Dear Ladies, ಈ ರೀತಿ ಪ್ಲಾನ್ ಮಾಡ್ಕೊಂಡು ವ್ಯವಹಾರ ಮಾಡಿದ್ರೆ ಹೆಚ್ಚು ಹಣ ಉಳಿಸ್ಬಹುದು, ಆರಾಮಾಗಿ ಖರ್ಚು ಕೂಡಾ ಮಾಡ್ಬಹುದು!

Money investment: ನಿಮ್ಮ ಬಳಿಯಿರುವ ಹಣ ಉಳಿಸುವುದು ಮತ್ತು ಹೂಡಿಕೆ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿರಬೇಕು. ಎಲ್ಲಾ ಸ್ವತಂತ್ರ ಮಹಿಳೆಯರು ಹಣ ಉಳಿಸುವ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಎಲ್ಲರೂ ಹಣ (Money)ಸಂಪಾದನೆ ಮಾಡುತ್ತಾರೆ. ಆದರೆ ಅವರು ಸಂಪಾದನೆ ಮಾಡಿದ ಹಣವನ್ನು ಹೇಗೆ ಸರಿಯಾಗಿ ಖರ್ಚು ಮಾಡಬೇಕು ಮತ್ತು ಹೇಗೆ ಉಳಿತಾಯ(Spend and Save )ಮಾಡಬೇಕು ಎನ್ನುವುದು ಬಹಳಷ್ಟು ಜನರಿಗೆ ಗೊಂದಲವಿರುತ್ತದೆ ( Confused).ಈಗಂತೂ ಪ್ರತಿಯೊಬ್ಬರೂ ನಿಮ್ಮ ಸ್ವಂತ ಸಂಪಾದನೆ ಮತ್ತು ಉಳಿತಾಯ ಹೊಂದಿರುವುದು ಮುಖ್ಯವಾಗಿದೆ. ವಿಶೇಷವಾಗಿ ನೀವು ( Woman) ಮಹಿಳೆಯಾಗಿದ್ದಲ್ಲಿ ಹಣ ಉಳಿತಾಯ ಮಾಡುವುದು(Especially important) ಬಹಳ ಮುಖ್ಯವಾಗುತ್ತದೆ.


ಹೂಡಿಕೆ ಮಾಡುವುದು ಹೇಗೆ


ನೀವು ಯಾವಾಗಲೂ ಏನನ್ನಾದರೂ ಖರೀದಿಸಲು ಇಚ್ಛಿಸಿದರೆ ನಿಮ್ಮ ಹಣ ಉಳಿಯುವುದು ಕಷ್ಟದ ಮಾತು.ನಿಮ್ಮ ಬಳಿಯಿರುವ ಹಣ ಉಳಿಸುವುದು ಮತ್ತು ಹೂಡಿಕೆ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿರಬೇಕು. ಎಲ್ಲಾ ಸ್ವತಂತ್ರ ಮಹಿಳೆಯರು ಅಳವಡಿಸಿಕೊಳ್ಳಲೇ ಬೇಕಾದಂತಹ 6 ಅಭ್ಯಾಸಗಳು ಇಲ್ಲಿವೆ. ಇದರಿಂದ ಅವರು ಎಂದಿಗೂ ಬೇರೆಯವರ ಹತ್ತಿರ ಸಾಲ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ ಮತ್ತು ಅವರಿಗೆ ಹಣದ ಕೊರತೆ ಹೆಚ್ಚಾಗಿ ಕಾಡುವುದಿಲ್ಲ.


ಇದನ್ನೂ ಓದಿ: ಹೊಸಾ ವರ್ಷದ ಆರಂಭದಿಂದಲೇ ಹೀಗೆ ಮಾಡಿದ್ರೆ ಸಖತ್ತಾಗಿ ಹಣ ಉಳಿಸಬಹುದು ನೋಡಿ!

1. ಕ್ರೆಡಿಟ್ ಕಾರ್ಡ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ


ನಿಮ್ಮ ಖಾತೆಯಲ್ಲಿ ಎಷ್ಟು ಹಣ ಉಳಿದಿದೆ ಎಂಬುದರ ಬಗ್ಗೆ ನಿಮಗೆ ತಿಳಿದಿರಲು ಕಷ್ಟವಾಗಬಹುದು. ಹಾಗಿದ್ದಲ್ಲಿ ಹೆಚ್ಚಾಗಿ ನಿಮ್ಮ ಡೆಬಿಟ್ ಕಾರ್ಡ್ ಬಳಸಿರಿ.


2. ಸಮಯವನ್ನು ವ್ಯರ್ಥ ಮಾಡಬೇಡಿ


ಇನ್ನೂ ಮುಂದೆ ನೋಡಿದರಾಯ್ತು ಬಿಡಿ ಎಂಬ ಮನೋಭಾವ ಬಿಟ್ಟು ಬಿಡಿ. ಈಗಲೇ ಮಾಡಿ, ನಿಮ್ಮ ಸಂಬಳದ ಕನಿಷ್ಠ 10 ಪ್ರತಿಶತದಷ್ಟು ಹಣ ಉಳಿತಾಯಕ್ಕೆ ಹಾಕಿ. ನಿಮಗೆ ಸಾಧ್ಯವಾದರೆ, ಸ್ವಲ್ಪ ಹೆಚ್ಚು ಹಾಕಿ ಆದರೆ ನೀವು ಎಷ್ಟೇ ಉಳಿತಾಯ ಮಾಡಿದರೂ ಇಂದಿನಿಂದಲೇ ಪ್ರಾರಂಭಿಸಿ.


3. ಸುಮ್ಮನೆ ಶಾಪಿಂಗ್ ಮಾಡಬೇಡಿ


ನೀವು ಹಠಾತ್ ಶಾಪಿಂಗ್‌ಗೆ ಹೋಗಿ ನಿಮ್ಮ ಹಣ ಮತ್ತು ಸಮಯ ಎರಡನ್ನೂ ಹಾಳು ಮಾಡಿಕೊಳ್ಳಬೇಡಿ. ಹೀಗೆ ಬೇಕಾದಾಗ ಶಾಪಿಂಗ್‌ಗೆ ಹೋಗುವುದು ಕ್ಷಣಿಕ ಸಂತೋಷ ನೀಡುತ್ತದೆ. ಇದನ್ನು ನಾವು ದೂರವಿಟ್ಟರೆ ನಿಮ್ಮ ಖಾತೆಯಲ್ಲಿರುವ ಹಣವು ಸಹ ಕೊಂಚ ಕಾಲದವರೆಗೆ ಉಳಿಯುತ್ತದೆ. ನಿಮಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ಪಟ್ಟಿ ಮಾಡಿ ಮತ್ತು ಅದರಲ್ಲಿ ಮುಖ್ಯವಾದದ್ದನ್ನು ಖರೀದಿಸಿರಿ.


4. ಹೂಡಿಕೆ ಮಾಡಿ


ನೀವು ಎಷ್ಟೇ ದೊಡ್ಡ ಮೊತ್ತದ ಹಣವನ್ನು ಸಂಬಳವಾಗಿ ಪಡೆದರೂ, ಹೂಡಿಕೆಯ ಉದ್ದೇಶಗಳಿಗಾಗಿ ಒಂದು ಮೊತ್ತವನ್ನು ಪಕ್ಕಕ್ಕೆ ಇರಿಸಿಕೊಳ್ಳಿ. ಎಸ್‌ಐಪಿ, ಪಿಪಿಎಫ್, ವಿಮಾ ಪಾಲಿಸಿ ಇತ್ಯಾದಿಗಳನ್ನು ಶುರು ಮಾಡಿರಿ. ನಿಮಗೆ ಚಿನ್ನ ಖರೀದಿಸುವುದು ಇಷ್ಟವಿದ್ದರೆ, ಹೂಡಿಕೆ ಮಾಡಿದಂತಹ ಹಣದಿಂದ ನಂತರ ಚಿನ್ನ ಖರೀದಿಸಿರಿ.


5. ಬಜೆಟ್ ಮಾಡುವುದು ಅಗತ್ಯ


ನೀವು ಸಾಪ್ತಾಹಿಕ ಅಥವಾ ಮಾಸಿಕ ಬಜೆಟ್ ಮಾಡಿಕೊಳ್ಳಿರಿ ಮತ್ತು ಅದನ್ನು ಅನುಸರಿಸಿರಿ. ಆ ಬಜೆಟ್‌ನೊಳಗೆ ನಿಮ್ಮ ಎಲ್ಲಾ ವೆಚ್ಚಗಳನ್ನು ನಿರ್ವಹಿಸಲು ಪ್ರಯತ್ನಿಸಿರಿ. ನಿಮ್ಮ ಹಣ ಹೇಗೆ ಖರ್ಚಾಗುತ್ತಿದೆ ಮತ್ತು ನೀವು ಅದನ್ನು ಯಾವುದಕ್ಕೆ ಹೆಚ್ಚಾಗಿ ಖರ್ಚು ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿಯಲು ಎಲ್ಲವನ್ನೂ ಬರೆದಿಡುವುದು ಮುಖ್ಯವಾಗುತ್ತದೆ.


ಇದನ್ನೂ ಓದಿ: Cryptocurrency ವಹಿವಾಟಿನಲ್ಲಿ ಮಹಿಳೆಯರಿಗೇ ಹೆಚ್ಚು ಆಸಕ್ತಿ ಅಂತೆ, ಪರುಷರ ಇಂಟ್ರೆಸ್ಟ್ ಬೇರೆಯೇ ಇದೆ

6. ತುರ್ತು ನಿಧಿ


ನಿಮ್ಮ ಹಣವನ್ನು ಉಳಿತಾಯ ಮತ್ತು ಹೂಡಿಕೆ ಮಾಡುವುದರ ಜೊತೆಯಲ್ಲಿ ನೀವು ತುರ್ತು ನಿಧಿಯನ್ನು ಸಹ ನೋಡಬೇಕಾಗುತ್ತದೆ. ಉದಾಹರಣೆಗೆ ಯಾರಾದರೂ ನಿಮಗೆ ಸಮಾರಂಭಗಳಲ್ಲಿ ಹಣವನ್ನು ಒಂದು ಕವರ್‌ನಲ್ಲಿ ಹಾಕಿ ಕೊಟ್ಟರೆ ಅದನ್ನು ನೀವು ಖರ್ಚು ಮಾಡದೆ ಆ ಹಣವನ್ನು ನಿಮ್ಮ ತುರ್ತು ನಿಧಿಯ ಭಾಗವನ್ನಾಗಿ ಮಾಡಿಕೊಳ್ಳಿ.


Published by:vanithasanjevani vanithasanjevani
First published: