• Home
  • »
  • News
  • »
  • business
  • »
  • Pear Cultivation: ವಯಸ್ಸು 74 ಆದ್ರೂ ಕುಗ್ಗದ ಉತ್ಸಾಹ, ವರ್ಷಕ್ಕೆ 25 ಲಕ್ಷ ಹಣ ಮಾಡ್ತಿದ್ದಾರೆ ಕಾಶ್ಮೀರಿ ರೈತ!

Pear Cultivation: ವಯಸ್ಸು 74 ಆದ್ರೂ ಕುಗ್ಗದ ಉತ್ಸಾಹ, ವರ್ಷಕ್ಕೆ 25 ಲಕ್ಷ ಹಣ ಮಾಡ್ತಿದ್ದಾರೆ ಕಾಶ್ಮೀರಿ ರೈತ!

ಹಾಜಿ ಮಹಮ್ಮದ್ ಶಫಿ ಶೇಖ್

ಹಾಜಿ ಮಹಮ್ಮದ್ ಶಫಿ ಶೇಖ್

74ರ ಹರೆಯದಲ್ಲೂ ಪೇರಳೆ ಕೃಷಿ ಮಾಡಿ ವರ್ಷಕ್ಕೆ 25 ಲಕ್ಷ ಆದಾಯ ಗಳಿಸುತ್ತಿರುವ ಕಾಶ್ಮೀರಿ ರೈತ ಅರಣ್ಯ ನಿಗಮದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಹಾಜಿ ಮಹಮ್ಮದ್ ಶಫಿ ಶೇಖ್ ರವರ ಸಾಹಸಗಾಥೆ ನಿಜಕ್ಕೂ ಸ್ಫೂರ್ತಿದಾಯಕವಾಗಿದ್ದು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

  • Share this:

ಅರಣ್ಯ ನಿಗಮದಲ್ಲಿ ಗುತ್ತಿಗೆದಾರರಾಗಿ (Contractor in Forest Corporation) ಕೆಲಸ ಮಾಡುತ್ತಿದ್ದ ಹಾಜಿ ಮಹಮ್ಮದ್ ಶಫಿ ಶೇಖ್ (Haji Mohammad Shafi Sheikh) ಪೂರ್ಣ ಪ್ರಮಾಣದ ರೈತರಾಗಿ ಇದೀಗ ವರ್ಷಕ್ಕೆ ರೂ 25 ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ. ಜೊತೆಗೆ ಆರ್ಥಿಕ ನಷ್ಟದಿಂದ (Financial loss) ಕಂಗೆಟ್ಟಿದ್ದ ತಮ್ಮೂರಿನ ರೈತರನ್ನೂ (Farmers) ಸದೃಢರಾಗಿಸಿದ್ದಾರೆ. ತಮ್ಮೂರಿನ ಯುವಕರ ನಿರುದ್ಯೋಗ (Unemployment) ಸಮಸ್ಯೆಯನ್ನು  ದೂರವಾಗಿಸಿದ್ದಾರೆ ಅಂತೆಯೇ ಕೃಷಿಯ ಬಗ್ಗೆ ಹಳ್ಳಿಯವರಲ್ಲೂ ಆಸಕ್ತಿಯನ್ನುಂಟು ಮಾಡಲು ಕಾರಣರಾಗಿದ್ದಾರೆ. 74 ರ ಹರೆಯದ ಶಫಿಯವರ ಸಾಹಸಗಾಥೆ ನಿಜಕ್ಕೂ ಸ್ಫೂರ್ತಿದಾಯಕವಾಗಿದ್ದು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ.


ಪೇರಳೆ ಕೃಷಿಯ ಮೇಲೆ ಆಸಕ್ತಿ ಹೇಗೆ ಮೂಡಿತು?
1980 ರಲ್ಲಿ, ಅರಣ್ಯ ನಿಗಮದಲ್ಲಿ ಗುತ್ತಿಗೆದಾರರಾಗಿದ್ದ ಹಾಜಿ ಮಹಮ್ಮದ್ ಶಫಿ ಶೇಖ್ ದಿನನಿತ್ಯ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದರು. ಶ್ರೀನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿರುವ ತನ್ನ ಕಿರಿಯ ಸಹೋದರ ಅಬ್ದುಲ್ ರಶೀದ್ ಶೇಖ್ ಮತ್ತು ಸೋದರ ಸಂಬಂಧಿ ಗುಲಾಂ ನಬಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಮೂವರೂ ನಿರ್ಧರಿಸಿದರು ಅಂತೆಯೇ ಶ್ರೀನಗರದ ಸುಂದರ ನಗರವಾದ ನಿಶಾತ್‌ನೊಂದಿಗೆ ಪ್ರಯಾಣವನ್ನು ಆರಂಭಿಸಿ ಚಿನಾರ್‌ಗಳಿಂದ ತುಂಬಿರುವ ಮೊಘಲ್ ಗಾರ್ಡನ್ ಅನ್ನು ಹೊಂದಿರುವ ಸ್ಥಳಕ್ಕೆ ಭೇಟಿ ನೀಡಿದರು.


ರಸ್ತೆಯ ಹೊರವಲಯದಲ್ಲಿರುವ ಹಸಿರು ಪೇರಳೆಗಳ ಉದ್ಯಾನವನಕ್ಕೆ ಭೇಟಿ ನೀಡಿ ಶಫಿ ಮತ್ತು ಸಹೋದರರು ಹಣ್ಣುಗಳನ್ನು ಆನಂದಿಸಿದರು. ಉದ್ಯಾನದ ಕುರಿತು ಶಫಿ ವಿಚಾರಿಸಿ ತಾವೇ ಉದ್ಯಾನವನ್ನು ಬೆಳೆಸುವ ಆಸಕ್ತಿಯನ್ನು ಗರಿಗೆದರಿಸಿಕೊಂಡರು. ಭದೇರ್ವಾದಲ್ಲಿನ ತನ್ನ ಸ್ಥಳೀಯ ಗ್ರಾಮವಾದ ಭರೋವಾದಲ್ಲಿ ಇಂತಹುದ್ದೇ ಹಣ್ಣಿನ ಉದ್ಯಾನವನ್ನು ನಿರ್ಮಿಸುವ ಕಾರ್ಯಾಚರಣೆಗೆ ಶಫಿ ಅಡಿಪಾಯ ಹಾಕಿದರು. ಈ ಹಣ್ಣುಗಳ ಮಹತ್ವವವನ್ನು ಅರಿಯದ ಭರೋವಾ ಗ್ರಾಮ ಪ್ರಾಣಿಗಳ ಆಹಾರಕ್ಕಾಗಿ ಮಾತ್ರವೇ ಜೋಳ ಮತ್ತು ಮೇವನ್ನು ಬೆಳೆಸುತ್ತಿದ್ದರು.


ಇದನ್ನೂ ಓದಿ: Job Offer: ಮೈಕ್ರೋಸಾಫ್ಟ್​ನಲ್ಲಿ 50 ಲಕ್ಷ ಸಂಬಳದ ಉದ್ಯೋಗ ಆಫರ್ ಪಡೆದ ಬಡ ವಿದ್ಯಾರ್ಥಿ!


ಕೈತುಂಬಾ ಆದಾಯದ ಕೃಷಿಯಲ್ಲಿ ಶಫಿ ಹೇಗೆ ತಮ್ಮನ್ನು ತೊಡಗಿಸಿಕೊಂಡರು:
ಬರೋವಾದ ಸಂಪೂರ್ಣ ಪ್ರದೇಶವು ಗುಡ್ಡಗಾಡುಗಳಿಂದ ಆವೃತವಾಗಿದೆ. ಇಲ್ಲಿನ ಬರಗಾಲ ಪರಿಸ್ಥಿತಿಯಿಂದಾಗಿ ರೈತರು ಮೆಕ್ಕೆಜೋಳವನ್ನು ಮಾತ್ರ ಬೆಳೆಯುತ್ತಾರೆ. ಇಲ್ಲಿನ ಜನರು ಆರ್ಥಿಕವಾಗಿ ಪ್ರಬಲರಾಗಿಲ್ಲದ ಕಾರಣ ಜೀವನೋಪಾಯಕ್ಕಾಗಿ ಆದಾಯ ಗಳಿಸಲು ಜೋಳವಲ್ಲದೆ ಬೇರೆ ಆಯ್ಕೆಗಳಿರಲಿಲ್ಲ ಎಂಬುದು ಶಫಿ ಮಾತಾಗಿದೆ.


ಅದೇ ವರ್ಷ ಶಫಿಯವರು ಪೇರಳೆ ಹಾಗೂ ವಾಲ್‌ನಟ್‌ನ ಕೆಲವು ಸಸಿಗಳನ್ನು ತಮ್ಮ ಮನೆಯ ಹಿತ್ತಲಿನಲ್ಲಿ ನೆಟ್ಟರು ಜೊತೆಗೆ ಅವುಗಳ ಬೆಳವಣಿಗೆಯನ್ನು ಪತ್ತೆಹಚ್ಚಿದರು. ಶಫಿಗೆ ಆಶ್ಚರ್ಯವಾಗುವಂತೆ ಸಸ್ಯಗಳು ಬೆಳೆಯಲಾರಂಭಿಸಿದವು ಹಾಗೂ ಹಣ್ಣುಗಳು ಬೆಳೆಯಲು ಆರಂಭವಾಯಿತು. ಇದರಿಂದ ಉತ್ತೇಜನ ಪಡೆದುಕೊಂಡ ಶಫಿಯವರು ತೋಟಗಾರಿಕೆಯ ಕುರಿತು ಜನರಲ್ಲಿ ಅರಿವು ಮೂಡಿಸಲು ಹೆಚ್ಚಿನ ಸಸ್ಯಗಳ ಬಿತ್ತನೆಯನ್ನು ಆರಂಭಿಸಿದರು.


ಶಫಿಯವರ ವಾರ್ಷಿಕ ಆದಾಯ ರೂ 25 ಲಕ್ಷಕ್ಕಿಂತಲೂ ಅಧಿಕ:
74 ರ ಹರೆಯದ ಶಫಿಯವರು 3,000 ಬಾಕ್ಸ್‌ಗಳಷ್ಟು ಆಕರ್ಷಕವಾದ ಕೆಂಬಣ್ಣದ ಪೇರಳೆಗಳ ಕೊಯ್ಲು ಮಾಡುತ್ತಾರೆ ಹಾಗೂ ಇದರಿಂದ ಅವರು 25 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ. ತಮ್ಮ ಹೊಲದಲ್ಲಿ ಬೆಳೆದ ಮೆಕ್ಕೆಜೋಳದಿಂದ ವಾರ್ಷಿಕವಾಗಿ ಅವರು ಗಳಿಸಿದ ಆದಾಯ ಬರೇ ರೂ 4000 ವಾಗಿತ್ತು ಒಮ್ಮೊಮ್ಮೆ ಆರ್ಥಿಕ ನಷ್ಟಕ್ಕೆ ತುತ್ತಾದದ್ದು ಇದೆ, ಇದರಿಂದ ಬಡವರು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಇದು ಶಫಿಯವರ ಮಾತಾಗಿದೆ.


ಇದನ್ನೂ ಓದಿ:  Cauvery: ಕಾವೇರಿ ನದಿಯಲ್ಲಿ ಯಾತ್ರಾರ್ಥಿಗಳು ಬಿಸಾಡಿದ ಬಟ್ಟೆಗಳೇ ಇವರ ಆದಾಯದ ಮೂಲ


ಶಫಿಯವರು ತಮ್ಮ ಹೊಲದಲ್ಲಿ ಪೇರಳೆ, ಸೇಬು ಮಾತ್ರವಲ್ಲದೆ 15-20 ಕ್ವಿಂಟಾಲ್‌ಗಳಷ್ಟು ವಾಲ್‌ನಟ್‌ಗಳನ್ನು ಬೆಳೆಯುತ್ತಾರೆ.


ಭದೇರ್ವಾದ ತೋಟಗಾರಿಕಾ ಕಲಿ ಶೇಖ್:
ಹಲವಾರು ದಶಕಗಳ ಹಿಂದೆ ಬರಿಯ ಮೆಕ್ಕೆಜೋಳಕ್ಕೆ ಮಾತ್ರ ಸೀಮಿತವಾಗಿದ್ದ ಹೊಲದಲ್ಲಿ ಪೇರಳೆ ಬೆಳೆಯುವ ಸಾಹಸಕ್ಕೆ ಇಳಿದಿದ್ದ ಶೇಖ್ ಅವರ ಪ್ರಯಾಣ ಅಷ್ಟೊಂದು ಸುಲಭದ್ದಾಗಿರಲಿಲ್ಲ. ರೋಗಮುಕ್ತ ಉತ್ಪನ್ನಗಳನ್ನು ಹೊಂದಲು ತಜ್ಞರ ಸಹಾಯವನ್ನು ಪಡೆದುಕೊಳ್ಳುವವರೆಗೆ ಅವರು ತಾಳ್ಮೆ ಹಾಗೂ ದೃಢತೆಯಿಂದ ಕಾರ್ಯನಿರ್ವಹಿಸಬೇಕಿತ್ತು.


1993 ರಲ್ಲಿ ಪೇರಳೆ ಬೆಳೆಯುವುದು ನೋಡಿದಾಗ ನಾನು ಕೂಡಲೇ ಕೆಲಸಕ್ಕೆ ರಾಜಿನಾಮೆ ನೀಡಿದೆ ಹಾಗೂ ನನ್ನ ಸಂಪೂರ್ಣ ಜೀವನವನ್ನು ಕೃಷಿಗಾಗಿ ಮುಡಿಪಾಗಿಸುವ ನಿರ್ಧಾರ ಮಾಡಿದೆ. ನನ್ನ ಈ ಪ್ರಯತ್ನವು ಹಳ್ಳಿಯವರ ಭವಿಷ್ಯವನ್ನು ಬದಲಾಯಿಸುತ್ತದೆ ಎಂಬ ಸಣ್ಣ ಆಶಾಕಿರಣ ನನಗಿತ್ತು ಎಂಬುದು ಶಫಿಯ ಹೃದಯದಾಳದ ಮಾತಾಗಿದೆ. ಸ್ಥಳೀಯ ಪೇರಳೆ ಮತ್ತು ವಾಲ್‌ನಟ್‌ಗಳೊಂದಿಗೆ ಜಮ್ಮುವಿನ ವಿಲಕ್ಷಣ ಕೆಂಪು ಪೇರಳೆಗಳನ್ನು ಬೆಳೆಯಲು ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯವನ್ನು ಕೋರಿದರು.


ಕೆಂಪು ಪೇರಳೆಗಳನ್ನು ಯಶಸ್ವಿಯಾಗಿ ಬೆಳೆದ ನಂತರ, ಅವರು ತಮ್ಮ ತೋಟದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಬೆಳೆಯಲು ಕೆಂಪು ಪೇರಳೆ ಹಣ್ಣುಗಳೊಂದಿಗೆ ಹಸಿರು ಪೇರಳೆ ಗಿಡಗಳನ್ನು ಕಸಿಮಾಡಿದರು. “ಈಗ ನಾನು ಸುಮಾರು 250 ಕೆಂಪು ಪೇರಳೆ ಮರಗಳನ್ನು ಹೊಂದಿದ್ದೇನೆ ಮತ್ತು ಅವುಗಳ ಹೊರತಾಗಿ, ನಾನು ಹಸಿರು ಪೇರಳೆ, ಸೇಬು ಮತ್ತು ಇತರ ವಿವಿಧ ಹಣ್ಣುಗಳನ್ನು ಬೆಳೆಯುತ್ತೇನೆ. ಸಂಶೋಧನೆಗಾಗಿ, ನನ್ನ ತೋಟದಲ್ಲಿ ವಿದೇಶಿ ಹಣ್ಣುಗಳನ್ನು ಬೆಳೆಯುವ ತಾಂತ್ರಿಕತೆಗಳನ್ನು ತಿಳಿಯಲು ನಾನು ಹಿಮಾಚಲ ಪ್ರದೇಶ ಮತ್ತು ಇತರ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ, ”ಎಂಬುದು ಶಫಿ ಮಾತಾಗಿದೆ.


ಭದೇರ್ವಾ ರೈತರಿಗೆ ಭರವಸೆಯ ಆಶಾಕಿರಣ:
ಶಫಿ ಅವರ ಶ್ರಮ ಫಲ ನೀಡುತ್ತಿರುವುದನ್ನು ಕಂಡು ಅವರ ಕಿರಿಯ ಸಹೋದರ ಅಬ್ದುಲ್ ರಶೀದ್ ಕೂಡ ತೋಟಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ತಮ್ಮ ತೋಟದಲ್ಲಿ ಶಫಿಯವರು 2,500 ಕ್ಕೂ ಹೆಚ್ಚು ಪೇರಳೆ ಗಿಡಗಳನ್ನು ಹೊಂದಿದ್ದಾರೆ. ಗ್ರಾಮ ಕೂಡ ನಿಧಾನವಾಗಿ ಶಫಿಯವರ ಕೃಷಿ ವಿಧಾನವನ್ನು ಅನುಸರಿಸುತ್ತಿದ್ದು ಇದರಿಂದ ಶಫಿಯವರು ಸಂತಸಗೊಂಡಿದ್ದಾರೆ. ಪೇರಳೆ ಮತ್ತು ಇತರ ಬೆಳೆಗಳನ್ನು ಇದೀಗ ಹಳ್ಳಿಗರು ಬೆಳೆಯುತ್ತಿದ್ದಾರೆ. ಭರೋವಾ ಮಾತ್ರವಲ್ಲ, ಪಕ್ಕದ ಹಳ್ಳಿಗಳಾದ ಖಲೋ ಮತ್ತು ಶನತ್ರ ಕೂಡ ವಿಲಕ್ಷಣ ಇಟಾಲಿಯನ್ ಕೆಂಪು ಪೇರಳೆಗಳನ್ನು ಬೆಳೆಯಲು ಮನ್ನಣೆಯನ್ನು ಗಳಿಸುತ್ತಿವೆ. ಈ ಮೂರು ಗ್ರಾಮಗಳು ವಾರ್ಷಿಕವಾಗಿ ಸುಮಾರು 1.5 ಮೆಟ್ರಿಕ್ ಟನ್ ಕೆಂಪು ಪೇರಳೆಗಳನ್ನು ಬೆಳೆಯುತ್ತವೆ.


ಇದನ್ನೂ ಓದಿ:  15 ಕೋಟಿ ಸ್ಯಾಲರಿ ಪಡೆಯುತ್ತಿದ್ದ Ambani ಈ ವರ್ಷ ಒಂದು ರೂಪಾಯಿ ತೆಗೆದುಕೊಂಡಿಲ್ಲ, ಕಾರಣವೇನು?


ತೋಟಗಾರಿಕೆ, ಉದ್ಯೋಗ ಸೃಷ್ಟಿಕರ್ತ
ಶಫಿಯವರು ಈ ಉಪಕ್ರಮ ಕೈಗೊಂಡಾಗಿನಿಂದ ಹಳ್ಳಿಯ ಹಣೆಬರಹವೇ ಬದಲಾಯಿತು ಎಂದು ಹೇಳಬಹುದು. ಹೆಚ್ಚಿನ ಯುವಕರು ಪೇರಳೆ ಹಾಗೂ ಇತರ ಹಣ್ಣುಗಳ ಕೃಷಿಯಲ್ಲಿ ತೊಡಗಿಸಿಕೊಂಡಿರುವುದರಿಂದ ತೋಟಗಾರಿಕೆ ಗ್ರಾಮಕ್ಕೆ ಉದ್ಯೋಗ ಒದಗಿಸುತ್ತಿದೆ. ಶಫಿಯವರು ಸೀಸನ್ ಸಮಯದಲ್ಲಿ ಸುಮಾರು 25 ಜನರನ್ನು ಕೆಲಸಕ್ಕಾಗಿ ನೇಮಿಸಿಕೊಳ್ಳುತ್ತಾರೆ. ಪೇರಳೆಗಳಿಗೆ ಔಷಧ ಸಿಂಪಡಿಸುವುದು, ಕೊಯ್ಲು ಮಾಡುವುದು ಹೀಗೆ ಬೇರೆ ಬೇರೆ ಕೆಲಸಗಳನ್ನು ಅವರು ಮಾಡುತ್ತಾರೆ. ಹೀಗೆ ಆರ್ಥಿಕ ನಷ್ಟದಿಂದ ಕಂಗಾಲಾದ ಭದೇರ್ವಾದ ರೈತರಿಗೆ ಶಫಿಯವರು ಹೊಸ ಆಶಾಕಿರಣವಾಗಿ ಮೂಡಿದ್ದಾರೆ.

Published by:Ashwini Prabhu
First published: