ಸಾಮಾನ್ಯವಾಗಿ ನಾವು ಒಂದು ಕಂಪನಿಯಲ್ಲಿ(Company) ಕೆಲಸ ಮಾಡುವಾಗ ಅಥವಾ ಒಬ್ಬರ ಕೈ ಕೆಳಗೆ ಕೆಲಸ ಮಾಡುತ್ತಿದ್ದಾಗ, ಒಂದೊಮ್ಮೆ ಅವರಿಗೆ ಕೆಲಸ ಸರಿಯಾಗಿ ಆಗಿಲ್ಲ ಅಂತ ಸ್ವಲ್ಪ ನಮ್ಮ ಮೇಲೆ ಕೋಪ(Angry) ಮಾಡಿಕೊಂಡರೂ ಸಹ ಆ ಕೋಪವನ್ನು ನಾವು ನುಂಗಿಕೊಳ್ಳಬೇಕಾಗುತ್ತದೆ. ಹೀಗೆ ಅನೇಕ ರೀತಿಯ ಸಂದರ್ಭಗಳಲ್ಲಿ ನಮ್ಮ ಅಹಂ ಅನ್ನು ಒಂದು ಕಡೆಯಲ್ಲಿ ಕಟ್ಟಿಡಬೇಕಾಗುತ್ತದೆ. ಇಲ್ಲವಾದರೆ ನಮ್ಮ ಕೆಲಸ(Job) ಕಳೆದುಕೊಳ್ಳುವ ಪರಿಸ್ಥಿತಿಗಳು ಎದುರಾಗಬಹುದು.
ಕೆಲವೊಮ್ಮೆ ನಮಗಿಂತಲೂ ವಯಸ್ಸಿನಲ್ಲಿ ಕಿರಿಯರಾಗಿರುವವರ ಹತ್ತಿರ ಕೆಲಸವನ್ನು ಹೇಗೆ ಮಾಡುವುದು ಅಂತ ತರಬೇತಿಯನ್ನು ಪಡೆಯಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ನಾವು ಹಿರಿಯರು ಮತ್ತು ಕಿರಿಯರು ಅನ್ನೋ ಯಾವುದೇ ರೀತಿಯ ವಿಷಯಗಳನ್ನು ಮನಸ್ಸಿನಲ್ಲಿ ಹಾಕಿಕೊಳ್ಳಬಾರದು. ಅಹಂ ಅನ್ನೋದನ್ನು ಒಂದು ಕಡೆ ತೆಗೆದಿಟ್ಟು ಕೆಲಸ ಮಾಡುವುದು ಎಲ್ಲರಿಗೂ ಒಳ್ಳೆಯದು ಅಂತ ಅನೇಕ ಸಾರಿ ಹಿರಿಯರು ನಮಗೆ ಹೇಳುತ್ತಿರುತ್ತಾರೆ.
ಹೀಗೆ ನಾವು ಸ್ವಂತ ವ್ಯವಹಾರವನ್ನು ಮಾಡುತ್ತಿರುವಾಗಲೂ ಸಹ ಈ ಅಹಂ ಎನ್ನುವುದನ್ನು ನಾವು ಸ್ವಲ್ಪ ಪಕ್ಕಕ್ಕೆ ಇಟ್ಟು ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಒಂದು ವ್ಯತ್ಯಾಸ ಏನೆಂದರೆ ನಮ್ಮ ವ್ಯವಹಾರಕ್ಕೆ ನಾವೇ ಬಾಸ್ ಆಗಿರುವುದರಿಂದ ಅಲ್ಲಿ ಲಾಭ ಮತ್ತು ನಷ್ಟ ನೇರವಾಗಿ ನಮಗೆ ಸಂಬಂಧಪಟ್ಟಿರುತ್ತವೆ. ಹಾಗಾಗಿ ಸರಿಯಾಗಿ ಯೋಚಿಸಿ ವ್ಯವಹಾರ ಮಾಡುವಾಗ ಜೊತೆಗೆ ಕೆಲಸ ಮಾಡುವವರನ್ನು ಚೆನ್ನಾಗಿಟ್ಟುಕೊಳ್ಳುವುದು ಒಳ್ಳೆಯದು.
ವೈಯಕ್ತಿಕ ಬೆಳವಣಿಗೆಯಿಲ್ಲದೆ ವ್ಯವಹಾರದ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಅಂದರೆ ವ್ಯವಹಾರ ಶುರು ಮಾಡಿದಾಗ ಹೇಗೆ ಇರುತ್ತೀರೋ ಹಾಗೆಯೇ ಯಾವುದೇ ರೀತಿಯ ಅಪ್ಡೇಟ್ ಗಳನ್ನು ಮಾಡಿಕೊಳ್ಳದೆ ಇದ್ದರೆ, ನಿಮ್ಮ ವ್ಯವಹಾರ ಬೆಳವಣಿಗೆಯಾಗದೆ ಅಲ್ಲಿಯೇ ಸಿಲುಕಿಕೊಳ್ಳುತ್ತದೆ ಅಂತ ಹೇಳಬಹುದು. ಇದಕ್ಕೆಲ್ಲಾ ನಿಮ್ಮಲ್ಲಿರುವ ಅಹಂ ಸಹ ಅನೇಕ ಬಾರಿ ಕಾರಣವಾಗುತ್ತದೆ ಅಂತ ಹೇಳಬಹುದು.
ನಿಮ್ಮಲ್ಲಿರುವ ಅಹಂ ನಿಮ್ಮ ವ್ಯವಹಾರದ ಯಶಸ್ಸನ್ನು ಕುಂಠಿತಗೊಳಿಸುತ್ತದೆ..
1. ಜವಾಬ್ದಾರಿಗಳನ್ನು ಹಿಡಿದಿಟ್ಟುಕೊಳ್ಳುವುದು
ಆರಂಭಿಕ ದಿನಗಳಲ್ಲಿ ನೀವು ಒಬ್ಬರೇ ಆ ವ್ಯವಹಾರವನ್ನು ಶುರು ಮಾಡಿರುವುದರಿಂದ, ಎಲ್ಲವನ್ನೂ ನೀವು ನೋಡಿಕೊಳ್ಳಬೇಕಾಗುತ್ತದೆ. ಪ್ರತಿಯೊಂದು ಕಾರ್ಯವೂ ನಿಮ್ಮದಾಗಿರುತ್ತದೆ, ಪ್ರತಿಯೊಂದು ಪ್ರಕ್ರಿಯೆಯಲ್ಲೂ ನಿಮ್ಮ ಹೆಸರಿರುತ್ತದೆ. ಪ್ರತಿಯೊಂದು ವಿವರವನ್ನು ಹೊಂದಲು ನೀವು ಹೆಮ್ಮೆ ಪಡುತ್ತೀರಿ ಮತ್ತು ನೀವು ಬದ್ಧರಾಗಿರುವ ಎಲ್ಲವನ್ನೂ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕಷ್ಟ ಪಡುತ್ತೀರಿ. ಆದರೆ ವ್ಯವಹಾರ ಬೆಳೆಯುತ್ತಿದ್ದಂತೆ ವಿಷಯಗಳು ವಿಭಿನ್ನವಾಗುತ್ತವೆ.
ನೀವು ಉಸ್ತುವಾರಿ ವಹಿಸಿರುವ ಕಾರ್ಯಗಳು ಬೇರೊಬ್ಬರ ಒಡೆತನದಲ್ಲಿರಬಹುದು. ಆದರೆ ನೀವು ಆ ಕೆಲಸಗಳನ್ನು ಬೇರೆಯವರಿಗೆ ನೀಡಲು ಒಪ್ಪದಿರುವುದು ನಿಮ್ಮ ಯಶಸ್ಸಿಗೆ ಮುಳುವಾಗಬಹುದು. ಬಹುಶಃ ಬೇರೆ ಯಾರಾದರೂ ತಪ್ಪು ಮಾಡಬಹುದು ಎಂದು ನೀವು ಭಯಪಡುತ್ತೀರಿ, ನಿಯಂತ್ರಣವನ್ನು ಕಳೆದುಕೊಳ್ಳುವ ಭಯ ಅಥವಾ ನಿಮಗೆ ಬೇರೆ ಯಾರೂ ಅದನ್ನು ಮಾಡುವುದು ಇಷ್ಟವಿರುವುದಿಲ್ಲ. ಹೀಗೆ ಮಾಡಿದಾಗ ನಿಮ್ಮ ವ್ಯವಹಾರದ ಯಶಸ್ಸು ಅಲ್ಲಿಗೆ ನಿಂತು ಬಿಡುತ್ತದೆ. ಸ್ಥಾಪಕರಾಗಿ, ನಿಮ್ಮ ಜವಾಬ್ದಾರಿಗಳು ಕ್ಷಣಿಕವಾಗಿವೆ. ನಿಮ್ಮನ್ನು ಕೆಲಸದಿಂದ ಹೊರಗಿಡುವ, ನಿಮ್ಮ ಕರ್ತವ್ಯಗಳನ್ನು ಉತ್ತಮ ತರಬೇತಿ ಪಡೆದ ತಂಡದ ಸದಸ್ಯರಿಗೆ ಹಸ್ತಾಂತರಿಸುವ ಮತ್ತು ಹೊಸದನ್ನು ಹುಡುಕುವ ನಿರಂತರ ಪ್ರಯಾಣದಲ್ಲಿ ನೀವು ಇರಬೇಕು.
ಇದನ್ನೂ ಓದಿ: Post Office Jobs: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- 8th ಪಾಸಾಗಿದ್ರೆ ಸಾಕು, 20 ಸಾವಿರ ಸಂಬಳ
2. ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುವ ಅಗತ್ಯವಿದೆ
ನಿಮ್ಮ ವ್ಯವಹಾರದಲ್ಲಿ ಯಾವುದೇ ರೀತಿಯ ಸಮಸ್ಯೆ ಬಂದರೆ, ಅದನ್ನು ನೀವೇ ಮುಂದು ನಿಂತು ಪರಿಹರಿಸಬೇಕು. ಸಮಸ್ಯೆಯನ್ನು ನೀವು ಹಾಗೆಯೇ ಬಿಟ್ಟರೆ ಇದು ನಿಮ್ಮ ವ್ಯವಹಾರದ ಯಶಸ್ಸಿಗೆ ಮುಳ್ಳಾಗುವುದು. ಒಂದು ಸಮಸ್ಯೆಯನ್ನು ಪರಿಹರಿಸುವಲ್ಲಿ ಮತ್ತು ಆ ಪರಿಹಾರವು ಕೆಲಸ ಮಾಡುವುದನ್ನು ನೋಡುವುದರಲ್ಲಿ ನೀವು ಸಂತೃಪ್ತಿಯನ್ನು ಅನುಭವಿಸುತ್ತೀರಿ. ಆದರೆ ನಿಮ್ಮ ವ್ಯವಹಾರದಲ್ಲಿನ ಪ್ರತಿಯೊಂದು ದೋಷಕ್ಕೂ ಉತ್ತರಗಳನ್ನು ನೀಡುವ ಪ್ರಚೋದನೆಯನ್ನು ಪ್ರತಿರೋಧಿಸಲು ವಿಫಲರಾಗುವುದರಿಂದ ನಿಮ್ಮ ತಂಡದ ಸದಸ್ಯರು ಆ ಭಾವನೆಯನ್ನು ಅನುಭವಿಸುವುದಿಲ್ಲ.
ನಿಮಗೆ ನಿಮ್ಮ ಕೆಲಸದ ಬಗ್ಗೆ ಒಳ್ಳೆಯ ಅನುಭವವಿರುತ್ತದೆ ಮತ್ತು ನಿಮ್ಮ ಅಂತಃಪ್ರಜ್ಞೆ ಉತ್ತಮವಾಗಿರುತ್ತದೆ ಮತ್ತು ನೀವು ಹೆಚ್ಚಿನವರಿಗಿಂತ ವೇಗವಾಗಿ ಸಮಸ್ಯೆಯನ್ನು ಪರಿಹರಿಸಬಹುದು, ಆದರೆ ಉತ್ತರಗಳ ಬಗ್ಗೆ ಯೋಚಿಸಲು ಬಿಡದೆ, ನೀವು ನಿಮ್ಮ ಮೇಲೆ ಅವಲಂಬನೆಯನ್ನು ಜಾಸ್ತಿ ಮಾಡಿಕೊಳ್ಳುತ್ತಾ ಹೋದಂತೆ ನಿಮ್ಮ ವ್ಯವಹಾರ ಹದಗೆಡುತ್ತದೆ. ನಿಮ್ಮ ವ್ಯವಹಾರವು ಬೆಳೆದಂತೆ, ನಿಮ್ಮ ಸಮಸ್ಯೆಗಳು ದೊಡ್ಡದಾಗುತ್ತಿರುತ್ತವೆ. ಅದಕ್ಕೆ ತಂಡದ ಸದಸ್ಯರನ್ನು ಬಲಪಡಿಸಿ.
3. ಸದಾ ಕಾರ್ಯನಿರತವಾಗಿ ಕಾಣಿಸಿಕೊಳ್ಳಬೇಕು
ನಿಮ್ಮ ವ್ಯವಹಾರ ಶುರು ಮಾಡಿದಾಗ ಯಾವ ಹಂತದಲ್ಲಿ ಇರುತ್ತದೆಯೋ ಮತ್ತು ಈಗ ಯವಾ ಹಂತಕ್ಕೆ ಅದು ಹೋಗಿ ತಲುಪಿದೆಯೋ ಅಂತ ನೋಡಿಕೊಳ್ಳಿ. ಅಲ್ಲದೆ ಮುಂದಿನ 5 ವರ್ಷಗಳಲ್ಲಿ ನಿಮ್ಮ ವ್ಯವಹಾರ ಯಾವ ಮಟ್ಟದಲ್ಲಿ ಬೆಳೆಯಬೇಕು ಅಂತ ಯೋಜಿಸಿಕೊಂಡು ಅದಕ್ಕಾಗಿ ಸದಾ ಕಾರ್ಯನಿರತರಾಗಿ ಕಾಣಿಸಿಕೊಳ್ಳಬೇಕು. ಭವಿಷ್ಯದಲ್ಲಿ ಯಾವ ರೀತಿಯಾಗಿ ವ್ಯವಹಾರವನ್ನು ಇನ್ನಷ್ಟು ತಾಳ್ಮೆಯಿಂದ ಮತ್ತು ಸಮಚಿತ್ತರಾಗಿ ತೆಗೆದುಕೊಂಡು ಹೋಗಬೇಕು ಅನ್ನೋದನ್ನು ಸರಿಯಾಗಿ ಯೋಚಿಸಬೇಕು. ಆನಂತರ ವಾಸ್ತವದಲ್ಲಿ ವ್ಯವಹಾರದಲ್ಲಿ ಏನೆಲ್ಲಾ ತೊಡಕುಗಳಿವೆ ಎಂಬುದನ್ನು ತಿಳಿದುಕೊಂಡು ಕೆಲಸ ಮಾಡುವುದು ಒಳ್ಳೆಯದು.
ನೀವು ಪ್ರತಿದಿನ ವಾಕಿಂಗ್ ಹೋಗುವುದು, ಯೋಗ ಮತ್ತು ಧ್ಯಾನ ಮಾಡುವುದು ಮತ್ತು ಭವಿಷ್ಯದ ಬಗ್ಗೆ ಯೋಚಿಸುತ್ತಾ ನೀವು ತುಂಬಾನೇ ಕಾರ್ಯನಿರತರಾಗಿ ಕಾಣುವುದು ಒಳ್ಳೆಯದು. ನಿಮ್ಮ ಅಹಂ ಆ ರೀತಿ ನಿಮ್ಮನ್ನು ಸದಾ ಕಾರ್ಯ ನಿರತರಾಗಿರುವುದನ್ನು ನೋಡಲು ಕೆಲವೊಮ್ಮೆ ಇಷ್ಟಪಡುವುದಿಲ್ಲ. ಹಾಗಾಗಿ ಈ ಅಹಂ ಅನ್ನು ಪಕ್ಕಕ್ಕೆ ಇಟ್ಟು ಕೆಲಸ ಮಾಡುವುದು ಒಳ್ಳೆಯದು.
4. ವ್ಯವಹಾರಕ್ಕೆ ಬೇಕಾದ ಎಲ್ಲವನ್ನೂ ತಿಳಿದುಕೊಳ್ಳಬೇಕು
ನಾವು ವ್ಯವಹಾರ ಶುರು ಮಾಡಿದ ಪ್ರಾರಂಭದ ಕೆಲವು ವರ್ಷಗಳಲ್ಲಿ ನಮಗೆ ಪ್ರತಿಯೊಬ್ಬ ಗ್ರಾಹಕರ ಹೆಸರು ಮತ್ತು ಬೇರೆ ಮಾರಾಟಗಾರರ ವ್ಯವಹಾರ ಗುರಿಗಳ ಬಗ್ಗೆ ತಿಳಿದಿರುತ್ತದೆ. ಅಂಗಡಿಯಲ್ಲಿನ ಪ್ರತಿ ವಿವರವೂ ಸಹ ನಮಗೆ ತಿಳಿದಿರುತ್ತದೆ. ಆದರೆ ಒಂದೆರಡು ವರ್ಷಗಳು ಕಳೆಯುತ್ತಿದ್ದಂತೆ ಸಣ್ಣ ಸಣ್ಣ ವಿವರವನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಕೆಲವೊಮ್ಮೆ ಅಸಡ್ಡೆ ತೋರಿಸುತ್ತೇವೆ. ವ್ಯವಹಾರ ಬೆಳೆದಂತೆ, ನಾವು ಕಡಿಮೆ ವಿವರಗಳನ್ನು ತಿಳಿದುಕೊಳ್ಳಲು ಪ್ರಾರಂಭಿಸುತ್ತೇವೆ. ಇದನ್ನೇ ನೋಡಿ ನಮ್ಮಲ್ಲಿರುವ ಅಹಂ ನಮ್ಮನ್ನು ಎಲ್ಲವನ್ನೂ ತಿಳಿದುಕೊಳ್ಳುವಲ್ಲಿ ನಿಯಂತ್ರಿಸುತ್ತೆ ಅಂತ ಹೇಳಬಹುದು.
ಇದನ್ನೂ ಓದಿ: M.Sc ಆಗಿದ್ರೆ ಇಲ್ಲಿ ಅರ್ಜಿ ಹಾಕಿ- ತಿಂಗಳಿಗೆ 31,000 ಸಂಬಳ- ಮೈಸೂರಿನಲ್ಲಿ ಪೋಸ್ಟಿಂಗ್
ತಮ್ಮ ವ್ಯವಹಾರಗಳಲ್ಲಿನ ಜ್ಞಾನದ ಕೊರತೆಯು ನಮ್ಮ ವ್ಯವಹಾರದ ಯಶಸ್ಸನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಬಹುದು. ಆದ್ದರಿಂದ ಅಂಗಡಿಯಲ್ಲಿ ಮತ್ತು ವ್ಯವಹಾರದಲ್ಲಿ ನಡೆಯುತ್ತಿರುವ ಎಲ್ಲವನ್ನೂ ನಾವು ತಿಳಿದುಕೊಳ್ಳಬೇಕು. ನಮ್ಮ ಅಹಂ ನಮಗೆ ಯಾವುದೇ ರೀತಿಯ ಲಾಭ ಮಾಡಿಸುವುದಿಲ್ಲ.
5. ವ್ಯವಹಾರದಲ್ಲಿನ ಎಲ್ಲಾ ಕೆಲಸಗಳನ್ನು ನಿಮ್ಮದೆ ಆದ ರೀತಿಯಲ್ಲಿ ಮಾಡಿ
ವಿಭಿನ್ನವಾಗಿ ಮಾಡುವುದು ಎಂದರೆ ಸದಾ ತಪ್ಪು ಮಾಡುವುದು ಎಂದರ್ಥವಲ್ಲ. ಯಾರಿಗಾದರೂ ಒಂದು ಪಾತ್ರವನ್ನು ನೀಡಿ, ಅವರ ಜವಾಬ್ದಾರಿಗಳನ್ನು ವಿವರಿಸಿ, ಮತ್ತು ಅವರು ಅದನ್ನು ಮುಂದುವರಿಸಲು ಬಿಡಿ. ಅವರು ನೀವು ನಿರೀಕ್ಷಿಸಿದ್ದಕ್ಕಿಂತ ವಿಭಿನ್ನವಾಗಿ ಕಾಣುವ ಮತ್ತು ನೀವು ಮಾಡಿದ್ದಕ್ಕಿಂತ ಭಿನ್ನವಾಗಿ ಕಾಣುವ ಔಟ್ ಪುಟ್ ಅನ್ನು ಉತ್ಪಾದಿಸುತ್ತಾರೆ ಎಂಬುದನ್ನು ಗಮನಿಸಿ. ಆದರೆ ಅದು ಪರವಾಗಿಲ್ಲ. ಇದು ಮೊದಲ ಬಾರಿಗೆ ಸಂಭವಿಸಿದಾಗ, ನಿಮ್ಮ ಅಹಂ ಕುಗ್ಗುತ್ತದೆ. ನೀವು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ನಿಮಗೆ ಅನ್ನಿಸಿ, ಸ್ವಲ್ಪ ಚಿಂತಿತರಾಗಿರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದು ವಿಭಿನ್ನತೆಯನ್ನು ತಪ್ಪು ಎಂದು ಹಣೆಪಟ್ಟಿ ಹಚ್ಚುತ್ತದೆ ಮತ್ತು ನಿಯಂತ್ರಣವನ್ನು ಹಿಂತೆಗೆದುಕೊಳ್ಳುವಂತೆ ನಿಮ್ಮನ್ನು ಮನವೊಲಿಸಲು ಪ್ರಯತ್ನಿಸುತ್ತದೆ.
ಆದರೆ ಆ ಕೆಲಸವನ್ನು ಮಾಡಲು ನಿಮ್ಮ ಉದ್ಯೋಗಿಗೆ ಹೇಳಿ. ಈ ಅಂತರವನ್ನು ನಿವಾರಿಸುವುದು ಎಂದರೆ ನೀವು ಇತರ ಜನರನ್ನು ನಂಬಿ ಅವರ ಮೇಲೆ ಸ್ವಲ್ಪ ಜವಾಬ್ದಾರಿಯನ್ನು ನೀಡುವುದು ಉತ್ತಮ. ಕೆಲವೊಮ್ಮೆ ಹೀಗೆ ನಾವು ಕೆಲಸಗಳನ್ನು ಬೇರೆ ಕೆಲಸಗಾರರಿಗೆ ವಹಿಸಿದಾಗ ಕೆಲವು ಅಡೆತಡೆಗಳಾಗುವುದು ಸಾಮಾನ್ಯವಾಗಿರುತ್ತವೆ. ಆಗ ನೀವು ಅವರ ಸಹಾಯಕ್ಕೆ ಬರುವುದು ಮತ್ತು ಆ ಕೆಲಸವನ್ನು ಸರಿಯಾಗಿ ಮಾಡಲು ಅವರಿಗೆ ಸಹಾಯ ಮಾಡುವುದು ನಿಮ್ಮ ವ್ಯವಹಾರವನ್ನು ಇನ್ನಷ್ಟು ಯಶಸ್ಸನ್ನು ಸಾಧಿಸಲು ಕಾರಣವಾಗುತ್ತದೆ.
ಏಕೆಂದರೆ ನಮ್ಮ ದೃಷ್ಟಿಕೋನ ಬೇರೆಯಾಗಿರುತ್ತದೆ ಮತ್ತು ಇತರೆ ಜನರ ದೃಷ್ಟಿಕೋನಗಳು ಬೇರೆ ಆಗಿರುತ್ತವೆ. ಅವರು ವ್ಯವಹಾರವನ್ನು ಸುಧಾರಿಸಲು ಉಪಯುಕ್ತ ಇನ್ಫುಟ್ ಗಳನ್ನು ನೀಡಬಹುದು ಮತ್ತು ನೀವು ಯೋಚಿಸದ ಪರಿಹಾರಗಳನ್ನು ಅವರು ನಿಮಗೆ ತಿಳಿಸಬಹುದು. ಆದರೆ ಎಷ್ಟೋ ಬಾರಿ ಅಹಂ ನಿಂದ ಅನೇಕರು ತಮ್ಮ ವ್ಯವಹಾರವನ್ನು ಹೊಸ ಎತ್ತರಕ್ಕೆ ಬೆಳೆಸುವ ಪ್ರಯತ್ನವನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ.
ಈ ಮಾತನ್ನು ನೀವು ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗದೆ ಇರಬಹುದು, ಆದರೆ ನಿಮ್ಮ ಯಶಸ್ಸನ್ನು ಸೀಮಿತಗೊಳಿಸುವಲ್ಲಿ ನಿಮ್ಮ ಅಹಂ ಹೇಗೆ ಪಾತ್ರ ವಹಿಸುತ್ತದೆ ಎಂಬುದನ್ನು ಗುರುತಿಸುವುದು ತುಂಬಾನೇ ಮುಖ್ಯವಾಗುತ್ತದೆ. ನಂತರ ಅದನ್ನು ಮೀರಿ ಹೇಗೆ ಕೆಲಸ ಮಾಡುವುದು ಅಂತ ತಿಳಿದುಕೊಳ್ಳುವುದು ಒಳ್ಳೆಯದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ