Aadhaar Card: ಆಧಾರ್​ ಕಾರ್ಡ್ ಇದ್ರೆ 5 ಲಕ್ಷ ಸಾಲ ಕೊಡುತ್ತಂತೆ ಸರ್ಕಾರ! ಸಿಕ್ಕಾಪಟ್ಟೆ ವೈರಲ್​ ಆಗ್ತಿರೋ ಸುದ್ದಿ ಸತ್ಯನಾ?

ಮೋದಿ ಸರ್ಕಾರ (Modi Government) ಆಧಾರ್ ಕಾರ್ಡ್ (Aadhaar Card) ಮೇಲೆ ಸುಲಭವಾಗಿ ಸಾಲ ನೀಡುತ್ತಿದೆ ಎಂಬ ಸಂದೇಶವೊಂದು ವೈರಲ್ ಆಗಿದೆ. ನಿಮಗೂ ಇಂತಹ ಸಂದೇಶ ಬಂದಿದ್ದರೆ ಅದಕ್ಕೆ ಬಲಿಯಾಗುವ ಮುನ್ನ ಈ ಸುದ್ದಿ ಓದಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸೋಷಿಯಲ್ ಮೀಡಿಯಾ (Social Media) ದಲ್ಲಿ ಕ್ಷಣ ಮಾತ್ರದಲ್ಲಿ ಯಾವ ಸುದ್ದಿ ಬೇಕಾದರೂ ವೈರಲ್ (Viral)​ ಆಗಿಬಿಡುತ್ತದೆ. ಯಾರು ಬೇಕಾದರೂ ಇಲ್ಲಿ ಒಂದೇ ದಿನದಲ್ಲಿ ಸ್ಟಾರ್ (Star)​ ಪಟ್ಟ ಪಡೆದುಕೊಳ್ಳಬಹುದು. ಸೂಪರ್​ ಸ್ಟಾರ್ (Super Star)​ ಕೂಡ ಒಂದೇ ದಿನದಲ್ಲಿ ಡಮ್ಮಿ ಆಗಬಹುದು. ಸೋಷಿಯಲ್​ ಮೀಡಿಯಾಗೆ ಅಷ್ಟು ಪವರ್​ ಇದೆ. ಕೆಲವೊಂದು ಭಾರಿ ಫೇಕ್​ ನ್ಯೂಸ್ (Fake News) ​ಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಹಬ್ಬಿರುತ್ತೆ. ಅದನ್ನು ನಂಬಿ ಹಲವರು ಮೋಸ ಹೋಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಏನೆಲ್ಲಾ ವೈರಲ್ ಆಗುತ್ತೋ ಗೊತ್ತಿಲ್ಲ. ಮೋದಿ ಸರ್ಕಾರ (Modi Government) ಆಧಾರ್ ಕಾರ್ಡ್ (Aadhaar Card) ಮೇಲೆ ಸುಲಭವಾಗಿ ಸಾಲ ನೀಡುತ್ತಿದೆ ಎಂಬ ಸಂದೇಶವೊಂದು ವೈರಲ್ ಆಗಿದೆ. ನಿಮಗೂ ಇಂತಹ ಸಂದೇಶ ಬಂದಿದ್ದರೆ ಅದಕ್ಕೆ ಬಲಿಯಾಗುವ ಮುನ್ನ ಈ ಸುದ್ದಿ ಓದಿ.

ಆಧಾರ್​​ ಕಾರ್ಡ್ ಮೇಲೆ ಸರ್ಕಾರ ಸಾಲ ಕೊಡುತ್ತೆ!

ಕೇಂದ್ರ ಸರ್ಕಾರ ಯುವಜನತೆ ಮತ್ತು ನಿರುದ್ಯೋಗಿಗಳಿಗೆ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸುಲಭ ಸಾಲ ನೀಡುವ ಕುರಿತು ಸರ್ಕಾರವು ಈಗಾಗಲೇ ಮುದ್ರಾ ಕರ್ಜ್ ಯೋಜನೆ ಆರಂಭಿಸಿದ್ದು, ಯುವಕರಿಗೆ ಉದ್ಯೋಗ ಆರಂಭಿಸಲು ಕಡಿಮೆ ದರದಲ್ಲಿ ಸುಲಭ ಸಾಲ ನೀಡಲಾಗುತ್ತಿದೆ.  ಈ ರೀತಿಯ ಸಂದೇಶವೊಂದು ಕಳೆದ ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ವೈರಲ್ ಆಗುತ್ತಿರುವ ಸಂದೇಶದ ಬಗ್ಗೆ ಸರ್ಕಾರ ಜನರನ್ನು ಎಚ್ಚರಿಸಿದೆ.

5 ಲಕ್ಷ ಸಾಲ ಸಿಗುತ್ತೆ ಅಂತ ಫೇಕ್​ ನ್ಯೂಸ್​!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಸಂದೇಶದಲ್ಲಿ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್‌ನಲ್ಲಿರುವ ಎಲ್ಲಾ ನಾಗರಿಕರಿಗೆ 4.78 ಲಕ್ಷ ರೂಪಾಯಿ ಸಾಲವನ್ನು ನೀಡುತ್ತಿದೆ ಎಂದು ಹೇಳಲಾಗಿದೆ. ಆಧಾರ್ ಕಾರ್ಡ್ ಹೊಂದಿರುವವರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ, ನಿರುದ್ಯೋಗಿ ಯುವಕರಿಗೆ ಸರ್ಕಾರ 6,000 ರೂ ಭತ್ಯೆ ನೀಡುತ್ತಿದೆ ಎಂದು ವೈರಲ್ ಸಂದೇಶವೊಂದು ಹೇಳಿಕೊಂಡಿತ್ತು. ದರ ನೋಂದಣಿ ಕೂಡ ಪ್ರಾರಂಭವಾಗಿದೆ. ಈ ರೀತಿ ಸೋಷಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಈ ಸುದ್ದಿ ವೈರಲ್​ ಆಗಿತ್ತು.


ಇದನ್ನೂ ಓದಿ: 5 ವರ್ಷದೊಳಗಿನ ಮಕ್ಕಳಿಗೆ ರೈಲಿನಲ್ಲಿ ಟೆಕೆಟ್ ತೆಗೆದುಕೊಳ್ಳಬೇಕಾ?

ಸರ್ಕಾರ ಕೊಟ್ಟ ಎಚ್ಚರಿಕೆ ಏನು?

ವೈರಲ್ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ, ಪಿಐಬಿ ಪರವಾಗಿ ಟ್ವೀಟ್ ಮಾಡುವ ಮೂಲಕ ವಿವರಣೆಯನ್ನು ನೀಡಲಾಗಿದೆ. ಈ ಹಕ್ಕು ಸಂಪೂರ್ಣ ಬೋಗಸ್ ಮತ್ತು ಅಂತಹ ಯಾವುದೇ ಸಾಲವನ್ನು ಸರ್ಕಾರ ನೀಡಿಲ್ಲ ಎಂದು ಪಿಐಬಿ ಹೇಳಿದೆ. ಇಂತಹ ಸಂದೇಶಗಳನ್ನು ಹಂಚಿಕೊಳ್ಳಬೇಡಿ ಎಂದು ಪಿಐಬಿ ಜನರಿಗೆ ಸೂಚಿಸಿದೆ. ವಂಚಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಈ ರೀತಿಯ ವಂಚನೆಯನ್ನು ಬಳಸುತ್ತಾರೆ, ಅವರ ಖಾತೆಗಳನ್ನು ಪ್ರವೇಶಿಸಲು ಸುಲಭವಾಗುತ್ತದೆ ಎಂದು ಪಿಐಬಿ ಹೇಳಿದೆ.

ಇದನ್ನೂ ಓದಿ: 200 ರೂಪಾಯಿಗೆ 28 ಲಕ್ಷ; ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದವರ ಜೀವನ ಸೇಫ್

ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಅನೇಕ ಬ್ಯಾಂಕ್‌ಗಳು ಆಧಾರ್ ಮೂಲಕ ವೈಯಕ್ತಿಕ ಸಾಲ ನೀಡುತ್ತವೆ ಎಂದು ಬ್ಯಾಂಕಿಂಗ್ ತಜ್ಞ ಅಶ್ವಿನಿ ರಾಣಾ ಹೇಳುತ್ತಾರೆ. ಆಧಾರ್ ಅನ್ನು ನಿಮ್ಮ ಪ್ರಾಥಮಿಕ ಗುರುತಿನ ಚೀಟಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ಸಾಲಗಳಿಗೆ ಯಾವುದೇ ಮೇಲಾಧಾರ ಅಗತ್ಯವಿಲ್ಲ. KYC ನಂತರ, ಬ್ಯಾಂಕ್‌ಗಳು ಸಂಬಳ ಸ್ಲಿಪ್ ಅಥವಾ ಇತರ ದಾಖಲೆಗಳಿಲ್ಲದೆ ಆಧಾರ್ ಮೂಲಕ 1 ಲಕ್ಷದವರೆಗೆ ಸಾಲವನ್ನು ನೀಡುತ್ತವೆ. ಆದರೆ ಸಾಲ ಪಡೆಯುವುದು ನಿಮ್ಮ ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ನಿಮ್ಮ CIBIL ಸ್ಕೋರ್ 700 ಕ್ಕಿಂತ ಹೆಚ್ಚಿದ್ದರೆ ನೀವು ಸುಲಭವಾಗಿ ಸಾಲ ಪಡೆಯಬಹುದು.
Published by:Vasudeva M
First published: