ಮಧುಮೇಹ ರೋಗಿಗಳು ಆರೋಗ್ಯ ವಿಮೆ ಪಾಲಿಸಿ ಮಾಡಿಸಿಕೊಳ್ಳುವಾಗ ಗಮನದಲ್ಲಿರಿಸಬೇಕಾದ ಅಂಶಗಳೇನು..?

ಮಧುಮೇಹದ ಖರ್ಚುವೆಚ್ಚಗಳನ್ನು ಲೆಕ್ಕಹಾಕುವಾಗ ವರ್ಷಕ್ಕೆ ಸರಿಸುಮಾರು 75,000 ರೂ. - 80,000 ರೂ. ಖರ್ಚಾಗುತ್ತದೆ ಎಂಬುದು ತಿಳಿದು ಬಂದಿದೆ. ಇದು ಬರೀ ವೈದ್ಯರ ಸಮಾಲೋಚನೆ ಖರ್ಚು ಹಾಗೂ ಔಷಧಿಗಳ ಲೆಕ್ಕವಾಯಿತು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಬ್ಬದ ಆಚರಣೆಗಳಲ್ಲಿ ಸಿಹಿತಿಂಡಿಗಳು(Desserts) ಪ್ರಧಾನವಾಗಿವೆ. ಸಿಹಿ ಹಂಚಿಕೊಂಡೇ ನಾವು ಹಬ್ಬಗಳ ಆಚರಣೆ ಮಾಡುವುದು ವಾಡಿಕೆ. ಆದರೆ ಅಧ್ಯಯನಗಳು ತಿಳಿಸಿರುವಂತೆ ಸಿಹಿಯನ್ನು ಅತಿಯಾಗಿ ಸೇವಿಸುವುದು ಸಕ್ಕರೆ ಮಟ್ಟವನ್ನು (Sugar levels) ಹೆಚ್ಚಿಸುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಸಕ್ಕರೆ ಕಾಯಿಲೆ ಎಂಬುದು ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ ಅಂತೆಯೇ ಸೂಕ್ತ ಚಿಕಿತ್ಸೆ ಮಾಡದೇ ಇದ್ದರೆ ದೇಹದ ಬೇರೆ ಬೇರೆ ಅಂಗಗಳಿಗೆ ಇದು ಹಾನಿಯುಂಟು ಮಾಡುತ್ತದೆ. ವಯಸ್ಕರಲ್ಲಿ ಕಂಡುಬರುವ ಮಧುಮೇಹದ ಪ್ರಮಾಣದಲ್ಲಿ ಭಾರತ 2ನೇ (India ranks 2nd) ಸ್ಥಾನದಲ್ಲಿದೆ. ಅದರಲ್ಲೂ ಇದೀಗ ಸಣ್ಣ (Adults) ವಯಸ್ಸನವರನ್ನೂ ಟೈಪ್ 1 ಡಯಾಬಿಟೀಸ್(Type 1 diabete) ಕಾಡುತ್ತಿದ್ದು, ಜಾಗತಿಕವಾಗಿ (Globally)ಇದೊಂದು ಗುಣಪಡಿಸದ (Incurable disease) ಕಾಯಿಲೆ ಎಂಬುದಾಗಿ ಹೆಸರು ಪಡೆದುಕೊಂಡಿದೆ.

ವರ್ಷಕ್ಕೆ ಸರಿಸುಮಾರು 75,000 ರೂ ಖರ್ಚು
ಸೈಲೆಂಟ್ ಕಿಲ್ಲರ್ ಎಂದೇ ಕರೆಯಿಸಿಕೊಂಡಿರುವ ಮಧುಮೇಹವು ವಯಸ್ಸಾದ ರೋಗಿಗಳಲ್ಲಿ ಆಸ್ಪತ್ರೆಗೆ ದಾಖಲಾಗುವುದು, ವೈದ್ಯರುಗಳ ಭೇಟಿಯನ್ನು ಹೆಚ್ಚಿಸುತ್ತದೆ. ಮಧುಮೇಹದ ಖರ್ಚುವೆಚ್ಚಗಳನ್ನು ಲೆಕ್ಕಹಾಕುವಾಗ ವರ್ಷಕ್ಕೆ ಸರಿಸುಮಾರು 75,000 ರೂ. - 80,000 ರೂ. ಖರ್ಚಾಗುತ್ತದೆ ಎಂಬುದು ತಿಳಿದು ಬಂದಿದೆ. ಇದು ಬರೀ ವೈದ್ಯರ ಸಮಾಲೋಚನೆ ಖರ್ಚು ಹಾಗೂ ಔಷಧಿಗಳ ಲೆಕ್ಕವಾಯಿತು.

ಇದನ್ನೂ ಓದಿ: ಚಳಿಗಾಲದಲ್ಲಿ ಕೀಲು-ಗಂಟುಗಳ ನೋವು ಹೆಚ್ಚಾಗಿದ್ಯಾ? ಹೀಗೆ ಮಾಡಿದ್ರೆ ಬೇಗ ಕಡಿಮೆಯಾಗುತ್ತೆ ಅಂತಾರೆ ವೈದ್ಯರು

ಇನ್ನು ದೇಹದ ಇತರ ಅಂಗಗಳ ಮೇಲೆ ಮಧುಮೇಹವು ಹೆಚ್ಚಿನ ಪರಿಣಾಮ ಬೀರಿದ್ದಲ್ಲಿ ತಿಂಗಳಿಗೆ ಈ ವೆಚ್ಚವು 13,000 ರೂ. ನಿಂದ 25,000 ರೂ.ಗಳು ಎಂಬುದಾಗಿ ತಿಳಿದು ಬಂದಿದೆ. ಒಟ್ಟಾರೆ ನೀವು ಜೀವಮಾನದಲ್ಲಿ ಸಂಗ್ರಹಿಸಿದ ಹಣ ನೀರಿನಂತೆ ಔಷಧೋಪಚಾರಗಳಿಗೆ ಖರ್ಚಾಗುತ್ತದೆ. ಈ ಸಮಯದಲ್ಲಿ ಆರೋಗ್ಯ ವಿಮೆಗಳು ನಿಮ್ಮ ಸಹಾಯಕ್ಕೆ ಬರುತ್ತದೆ. ನೀವು ಆರೋಗ್ಯ ವಿಮೆ ಮಾಡಿಸುವ ಮೊದಲು ನಿಮ್ಮ ಮಧುಮೇಹದ ಪರಿಸ್ಥಿತಿಗಳನ್ನು ಸರಿಯಾಗಿ ಅರಿತುಕೊಂಡು ಚಿಕಿತ್ಸೆ ಪಡೆಯುವುದು ಉತ್ತಮ.

ನಿಮ್ಮ ಮಧುಮೇಹದ ಪರಿಸ್ಥಿತಿಗಳನ್ನು ಸರಿಯಾಗಿ ಅರಿತುಕೊಂಡು ಚಿಕಿತ್ಸೆ ಪಡೆಯುವುದು:
ನಿಮ್ಮ ಮಧುಮೇಹದ ಪರಿಸ್ಥಿತಿ ಅರಿತುಕೊಂಡು ಯಾವ ಪಾಲಿಸಿ ಮಾಡಿಸಿಕೊಳ್ಳಬೇಕು ಎಂಬುದನ್ನು ಮೊದಲು ಅರಿತುಕೊಳ್ಳುವುದು ಕೊಂಚ ಕಷ್ಟವೇ. ಟೈಪ್ 1 ಮಧುಮೇಹದಲ್ಲಿ ದೇಹದಲ್ಲಿರುವ ಸಕ್ಕರೆಯನ್ನು ಹೇಗೆ ಬಳಸಲಾಗುತ್ತದೆ ಎಂಬುದಕ್ಕಾಗಿ ಇನ್ಸುಲಿನ್ ಇಂಜೆಕ್ಶನ್‌ಗಳ ನಿರ್ವಹಣೆಯ ಅಗತ್ಯವಿದೆ. ಈ ಸಮಯದಲ್ಲಿ ಈ ಔಷಧೋಪಚಾರಗಳನ್ನು ಒಳಗೊಳ್ಳುವ ಪಾಲಿಸಿಗಳ ಆಯ್ಕೆ ನೀವು ಮಾಡಬೇಕಾಗುತ್ತದೆ.

ಮಧುಮೇಹ - ನಿರ್ದಿಷ್ಟ ಯೋಜನೆಗಳನ್ನು ಖರೀದಿಸಿ:
ಆರೋಗ್ಯವಂತ ವ್ಯಕ್ತಿಗೆ ಆರೋಗ್ಯವಂತ ವಿಮೆ ಯೋಜನೆ ಖರೀದಿಸುವುದು ಉತ್ತಮ ವಿಧಾನವಾಗಿದೆ. ಮುಖ್ಯ ಆರೋಗ್ಯ ವಿಮೆಯಂತಹ ಯೋಜನೆಗಳಲ್ಲಿ ಒಂದಿಷ್ಟು ಆರ್ಥಿಕ ಲಾಭವನ್ನು ವಿಮಾದಾರರು ಪಡೆದುಕೊಳ್ಳಬಹುದಾಗಿದೆ. ಮುಂದೆ ಭವಿಷ್ಯದಲ್ಲಿ ಮಧುಮೇಹ ಕಾಯಿಲೆ ಪತ್ತೆಯಾದಲ್ಲಿ ಮಧುಮೇಹ-ನಿರ್ದಿಷ್ಟ ವಿಮೆ ಯೋಜನೆಯು ಪ್ರಯೋಜನಕಾರಿಯಾಗಿರುತ್ತದೆ.

ಕನಿಷ್ಠ ಕಾಯುವಿಕೆಯ ಅವಧಿ:
ಸಾಮಾನ್ಯವಾಗಿ ಆರೋಗ್ಯ ವಿಮೆ ಪಾಲಿಸಿಗಳಲ್ಲಿ ಮಧುಮೇಹ ಕುರಿತಾಗಿರುವ ಯೋಜನೆಗಳಲ್ಲಿ ಕಾಯುವಿಕೆಯ ಕನಿಷ್ಠ ಕಾಲಾವಧಿಯು 12 ತಿಂಗಳಿನಿಂದ 2 ವರ್ಷಗಳವರೆಗೆ ಇರುತ್ತದೆ. ಇದು ಒಮ್ಮೊಮ್ಮೆ 4 ವರ್ಷಗಳಿಗೂ ವಿಸ್ತರಿಸುತ್ತದೆ. ಪರಿಣಾಮವಾಗಿ, ದಿನ ಒಂದರಿಂದಲೇ ಪರೀಕ್ಷೆ ಹಾಗೂ ಚಿಕಿತ್ಸೆಗಳಿಗೆ ಪ್ರಯೋಜನಕಾರಿಯಾಗಿರುವ ಪಾಲಿಸಿಗಳನ್ನು ಆಯ್ಕೆಮಾಡಿಕೊಳ್ಳುವುದು ವಿವೇಕಯುತವಾದುದು. ಆದಷ್ಟು ಕಾಯುವಿಕೆಯ ಅವಧಿ ಕನಿಷ್ಟವಾಗಿರುವ ಯೋಜನೆಗಳನ್ನು ಆರಿಸಿ.

ಕ್ರೋನಿಕ್ ಕೇರ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಮ್:
ಮಧುಮೇಹ ಕಾಯಿಲೆಯ ಕಾಳಜಿ ಹಾಗೂ ನಿಯಂತ್ರಣಗಳನ್ನು ಒಳಗೊಂಡಿರುವ ವಿಮೆ ಆಯ್ದಕೊಳ್ಳಿ. ಆರೋಗ್ಯ ತರಬೇತಿ ಹಾಗೂ ನ್ಯೂಟ್ರಿಶಿಯನ್ ಕೌನ್ಸಲಿಂಗ್‌ನಂತಹ ಪ್ರಯೋಜನಗಳನ್ನು ಹೊಂದಿರುವ ಪಾಲಿಸಿಗಳನ್ನು ಆರಿಸಿ. ಆರೋಗ್ಯ ತರಬೇತಿ ನೀಡುವವರು ನಿಮ್ಮ ಸಂಪೂರ್ಣ ಆರೋಗ್ಯದ ಬಗ್ಗೆ ನಿವಾ ವಹಿಸುತ್ತಾರೆ ಹಾಗೂ ನೀವು ಆರೋಗ್ಯವಂತರಾಗಿ ಹೇಗಿರಬಹುದೆಂಬ ಸಲಹೆಗಳನ್ನು ನೀಡುತ್ತಾರೆ. ನಿಮ್ಮ ವ್ಯಾಯಾಮ, ಆಹಾರ ಸೇವನೆ ಮೊದಲಾದವುಗಳ ಮೇಲೆ ಸೂಕ್ತ ಮುತುವರ್ಜಿ ವಹಿಸುತ್ತಾರೆ.

ಸಾಧ್ಯವಾದಷ್ಟು ಬೇಗ ಖರೀದಿಸಿ:
ನೀವು ಮಧುಮೇಹ ರೋಗಿಯಾಗಿದ್ದರೆ, ಆದಷ್ಟು ಕೂಡಲೇ ಸೂಕ್ತವಾಗಿರುವ ಆರೋಗ್ಯ ಯೋಜನೆ ನಿಮ್ಮದಾಗಿಸಿಕೊಳ್ಳಿ. ಗಂಭೀರ ಆರೋಗ್ಯ ಸಮಸ್ಯೆಗಳಿಂದ ದೂರವಿರಿ.

ಕಾಲಾವಧಿಗಳನ್ನು ಪರಿಶೀಲಿಸಿ:
ಯಾವುದೇ ಪಾಲಿಸಿ ಆಯ್ದುಕೊಳ್ಳುವ ಮುನ್ನ ಅವುಗಳ ನಿಯಮಗಳು ಹಾಗೂ ಷರತ್ತುಗಳು ಹಾಗೂ ನೀವು ಆಯ್ಕೆಮಾಡಿಕೊಂಡಿರುವ ಪ್ಲಾನ್‌ಗಳ ಬಗ್ಗೆ ಅರಿತುಕೊಳ್ಳುವುದು ಮುಖ್ಯವಾದುದು. ಜೊತೆಗೆ ಯೋಜನೆಗಳು ನೀಡುವ ಬೇರೆ ಬೇರೆ ಪ್ರಯೋಜನಗಳ ಬಗ್ಗೆ ಕೂಡ ನೀವು ಅರಿತುಕೊಂಡಿರುವುದು ಪ್ರಮುಖವಾದುದು.

ಇದನ್ನೂ ಓದಿ: ಈ ಎರಡು ಪಾನೀಯ ಕುಡಿಯುವವರ ಮೆದುಳಿಗೆ ಬೇಗ ವಯಸ್ಸಾಗುವುದಿಲ್ವಂತೆ, ಜ್ಞಾಪಕ ಶಕ್ತಿಯಂತೂ ಸೂಪರ್ ಅಂತಾರೆ ತಜ್ಞರು

ಹೀಗೆ ಮೇಲೆ ತಿಳಿಸಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಮೆ ಮಾಡಿಸಿಕೊಳ್ಳುವುದು ಉತ್ತಮ ಸಲಹೆಯಾಗಿದೆ. ಯಾವುದೇ ಆರೋಗ್ಯ ವಿಮೆ ಮಾಡಿಸಿಕೊಳ್ಳುವ ಮುನ್ನ ಕಾಲಾವಧಿ, ವಿಮೆ ನೀಡುವ ಪ್ರಯೋಜನಗಳು, ಷರತ್ತುಗಳನ್ನು ಅರಿತುಕೊಂಡಿರುವುದು ಮುಖ್ಯವಾಗಿದೆ.
Published by:vanithasanjevani vanithasanjevani
First published: