ಒಂದು ಬ್ಯುಸಿನೆಸ್ (Business) ಯಶಸ್ವಿಯಾಗಿ ನಡೆಸುವುದೆಂದರೆ ಸಾಮಾನ್ಯದ ಮಾತಲ್ಲ. ಅದರಲ್ಲೂ ಸ್ಟಾರ್ಟ್‌ಅಪ್ (Startup) ಯಶಸ್ವಿಯಾಗಬೇಕೆಂದರೆ ಹಲವಾರು ಅಂಶಗಳು ಕಾರಣವಾಗುತ್ತದೆ. ಅದರಲ್ಲೂ ಹೆಚ್ಚು ಸೂಕ್ತವಾದ ವ್ಯಾಪಾರ ಮಾದರಿಯನ್ನು (Business Model) ಆಯ್ಕೆ ಮಾಡುವುದು ಕಂಪನಿಯ ಯಶಸ್ಸಿಗೆ ಅತ್ಯಗತ್ಯ. ನಾವು ಆಯ್ಕೆ ಮಾಡುವ ಮಾದರಿಯು ಕಂಪನಿಯ (Company) ಕಾರ್ಯಾಚರಣೆಗಳಿಗೆ ಪರಿಣಾಮಕಾರಿಯಾಗಿ ಅಡಿಪಾಯ ಹಾಕುತ್ತದೆ. ನಿಮ್ಮ ಸ್ಟಾರ್ಟ್‌ಅಪ್‌ಗೆ ಯಾವ ವ್ಯಾಪಾರ ಮಾದರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗುರುತಿಸಲು ಸ್ವಲ್ಪ ಕಷ್ಟವಾಗಬಹುದು.
ತಮ್ಮ ಸ್ವಂತ ಕಂಪನಿಗೆ ಸೂಕ್ತವಾದ ವ್ಯಾಪಾರ ಮಾದರಿಯನ್ನು ಆಯ್ಕೆ ಮಾಡಲು ಸಹಾಯ ಮಾಡಬಹುದಾದ ಆರು ತಂತ್ರಗಳು ಇಲ್ಲಿವೆ.
1.ಗ್ರಾಹಕರಿಗೆ ನೀಡುವ ನಿಮ್ಮ ಸೇವೆಯನ್ನು ನಿರ್ಧರಿಸಿ
ನಿಮ್ಮ ಗ್ರಾಹಕರಿಗೆ ನೀವು ಏನನ್ನು ನೀಡಲು ಹೊರಟಿದ್ದೀರಿ ಎಂಬುದನ್ನು ಹಾಗೂ ಅದರ ಪ್ರಯೋಜನಗಳನ್ನು ಗುರುತಿಸುವುದು ಮೊದಲ ಹಂತವಾಗಿದೆ. ಆದ್ದರಿಂದ ಮಾರುಕಟ್ಟೆಯ ಅಗತ್ಯತೆಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ಮಾರುಕಟ್ಟೆಯಲ್ಲಿನ ಈಗಾಗಲೇ ಯಾವುದಿದೆ.. ಯಾವುದಿಲ್ಲ ಅನ್ನೋದನ್ನು ತಿಳಿದುಕೊಂಡಿರಬೇಕು. ಅದರ ಆಧಾರದ ಮೇಲೆ ಗ್ರಾಹಕರಿಗೆ ನೀವು ನೀಡಲು ಬಯಸುವ ಸೇವೆಗಳಿಗೆ ಉತ್ತಮವಾದ ವ್ಯವಹಾರ ಮಾದರಿಯನ್ನು ನೀವು ತಿಳಿದುಕೊಳ್ಳಬಹುದು.
2.ಸರಿಯಾದ ಮಾರುಕಟ್ಟೆ ಸಂಶೋಧನೆಯನ್ನು ನಡೆಸುವುದು
ನಿಮ್ಮ ಸ್ಟಾರ್ಟ್‌ಅಪ್‌ಗಾಗಿ ನೀವು ಸರಿಯಾದ ಮಾರುಕಟ್ಟೆ ಸಂಶೋಧನೆ ನಡೆಸುವುದು ಅತ್ಯಗತ್ಯ. ಜೊತೆಗೆ ನಿಮ್ಮ ಉತ್ಪನ್ನ ಅಥವಾ ಸೇವೆಯ ಬಗ್ಗೆ ರಿಸರ್ಚ್ ಮಾಡಬೇಕಾಗುತ್ತದೆ.
ಮಾರುಕಟ್ಟೆ ಸಂಶೋಧನೆ, ಗ್ರಾಹಕರ ಇನ್‌ಪುಟ್ ಮತ್ತು ಪರೀಕ್ಷೆಯ ಮೂಲಕ ಇದನ್ನು ತಿಳಿದುಕೊಳ್ಳಬಹುದು. ವ್ಯಾಪಾರ ಮಾದರಿಯನ್ನು ಆರಿಸುವಾಗ, ನೀವು ಮಾರುಕಟ್ಟೆ ಗಾತ್ರ, ಸ್ಪರ್ಧೆ ಮತ್ತು ಕ್ಲೈಂಟ್ ಗುಂಪುಗಳನ್ನು ಪರಿಗಣಿಸಬೇಕು.
3.ನಿಮ್ಮ ಕಾರ್ಯತಂತ್ರವನ್ನು ಪರೀಕ್ಷೆ ಮಾಡಿ
ನಿಮ್ಮ ಕಾರ್ಯತಂತ್ರವನ್ನು ಹೊರತರಲು ಮತ್ತು ನಿರ್ವಹಿಸಲು ಅಗತ್ಯವಿರುವ ಸಂಪನ್ಮೂಲಗಳು ಮತ್ತು ನಿಧಿಗಳ ಬಗ್ಗೆಯೂ ನೀವು ಯೋಚಿಸಬೇಕು. ನಿಮ್ಮ ಗ್ರಾಹಕರಿಗೆ ಸ್ಥಿರವಾದ ಮತ್ತು ತೃಪ್ತಿಕರವಾದ ಅನುಭವವನ್ನು ಒದಗಿಸಲು ನೀವು ಎಲ್ಲವನ್ನೂ ಹೊಂದಿಸಿರುವಿರಿ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ಕಾರ್ಯತಂತ್ರವನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ, ನಿಮ್ಮ ವ್ಯಾಪಾರ ಮಾದರಿಯು ಉತ್ತಮವಾಗಿದೆಯೇ? ಅಥವಾ ಸುಧಾರಣೆಯ ಅಗತ್ಯವಿದೆಯೇ? ಎಂಬುದನ್ನು ನೀವು ತಿಳಿಯಬಹುದು.
4.ಉದ್ಯಮ ವೃತ್ತಿಪರರು ಮತ್ತು ಹೂಡಿಕೆದಾರರೊಂದಿಗೆ ಚರ್ಚೆ ಮಾಡಿ
ಉದ್ಯಮದ ತಜ್ಞರು ಮತ್ತು ಹೂಡಿಕೆದಾರರೊಂದಿಗೆ ಮಾತನಾಡುವುದು ಅತ್ಯಗತ್ಯ. ಇದು ನಿಮ್ಮ ಮಾರುಕಟ್ಟೆ, ಸ್ಪರ್ಧೆ ಮುಂತಾದವುಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ಹೊಸ ಕಂಪನಿ ಪರಿಕಲ್ಪನೆಯನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಅಂತಹ ನೆಟ್‌ವರ್ಕಿಂಗ್ ನಿಮ್ಮ ಸಂಸ್ಥೆಗೆ ವ್ಯಾಪಾರ ಯೋಜನೆಯನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಮಾರುಕಟ್ಟೆ ಮತ್ತು ನಿಮ್ಮ ಸ್ಟಾರ್ಟ್‌ಅಪ್‌ನ ಕಾರ್ಯತಂತ್ರವನ್ನು ಅರ್ಥಮಾಡಿಕೊಳ್ಳಲು ಇತರರೊಂದಿಗೆ ಪ್ರಾಮಾಣಿಕ ಸಂಭಾಷಣೆಗಳನ್ನು ನಡೆಸಿ.
5.ಕ್ಲೈಂಟ್ ರೆಫರೆನ್ಸ್ ಪಟ್ಟಿ
ಗ್ರಾಹಕರ ಉಲ್ಲೇಖಗಳ ಪಟ್ಟಿಯನ್ನು ತಯಾರಿ ಮಾಡುವುದು ನಿಮ್ಮ ಸಂಸ್ಥೆಗೆ ಉತ್ತಮ ವ್ಯಾಪಾರ ತಂತ್ರವನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತದೆ. ತೃಪ್ತ ಗ್ರಾಹಕರ ಶಿಫಾರಸುಗಳಿಂದ ನಿಮ್ಮ ಕಂಪನಿಯ ಮಾದರಿಯನ್ನು ಅಳೆಯಬಹುದಾಗಿದೆ.
ಸದ್ಯದ ಹಾಗೂ ಹಿಂದಿನ ಗ್ರಾಹಕರೊಂದಿಗೆ ಮಾತನಾಡುವುದು ಕಂಪನಿಯ ಬೆಳವಣಿಗೆಯನ್ನು ಗುರುತಿಸಲು ನಿಮಗೆ ಸಹಾಯ ಮಾಡುತ್ತದೆ. ಮಾರುಕಟ್ಟೆಗೆ ನಿಮ್ಮ ಕಂಪನಿಯ ಮೌಲ್ಯವನ್ನು ಸಾಬೀತುಪಡಿಸಲು, ಹೂಡಿಕೆದಾರರನ್ನು ಪಡೆಯಲು ಕ್ಲೈಂಟ್ ಉಲ್ಲೇಖಗಳ ಪಟ್ಟಿಯನ್ನು ಹೊಂದಿರುವುದು ಮುಖ್ಯ.
ಸ್ಟಾರ್ಟ್‌ಅಪ್‌ನ ಯಶಸ್ಸು ಮತ್ತು ಅಭಿವೃದ್ಧಿಯು ಅದರ ಗ್ರಾಹಕರ ನೆಲೆಯ ನಿಷ್ಠೆಯ ಮೇಲೆ ಹೆಚ್ಚಿನ ಭಾಗವನ್ನು ಅವಲಂಬಿಸಿರಬಹುದು. ಆದ್ದರಿಂದ ವ್ಯಾಪಾರ ಯೋಜನೆಯನ್ನು ಅಭಿವೃದ್ಧಿಪಡಿಸುವಾಗ ಈ ಅಂಶವನ್ನು ಕಡೆಗಣಿಸಬಾರದು.
6.ರಾಷ್ಟ್ರೀಯ ವ್ಯಾಪಾರ ಪ್ರದರ್ಶನಗಳಿಗೆ ಭೇಟಿ ನೀಡಿ
ಪ್ರಮುಖ ವ್ಯಾಪಾರ ಪ್ರದರ್ಶನಗಳಿಗೆ ಹಾಜರಾಗುವುದು ಮತ್ತು ಉದ್ಯಮ ಸಂಘಗಳಿಗೆ ಸೇರುವುದು ನಿಮಗೆ ಸ್ಟಾರ್ಟ್‌ಅಪ್ ಕಂಪನಿ ಪರಿಕಲ್ಪನೆಯನ್ನು ಆಯ್ಕೆ ಮಾಡಲು ಮತ್ತ ಅದರ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Business Idea: ನಿಮ್ಮ ಬ್ಯುಸಿನೆಸ್ಗಳನ್ನು ಈ ರೀತಿ ಮಾಡಿದ್ರೆ ಪಕ್ಕಾ ಕ್ಲಿಕ್ ಆಗುತ್ತಂತೆ! ಟ್ರೈ ಮಾಡಿ ನೊಡಿ
ವ್ಯಾಪಾರ ಪ್ರದರ್ಶನಗಳು ನಿಮಗೆ ನೆಟ್‌ವರ್ಕ್ ಮಾಡಲು, ಉದ್ಯಮದ ಪ್ರವೃತ್ತಿ ಹಾಗೂ ಉತ್ತಮ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ನಿಮ್ಮ ಉದ್ಯಮದಲ್ಲಿನ ಇತರ ಕಂಪನಿಗಳು ಮಾರುಕಟ್ಟೆಯನ್ನು ಹೇಗೆ ಸಮೀಪಿಸುತ್ತಿವೆ ಎಂಬುದನ್ನು ಪರೀಕ್ಷಿಸಲು ವ್ಯಾಪಾರ ಪ್ರದರ್ಶನಗಳು ಅವಕಾಶ ಮಾಡಿಕೊಡುತ್ತದೆ. ಅಲ್ಲದೇ ಇದರಿಂದ ಮಾರುಕಟ್ಟೆಯ ಬೆಳವಣಿಗೆಗಳ ಬಗ್ಗೆ ಅರಿಯಲು ಸಹಾಯಕವಾಗುತ್ತದೆ.
ಒಟ್ಟಾರೆ, ಸ್ಟಾರ್ಟ್‌ಅಪ್‌ಗಳ ಯಶಸ್ಸಿಗೆ ಸರಿಯಾದ ವ್ಯಾಪಾರ ಮಾದರಿಯ ಆಯ್ಕೆ ಅತ್ಯಗತ್ಯ. ನಿಮ್ಮ ಮಾರುಕಟ್ಟೆ, ಕೊಡುಗೆ ಮತ್ತು ಗ್ರಾಹಕರನ್ನು ನಿರ್ಣಯಿಸುವ ಮೂಲಕ ಮತ್ತು ಉದ್ಯಮದ ತಜ್ಞರು, ಹೂಡಿಕೆದಾರರನ್ನು ಮಾತನಾಡಿಸುವ ಮೂಲಕ ನೀವು ಸರಿಯಾದ ವ್ಯವಹಾರ ಮಾದರಿಯನ್ನು ಕಂಡುಹಿಡಿಯಬಹುದು. ವ್ಯಾಪಾರ ಮತ್ತು ಉದ್ಯಮದ ಈವೆಂಟ್‌ಗಳಿಗೆ ಹಾಜರಾಗುವ ಮೂಲಕ ಯಶಸ್ಸಿನ ದಾರಿ ಹುಡುಕಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ