ಕಾಲೇಜು (Collage) ಮುಗಿಸಿ ಅಥವಾ ಕಾಲೇಜು ಓದುತ್ತಿರುವಾಗ ಅನೇಕ ಮಂದಿ ತಮ್ಮ ಖರ್ಚನ್ನು ತಾವೇ ನೋಡಿಕೊಳ್ಳಲು ಅಥವಾ ತಮ್ಮ ಪೋಷಕರಿಗೆ (Parents) ಸ್ವಲ್ಪ ಸಹಾಯವಾಗಲಿ ಅಂತ ಚಿಕ್ಕ ಕೆಲಸಗಳನ್ನು (Small Job) ಶುರು ಮಾಡಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಎಷ್ಟೋ ಜನ ಹದಿಹರೆಯದವರು ಈ ಪುಸ್ತಕ ಅಂಗಡಿಗಳಲ್ಲಿ (Stationery), ಕಿರಾಣಿ ಅಂಗಡಿಗಳಲ್ಲಿ (Grocery store), ಮನೆಯನ್ನು ಸ್ವಚ್ಛಗೊಳಿಸುವ (Home Clean) ಕೆಲಸಕ್ಕೆ, ಮಕ್ಕಳನ್ನು ನೋಡಿಕೊಳ್ಳುವ ಡೇ-ಕೇರ್ ಸೆಂಟರ್ ನಲ್ಲಿ (Day Care Center) ಹೀಗೆ ಒಂದೇ ಎರಡೇ.. ಕೆಲಸ ಮಾಡುವವರಿಗೆ ಅನೇಕ ರೀತಿಯ ಕೆಲಸಗಳು ಲಭ್ಯವಿರುತ್ತವೆ ಅಂತ ಹೇಳಬಹುದು.
ಹದಿಹರೆಯದವರಿಗೆ ಈ ಉದ್ಯೋಗಗಳು ಎಷ್ಟರ ಮಟ್ಟಿಗೆ ಮುಖ್ಯವಾಗುತ್ತವೆ?
ಹದಿಹರೆಯದವರು ಓದುವುದರ ಜೊತೆಗೆ ಒಂದು ಕೆಲಸ ಅಂತ ಮಾಡುವುದು ಒಳ್ಳೆಯದೇ. ಮೊದಲನೇಯದಾಗಿ ಅವರು ತಮ್ಮ ಸ್ವಂತ ಹಣವನ್ನು ತಾವೇ ಗಳಿಸಿ, ತಮ್ಮ ಖರ್ಚುಗಳನ್ನು ಅವರೇ ನೋಡಿಕೊಳ್ಳಬಹುದು. ನೀವು ವಯಸ್ಕರಾಗಿ ದೊಡ್ಡ ಕೆಲಸ ಹುಡುಕಲು ಹೋದಾಗ ನೀವು ಮಾಡಿದ ಈ ಸಣ್ಣ ಕೆಲಸಗಳು ನಿಮಗೆ ಪ್ರಯೋಜನಕ್ಕೆ ಬರುತ್ತದೆ ಎಂದೇ ಹೇಳಬಹುದು.
ನೀವು ಹದಿಹರೆಯದ ವಯಸ್ಸಿನಲ್ಲಿಯೇ ಕೆಲಸ ಶುರು ಮಾಡಿಕೊಂಡಿರುವುದರಿಂದ ಮುಂದೆ ನಿಮ್ಮ ಓದು ಮುಗಿದ ನಂತರ ನಿಮ್ಮದೇ ಆದ ಸ್ವಂತ ವ್ಯಾಪಾರವನ್ನು ಶುರು ಮಾಡಿಕೊಳ್ಳಬಹುದು. ಹದಿಹರೆಯದವರಿಗೆ ಐದು ಮೋಜಿನ ಸಣ್ಣ ವ್ಯವಹಾರದ ಕಲ್ಪನೆಗಳಿಗಾಗಿ ಮುಂದೆ ಓದಿ. ಅವುಗಳಲ್ಲಿ ಅನೇಕವುಗಳನ್ನು ನಿಮ್ಮ ಸ್ವಂತ ನೆರೆಹೊರೆಯಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಶುರು ಮಾಡಬಹುದು.
1. ಟೆಕ್ನಾಲಜಿ ಕನ್ಸಲ್ಟೆಂಟ್
ಈ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ದರವರೆಗೆ ಎಲ್ಲರ ಕೈಯಲ್ಲೂ ಸ್ಮಾರ್ಟ್ಫೋನ್ ಗಳು, ಮೊಬೈಲ್ ಗಳು ಮತ್ತು ಟ್ಯಾಬ್ಲೆಟ್ ಗಳು ಇರುವುದನ್ನು ನಾವು ನೋಡುತ್ತೇವೆ. ನೀವು ಹದಿಹರೆಯದವರಾಗಿದ್ದು, ಗ್ರಾಹಕರ ತಂತ್ರಜ್ಞಾನದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಮಗೆ ಆಸಕ್ತಿ ಇದ್ದರೆ, ಇದು ಒಳ್ಳೆಯ ಕೆಲಸವಾಗಬಹುದು.
ತಂತ್ರಜ್ಞಾನ ಸಂಬಂಧಿತ ಸಲಹೆ ಮತ್ತು ಸಹಾಯವಾಣಿ ವ್ಯವಹಾರವನ್ನು ಏಕೆ ನೀವು ಪ್ರಾರಂಭಿಸಬಾರದು? ನೀವು ಯಾರಿಗಾದರೂ ಈ ಹೊಸ ಐಫೋನ್ ಅನ್ನು ಹೊಂದಿಸಲು ಸಹಾಯ ಮಾಡಿದರೆ, ಅದಕ್ಕೆ ಅವರು ಹಣ ನೀಡುತ್ತಾರೆ. ನಿಮ್ಮ ನೆರೆಹೊರೆಯಲ್ಲಿರುವ ವಯಸ್ಕರಿಗೆ ನೀವು ನಿಮ್ಮ ಸೇವೆಗಳನ್ನು ನೀಡಬಹುದು.
2. ಹೌಸ್ ಕ್ಲೀನಿಂಗ್ (ಮನೆ ಸ್ವಚ್ಛ ಮಾಡುವ ಕೆಲಸ)
ಹದಿಹರೆಯದವರಿಗೆ ಇದು ಉತ್ತಮ ವ್ಯವಹಾರ ಕಲ್ಪನೆಯಾಗಿದೆ, ಏಕೆಂದರೆ ಅಗತ್ಯವಿರುವ ಪೂರೈಕೆಗಳು ಮತ್ತು ಸಲಕರಣೆಗಳು ಅಗ್ಗವಾಗಿವೆ ಮತ್ತು ಸುಲಭವಾಗಿ ಲಭ್ಯವಿವೆ. ನೀವು ಮನೆಯಲ್ಲಿನ ಕೆಲಸಗಳಿಗೆ ಜವಾಬ್ದಾರರಾಗಿದ್ದರೆ ಕೆಲವು ಮನೆ ಸ್ವಚ್ಛಗೊಳಿಸುವ ಕಾರ್ಯಗಳನ್ನು ಹೇಗೆ ನಿಭಾಯಿಸುವುದು ಎಂದು ನಿಮಗೆ ಈಗಾಗಲೇ ತಿಳಿದಿರುತ್ತದೆ.
ಈಗಂತೂ ಗಂಡ ಮತ್ತು ಹೆಂಡತಿ ಇಬ್ಬರು ಕೆಲಸಕ್ಕೆ ಹೋಗುತ್ತಾರೆ ಮತ್ತು ಅವರಿಗೆ ಮನೆಯನ್ನು ಪ್ರತಿದಿನ ಸ್ವಚ್ಛ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಹೀಗಾಗಿ ಮನೆಯ ಸ್ನಾನಗೃಹಗಳನ್ನು ಸ್ವಚ್ಛಗೊಳಿಸಲು, ಕಾರ್ಪೆಟ್ ಇತ್ಯಾದಿಗಳನ್ನು ಅಚ್ಚುಕಟ್ಟುಗೊಳಿಸುವುದು ಮತ್ತು ಪೂರ್ತಿ ಮನೆಯನ್ನ ಸ್ವಚ್ಛ ಮಾಡಿ ಹಣ ಗಳಿಸಬಹುದು.
3. ವೆಬ್ ಡಿಸೈನ್
ತಂತ್ರಜ್ಞಾನದ ಕಡೆಗೆ ಮತ್ತೆ ನಾವು ತಿರುಗಿ ನೋಡಿದಾಗ, ಪ್ರೋಗ್ರಾಮಿಂಗ್ ಮತ್ತು ವೆಬ್ ಡಿಸೈನ್ ನಲ್ಲಿ ಈಗಿನ ಹದಿಹರೆಯದವರು ತುಂಬಾನೇ ಚಾಣಾಕ್ಷರಾಗಿದ್ದಾರೆ. ಈ ವ್ಯವಹಾರವನ್ನು ಹದಿಹರೆಯದವರು ತಮ್ಮ ಮನೆಯಲ್ಲಿಯೇ ಕುಳಿತು ಶುರು ಮಾಡಬಹುದು. ಈ ಕೆಲಸಕ್ಕೆ ಸರಿಯಾದ ಕಂಪ್ಯೂಟರ್ ಮತ್ತು ಹಣಕಾಸು ಒದಗಿಸಲು ನೀವು ಬ್ಯಾಂಕ್ ಅಥವಾ ಪೋಷಕರಿಂದ ಸ್ವಲ್ಪ ಹಣವನ್ನು ಸಾಲದ ರೂಪದಲ್ಲಿ ಪಡೆದು ಪ್ರಾರಂಭಿಸಬಹುದು.
4. ಬೇಬಿ ಸಿಟ್ಟಿಂಗ್ (ಶಿಶು ಪಾಲನೆ)
ಬೇಬಿ ಸಿಟ್ಟಿಂಗ್ ಕೆಲಸವು ಒಂದು ಕ್ಲಾಸಿಕ್ ವೃತ್ತಿಯಾಗಿದ್ದು ಯುವ ಜನಾಂಗಕ್ಕೆ ಆದರ್ಶಮಯವಾಗಿದೆ ಎಂದು ಹೇಳಬಹುದು, ಆದರೆ ನೀವು ಇದಕ್ಕೆ ಸ್ವಲ್ಪ ಸಮಯವನ್ನು ವಿನಿಯೋಗಿಸಿ ಸ್ವಲ್ಪ ತರಬೇತಿ ಪಡೆಯಬೇಕಾಗುತ್ತದೆ. ನಿಮ್ಮ ಸ್ಥಳೀಯ ರೆಡ್ಕ್ರಾಸ್ ಸಂಸ್ಥೆ ಅಥವಾ ಆಸ್ಪತ್ರೆಯ ಮೂಲಕ ಸಿಪಿಆರ್ ತರಗತಿಗಳನ್ನು ತೆಗೆದುಕೊಳ್ಳಬಹುದು. ನೀವು ಶಿಶುಪಾಲನಾ ತರಗತಿಗಳನ್ನು ಸಹ ನಡೆಸಬಹುದು.
ನಿಮ್ಮ ನೆರೆಹೊರೆಯ ಪೋಷಕರಿಗೆ ನೀವು ಜವಾಬ್ದಾರರು ಮತ್ತು ಅವರ ಮಕ್ಕಳನ್ನು ನೋಡಿಕೊಳ್ಳಲು ನೀವು ಬೆಸ್ಟ್ ಅಂತ ಅನ್ನಿಸಿದರೆ ಸಾಕು ಈ ಕೆಲಸ ತುಂಬಾನೇ ಚೆನ್ನಾಗಿ ನಡೆಯುತ್ತದೆ.
5. ಕಾರ್ ವಾಷಿಂಗ್ (ಕಾರುಗಳನ್ನು ತೊಳೆಯುವುದು)
ಕಾರುಗಳನ್ನು ತೊಳೆಯುವುದು ಯುವ ಜನಾಂಗಕ್ಕೆ ಒಳ್ಳೆಯ ವ್ಯವಹಾರದ ಕಲ್ಪನೆಯಾಗಿದೆ. ಅದರಲ್ಲೂ ಈ ಕಾರುಗಳು ತುಂಬಾನೇ ಕೊಳೆಯಾಗುವ ಸ್ಥಳದಲ್ಲಿ ನೀವು ವಾಸಿಸುತ್ತಿದ್ದರೆ, ಇದು ತುಂಬಾನೇ ಒಳ್ಳೆಯ ವ್ಯವಹಾರ ಅಂತ ಹೇಳಬಹುದು. ಇಲ್ಲಿ ನೀವು ಇದನ್ನು ಶುರು ಮಾಡಲು ತಗಲುವ ವೆಚ್ಚಗಳು ಸಹ ಕಡಿಮೆ ಅಂತ ಹೇಳಬಹುದು. ನೀವು ಸ್ಪಂಜುಗಳು, ಹೋಸ್ ಗಳು, ಬಕೆಟ್ ಗಳು ಮತ್ತು ವಿಶೇಷ ಸಾಬೂನುಗಳನ್ನು ಖರೀದಿಸಬೇಕಾಗುತ್ತದೆ.
ನೀವು ನಿಮ್ಮ ಸ್ವಂತ ಹಣದಲ್ಲಿ ಈ ವ್ಯವಹಾರವನ್ನು ಶುರು ಮಾಡಬಹುದು. ಶುರು ಮಾಡುವ ಮುಂಚೆ ನಿಮ್ಮ ವೆಚ್ಚಗಳ ಸಾರಾಂಶ ಮತ್ತು ನಿಮ್ಮನ್ನು ನೀವು ಹೇಗೆ ಮಾರುಕಟ್ಟೆಯಲ್ಲಿ ಬೆಸ್ಟ್ ಅಂತ ತೋರಿಸಿಕೊಳ್ಳುತ್ತೀರಿ ಅನ್ನೋದು ನಿಮ್ಮ ಬುದ್ದಿವಂತಿಕೆಗೆ ಬಿಟ್ಟಿದ್ದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ