Terrace Farming: ವಯಸ್ಸು 63, ಆದ್ರೆ ಇವರ ಟೆರೇಸ್ ಮೇಲಿನ ಕೈತೋಟ ಹೇಗಿದೆ ನೋಡಿ

ತಮ್ಮ ಮುಪ್ಪಿನ ಕಾಲದಲ್ಲಿಯೂ ಸಹ ಇತರರಿಗೆ ಮಾದರಿಯಾಗಿ ನಿಲ್ಲಬೇಕೆಂದು ಆಸೆ ಪಡುತ್ತಾರೆ. ಅಂತಹವರಲ್ಲಿ ಕೇರಳ ಮೂಲದ ಪುನ್ನೂಸ್‌ ಜೇಕಬ್‌ ಕೂಡ ಒಬ್ಬರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು ನಿವೃತ್ತಿಯ ನಂತರ ತಾಯ್ನಾಡಾದ ಕೇರಳಕ್ಕೆ ಹಿಂದಿರುಗಿದ ತೊಡುಪುಳ ಮೂಲದ ಪುನ್ನೂಸ್ ಜೇಕಬ್ ಕೃಷಿಯನ್ನು ಹವ್ಯಾಸವನ್ನಾಗಿಸಿಕೊಂಡು ಜೀವನ ಮುಂದುವರಿಸಲು ಬಯಸಿದ್ದರು.

ಪುನ್ನೂಸ್‌ ಜೇಕಬ್‌

ಪುನ್ನೂಸ್‌ ಜೇಕಬ್‌

  • Share this:
ಬಹುತೇಕರು ಕೆಲಸದಿಂದ ನಿವೃತ್ತಿ (Retirement) ಪಡೆದ ನಂತರ ಮನೆಯಲ್ಲಿಯೇ ಕುಳಿತು ಸುಮ್ಮನೆ ಸಮಯ ಕಳೆಯುವವರು ಹೆಚ್ಚು. ಇನ್ನು ಕೆಲವರು ಕೆಲಸದಿಂದ ಮುಕ್ತಿ ಸಿಕ್ಕಿದೆ, ನಿವೃತ್ತಿಯ ಹಣ (Money) ಕೈಯಲ್ಲಿದೆ ಏನಾದರೂ ಮಾಡಬೇಕೆಂದು ಬಯಸುತ್ತಾರೆ. ತಮ್ಮ ಮುಪ್ಪಿನ ಕಾಲದಲ್ಲಿಯೂ ಸಹ ಇತರರಿಗೆ ಮಾದರಿಯಾಗಿ ನಿಲ್ಲಬೇಕೆಂದು ಆಸೆ ಪಡುತ್ತಾರೆ. ಅಂತಹವರಲ್ಲಿ ಕೇರಳ ಮೂಲದ ಪುನ್ನೂಸ್‌ ಜೇಕಬ್‌ (Punnoose Jacob) ಕೂಡ ಒಬ್ಬರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು ನಿವೃತ್ತಿಯ ನಂತರ ತಾಯ್ನಾಡಾದ ಕೇರಳಕ್ಕೆ (Kerala) ಹಿಂದಿರುಗಿದ ತೊಡುಪುಳ ಮೂಲದ ಪುನ್ನೂಸ್ ಜೇಕಬ್ ಕೃಷಿಯನ್ನು ಹವ್ಯಾಸವನ್ನಾಗಿಸಿಕೊಂಡು ಜೀವನ ಮುಂದುವರಿಸಲು ಬಯಸಿದ್ದರು.

ಪುನ್ನೂಸ್‌ ಜೇಕಬ್‌ ಅವರ ಟೆರೇಸ್ ಗಾರ್ಡನಿಂಗ್ 
ಇಡುಕ್ಕಿಯಲ್ಲಿ ನೆಲೆಸಿರುವ ಅವರ ಕುಟುಂಬವು ಕೃಷಿಯ ಹಿನ್ನೆಲೆಯನ್ನು ಹೊಂದಿದೆ. ಅದರಿಂದ ಅವರು ಕೂಡ ಕೃಷಿಯನ್ನೆ ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡರು. ಆದರೆ ಜಮೀನಿನ ಅಲಭ್ಯತೆ ದೊಡ್ಡ ಪ್ರಮಾಣದ ಕೃಷಿಯನ್ನು ಆರಂಭಿಸಲು ಒಂದು ಸವಾಲಾಗಿ ಪರಿಣಮಿಸಿತು. ಹೀಗಾಗಿ ಅವರು ನಿಧಾನಗತಿಯಲ್ಲಿ ತಮ್ಮ ಕೃಷಿಯನ್ನು ಸಾಗಿಸಬೇಕೆಂದು ನಿರ್ಧರಿಸಿ ತಮ್ಮ ಮನೆಯ ತಾರಸಿಯ ಮೇಲೆ ತರಕಾರಿ ಬೆಳೆಯಲು ಮುಂದಾದರು.

“ನನ್ನ ಮನೆಯ ಎದುರು ಮೂರು ಅಂತಸ್ತಿನ ಮತ್ತೊಂದು ನಮ್ಮ ಮನೆಯನ್ನು ಬಾಡಿಗೆಗೆ ನೀಡಿದ್ದೇವೆ. ಅದು 3,500 ಚದರ ಅಡಿ ವಿಶಾಲವಾದ ಟೆರೇಸ್ ಅನ್ನು ಹೊಂದಿದೆ. ಅಲ್ಲಿ ನಾನು ಕೃಷಿ ಮಾಡಬೇಕೆಂದು ನಿರ್ಧಾರ ಮಾಡಿದೆ. ನಾನು ಏನೇ ಕೆಲಸ ಮಾಡಿದರೂ ಪರ್ಫೆಕ್ಟ್‌ ಆಗಿ ಮಾಡಲು ಬಯಸುತ್ತೇನೆ. ಆದ್ದರಿಂದ ಮೊದಲಿಗೆ ಉದ್ಯಾನವನ ಚಿಕ್ಕದಾಗಿದ್ದರೂ ಪರವಾಗಿಲ್ಲ ಎಂದು ಎಲ್ಲವನ್ನೂ ಅಚ್ಚುಕಟ್ಟಾಗಿ ಹೊಂದಿಸಿದೆ ”ಎಂದು 63 ವರ್ಷದ ಜೇಕಬ್‌ ಹೇಳುತ್ತಾರೆ.

ತರಕಾರಿಗಳನ್ನು ಹೇಗೆ ಬೆಳೆಸುತ್ತಾರೆ?
ಜೇಕಬ್‌ ಅವರು ಆರಂಭದಲ್ಲಿ ಕೆಲವು ಗ್ರೋ ಬ್ಯಾಗ್‌ಗಳಲ್ಲಿ ತರಕಾರಿ ಬೀಜಗಳನ್ನು ನೆಟ್ಟರು. ಟೊಮೆಟೊ, ಮೆಣಸಿನಕಾಯಿ, ಬದನೆಕಾಯಿ, ಬೆಂಡೆಕಾಯಿ ಮತ್ತು ಸೌತೆಕಾಯಿ ಹೀಗೆ ಹಲವು ತರಕಾರಿಗಳ ಬೀಜಗಳನ್ನು ಹಾಕಿದರು. ಎರಡು ವರ್ಷಗಳಲ್ಲಿ, ಚೀಲಗಳಲ್ಲಿ ಬೆಳೆಯುವ ತರಕಾರಿಗಳು ಹೆಚ್ಚಾದವು. ಅದರ ಜೊತೆಗೆ ತರಕಾರಿ ತಳಿಗಳ ಸಂಖ್ಯೆ ಕೂಡ ವಿಸ್ತರಿಸಿತು.

ಇದನ್ನೂ ಓದಿ:  Pears Farming: ಅರೇ ವಾವ್! ಈ ಹಣ್ಣು ಬೆಳೆಸಿ ವರ್ಷಕ್ಕೆ 25 ಲಕ್ಷ ರೂಪಾಯಿ ಗಳಿಸ್ತಾರೆ ರೈತತರಕಾರಿಗಳಿಗೆ ಅವರು ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿದರು. ಇದರಿಂದ ಸಸಿಗಳಿಗೆ ಬೇಕಾದಷ್ಟು ನೀರು ಸಿಗುತ್ತಿತ್ತು. ಎಲ್ಲಾ ಗ್ರೋ ಬ್ಯಾಗ್‌ಗಳನ್ನು 1.5 ಅಡಿ ಎತ್ತರದ ಕಬ್ಬಿಣದ ಸ್ಟ್ಯಾಂಡ್‌ಗಳ ಮೇಲೆ ಇರಿಸಲಾಗುತ್ತದೆ. ಜೇಡಿಮಣ್ಣಿನ ಛಾವಣಿಯ ಅಂಚುಗಳನ್ನು ಪ್ರತಿ ಗ್ರೋ ಬ್ಯಾಗ್‌ನ ಕೆಳಗೆ ಇರಿಸಲಾಗುತ್ತದೆ. ಇದರಿಂದಾಗಿ ಹೆಚ್ಚುವರಿ ನೀರನ್ನು ಹೀರಿಕೊಳ್ಳಲು ಇವು ಸಹಾಯ ಮಾಡುತ್ತವೆ. ಆರು ವರ್ಷಗಳ ಹಿಂದೆ, ಪನ್ನೂಸ್ ಅವರು ಟೆರೇಸ್‌ಗೆ ಒಂದು ಶೆಡ್ ಅನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಅದು ಸಸ್ಯಗಳನ್ನು ವಿಪರೀತ ಮಳೆ ಮತ್ತು ಸೂರ್ಯನ ಬೆಳಕಿನಿಂದ ಸುರಕ್ಷಿತವಾಗಿರಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. "ಕೃಷಿ ಇಲಾಖೆಯಿಂದ ಸಹಾಯಧನ ಪಡೆದ ನಂತರ ಶೆಡ್ ಅನ್ನು ನಿರ್ಮಾಣ ಮಾಡಲಾಯಿತು” ಎಂದು ಅವರು ಹೇಳುತ್ತಾರೆ.

ಇವರ ಟೆರೆಸ್‌ನಲ್ಲಿ ವಿದೇಶಿ ತರಕಾರಿಗಳು ಸಹ ಲಭ್ಯ
ಇಂದು ಜೇಕಬ್‌ ಅವರು ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ಮತ್ತು ಹೂಕೋಸು ಮುಂತಾದ ತರಕಾರಿಗಳನ್ನು ಬೆಳೆದು ‘ಮಂಗಳಂ ಫುಡ್ಸ್’ ಎಂಬ ಬ್ರಾಂಡ್‌ನಲ್ಲಿ ನಿಗದಿತ ಬೆಲೆಗೆ ಮಾರಾಟ ಮಾಡುತ್ತಾರೆ.

“ಪ್ರತಿದಿನ ಸರಾಸರಿ 20-25 ಕೆಜಿ ತರಕಾರಿಗಳನ್ನು ನನ್ನ ತಾರಸಿಯಿಂದ ಕೊಯ್ಲು ಮಾಡಲಾಗುತ್ತದೆ. ಅದನ್ನು ಪ್ಯಾಕ್ ಮಾಡಲಾಗುತ್ತದೆ ಮತ್ತು ಹತ್ತಿರದ ಮಾರ್ಜಿನ್-ಫ್ರೀ ಸೂಪರ್ಮಾರ್ಕೆಟ್‌ಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಆ ತರಕಾರಿಗಳು ಕೆಲವೇ ಕೆಲವು ಗಂಟೆಗಳಲ್ಲಿ ಸಂಪೂರ್ಣವಾಗಿ ಮಾರಾಟವಾಗುತ್ತವೆ” ಎಂದು ಜೇಕಬ್‌ ತಮ್ಮ ತೋಟದ ಬಗ್ಗೆ ವಿವರಿಸುತ್ತಾರೆ.

ಪೆಪ್ಪರ್ ಸ್ಪ್ರೇ ಎಂಬ ಜೈವಿಕ ಕೀಟನಾಶಕ:
“ನಾನು ಸಾವಯವ ಸ್ಲರಿ ಮತ್ತು ಮೀನು ಅಮಿನೊವನ್ನು ಪ್ರಮುಖ ರಸಗೊಬ್ಬರಗಳಾಗಿ ಬಳಸುತ್ತೇನೆ. ಈ ಮಿಶ್ರಣವನ್ನು ಪ್ರತಿ ವಾರ ನಿಗದಿತ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಯಾವುದೇ ದಿನವೂ ತಪ್ಪಬಾರದು ಎಂದು ಎಂದು ನಾನು ಒಂದು ಚಾರ್ಟ್ ಅನ್ನು ಸಿದ್ಧಪಡಿಸಿದ್ದೇನೆ. ಅದಕ್ಕೆ ತಕ್ಕಂತೆ ಸಾವಯವ ಕೀಟನಾಶಕಗಳನ್ನು ಸಿಂಪಡಿಸುತ್ತೇನೆ” ಎಂದು ಅವರು ತಮ್ಮ ಅನುಭವನ್ನು ಹಂಚಿಕೊಳ್ಳುತ್ತಾರೆ.ಪ್ರಪಂಚದ ಅತ್ಯಂತ ಮಸಾಲೆಯುಕ್ತ ಮೆಣಸು, ಇವರ ತೋಟಗಾರಿಕೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಈ ಘೋಸ್ಟ್‌ ಪೆಪ್ಪರ್‌ನಿಂದ ಮಾಡಿದ ಕೀಟನಾಶಕವೇ ಅವರ ತೋಟದ ಸ್ಟಾರ್‌ ಎಂದೇ ಹೇಳಬಹುದು.

ಇದನ್ನೂ ಓದಿ:  Bio-Fencing: ರೈತರ ಹೊಲದ ರಕ್ಷಣೆಗೆ ಇದೆ ಜೈವಿಕ ಬೇಲಿ! ಕಡಿಮೆ ವೆಚ್ಚದಲ್ಲಿ ಸಿಗಲಿದೆ ಅಧಿಕ ಲಾಭ!

“ಈ ಘೋಸ್ಟ್ ಪೆಪ್ಪರ್ ಅನ್ನು ಮುಖ್ಯವಾಗಿ ರಾಜಸ್ಥಾನದಲ್ಲಿ ಬೆಳೆಯಲಾಗುತ್ತದೆ. ನಾನು ಅದರ ಕೆಲವು ಸಸಿಗಳನ್ನು ಬೆಳೆದಿದ್ದೇನೆ. ಇದನ್ನು ಪ್ರಮುಖವಶಾಗಿ ಕೀಟನಾಶಕ ಉದ್ದೇಶಗಳಿಗಾಗಿಯೇ ಬೆಳೆದಿದ್ದೇನೆ. ಮೆಣಸಿನಕಾಯಿಯನ್ನು ಒಣಗಿಸಿ ಪುಡಿ ಮಾಡಿದ ನಂತರ ಅದನ್ನು ನೀರಿನಲ್ಲಿ ಕರಗಿಸಿ ಗಿಡಗಳ ಎಲೆಗಳ ಮೇಲೆ ಸಿಂಪಡಿಸಲಾಗುತ್ತದೆ. ಇಲ್ಲಿ ಕೀಟಗಳ ದಾಳಿ ಕಡಿಮೆಯಾದರೂ, ಈ ವಿಧಾನವು ತಕ್ಷಣವೇ ಕೆಲಸ ಮಾಡುತ್ತದೆ. ಆದರೆ ಈ ಪ್ರಕ್ರಿಯೆಯನ್ನು ಮಾಡುವಾಗ ಹೆಚ್ಚಿನ ಕಾಳಜಿ ವಹಿಸಬೇಕು ”ಎಂದು ಅವರು ಎಚ್ಚರಿಸಿದ್ದಾರೆ.

ಸಾವಯವ ಕೃಷಿ ಪದ್ಧತಿ 
ತಮ್ಮ ತಾರಸಿಯಲ್ಲಿನ ಬೆಳೆಗಳನ್ನು ಹೊರತುಪಡಿಸಿ, ಪುನ್ನೂಸ್ ಅವರು ತಮ್ಮ ಮನೆಯ ತೋಟದಲ್ಲಿ ಬಾಟಲ್ ಸೋರೆಕಾಯಿ, ಹಾಗಲಕಾಯಿ ಮತ್ತು ಹಾವಿನ ಸೋರೆಕಾಯಿಯಂತಹ ಬಳ್ಳಿಯ ತರಕಾರಿಗಳನ್ನು ಸಹ ಬೆಳೆಯುತ್ತಾರೆ.
“ಮಾರುಕಟ್ಟೆ ಬೆಲೆ ಎಷ್ಟೇ ಆಗಿದ್ದರೂ ನಾನು ಯಾವಾಗಲೂ ತರಕಾರಿಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡುತ್ತೇನೆ. ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುವುದರಿಂದ ಜನರು ಇವುಗಳನ್ನು ಖರೀದಿಸಲು ಹಿಂಜರಿಯುವುದಿಲ್ಲ. ಉದಾಹರಣೆಗೆ ಟೊಮೇಟೊ ಮಾರುಕಟ್ಟೆಯಲ್ಲಿ 10 ಅಥವಾ 100 ರೂ.ಗಳಿದ್ದರೂ, ಒಂದು ಕಿಲೋಗ್ರಾಂ ನಮ್ಮ ಟೊಮ್ಯಾಟೊ 90 ರೂ.ಗೆ ಮಾರಾಟವಾಗುತ್ತದೆ. ಅದೇ ರೀತಿ ಮೆಣಸಿನಕಾಯಿ 120 ರೂ. ಮತ್ತು ಬೆಂಡೆಕಾಯಿ 70 ರೂ. ಗಳಿಗೆ ಮಾರಾಟವಾಗುತ್ತವೆ” ಎಂದು ಹೇಳಿದರು.

ಅವರ ತೋಟದಲ್ಲಿ ಮಾವಿನಕಾಯಿ, ಚಿಕ್ಕು ಮತ್ತು ಮಾವಿನಕಾಯಿಯಂತಹ ಕೆಲವು ವಿಧದ ಹಣ್ಣುಗಳನ್ನು ಸಹ ಬೆಳೆಯಲಾಗುತ್ತದೆ. ಜೇಕಬ್ಅವರ ತೋಟದ ಮತ್ತೊಂದು ವಿಶೇಷತೆ ಅಂದರೆ ಅವರು ಮತ್ತೆ ಮತ್ತೆ ಅದೇ ಮಣ್ಣನ್ನು ಬಳಸುತ್ತಾರೆ.“ಗಾರ್ಡನ್ ಮೂರನೇ ಮಹಡಿಯಲ್ಲಿ ಇರುವುದರಿಂದ, ಎಲ್ಲಾ ಸಮಯದಲ್ಲೂ ಮಣ್ಣನ್ನು ಸಾಗಿಸುವುದು ಸುಲಭವಲ್ಲ. ಕೊಯ್ಲಿನ ಒಂದು ಚಕ್ರದ ನಂತರ, ನಾನು ಮಣ್ಣಿನಲ್ಲಿ ರಸಗೊಬ್ಬರಗಳನ್ನು ಬೆರೆಸುತ್ತೇನೆ ಮತ್ತು ಅವುಗಳ ಪೌಷ್ಟಿಕತೆಯನ್ನು ಮರಳಿ ಪಡೆಯಲು ಅವುಗಳನ್ನು ಒಂದು ಮೂಲೆಯಲ್ಲಿ ಬಿಡುತ್ತೇನೆ. ಆದ್ದರಿಂದ ಒಂದು ಬಾರಿಗೆ ಒಟ್ಟು ಮಣ್ಣಿನ ಅರ್ಧದಷ್ಟು ಮಾತ್ರ ಬಳಕೆಯಾಗುತ್ತದೆ. ಉಳಿದ ಅರ್ಧವನ್ನು ವಿಶ್ರಾಂತಿಗಾಗಿ ಬಿಡಲಾಗುತ್ತದೆ. ಇದು ಸಸ್ಯಗಳ ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ,” ಎಂದು ಅವರು ಮಣ್ಣಿನ ಬಗ್ಗೆ ವಿವರಿಸುತ್ತಾರೆ.

ಇವರ ಸಾಧನೆಗೆ ಸಿಕ್ಕ ಪ್ರಶಸ್ತಿ
ಇತ್ತೀಚೆಗೆ, ಪುನ್ನೂಸ್ ಅವರು ಕೇರಳ ಸರ್ಕಾರದ “ಬೆಸ್ಟ್‌ ಟೆರೇಸ್ ಫಾರ್ಮರ್ ಆಫ್ ದಿ ಡಿಸ್ಟ್ರಿಕ್ಟ್ “ ಪ್ರಶಸ್ತಿಯನ್ನು ಪಡೆದರು. “ಈ ಪ್ರಶಸ್ತಿಯು ಹೆಚ್ಚು ತರಕಾರಿಗಳನ್ನು ಬೆಳೆಸಲು ನನಗೆ ಮತ್ತಷ್ಟು ಪ್ರೇರಣೆಯನ್ನು ನೀಡಿದೆ. ಆದರೆ ನನಗೆ ಈ ತರಕಾರಿಯಿಂದ ಯಾವುದೇ ಲಾಭ ಗಳಿಸಬೇಕೆಂಬ ಆಸೆ ಇಲ್ಲ. ಲಾಭಕ್ಕಿಂತ ಹೆಚ್ಚಾಗಿ ನಾನು ಕೃಷಿಯಿಂದ ಪಡೆಯುವ ಮನಃಶಾಂತಿ ಮತ್ತು ತೃಪ್ತಿಗೆ ಬೆಲೆ ಕೊಡುತ್ತೇನೆ. ಈ ಹವ್ಯಾಸವು ನನ್ನ ನಿವೃತ್ತಿಯ ಜೀವನವನ್ನು ಶಾಂತ ಮತ್ತು ಸಂತೋಷದಿಂದ ಕಳೆಯಲು ಸಾಕಷ್ಟು ಪ್ರಯೋಜನ ಆಗಿದೆ” ಎಂದು ಅವರು ಹೇಳುವಾಗ ಅವರ ಮುಖದಲ್ಲಿ ತೃಪ್ತಿಯ ಛಾಯೆ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Business Idea: ಈ ಬೆಳೆ ಬೆಳೆದ್ರೆ ರೈತರ ಬದುಕೆ ಬದಲಾಗುತ್ತೆ, ಕೆಜಿಗೆ 800 ರೂಪಾಯಿ ಅಂದ್ರೆ ಯೋಚನೆ ಮಾಡಿ!

ಈಗ ಅವರು ತರಕಾರಿಗಳನ್ನು ನೋಡಿಕೊಳ್ಳಲು ಒಬ್ಬ ಮಾಲಿ ಮತ್ತು ಅವುಗಳನ್ನು ಮಾರಾಟ ಮಾಡಲು ಬೇಕಾದ ಪ್ಯಾಕೇಜಿಂಗ್‌ ಅನ್ನು ನೋಡಿಕೊಳ್ಳಲು ಇಬ್ಬರು ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. "ನಾನು 100 ಗ್ರೋ ಬ್ಯಾಗ್‌ಗಳನ್ನು ಸಂಗ್ರಹ ಮಾಡಿ ಇನ್ನು ಹೆಚ್ಚು ತರಕಾರಿಗಳನ್ನು ಬೆಳೆಯಬೇಕೆಂದು ಆಸೆ ಪಡುತ್ತೇನೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವ ಹೊಸ ವಿದೇಶಿ ತರಕಾರಿಗಳನ್ನು ತರಲು ಯೋಜಿಸುತ್ತಿದ್ದೇನೆ" ಎಂದು ಅವರು ಸಾಕಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.
Published by:Ashwini Prabhu
First published: