Insurance: ನಿಮಗಷ್ಟೇ ಅಲ್ಲ, ನಿಮ್ಮ ಸಾಕು ಪ್ರಾಣಿಗೂ ಬೇಕು ಜೀವವಿಮೆ! ಇಷ್ಟೆಲ್ಲಾ ಲಾಭ ಇದೆ ರೀ

ನಮಗೆ ಈ ಭೂಮಿ (Earth) ಯಲ್ಲಿ ಬದುಕಲು ಎಷ್ಟು ಹಕ್ಕು ಇದೆಯೋ ಪ್ರಾಣಿಗಳಿಗೂ ಅಷ್ಟೇ ಹಕ್ಕು ಇದೆ. ನಾವು ಬದುಕುವಂತೆ, ಅವುಗಳು ಕೂಡ ಬದುಕುತ್ತವೆ. ಹೀಗಾಗಿ ನಮಗೆ ಇರುವ ಸೌಲಭ್ಯಗಳನ್ನು ಸಾಕು ಪ್ರಾಣಿಗಳಿಗೆ ನೀಡಬೇಕು. ಅದರಲ್ಲಿ ವಿಮೆ (Insurance) ಕೂಡ ಒಂದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನುಷ್ಯ (Humans) ರಿಗಿಂತ ಪ್ರಾಣಿಗಳೇ (Animal) ಗುಣದಲ್ಲಿ ಮೇಲೂ. ನಾನು, ನನ್ನದು ಎಂಬ ಸ್ವಾರ್ಥದಲ್ಲಿ ಮನುಷ್ಯ ಜೀವನ ನಡೆಸುತ್ತಿದ್ದಾನೆ. ಆದರೆ, ಪ್ರಾಣಿಗಳು ಒಂದೊತ್ತಿನ ಊಟ (Food) ಕೊಟ್ಟರೆ ಅವುಗಳು ಬುದಕಿರುವವರೆಗೂ ಪ್ರೀತಿ ಮಾತ್ರ ನೀಡುತ್ತವೆ. ಅದಕ್ಕೆ ಡಾ.ರಾಜ್​ಕುಮಾರ್ (Dr. Rajkumar)​​ ಕೂಡ ಪ್ರಾಣಿಗಳೇ ಗುಣದಲ್ಲಿ  ಮೇಲೂ, ಮಾನವ ಅದಕ್ಕಿಂತ ಕೀಳು ಎಂದು ಹಾಡಿದ್ದಾರೆ. ಆ ಮಾತು ನೂರಕ್ಕೆ ನೂರು ಸತ್ಯ. ಪ್ರಾಣಿಗಳ ಮೇಲೆ ಪ್ರೀತಿ ಇರುವ ಮನುಷ್ಯನ ಗುಣಗಳು ತುಂಬಾ ಚೆನ್ನಾಗಿರುತ್ತವೆ. ಪ್ರಾಣಿಗಳನ್ನು ದ್ವೇಷಿಸುವ ಮಾನವ ಎಂದಿಗೂ ಮೇಲೆ ಬರುವುದಿಲ್ಲ. ಅವುಗಳು ನಮ್ಮಂತೆಯೇ. ನಮಗೆ ಈ ಭೂಮಿ (Earth) ಯಲ್ಲಿ ಬದುಕಲು ಎಷ್ಟು ಹಕ್ಕು ಇದೆಯೋ ಪ್ರಾಣಿಗಳಿಗೂ ಅಷ್ಟೇ ಹಕ್ಕು ಇದೆ. ನಾವು ಬದುಕುವಂತೆ, ಅವುಗಳು ಕೂಡ ಬದುಕುತ್ತವೆ. ಹೀಗಾಗಿ ನಮಗೆ ಇರುವ ಸೌಲಭ್ಯಗಳನ್ನು ಸಾಕು ಪ್ರಾಣಿಗಳಿಗೆ ನೀಡಬೇಕು. ಅದರಲ್ಲಿ ವಿಮೆ (Insurance) ಕೂಡ ಒಂದು.

ನಿಮ್ಮ ಸಾಕು ಪ್ರಾಣಿಗಳಿಗೆ ವಿಮೆ ಮಾಡಿಸಿದ್ದೀರಾ?

​ನಾವು ಪ್ರಾಣಿಯನ್ನು ಸಾಕಿದರೆ ಆ ಪ್ರಾಣಿ ಕೂಡಾ ನಮ್ಮ ಕುಟುಂಬದ ಸದಸ್ಯ ಆಗುತ್ತದೆ. ನೀವು ನಿಮ್ಮ ಮಕ್ಕಳನ್ನು ಹೇಗೆ, ಎಷ್ಟು ಪ್ರೀತಿಯಿಂದ ಸಾಕುತ್ತಿರೋ ಹಾಗೆಯೇ ನಿಮ್ಮ ಸಾಕು ಪ್ರಾಣಿಯನ್ನು ಕೂಡಾ ನೋಡಿಕೊಳ್ಳಬೇಕು. ಹಾಗೆಯೇ  ನಿಮ್ಮ ಸಾಕು ಪ್ರಾಣಿಗೆ ವಿಮೆ ರಕ್ಷಣೆ ಮುಖ್ಯ. ಹೌದು, ಪ್ರಾಣಿಗಳಿಗೆ ಯಾಕೆ ವಿಮೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಸಾಕು ಪ್ರಾಣಿಗಳಿಗೆ ವಿಮೆ ಮಾಡಿಸುವುದು ವೈಯಕ್ತಿಕ ವಿಚಾರ!

ಸಾಕು ಪ್ರಾಣಿಯ ವಿಮೆಯು ಅದರ ಆರೋಗ್ಯ, ನಿರ್ವಹಣೆ, ಇತರೆ ವೆಚ್ಚವನ್ನು ನೋಡಿಕೊಳ್ಳಲು ನೀವು ಬಜೆಟ್‌ ಅನ್ನು ಮೀಸಲಿಡುವುದು ಅಗತ್ಯ. ಸಾಕು ಪ್ರಾಣಿಗಳ ವಿಮೆಯು ಸಾಕು ಪ್ರಾಣಿಯ ವೆಚ್ಚ, ಆಸ್ಪತ್ರೆ ವೆಚ್ಚ ಇತ್ಯಾದಿಗಳಿಗಾಗಿ ಸಾಕು ಪ್ರಾಣಿಯ ಮಾಲೀಕರಿಗೆ ಒದಗಿಸುವ ಆರ್ಥಿಕ ಭದ್ರತೆಯಾಗಿದೆ. ಆದರೆ ನೀವು ನಿಮ್ಮ ಸಾಕು ಪ್ರಾಣಿಗೆ ಯಾವ ವರ್ಷದಲ್ಲಿ ವಿಮೆ ಮಾಡಿಸಿಕೊಳ್ಳಬೇಕು? ಯಾಕಾಗಿ ವಿಮೆ ಮಾಡಿಸಬೇಕು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಜನ ಏನೇ ಬಿಟ್ರೂ, ಹೊಸ ಬಟ್ಟೆ ತಗೋಳೋದು ಬಿಡಲ್ಲ! ಕಡಿಮೆ ದುಡ್ಡಲ್ಲಿ ಹೀಗೆ Boutique ಪ್ರಾರಂಭಿಸಿ

ಸೂಕ್ತವಾದ ವಿಮೆಯನ್ನು ಆಯ್ಕೆ ಮಾಡಿಕೊಳ್ಳಿ!

ಕೆಲವರು ಜೀವಿತಾವಧಿ ಅಥವಾ ಆಕಸ್ಮಿಕ ವಿಮೆಯನ್ನು ಮಾಡಿಸಿಕೊಳ್ಳುತ್ತಾರೆ. ಇನ್ನೂ ಕೆಲವು ಸಂಸ್ಥೆಗಳು ಆಸ್ಪತ್ರೆಗೆ ದಾಖಲು ಅಥವಾ ಚಿಕಿತ್ಸಾ ವೆಚ್ಚವನ್ನು ಭರಿಸುವ ವಿಮೆಯನ್ನು ಮಾರಾಟ ಮಾಡುತ್ತಾರೆ. ಹಾಗೆಯೇ ಈ ವಿಮೆಯು ನಿಮ್ಮ ಸಾಕು ಪ್ರಾಣಿ ಕಳ್ಳತನವಾದಾಗ ಅಥವಾ ದಾರಿ ತಪ್ಪಿ ಎಲ್ಲಾದರೂ ಹೋದಾಗ ನಿಮಗೆ ಲಭ್ಯವಾಗಲಿದೆ. ಕೆಲವು ಯೋಜನೆಗಳು ಸಾಕು ಪ್ರಾಣಿಯ ಖರ್ಚು ವೆಚ್ಚದ ಹೊರೆಯ ರಕ್ಷಣೆಯನ್ನು ನೀಡುತ್ತದೆ. ವಿಮಾ ಯೋಜನೆಗಳು ಸಾಕುಪ್ರಾಣಿಗಳ ವ್ಯಾಕ್ಸಿನೇಷನ್ ವೆಚ್ಚವನ್ನು ಸಹ ಒಳಗೊಳ್ಳಲಿದೆ. ಯಾವುದೇ ವಿಮೆ ಮಾಡಿಸುವ ಮೊದಲು ಪ್ರೀಮಿಯಂ ವೆಚ್ಚವನ್ನು ಪರಿಶೀಲಿಸಬೇಕು.

ಯಾವ ಸಮಯದಲ್ಲಿ ವಿಮೆ ಮಾಡಿಸಬೇಕು?

ಸಾಕುಪ್ರಾಣಿಗೆ ಕನಿಷ್ಠ ಎಂಟು ವಾರಗಳ ವಯಸ್ಸಾಗಿರಬೇಕು. ವಿಮಾ ಕಂಪನಿಯು ಗರಿಷ್ಠ ವಯಸ್ಸನ್ನು ಸಹ ನಿರ್ದಿಷ್ಟಪಡಿಸಬಹುದು. ಉದಾಹರಣೆಗೆ ಸಾಕು ನಾಯಿಯ ಗರಿಷ್ಠ ವಯಸ್ಸು 10 ವರ್ಷ ಎಂದು ವಿಮಾ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಗ್ರಾಹಕರೇ ಗಮನಿಸಿ, ಜುಲೈ 1ರಿಂದ ಜಾರಿಗೆ ಬರಲಿವೆ ಹೊಸ ನಿಯಮಗಳು

ಯಾವ ಚಿಕಿತ್ಸೆಗೆಲ್ಲಾ ಕ್ಲೈಮ್​ ಆಗೋದಿಲ್ಲ?

ಅನಾರೋಗ್ಯ ಅಥವಾ ಅಪಘಾತದಿಂದ ಉಂಟಾಗುವ ಯಾವುದೇ ಶಸ್ತ್ರಚಿಕಿತ್ಸೆಗಳಿಗೆ ಈ ವಿಮೆ ಕ್ಲೈಮ್​ ಆಗೋದಿಲ್ಲ. ಗರ್ಭ ಸಂಬಂಧಿತ ಶಸ್ತ್ರ ಚಿಕಿತ್ಸೆ, ಸಾಕು ಪ್ರಾಣಿಯ ಉಡುಗೆ ತೊಡುಗೆಗೆ, ಸಾಕು ಪ್ರಾಣಿಯ ಹಲ್ಲಿನ ಚಿಕಿತ್ಸೆಗೆ ಈ ವಿಮೆಯು ಕ್ಲೈಮ್ ಆಗುವುದಿಲ್ಲ ಎಂದ ನೀವು ತಿಳಿದುಕೊಂಡಿರಬೇಕು.
Published by:Vasudeva M
First published: