Money Saving Tips: ವಿದೇಶದಲ್ಲಿರುವವರಿಗೆ ಹಣ ಉಳಿಸಲು ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಓದಲು ಅಥವಾ ಕೆಲಸಕ್ಕಾಗಿ ನೀವು ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸರಿಯಾಗಿ ತಿಳಿದಿಲ್ಲದೇ ಇರುವುದರಿಂದ ಹೆಚ್ಚು ಹಣ ಖರ್ಚಾಗುವುದು ಸಹಜ. ಹಾಗಾಗಿ ಅಲ್ಲಿ ವಾಸಿಸುವುದು ದುಬಾರಿ ಎನಿಸಬಹುದು. ಆದರೆ ನೀವು ಇತ್ತೀಚೆಗೆ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರೆ ಹಣವನ್ನು ಉಳಿಸಲು ಕೆಲವು ಮಾರ್ಗಗಳಿವೆ. ಯುಎಸ್ ಮೂಲದ ಭಾರತೀಯ ವತ್ಸಲ್ ನಹತಾ ಅವರು "ಲೈಫ್ ಹ್ಯಾಕ್‌ಗಳನ್ನು" ಹಂಚಿಕೊಂಡಿದ್ದಾರೆ. ಅದು ನೀವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ವಾಸಿಸುತ್ತಿದ್ದರೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

ಓದಲು ಅಥವಾ ಕೆಲಸಕ್ಕಾಗಿ ನೀವು ಬೇರೆ ದೇಶಗಳಿಗೆ (Other Country) ಹೋದಾಗ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸರಿಯಾಗಿ ತಿಳಿದಿಲ್ಲದೇ ಇರುವುದರಿಂದ ಹೆಚ್ಚು ಹಣ ಖರ್ಚಾಗುವುದು ಸಹಜ. ಹಾಗಾಗಿ ಅಲ್ಲಿ ವಾಸಿಸುವುದು ದುಬಾರಿ (Expensive) ಎನಿಸಬಹುದು. ಎಲ್ಲಿ, ಹೇಗೆ? ಎಷ್ಟು ಹಣ ಖರ್ಚು ಮಾಡಿದರೆ ಉತ್ತಮ ಎಂದು ಕಾಲ ಕ್ರಮೇಣ ನಿಮಗೂ ಗೊತ್ತಾಗುತ್ತದೆ. ಆದರೆ ಮೊದಲೇ ನಿಮಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ, ತಿಳಿದಿರುವವರು ಸರಿಯಾದ ಸಲಹೆ ನೀಡಿದರೆ ಮೊದಲೇ ನೀವು ಒಂದಷ್ಟು ಹಣವನ್ನು ಉಳಿತಾಯ ಮಾಡಬಹುದು. ಅಂದಹಾಗೆ ನೀವು ಅಮೆರಿಕದಲ್ಲಿ ವಲಸಿಗರಾಗಿದ್ದೀರಾ? ಅಥವಾ ವಿದ್ಯಾರ್ಥಿಯಾಗಿದ್ದರೂ (Student) ನಿಮಗೆ ಅಲ್ಲಿನ ಜೀವನ ದುಬಾರಿ ಎನಿಸಬಹುದು. ಅಲ್ಲಿನ ದಿನಸಿ, ಸಾರಿಗೆ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಯು ನಿಮ್ಮ ಜೇಬು ಖಾಲಿ ಮಾಡಬಹುದು.


ಅಂದಹಾಗೆ ದೆಹಲಿಯ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಪದವಿ ಪಡೆದ ನಂತರ, ವತ್ಸಲ್‌ ನಹತಾ ಐವಿ ಲೀಗ್ ಯೇಲ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯುಎಸ್‌ಗೆ ತೆರಳಿದ್ದರು.


ಅವರು ಅಂತಿಮವಾಗಿ ವಿಶ್ವ ಬ್ಯಾಂಕ್‌ನಲ್ಲಿ ಉದ್ಯೋಗವನ್ನು ಗಳಿಸಿಕೊಂಡು ವಾಷಿಂಗ್ಟನ್​ ಡಿಸಿಗೆ ತೆರಳಿದರು. ವತ್ಸಲ್ ನಹತಾ ಅವರು ಅಮೆರಿಕದಲ್ಲಿ ಕಷ್ಟಪಟ್ಟು ಗಳಿಸಿದ ಡಾಲರ್‌ಗಳನ್ನು ಉಳಿಸಲು ಹಲವಾರು ಮಾರ್ಗಗಳನ್ನು ಕಂಡುಕೊಂಡರು. ಅದನ್ನು ಅವರು ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅವು ಯಾವವು ಅನ್ನೋದನ್ನು ಈ ಲೇಖನದಲ್ಲಿ ನೋಡೋಣ.


1. ದಿನಸಿಗಳ ಬಗ್ಗೆ ಜಾಗರೂಕರಾಗಿರಿ:


ಅಮೆರಿಕನ್ ಅಂಗಡಿಗಳು 85% ವಸ್ತುಗಳು ಸಂಸ್ಕರಿಸಿದ ರಾಸಾಯನಿಕಗಳಿಂದ ತುಂಬಿವೆ. ಪದಾರ್ಥಗಳನ್ನು ಖರೀದಿಸುವಾಗ ಬಹಳ ಎಚ್ಚರಿಕೆಯಿಂದ ಓದಿ. ಅವುಗಳಲ್ಲಿ ಹೆಚ್ಚಿನವು ಅತಿಯಾದ ಸಕ್ಕರೆ, ಹೆಚ್ಚಿನ ಸೋಡಿಯಂ, ಟೋಕೋಫೆರಾಲ್‌ಗಳು ಮುಂತಾದವುಗಳನ್ನು ಹೊಂದಿರುತ್ತವೆ. ಇದು ತೂಕದ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು.


ಇದನ್ನೂ ಓದಿ: ರಿಸ್ಕ್​ ಇಲ್ಲದೇ ನಿಮ್ಮ ಹಣ ಡಬಲ್​ ಮಾಡ್ಬೇಕಾ? ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ!


ಸಕ್ಕರೆಗಳು, ಅಧಿಕ ಸೋಡಿಯಂ ಮತ್ತು ಇತರ ಹಾನಿಕಾರಕ ಪದಾರ್ಥಗಳು ತುಂಬಿದ ವಸ್ತುಗಳಿಗೆ ಬದಲಾಗಿ ಉತ್ತಮ-ಗುಣಮಟ್ಟದ ಹಾಲು, ಬ್ರೆಡ್‌ಗಳು, ಧಾನ್ಯಗಳು ಮತ್ತು ಮೊಸರನ್ನು ಖರೀದಿಸಲು $2 ರಿಂದ $3 ಡಾಲರ್‌ಗಳನ್ನು ಹೆಚ್ಚುವರಿಯಾಗಿ ಖರ್ಚು ಮಾಡುವಂತೆ ಸಲಹೆ ನೀಡುತ್ತಾರೆ.


2. ಎಎಸ್ಎಪಿ ಕ್ರೆಡಿಟ್ ಕಾರ್ಡ್ ಪಡೆಯಿರಿ:


ನಾನು ಕೆಲವು ಕ್ರೆಡಿಟ್ ಕಾರ್ಡ್​ ಹೊಂದಿದ್ದರೆ ನನ್ನ ಕಾರ್ ಲೋನ್ ಬಡ್ಡಿ ಪಾವತಿಗಳಲ್ಲಿ ಕನಿಷ್ಠ $700 ಉಳಿಸಬಹುದಿತ್ತು ಎನ್ನುತ್ತಾರೆ ವತ್ಸಲ್.


ನೀವು ಕ್ರೆಡಿಟ್ ಕಾರ್ಡ್ ಮೂಲಕ ತಿಂಗಳಿಗೆ $10 ಅನ್ನು ಮಾತ್ರ ಖರ್ಚು ಮಾಡುತ್ತಿದ್ದರೂ ಸಹ ಕ್ರೆಡಿಟ್‌ ಕಾರ್ಡ್‌ ಪಡೆಯುವುದು ಉತ್ತಮ. ಚೇಸ್/ವೆಲ್ಸ್ ಫಾರ್ಗೋದಿಂದ ಕ್ರೆಡಿಟ್-ಬಿಲ್ಡರ್ ಕಾರ್ಡ್ ಪಡೆಯುವುದು ಉತ್ತಮ ಆಯ್ಕೆಯಾಗಿದೆ.


ಸಾಂಕೇತಿಕ ಚಿತ್ರ


3. CVS ಸದಸ್ಯತ್ವ ಪಡೆಯಿರಿ:


ಸಿವಿಎಸ್‌ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತಾರೆ. ಪ್ರತಿ ತಿಂಗಳು, ನಾನು CVS ನಿಂದ ಖರೀದಿಸುವ ಪರ್ತಿಯೊಂದಕ್ಕೀ ಫ್ಲಾಟ್ $10 ರಿಯಾಯಿತಿಯನ್ನು ಪಡೆಯುತ್ತೇನೆ. ನಾನು ಇದನ್ನು ಶಾಂಪೂ, ಟೂತ್‌ಪೇಸ್ಟ್, ಡಿಟರ್ಜೆಂಟ್‌ಗಳು ಇತ್ಯಾದಿಗಳಿಗೆ ಬಳಸುತ್ತೇನೆ.


4. ಭಾರತದಿಂದ ಚಳಿಗಾಲದ ಉಡುಗೆಗಳನ್ನು ಪಡೆಯಬೇಡಿ:


Macy's, TJ Maxx, Nordstrom Rack ನಂತಹ ಸ್ಥಳಗಳು ಚಳಿಗಾಲದ ಆರಂಭದಲ್ಲಿ ಅಗ್ಗದ ಮತ್ತು ಉತ್ತಮ ಗುಣಮಟ್ಟದ ಜಾಕೆಟ್‌ಗಳೊಂದಿಗೆ ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತವೆ. ನೀವು ಡಾಲರ್ ಸ್ಟೋರ್‌ಗಳಿಂದ ದೈನಂದಿನ ಅಗತ್ಯ ವಸ್ತುಗಳನ್ನು ಕೂಡ ಸಂಗ್ರಹಿಸಬಹುದು. ಅಲ್ಲಿ ವಸ್ತುಗಳ ಬೆಲೆ ಕೇವಲ $1. ಅಲ್ಲದೇ ಇಲ್ಲಿ ಸಾಕಷ್ಟು ಭಾರತೀಯ ದಿನಸಿ ಅಂಗಡಿಗಳಿವೆ.


5. ಆರೋಗ್ಯ ವಿಮೆ:


ನೀವು ಇಲ್ಲಿ 3-4 ವರ್ಷಗಳ ಕಾಲ ಉಳಿಯಲು ಉದ್ದೇಶಿಸಿದ್ದರೆ, ವಿಮಾ ವ್ಯವಸ್ಥೆಯೊಂದಿಗೆ ಮೊದಲು ಪರಿಚಯ ಮಾಡಿಕೊಳ್ಳಲು ಉತ್ತಮ ಹೂಡಿಕೆಯಾಗಿದೆ.


ವಿಶ್ವವಿದ್ಯಾನಿಲಯಗಳು ಉತ್ತಮ ಆರೋಗ್ಯ ವಿಮೆಯನ್ನು ನೀಡುತ್ತವೆ ಮತ್ತು ನಿಮ್ಮ ವಿಮೆಯ ಮೂಲಕ ನೀವು ನಿಯಮಿತ ಆರೋಗ್ಯ ತಪಾಸಣೆ ಮತ್ತು ವೈದ್ಯರ ನೇಮಕಾತಿಗಳನ್ನು ಕಾಯ್ದಿರಿಸಬೇಕು. ನಾನು ವೈಯಕ್ತಿಕವಾಗಿ ಇದನ್ನು ಮಾಡಿದ್ದೇನೆ ಎಂಬುದಾಗಿ ವತ್ಸಲ್‌ ಬರೆದುಕೊಂಡಿದ್ದಾರೆ.


6. ವಲಸೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸಂಶೋಧಿಸಿ:


ನಿಮ್ಮ ವಿಶ್ವವಿದ್ಯಾನಿಲಯವು ಸಾಮಾನ್ಯವಾಗಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ (OISS) ಕಚೇರಿಯನ್ನು ಹೊಂದಿರುತ್ತದೆ.


top videos    ಆದರೆ ಅವರು ನಿಮ್ಮ ವಲಸೆಯ ಆಯ್ಕೆಗಳ ಬಗ್ಗೆ ನಿಮಗೆ ಅರಿವು ಮೂಡಿಸುವ ಕೆಲಸವನ್ನು ಮಾತ್ರ ಮಾಡುತ್ತಾರೆ. OPT, STEM OPT ಇತ್ಯಾದಿಗಳಲ್ಲಿ ನನ್ನ ವಲಸೆಯ ಆಯ್ಕೆಗಳ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿರಲೇ ಇಲ್ಲ. ಆದ್ದರಿಂದ ವಲಸೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ವತ್ಸಲ್‌ ಸಲಹೆ ನೀಡುತ್ತಾರೆ.

    First published: