Drone ಖರೀದಿಗೆ ಕೇಂದ್ರ ಸರ್ಕಾರದಿಂದ 5 ಲಕ್ಷದವರೆಗೂ ಆರ್ಥಿಕ ನೆರವು! ವಿವರ ತಿಳಿಯಿರಿ

ಡ್ರೋನ್ ಸೇವೆಗಳು ಈಗಷ್ಟೇ ಶುರುವಾದ ಕಾರಣ ಸದ್ಯ ದುಬಾರಿಯಾಗಿದೆ. ಅಗಾಧ ಪ್ರಮಾಣದ ಬಳಕೆ ಆರಂಭವಾದರೆ ಹಂತಹಂತವಾಗಿ ಬೆಲೆ ಅಗ್ಗವಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೆಹಲಿ: ಡ್ರೋನ್​ಗಳ ಬಳಕೆಯನ್ನು ಹೆಚ್ಚಿಸಲು ಸರ್ಕಾರವು ವಿವಿಧ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬೆನ್ನಲ್ಲೇ ಕೃಷಿಗಾಗಿ ಡ್ರೋನ್‌ಗಳನ್ನು ಖರೀದಿಸಲು ಸರ್ಕಾರವು 5 ಲಕ್ಷದವರೆಗೆ ಆರ್ಥಿಕ ನೆರವು (Economic Help) ನೀಡುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar)  ಲೋಕಸಭೆಯಲ್ಲಿ (Lok Sabha) ಈ ಮಾಹಿತಿ ನೀಡಿದ್ದಾರೆ. ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನದ (Drone Technology) ವಿಶಿಷ್ಟ ಪ್ರಯೋಜನಗಳ ದೃಷ್ಟಿಯಿಂದ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಡಿಸೆಂಬರ್ 2021 ರಲ್ಲಿ ಸಾರ್ವಜನಿಕ ಡೊಮೇನ್‌ಗಳಲ್ಲಿ ಕೀಟನಾಶಕ ಮತ್ತು ಪೋಷಕಾಂಶಗಳನ್ನು ಸಿಂಪಡಿಸಲು ಡ್ರೋನ್‌ಗಳ ಬಳಕೆಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ಹೊರಡಿಸಿದೆ.

ದೇಶದಲ್ಲಿ ಕೃಷಿಯನ್ನು ಸರಳ ಮತ್ತು ರೈತರಿಗೆ ಸುಲಭವಾಗಿ ತಲುಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ಕೃಷಿಯಲ್ಲಿ ಡ್ರೋನ್ ಬಳಕೆಯನ್ನು ಉತ್ತೇಜಿಸುತ್ತಿದೆ.

ದೊರೆಯುವ ಸೌಲಭ್ಯಗಳೇನು?
ಈ ಹಿನ್ನೆಲೆಯಲ್ಲಿ ಕೃಷಿಗಾಗಿ ಡ್ರೋನ್‌ಗಳನ್ನು ಖರೀದಿಸುವವರಿಗೂ ಸರ್ಕಾರ ಸಹಾಯವನ್ನು ನೀಡುತ್ತಿದೆ. ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ಕೃಷಿಗಾಗಿ ಡ್ರೋನ್‌ಗಳ ಖರೀದಿಗೆ ಗರಿಷ್ಠ 5 ಲಕ್ಷದವರೆಗೆ ಆರ್ಥಿಕ ನೆರವು ನೀಡುತ್ತಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ರೈತ ಉತ್ಪಾದಕ ಸಂಸ್ಥೆಗಳಿಗೆ ಅವಕಾಶ
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಹೊಸ ಮತ್ತು ಹಳೆಯ ಕಸ್ಟಮ್ ಹೈರಿಂಗ್ ಸೆಂಟರ್‌ಗಳು (ಸಿಎಚ್‌ಸಿಗಳು), ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒಗಳು) ಮತ್ತು ರೈತರ ಸಹಕಾರ ಅಡಿಯಲ್ಲಿ ಕೆಲಸ ಮಾಡುವ ಗ್ರಾಮೀಣ ಉದ್ಯಮಿಗಳು ಆಪರೇಟಿವ್ ಸೊಸೈಟಿಗಳಿಗೆ ಅವರು ಕೃಷಿಯಲ್ಲಿ ತೊಡಗಿದ್ದರೆ ಡ್ರೋನ್ ಖರೀದಿಗೆ, ಡ್ರೋನ್‌ನ ಮೂಲ ವೆಚ್ಚದ ಶೇಕಡಾ 40 ರಷ್ಟು ಮತ್ತು ಡ್ರೋನ್ ಖರೀದಿಗೆ 4 ಲಕ್ಷ ರೂಪಾಯಿ (ಈ ಎರಡರಲ್ಲಿ ಯಾವುದು ಕಡಿಮೆಯೋ ಅದು) ಆರ್ಥಿಕ ನೆರವು ನೀಡಲಾಗುತ್ತದೆ.

ಕೃಷಿ ಪದವೀಧರರಿಗೂ ನೆರವು
ಅದೇ ಸಮಯದಲ್ಲಿ ಕೃಷಿ ಪದವೀಧರರು ಸ್ಥಾಪಿಸಿದ ಕಸ್ಟಮ್ ಹೈರಿಂಗ್ ಸೆಂಟರ್​ಗೆ (CHC) ಡ್ರೋನ್‌ನ ಮೂಲ ವೆಚ್ಚದ 50 ಪ್ರತಿಶತ ಅಥವಾ ಗರಿಷ್ಠ 5 ಲಕ್ಷ (ಈ ಎರಡರಲ್ಲಿ ಯಾವುದು ಕಡಿಮೆಯೋ ಅದು) ಆರ್ಥಿಕ ನೆರವು ನೀಡಲಾಗುತ್ತದೆ. ಈ ಮಾಹಿತಿಯನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ವತಃ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಹೊಸ ಕ್ರಾಂತಿಗೆ ನಾಂದಿ
ಕಿಸಾನ್ ಡ್ರೋನ್ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿಯಾಗಲಿದ್ದು, ಹೆಚ್ಚಿನ ಸಾಮರ್ಥ್ಯದ ಡ್ರೋನ್‌ಗಳನ್ನು ತರಕಾರಿಗಳು, ಹಣ್ಣುಗಳು, ಮೀನುಗಳನ್ನು ನೇರವಾಗಿ ಜಮೀನುಗಳಿಂದ ಮಾರುಕಟ್ಟೆಗೆ ಸಾಗಿಸಲು ಬಳಸಬಹುದಾಗಿದೆ.

ಇದನ್ನೂ ಓದಿ: Kisan Drones: ಕರ್ನಾಟಕದ ಕೃಷಿಕರೂ ಡ್ರೋನ್ ಬಳಸಿ! ಬೆಲೆ, ಖರೀದಿ, ಸರ್ಕಾರಿ ಸೌಲಭ್ಯ ಹೇಗೆ ತಿಳಿದುಕೊಳ್ಳಿ

ಈ ವಸ್ತುಗಳನ್ನು ಕನಿಷ್ಠ ಹಾನಿಯೊಂದಿಗೆ ನೇರವಾಗಿ ಮಾರುಕಟ್ಟೆಗೆ ಸರಬರಾಜು ಮಾಡಬಹುದು, ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ, ಇದರಿಂದಾಗಿ ರೈತರು ಮತ್ತು ಮೀನುಗಾರರಿಗೆ ಹೆಚ್ಚಿನ ಲಾಭ ದೊರೆಯಲಿದೆ.

ಕೃಷಿಯಲ್ಲಿ ಡ್ರೋನ್‌ಗಳನ್ನು ಯಾವುದಕ್ಕೆ ಬಳಸಬಹುದು?
ಕೃಷಿಯಲ್ಲಿ ಕಿಸಾನ್ ಡ್ರೋನ್ ಅನ್ನು ಕೀಟನಾಶಕ ಸಿಂಪಡಿಸುವ ಯಂತ್ರವಾಗಿ ಬಳಸಬಹುದಾಗಿದೆ. ಫ್ಲೈಯಿಂಗ್ ಸ್ಪ್ರೇಯರ್ ಎಂಬ ಡ್ರೋನ್‌ಗಳು ಕೀಟನಾಶಕಗಳು ಮತ್ತು ದ್ರವ ಗೊಬ್ಬರಗಳಿಂದ ತುಂಬಿದ 5-10 ಕೆಜಿ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಹೊಂದಿವೆ. ಇದಲ್ಲದೆ, ಡ್ರೋನ್‌ಗಳು ಕೇವಲ 15 ನಿಮಿಷಗಳಲ್ಲಿ ಸುಮಾರು 1 ಎಕರೆ ಭೂಮಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಸಾಕಷ್ಟು ಸಮಯ ಮತ್ತು ಶ್ರಮವನ್ನು ಉಳಿಸುತ್ತವೆ.

ಭಾರತದಲ್ಲಿ ಕೃಷಿ ಡ್ರೋನ್ ಬೆಲೆ ಎಷ್ಟಿದೆ?
ಕೃಷಿ ಡ್ರೋನ್ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಇಂಟರ್ನೆಟ್ ಆಧಾರಿತ ಸ್ಮಾರ್ಟ್ ತಂತ್ರಜ್ಞಾನವನ್ನು ಬಳಸುತ್ತದೆ. ಸಿಂಪರಣೆ ಮತ್ತು ಬೆಳೆ ಆರೋಗ್ಯ ಮೇಲ್ವಿಚಾರಣೆಯಂತಹ ನಿಖರವಾದ ಕೃಷಿ ಚಟುವಟಿಕೆಗಳನ್ನು ನಿರ್ವಹಿಸುತ್ತದ. ಇವುಗಳ ಬೆಲೆ 5 ಲಕ್ಷದಿಂದ 10 ಲಕ್ಷದವರೆಗೆ ಇರುತ್ತದೆ.

ಇದನ್ನೂ ಓದಿ: ಭಾರತದ ಅಡಿಕೆ ಉತ್ಪಾದನೆ ಎಷ್ಟು? UAE, ಸಿಂಗಾಪೂರದಿಂದಲೂ ಭಾರತಕ್ಕೆ ಅಡಿಕೆ ಆಮದು!

ಡ್ರೋನ್ ಸೇವೆಗಳು ಈಗಷ್ಟೇ ಶುರುವಾದ ಕಾರಣ ಸದ್ಯ ದುಬಾರಿಯಾಗಿದೆ. ಅಗಾಧ ಪ್ರಮಾಣದ ಬಳಕೆ ಆರಂಭವಾದರೆ ಹಂತಹಂತವಾಗಿ ಬೆಲೆ ಅಗ್ಗವಾಗಲಿದೆ.
Published by:guruganesh bhat
First published: