UK ದೇಶದ 70 ಕಂಪನಿಗಳಲ್ಲಿ ಇನ್ಮುಂದೆ ವಾರದಲ್ಲಿ 4 ದಿನ ಮಾತ್ರ ಕೆಲಸ, ಮಿಕ್ಕಿರುವ 3 ದಿನ ರಜಾ-ಮಜಾ!

ಹೀಗೊಂದು ಕೆಲಸದ ದಿನಚರಿ ಇರಬೇಕೆಂದು ಬಹು ಸಮಯದಿಂದ ಕೂಗೆದ್ದಿತ್ತು. ಕೊನೆಗೂ ಆ ಸಮಯ ಈಗ ಬಂದಾಗಿದೆ ಅನ್ನುವ ಸ್ಥಿತಿ ಈಗ ಮೂಡಿದೆ. 70 ಕಂಪನಿಗಳ 3000ಕ್ಕೂ ಅಧಿಕ ಕೆಲಸಗಾರರು ಮುಂದಿನ ಆರು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ನಡೆಯುವ ವಾರದಲ್ಲಿ ನಾಲ್ಕು ದಿನಗಳ ಕೆಲಸದ ದಿನಚರಿ ಪ್ರಾರಂಭಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹೀಗೊಂದು ಕೆಲಸದ ದಿನಚರಿ ಇರಬೇಕೆಂದು ಬಹು ಸಮಯದಿಂದ ಕೂಗೆದ್ದಿತ್ತು. ಕೊನೆಗೂ ಆ ಸಮಯ ಈಗ ಬಂದಾಗಿದೆ ಅನ್ನುವ ಸ್ಥಿತಿ ಈಗ ಮೂಡಿದೆ. 70 ಕಂಪನಿಗಳ (Company) 3000ಕ್ಕೂ ಅಧಿಕ ಕೆಲಸಗಾರರು (employees) ಮುಂದಿನ ಆರು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ (Trial) ನಡೆಯುವ ವಾರದಲ್ಲಿ ನಾಲ್ಕು ದಿನಗಳ ಕೆಲಸದ ದಿನಚರಿ ಪ್ರಾರಂಭಿಸಿದ್ದಾರೆ. ಸದ್ಯ ಇದನ್ನು ಈಗ ಕಾರ್ಯಗತಗೊಳಿಸಿರುವ ಆಯೋಜಕರು ಇದನ್ನು ಜಗತ್ತಿನಲ್ಲೇ ಅತಿ ದೊಡ್ಡ ನಾಲ್ಕು ದಿನಗಳ ಕೆಲಸದ ಪೈಲಟ್ ಯೋಜನೆ (Pilot project) ಎಂದು ಬಣ್ಣಿಸಿದೆ. ಈ ಆಯೋಜನೆಯಲ್ಲಿ ಭಾಗವಹಿಸಿರುವ ಎಲ್ಲ 70 ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅವರ 80% ರಷ್ಟು ನೀಡುವ ಸಮಯಕ್ಕೆ ಹಾಗೂ ನೂರು ಪ್ರತಿಶತದಷ್ಟು ಪ್ರಾಡಕ್ಟಿವಿಟಿಗೆ ಬದಲಾಗಿ 100% ರಷ್ಟು ವೇತನ ಪಾವತಿಸುವುದಾಗಿ ಹೇಳಿವೆ.

ಪ್ರಾಯೋಗಿಕ ನಾಲ್ಕು ದಿನಗಳ ಕೆಲಸದ ಅಭಿಯಾನ
ಈ ಪ್ರಾಯೋಗಿಕ ನಾಲ್ಕು ದಿನಗಳ ಕೆಲಸದ ಅಭಿಯಾನವನ್ನು 4 ಡೇ ವೀಕ್ ಗ್ಲೋಬಲ್ ಸಂಸ್ಥೆಯು, ಥಿಂಕ್ ಟ್ಯಾಂಕ್ ಆದ ಅಟೋನಾಮಿ, 4 ಡೇ ವೀಕ್ ಯುಕೆ ಕ್ಯಾಂಪೇನ್, ಮತ್ತು ಕೆಂಬ್ರಿಡ್ಜ್, ಆಕ್ಸ್ ಫರ್ಡ್ ಹಾಗೂ ಬಾಸ್ಟನ್ ಕಾಲೇಜುಗಳ ಸಂಶೋಧಕರ ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ.

ಇದರಲ್ಲಿ ಭಾಗವಹಿಸಿರುವ ಕಂಪನಿಗಳು ಹಲವು ರಂಗಗಳಲ್ಲಿ ಸೇವೆ ನೀಡುತ್ತಿದ್ದು ಅದು ಶಿಕ್ಷಣದಿಂದ ಹಿಡಿದು ಕೆಲಸದ ಸ್ಥಳದಲ್ಲಿ ಸಲಹೆಗಳನ್ನು ನೀಡುವವರೆಗೆ ಹಾಗೂ ಉತ್ಪನ್ನಗಳನ್ನು ಒಳಗೊಂಡಿರುವಂತಹ ಸೇವೆಗಳನ್ನು ಒದಗಿಸುತ್ತವೆ.

ಅಂದರೆ ಈ ಅಭಿಯಾನದೊಂದಿಗೆ ಕೈಜೋಡಿಸಿರುವ ಕಂಪನಿಗಳು ಬ್ಯಾಂಕಿಂಗ್, ಆರೈಕೆ, ಹಣಕಾಸು ಸೇವೆಗಳು, ಐಟಿ ಸಾಫ್ಟ್ವೇರ್ ತರಬೇತಿ, ವೃತ್ತಿಪರ ಅಭಿವೃದ್ಧಿ ಮತ್ತು ಕಾನೂನು ತರಬೇತಿ, ವಸತಿ, ವಾಹನ ಪೂರೈಕೆ ಸೇವೆಗಳು, ಆನ್ಲೈನ್ ​​ಚಿಲ್ಲರೆ, ಅನಿಮೇಷನ್ ಸ್ಟುಡಿಯೋಗಳು, ಕಟ್ಟಡ ಮತ್ತು ನಿರ್ಮಾಣ ನೇಮಕಾತಿ ಸೇವೆಗಳು, ಆಹಾರ ಮತ್ತು ಪಾನೀಯ ಮತ್ತು ಆತಿಥ್ಯ ಕ್ಷೇತ್ರ, ಡಿಜಿಟಲ್ ಮಾರ್ಕೆಟಿಂಗ್, ಮತ್ತು ಆಘಾತಕಾರಿ ಗಾಯದಿಂದ ಚೇತರಿಸಿಕೊಳ್ಳುವ ಜನರಿಗೆ ಸಮಗ್ರ ಪ್ರಕರಣ ನಿರ್ವಹಣೆಯ ಸೇವೆಗಳು ಒದಗಿಸುವ ಎಲ್ಲ ರೀತಿಯ ಕಂಪನಿಗಳು ಈ ಪೈಲಟ್ ಯೋಜನೆಯಲ್ಲಿ ಭಾಗವಹಿಸಿವೆ.

ಪ್ರಗತಿ ಹಾಗೂ ಸ್ಪರ್ಧಾತ್ಮಕ ಅಂಚನ್ನು ನೀಡುವ ಸೂತ್ರ
ಈ ಅಭಿಯಾನ ಒಟ್ಟಾರೆಯಾಗಿ ನಡೆಯುವ ಸಂದರ್ಭದಲ್ಲಿ ಉತ್ಪಾದಕತೆ ಮತ್ತು ಅದರ ಕಾರ್ಮಿಕರ ಯೋಗಕ್ಷೇಮದ ಮೇಲೆ ಯಾವ ರೀತಿಯ ಪ್ರಭಾವ ಉಂಟಾಗಬಹುದೆಂಬುದನ್ನು ಅಳೆಯಲು ಸಂಶೋಧಕರು ಪ್ರತಿ ಭಾಗವಹಿಸುವ ಸಂಸ್ಥೆಯೊಂದಿಗೆ ಕೆಲಸ ಮಾಡಲಿದ್ದು ಜೊತೆಗೆ ಪರಿಸರ ಮತ್ತು ಲಿಂಗ ಸಮಾನತೆಯ ಮೇಲೆ ಏನೆಲ್ಲ ಪ್ರಭಾವ ಬೀರಬಹುದೆಂಬುದನ್ನು ಲೆಕ್ಕ ಹಾಕಲಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Business startup: ಅಮೆರಿಕದಲ್ಲಿದ್ರೂ ಅಮ್ಮನ ಕೈರುಚಿ ಸವಿಯೋ ಹಾಗೇ ಮಾಡಿದ NRI ಯುವಕ! ನಿಜಕ್ಕೂ ಮನಮುಟ್ಟುವ ಕಥೆ

ಇದಕ್ಕೆ ಸಂಬಂಧಿಸಿದಂತೆ 4 ಡೇ ವೀಕ್ ಗ್ಲೋಬಲ್‌ನ ಮುಖ್ಯ ಕಾರ್ಯನಿರ್ವಾಹಕ ಜೋ ಓ'ಕಾನ್ನರ್ ಅವರು ಪ್ರತಿಕ್ರಿಯೆ ನೀಡಿದ್ದು ಈ ರೀತಿ ಹೇಳಿದ್ದಾರೆ, "ಯುಕೆಯು ವಾರಕ್ಕೆ ನಾಲ್ಕು ದಿನಗಳು ಎಂಬ ಪರಿಕಲ್ಪನೆಯ ಹಿಂದಿದ್ದು ಜಾಗತಿಕ ಆವೇಗದ ರಭಸದ ಅಲೆಯ ತುದಿಯಲ್ಲಿದೆ. ನಾವು ಸಾಂಕ್ರಾಮಿಕ ರೋಗದಿಂದ ಹೊರಹೊಮ್ಮುತ್ತಿರುವಂತೆ ಈಗ ಹೆಚ್ಚು ಹೆಚ್ಚು ಕಂಪನಿಗಳು ಉತ್ತಮವಾದ ಜೀವನದ ಗುಣಮಟ್ಟ, ಕಡಿತವಾದ-ಗಂಟೆಗಳು, ಔಟ್‌ಪುಟ್-ಕೇಂದ್ರಿತ ಕೆಲಸವೇ ಹೆಚ್ಚು ಪ್ರಗತಿ ಹಾಗೂ ಸ್ಪರ್ಧಾತ್ಮಕ ಅಂಚನ್ನು ನೀಡುವ ಸೂತ್ರವಾಗಿವೆ ಎಂಬುದನ್ನು ಅರಿಯುತ್ತಿವೆ" ಎಂದು ಹೇಳಿದ್ದಾರೆ.

ಸದ್ಯ ಈಗ ನಾವೆಲ್ಲ ನೋಡುತ್ತಿರುವ ಈ 'ಮಹಾನ್ ರಾಜೀನಾಮೆ' ಪ್ರಕ್ರಿಯೆಯು ಅಕ್ಷರಶಃ ವೈವಿಧ್ಯಮಯ ಕೈಗಾರಿಕೆಗಳಿಂದ ಬಂದಿರುವ ವೈವಿಧ್ಯಮಯ ಕೆಲಸಗಾರರು ಕಡಿಮೆ ಮತ್ತು ಚುರುಕಾಗಿ ಕೆಲಸ ಮಾಡುವ ಮೂಲಕ ಹೆಚ್ಚು ಉತ್ತಮ ಫಲಿತಾಂಶಗಳನ್ನು ನೀಡಬಹುದು ಎಂದು ಸಾಬೀತುಪಡಿಸುತ್ತಿದೆ ಎನ್ನುತ್ತಾರೆ ಜೋ ಓ'ಕಾನ್ನರ್.

ಈ ಬಗ್ಗೆ ಯೋಜನೆಯ ಪ್ರಮುಖ ಸಂಶೋಧಕ ಜೂಲಿಯೆಟ್ ಹೇಳಿದ್ದು ಹೀಗೆ
ಇನ್ನು "ಬೋಸ್ಟನ್ ಕಾಲೇಜಿನ ಸಮಾಜಶಾಸ್ತ್ರದ ಪ್ರಾಧ್ಯಾಪಕ ಮತ್ತು ಈ ಪೈಲಟ್‌ ಯೋಜನೆಯ ಪ್ರಮುಖ ಸಂಶೋಧಕ ಜೂಲಿಯೆಟ್ ಸ್ಕೋರ್ ಅವರು ಈ ರೀತಿ ಹೇಳುತ್ತಾರೆ, “ಒತ್ತಡದ ಕೆಲಸ ಮತ್ತು ಜೀವನ ತೃಪ್ತಿ, ಆರೋಗ್ಯ, ನಿದ್ರೆ, ಇತರೆ ಚಟುವಟಿಕೆ, ಶಕ್ತಿಯ ಬಳಕೆ, ಪ್ರಯಾಣ ಮತ್ತು ಜೀವನದ ಇತರ ಹಲವು ಅಂಶಗಳು, ವಿಶ್ರಾಂತಿ, ನೆಮ್ಮದಿ ಇತ್ಯಾದಿ ವಿಷಯಗಳಲ್ಲಿ ಉದ್ಯೋಗಿಗಳು ಸದ್ಯ ಪಡೆಯಲಿರುವ ಇನ್ನೊಂದು ಹೆಚ್ಚುವರಿ ದಿನದ ರಜೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾವು ವಿಶ್ಲೇಷಿಸುತ್ತೇವೆ" ಎಂದು ಹೇಳಿದ್ದಾರೆ.

ಈ ಅಭಿಯಾನದಲ್ಲಿಕೈಜೋಡಿಸಿರುವ ಚಾರಿಟಿ ಬ್ಯಾಂಕ್ ಒಂದರ ಮುಖ್ಯ ನಿರ್ವಾಹಕರಾಗಿರುವ ಎಡ್ ಸಿಜಲ್ ಈ ಬಗ್ಗೆ "ಹಲವು ಸಮಯದಿಂದ ಈ ಫ್ಲೆಕ್ಸಿಬಲ್ ಕೆಲಸ ಎಂಬ ವಿಷಯದಲ್ಲಿ ನಾವು ಚಾಂಪಿಯನ್ ಆಗಿದ್ದೇವೆ. ಆದರೆ, ಕಳೆದೆರಡು ವರ್ಷಗಳು ಕೋವಿಡ್ ನಿಂದಾಗಿ ಸಾಕಷ್ಟು ಸಾಹಸಭರಿತವಾಗಿದ್ದವು. ನಮ್ಮ ಈ ಬ್ಯಾಂಕ್ ಈ ನಾಲ್ಕು ದಿನಗಳ ವಾರ ಪರಿಕಲ್ಪನೆಗೆ ಸ್ವಾಭಾವಿಕವಾಗಿ ಒಗ್ಗಿಕೊಳ್ಳುತ್ತದೆ".

ಇದನ್ನೂ ಓದಿ: MS Dhoni: ಅನ್ನದಾತರೇ ಚಿಂತೆ ಬಿಡಿ, ನಿಮ್ಮ ಹಿಂದೆ ನಿಂತಿದ್ದಾರೆ ಧೋನಿ! ಇದಕ್ಕೆ ನೋಡಿ ಕ್ರಿಕೆಟ್ ಆಚೆಗೂ ಇಷ್ಟವಾಗೋದು ಮಾಹಿ

ಒಟ್ಟಾರೆಯಾಗಿ ಬಹು ದಿನಗಳ ಹಿಂದೆಯೇ ಎದ್ದಿದ್ದ ವಾರದಲ್ಲಿ ನಾಲ್ಕು ದಿನಗಳ ಕೆಲಸದ ದಿನಚರಿಯನ್ನು ಅಂತೂ ಇಂತೂ ಕಾರ್ಯಗತಗೊಳಿಸಲಾಗಿದೆ. ಈ ಪ್ರಾಯೋಗಿಕ ಕೆಲಸದ ಮಾದರಿಯು ಆರು ತಿಂಗಳುಗಳ ಕಾಲ ಚಾಲ್ತಿಯಲ್ಲಿರಲಿದ್ದು ಮುಂದೆ ಅದರ ಸಾಧಕ-ಭಾದಕಗಳನ್ನು ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವ ವಿಶ್ವಾಸವಿದೆ.
Published by:Ashwini Prabhu
First published: