2022ರಲ್ಲಿ ತೆರಿಗೆಯಿಂದ ಬಚಾವ್ ಆಗಲು ಬಯಸುವಿರಾ? ಅದಕ್ಕಾಗಿ 7 ಸೂಪರ್ Schemes ಇಲ್ಲಿವೆ ನೋಡಿ..

TAX Saving: ಆದಾಯ ತೆರಿಗೆ ರಿಟರ್ನ್ (Income Tax Return) ಅನ್ನು ಸಲ್ಲಿಸಲು ನಮ್ಮ ಮುಂದೆ ಕೇವಲ ಮೂರು ತಿಂಗಳುಗಳಿವೆ. ಸರ್ಕಾರ ಒದಗಿಸುವ ಹಲವಾರು ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಕಡಿತವನ್ನು ತಡೆಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿ ಹೊಸ ವರ್ಷ ನಾವು ನಮಗಾಗಿ ಹೊಸ ಗುರಿಗಳನ್ನು (New Year New Goal) ಹಾಕಿಕೊಳ್ಳುತ್ತೇವೆ. ಪ್ರತಿ ವರ್ಷ ಹೆಚ್ಚಿನದನ್ನು ಮಾಡಲು ಯೋಜಿಸುತ್ತೇವೆ. ಹೆಚ್ಚಿನ ಪುಸ್ತಕಗಳನ್ನು ಓದಲು, ದಿನಚರಿಯನ್ನು ಹೊಂದಿಸಲು ಅನೇಕರು ಯೋಜಿಸಿದರೆ, ಇತರರು ಉತ್ತಮ ಭವಿಷ್ಯಕ್ಕಾಗಿ ಆರ್ಥಿಕ ಯೋಜನೆಯನ್ನು(financial planning for a better future)  ಇಷ್ಟಪಡುತ್ತಾರೆ. 2021 ಕೊನೆಗೊಳ್ಳುವುದರೊಂದಿಗೆ, ನಾವು ನಮ್ಮ ಆದಾಯ ತೆರಿಗೆ ರಿಟರ್ನ್ (Income Tax Return) ಅನ್ನು ಸಲ್ಲಿಸಲು ನಮ್ಮ ಮುಂದೆ ಕೇವಲ ಮೂರು ತಿಂಗಳುಗಳಿವೆ. ಸರ್ಕಾರ ಒದಗಿಸುವ ಹಲವಾರು ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಕಡಿತವನ್ನು ತಡೆಯಬಹುದು. ಸರ್ಕಾರದ ಸಣ್ಣ ಉಳಿತಾಯ ಯೋಜನೆಯಾದ NSC, ಸುಕನ್ಯಾ ಸಮೃದ್ಧಿ ಯೋಜನೆ (SSY), PPF, NPS ಸೇರಿದಂತೆ ಹಲವು ಯೋಜನೆಗಳು ಟ್ಯಾಕ್ಸ್​​ ನಿಂದ ನಿಮ್ಮನ್ನು ಬಚಾವ್​​ ಮಾಡುತ್ತವೆ.

ತೆರಿಗೆ ಉಳಿಸಲು ನಿಮಗೆ ಸಹಾಯ ಮಾಡುವ ಕೆಲವು ಯೋಜನೆಗಳು ಇಲ್ಲಿವೆ 

1) ಸಾರ್ವಜನಿಕ ಭವಿಷ್ಯ ನಿಧಿ (PPF) - PPF ಯೋಜನೆಯನ್ನು ಆದಾಯ ತೆರಿಗೆ ಉಳಿಸಲು ಅತ್ಯುತ್ತಮ ಸರ್ಕಾರಿ ಯೋಜನೆ ಎಂದು ಪರಿಗಣಿಸಲಾಗಿದೆ. ನೀವು ಪಿಪಿಎಫ್‌ನಲ್ಲಿ ವಾರ್ಷಿಕವಾಗಿ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಸರ್ಕಾರವು ಪಿಪಿಎಫ್‌ನಲ್ಲಿ ಹೂಡಿಕೆಗೆ ಗ್ಯಾರಂಟಿ ನೀಡುತ್ತದೆ, ಅಂದರೆ ಹಣ ನಷ್ಟವಾಗಲ್ಲ. ಪ್ರಸ್ತುತ, ಸರ್ಕಾರವು ಪಿಪಿಎಫ್‌ಗೆ ವಾರ್ಷಿಕ ಶೇ. 7.10ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದರಲ್ಲಿ, ಸೆಕ್ಷನ್ 80 ಸಿ ಅಡಿಯಲ್ಲಿ ಹೂಡಿಕೆಯ ಮೇಲೆ ಆದಾಯ ತೆರಿಗೆ ವಿನಾಯಿತಿ ಲಭ್ಯವಿದೆ.

ಇದನ್ನೂ ಓದಿ: PM Modi New Scheme: ಕಾರ್ಮಿಕರಿಗೆ ಭರ್ಜರಿ ಸುದ್ದಿ.. ಕೇವಲ 2 ರೂ. ಮೂಲಕ ದೊಡ್ಡ ಮೊತ್ತದ ಪಿಂಚಣಿ ಪಡೆಯಿರಿ

2) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) - NPS ಒಂದು ಸರ್ಕಾರಿ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ, 1.5 ಲಕ್ಷ ರೂಪಾಯಿ ತೆರಿಗೆ ಜೊತೆಗೆ, 50,000 ರೂಪಾಯಿಗಳ ಪ್ರಯೋಜನಗಳನ್ನು ತೆಗೆದುಕೊಳ್ಳಬಹುದು. NPS ನಲ್ಲಿ ಹೂಡಿಕೆ ಮಾಡುವ ಮೂಲಕ, ನೀವು 2 ಲಕ್ಷ ರೂಪಾಯಿಗಳ ಒಟ್ಟು ಆದಾಯ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು. ನೀವು ತಿಂಗಳಿಗೆ 1,000 ರೂಪಾಯಿಯಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು. 18 ರಿಂದ 65 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು.

3) ಸುಕನ್ಯಾ ಸಮೃದ್ಧಿ ಯೋಜನೆ (SSY) - 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿಮ್ಮ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (SSY) ನಲ್ಲಿ ಖಾತೆಯನ್ನು ತೆರೆಯುವ ಮೂಲಕ ನೀವು ತೆರಿಗೆ ಉಳಿಸಬಹುದು. ಇದು ಸಣ್ಣ ಉಳಿತಾಯ ಯೋಜನೆಯಾಗಿದ್ದು, ಇದನ್ನು ಮೋದಿ ಸರ್ಕಾರ ಪ್ರಾರಂಭಿಸಿದೆ. ವಾರ್ಷಿಕವಾಗಿ ಗರಿಷ್ಠ 1.5 ಲಕ್ಷವನ್ನು ಠೇವಣಿ ಮಾಡುವ ಮೂಲಕ ಈ ಯೋಜನೆಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಪ್ರಸ್ತುತ ಈ ಯೋಜನೆಗೆ ಸರ್ಕಾರ ವಾರ್ಷಿಕ ಶೇ.7.6 ಬಡ್ಡಿ ನೀಡುತ್ತಿದೆ.

4) ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) - SCSS ಹಿರಿಯ ನಾಗರಿಕರಿಗೆ ಉತ್ತಮ ಉಳಿತಾಯ ಯೋಜನೆಯಾಗಿದೆ. ಈ ಉಳಿತಾಯ ಖಾತೆಯನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದು. ಈ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ 80C ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತ ವಾರ್ಷಿಕ 1.5 ಲಕ್ಷ ರೂ. ಪ್ರಸ್ತುತ, ವಾರ್ಷಿಕ 7.4% ಬಡ್ಡಿಯ ನಿಬಂಧನೆ ಇದೆ.

5) ಜೀವ ವಿಮೆ - ಯೂನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್ (ULIP) ನಲ್ಲಿನ ಹೂಡಿಕೆಯ ಮೇಲೆ ಮಾತ್ರ ತೆರಿಗೆ ಉಳಿತಾಯ ವಿನಾಯಿತಿ ಲಭ್ಯವಿದೆ. ULIP ನಲ್ಲಿ 2.5 ಲಕ್ಷ ರೂ.ಗಳನ್ನು ಮೀರಿದ ಪ್ರೀಮಿಯಂನಲ್ಲಿ ತೆರಿಗೆ ವಿನಾಯಿತಿ ಲಭ್ಯವಿರುವುದಿಲ್ಲ. ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ, ಜೀವ ವಿಮಾ ಪಾಲಿಸಿಗಳ ಮೆಚ್ಯೂರಿಟಿ ಆದಾಯವನ್ನು ಸೆಕ್ಷನ್ 10 (10D) ಅಡಿಯಲ್ಲಿ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಯುಲಿಪ್‌ಗಳಲ್ಲಿನ ವಿಮೆ ಮತ್ತು ಹೂಡಿಕೆಯ ಸಂಯೋಜನೆಯು 5 ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಬರುತ್ತದೆ.

ಇದನ್ನೂ ಓದಿ: ತಿಂಗಳಿಗೆ 5,000 ರೂ. ಪಿಂಚಣಿ ನೀಡುವ Atal Pension ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

6) ತೆರಿಗೆ ಉಳಿತಾಯ FD - ತೆರಿಗೆ ಉಳಿತಾಯ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಆದಾಯ ತೆರಿಗೆಯನ್ನು ಉಳಿಸಬಹುದು. ತೆರಿಗೆ ಉಳಿಸುವ ಎಫ್‌ಡಿಗಳಲ್ಲಿನ ಹೂಡಿಕೆಗಳನ್ನು 5 ವರ್ಷಗಳವರೆಗೆ ಲಾಕ್ ಮಾಡಲಾಗುತ್ತದೆ. ತೆರಿಗೆ ಉಳಿತಾಯ FD ಗಳ ಬಡ್ಡಿದರಗಳು ಕಾಲಕಾಲಕ್ಕೆ ಬದಲಾಗುತ್ತವೆ. ತೆರಿಗೆ ಉಳಿತಾಯ FD ಹೂಡಿಕೆಯು ಸುರಕ್ಷಿತ ಮತ್ತು ಖಾತರಿಯ ರಿಟರ್ನ್ ಆಯ್ಕೆಯಾಗಿದೆ. ನೀವು ವಾರ್ಷಿಕ 1.5 ಲಕ್ಷದವರೆಗಿನ ಸ್ಥಿರ ಠೇವಣಿಗಳ ಮೇಲೆ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

7) ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS) – ಇದು ಒಂದು ರೀತಿಯ ಇಕ್ವಿಟಿ ಫಂಡ್ ಮತ್ತು ಇದು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡುವ ಏಕೈಕ ಮ್ಯೂಚುಯಲ್ ಫಂಡ್ ಆಗಿದೆ. ELSS ನಲ್ಲಿ ವಾರ್ಷಿಕ 1 ಲಕ್ಷದವರೆಗಿನ ಆದಾಯ/ಲಾಭಗಳು ತೆರಿಗೆಗೆ ಒಳಪಡುವುದಿಲ್ಲ. ELSS 3 ವರ್ಷಗಳ ಕಡಿಮೆ ಲಾಕ್-ಇನ್ ಅವಧಿಯನ್ನು ಹೊಂದಿದೆ, ಇದು ಎಲ್ಲಾ ತೆರಿಗೆ ಉಳಿಸುವ ಹೂಡಿಕೆ ಆಯ್ಕೆಗಳಲ್ಲಿ ಉತ್ತಮವಾಗಿದೆ.
Published by:Kavya V
First published: