದಲ್ಲಿ ಮಂದಹಾಸ ಮೂಡಿಸಿದ ಮೋದಿ!

ಸಾಂದರ್ಭಿ ಚಿತ್ರ

ಸಾಂದರ್ಭಿ ಚಿತ್ರ

Dearness Allowance: ಈ ಬಾರಿ ಮೋದಿ (Modi) ಸರ್ಕಾರ ಕೇಂದ್ರ ಸರಕಾರಿ ನೌಕರರಿಗೆ ಡಿಎ ಶೇ.4ರಷ್ಟು ಹೆಚ್ಚಿಸಿದೆ. ಈ ನಿರ್ಧಾರವು ಸುಮಾರು 1.16 ಕೋಟಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಮಾಧಾನ ತರಲಿದೆ. ಇತ್ತೀಚಿನ ಹೆಚ್ಚಳದಿಂದಾಗಿ ತುಟ್ಟಿಭತ್ಯೆ (DA) 38 ಪ್ರತಿಶತಕ್ಕೆ ಏರಿದೆ.

ಮುಂದೆ ಓದಿ ...
  • Share this:

ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ (Central Government Employee)  ಸಿಹಿಸುದ್ದಿ ನೀಡಿದೆ. ಹಬ್ಬದ ಸೀಸನ್​ನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತುಟ್ಟಿಭತ್ಯೆ (DA) ಹೆಚ್ಚಿಸಲಾಗಿದೆ. ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈ ಬಾರಿ ಮೋದಿ (Modi) ಸರ್ಕಾರ ಕೇಂದ್ರ ಸರಕಾರಿ ನೌಕರರಿಗೆ ಡಿಎ ಶೇ.4ರಷ್ಟು ಹೆಚ್ಚಿಸಿದೆ. ಈ ನಿರ್ಧಾರವು ಸುಮಾರು 1.16 ಕೋಟಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಮಾಧಾನ ತರಲಿದೆ. ಇತ್ತೀಚಿನ ಹೆಚ್ಚಳದಿಂದಾಗಿ ತುಟ್ಟಿಭತ್ಯೆ (DA) 38 ಪ್ರತಿಶತಕ್ಕೆ ಏರಿದೆ. ಇದುವರೆಗೆ ಡಿಎ ಶೇ 34 ಇತ್ತು. ಇದೊಂದು ಗುಡ್​ನ್ಯೂಸ್​ (Good News)ಗಾಗಿ ಕೋಟ್ಯಂತರ ನೌಕರರು ತುಂಬಾ ದಿನಗಳಿಂದ ಕಾಯುತ್ತಿದ್ದರು. ಇದೀಗ ದಸರಾ (Dasara) ಹಬ್ಬಕ್ಕೆ ಕೇಂದ್ರ ಸರ್ಕಾರ ಗುಡ್​ ನ್ಯೂಸ್ ಕೊಟ್ಟಿದ್ದು, ಇವರ ಮುಖದಲ್ಲಿ ಸಂತಸ ಮೂಡಿಸಿದೆ.


ಶೇ.4ರಷ್ಟು  ಡಿಎ ಹೆಚ್ಚಿಸಿದ ಕೇಂದ್ರ ಸರ್ಕಾರ!


ಮೋದಿ ಸರ್ಕಾರವು ಕೊನೆಯ ಬಾರಿಗೆ ಮಾರ್ಚ್ ತಿಂಗಳಲ್ಲಿ ತುಟ್ಟಿಭತ್ಯೆಯನ್ನು ಹೆಚ್ಚಿಸಿತು. ನಂತರ ಡಿಎ ಶೇಕಡಾ 3 ರಷ್ಟು ಏರಿತು. ಈ ಹೆಚ್ಚಳವು ಜನವರಿ 1, 2022 ರಿಂದ ಜಾರಿಗೆ ಬರಲಿದೆ. ಇದೀಗ ಮತ್ತೊಮ್ಮೆ ಭಾರತ ಸರ್ಕಾರ ನೌಕರರಿಗೆ ಡಿಎ ಹೆಚ್ಚಿಸಲು ನಿರ್ಧರಿಸಿದೆ. ತುಟ್ಟಿಭತ್ಯೆ ಹೆಚ್ಚಳವು ಉದ್ಯೋಗಿಗಳಿಗೆ ದೊಡ್ಡ ಪರಿಹಾರವನ್ನು ತರುತ್ತದೆ. ವೇತನ ಹೆಚ್ಚಾಗಲಿದೆ.


ಡಿಆರ್​ ಕೂಡ ಹೆಚ್ಚಾಗುತ್ತೆ!


ಜತೆಗೆ ಕೇಂದ್ರ ಸಚಿವ ಸಂಪುಟವೂ ಪಿಂಚಣಿದಾರರಿಗೆ ಸಿಹಿಸುದ್ದಿ ನೀಡಿದೆ. ಡಿಎ ಹೆಚ್ಚಾದರೆ, ಡಿಆರ್ ಕೂಡ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಡಿಯರ್ನೆಸ್ ರಿಲೀಫ್ (ಡಿಆರ್) ಹೆಚ್ಚಳವು ಪಿಂಚಣಿದಾರರಿಗೆ ಪರಿಹಾರವನ್ನು ನೀಡುತ್ತದೆ. ಹೆಚ್ಚುವರಿಯಾಗಿ ತುಟ್ಟಿಭತ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.


ಇದನ್ನೂ  ಓದಿ: ಮೋದಿ ಸರ್ಕಾರದಿಂದ ಬಿಗ್ ಅಪ್‌ಡೇಟ್, ಲಕ್ಷಾಂತರ ಕಾರ್ಮಿಕರಿಗೆ ನೇರ ಲಾಭ!


ಹಬ್ಬದ ಸೀಸನ್​ಗೆ ಬಂಪರ್​ ನ್ಯೂಸ್!


ಕೇಂದ್ರದ ಇತ್ತೀಚಿನ ನಿರ್ಧಾರಗಳು ಹಬ್ಬದ ಸೀಸನ್‌ನಲ್ಲಿ ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ವಿಶೇಷವಾಗಿ ಗ್ರಾಹಕ ಬಳಕೆ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ. ಈ ಮಧ್ಯೆ, ಕೇಂದ್ರ ಸರ್ಕಾರವು ಪ್ರತಿ ಆರು ತಿಂಗಳಿಗೊಮ್ಮೆ ಅಥವಾ ವರ್ಷದಲ್ಲಿ ಎರಡು ಬಾರಿ ಡಿಎಯನ್ನು ಪರಿಷ್ಕರಿಸುತ್ತದೆ. ಹಣದುಬ್ಬರಕ್ಕೆ ಅನುಗುಣವಾಗಿ ಡಿಎ ಹೆಚ್ಚಳವಾಗಲಿದೆ. ಡಿಎ ಹೆಚ್ಚಳ ನಿರ್ಧಾರಗಳು ಜನವರಿ ಮತ್ತು ಜುಲೈನಿಂದ ಜಾರಿಗೆ ಬರಲಿವೆ. ಇದು ಪ್ರತಿ ವರ್ಷ ನಡೆಯುತ್ತದೆ. ಭತ್ಯೆಯ ಹೆಚ್ಚಳವು ವಿವಿಧ ಅಂಶಗಳ ಆಧಾರದ ಮೇಲೆ ಬದಲಾಗುತ್ತದೆ.


ಇದನ್ನೂ ಓದಿ: ಕೆಲಸದ ಚಿಂತೆ ಬಿಡಿ, ಕಡಿಮೆ ಹೂಡಿಕೆಯೊಂದಿಗೆ ಈ ಬ್ಯುಸಿನೆಸ್ ಆರಂಭಿಸಿ!


ರೈಲ್ವೆ ನೌಕರರಿಗೂ ಬೋನಸ್​!


ಮತ್ತೊಂದೆಡೆ ಕೇಂದ್ರ ಸರ್ಕಾರ ಕೂಡ ರೈಲ್ವೇ ನೌಕರರಿಗೆ ದಸರಾ ಬೋನಸ್​​ ನೀಡಿದೆ. 78 ದಿನಗಳ ಬೋನಸ್ ಘೋಷಿಸಲಾಗಿದೆ. ಈ ಪ್ರಯೋಜನವನ್ನು ಉತ್ಪಾದಕತೆ ಲಿಂಕ್ಡ್ ಬೋನಸ್ ಅಡಿಯಲ್ಲಿ ಒದಗಿಸಲಾಗಿದೆ. ಗೆಜೆಟೆಡ್ ಅಲ್ಲದ ರೈಲ್ವೇ ಉದ್ಯೋಗಿಗಳಿಗೆ ಈ ಪ್ರಯೋಜನವಿದೆ. 11.56 ಲಕ್ಷ ಉದ್ಯೋಗಿಗಳಿಗೆ ಪರಿಹಾರ ಸಿಗಲಿದೆ. ಬೋನಸ್ ಘೋಷಿಸುವ ನಿರ್ಧಾರದಿಂದ ಸರಕಾರಕ್ಕೆ 2 ಸಾವಿರ ಕೋಟಿ ರೂ. ರೈಲ್ವೆ ನೌಕರರು ರೂ.18 ಸಾವಿರದವರೆಗೆ ಬೋನಸ್ ಪಡೆಯಬಹುದು.


ಡಿಸೆಂಬರ್ 31, 2019 ರವರೆಗೆ 7 ನೇ ವೇತನ ಆಯೋಗದ ಆಧಾರದ ಮೇಲೆ ಎಲ್ಲಾ ಉದ್ಯೋಗಿಗಳು ಶೇ. 17ರ ದರದಲ್ಲಿ ತುಟ್ಟಿ ಭತ್ಯೆಯನ್ನು ಪಡೆಯುತ್ತಿದ್ದರು. ಇದರ ನಂತರ ಒಂದೂವರೆ ವರ್ಷಗಳವರೆಗೆ ಕೋವಿಡ್ ಕಾರಣದಿಂದಾಗಿ ಯಾವುದೇ ಹೆಚ್ಚಳ ಅಥವಾ ಪರಿಷ್ಕರಣೆ ಆಗಿರಲಿಲ್ಲ.

Published by:ವಾಸುದೇವ್ ಎಂ
First published: