TAX ಸೇರಿದಂತೆ March ತಿಂಗಳಲ್ಲಿ ಈ 5 ಕೆಲಸಗಳನ್ನು ಮಾಡಲೇಬೇಕು.. ಹಣದ ವಿಷ್ಯ ತಡ ಮಾಡಬೇಡಿ

ತೆರಿಗೆ ಉಳಿತಾಯದ ಬಗ್ಗೆ ಗಮನಹರಿಸಬೇಕಾದ ತಿಂಗಳು ಮಾರ್ಚ್. ವಿಳಂಬವಾದ ತೆರಿಗೆಯನ್ನು ಕಟ್ಟುವ ಸಮಯದಿಂದ ಹಿಡಿದು ಆಧಾರ್, ಪಾನ್ ಲಿಂಕ್ ಮಾಡುವವರೆಗಿನ ಮಹತ್ತರ ಕಾರ್ಯಗಳು ಮಾರ್ಚ್ ನಲ್ಲಿಯೇ ಮಾಡಬೇಕಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಜನಸಾಮಾನ್ಯರಿಗೆ ಮಾರ್ಚ್ ತಿಂಗಳು (March Month) ಮುಂಬರುವ ಸುಡು ಬಿಸಿಲಿನ ಬೇಸಿಗೆಯ (Summer) ಪ್ರಾರಂಭದ ಹಂತವಾಗಿ ಕಂಡು ಬಂದರೆ, ಮಕ್ಕಳಿಗೆ ವಾರ್ಷಿಕ ಪರೀಕ್ಷೆ (Exams) ನಡೆಯುವ ಸಮಯವಿದು. ಹಾಗಾಗಿ ಮಾರ್ಚ್ ಎಲ್ಲರಿಗೂ ಅಷ್ಟೊಂದು ಪ್ರಿಯವಾದ ತಿಂಗಳು ಎಂದು ಹೇಳಲು ಸಾಧ್ಯವಿಲ್ಲ. ಇನ್ನೊಂದೆಡೆ ಮಾರ್ಚ್ ಆರ್ಥಿಕವಾಗಿಯೂ ಜನರ ಮನದಲ್ಲಿ ಅಚ್ಚಳಿಯದೆ ನೆನಪುಳಿಯುವ ತಿಂಗಳು. ಏಕೆಂದರೆ, ಮಾರ್ಚ್ ತಿಂಗಳು ದೇಶದಲ್ಲಿ ಆರ್ಥಿಕ ವರ್ಷದ (Financial Year) ಮುಕ್ತಾಯದ ಅವಧಿ. ಆ ಮೂಲಕ ಮುಂದಿನ ಹೊಸ ಆರ್ಥಿಕ ವರ್ಷಕ್ಕೆ ಯೋಜನೆಗಳನ್ನು ರೂಪಿಸುವ ಅವಧಿಯೂ ಹೌದು. ಹಾಗಾಗಿ ಮಾರ್ಚ್ ತಿಂಗಳಿನಲ್ಲಿ ಮರೆಯದೆ ಮಾಡಬೇಕಾಗಿರುವ ಕೆಲವು ಪ್ರಮುಖ ಕೆಲಸಗಳಿವೆ. ಮುಂದಿನ ವರ್ಷದಲ್ಲಿ ತೆರಿಗೆ ಉಳಿತಾಯದ ಬಗ್ಗೆ ಗಮನಹರಿಸಬೇಕಾದ ತಿಂಗಳು ಮಾರ್ಚ್. ವಿಳಂಬವಾದ ತೆರಿಗೆಯನ್ನು ಕಟ್ಟುವ ಸಮಯದಿಂದ ಹಿಡಿದು ಆಧಾರ್, ಪಾನ್ ಲಿಂಕ್ ಮಾಡುವವರೆಗಿನ ಮಹತ್ತರ ಕಾರ್ಯಗಳು ಮಾರ್ಚ್ ನಲ್ಲಿಯೇ ಮಾಡಬೇಕಾಗಿರುವುದರಿಂದ ಈ ತಿಂಗಳು ಸಾಕಷ್ಟು ವಿಶೇಷವೂ ಎನಿಸಿಕೊಳ್ಳುತ್ತದೆ.

  ಮಾರ್ಚ್ ತಿಂಗಳಿನಲ್ಲಿ ನೀವು ಮಾಡಬೇಕಾಗಿರುವ ಪ್ರಮುಖ ಕೆಲಸಗಳು

  1)  ಮುಂದಿನ ಆರ್ಥಿಕ ವರ್ಷದಲ್ಲಿ ತೆರಿಗೆ ಉಳಿಸಲು ನೀವು ಯೋಜಿಸುತ್ತಿದ್ದರೆ ಮಾರ್ಚ್ ತಿಂಗಳಿನಲ್ಲೇ ಅದನ್ನು ಮಾಡಬೇಕಾಗಿರುವುದು ಮಹತ್ವವಾಗಿದೆ. ಬಹಳಷ್ಟು ಜನ ಇದನ್ನು ನಿರ್ಲಕ್ಷಿಸುತ್ತ ಇದನ್ನು ಮುಂದೆ ಹಾಕುತ್ತ ಹೋಗಿ ಕೊನೆಯಲ್ಲಿ ಅದರ ತೀವ್ರತೆ ಹೆಚ್ಚಿದಾಗ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡಿಯೇ ಬಿಡುತ್ತಾರೆ. ಹಾಗಾಗಿ, ನೀವು ಆ ರೀತಿಯ ತಪ್ಪುಗಳನ್ನು ಮಾಡದಂತೆ ಬಯಸಿದ್ದರೆ ನಿಮ್ಮ ಯೋಜನೆಗಳನ್ನು ಮಾರ್ಚ್ ನಲ್ಲಿಯೇ  ರೂಪಿಸಿ.

  2) ITR ಸಲ್ಲಿಸುವ ಗಡುವು: ಹಣಕಾಸು ವರ್ಷ 2020-21 ಅಥವಾ ಆ ಪ್ರಸಕ್ತ ಸಾಲಿನ ಅಸ್ಸೆಸ್ಮೆಂಟ್ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಗಡುವು ಡಿಸೆಂಬರ್ 31, 2021 ಆಗಿತ್ತು. ಆದಾಗ್ಯೂ, ಇನ್ನೂವರೆಗೂ ಯಾರು ರ್ಟರ್ನ್ ಸಲ್ಲಿಸದವರು ಮಾರ್ಚ್ 31, 2022 ರವರೆಗೆ ತಡವಾಗಿ ರಿಟರ್ನ್ ಸಲ್ಲಿಸಲು ಅವಕಾಶವಿದೆ. ಆದರೆ ಇದಕ್ಕೆ ಹೆಚ್ಚುವರಿ ದಂಡ ಮತ್ತು ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗಬಹುದು.

  ಇದನ್ನೂ ಓದಿ: Income Tax: ಈ ರೀತಿ ಹಣದ ವಹಿವಾಟು ಮಾಡಿದ್ರೆ ನಿಮ್ಮ ಮನೆಗೆ ಐಟಿ ನೋಟಿಸ್ ಬರೋದು ಗ್ಯಾರಂಟಿ..!

  ತಡವಾದ ರಿಟರ್ನ್ ಎಂದರೆ ಏನು ಎಂದು ಕೆಲವರು ಕೇಳಬಹುದು. ಆದಾಯ ತೆರಿಗೆ ನಿಯಮಗಳಲ್ಲಿ ನಮೂದಿಸಲಾಗಿರುವಂತೆ ನಿಗದಿತ ದಿನಾಂಕ ಬಿಟ್ಟು ತದನಂತರ ಸಲ್ಲಿಸುವ ರಿಟರ್ನ್ ಅನ್ನು ತಡವಾದ ಆದಾಯ ತೆರಿಗೆ ರಿಟರ್ನ್ ಎಂದು ಕರೆಯಲಾಗುತ್ತದೆ. ಆದಾಯ ತೆರಿಗೆ (ಐ-ಟಿ) ಕಾಯಿದೆಯ ಸೆಕ್ಷನ್ 234 ಎಫ್ ಅಡಿಯಲ್ಲಿ ತಡವಾದ ರಿಟರ್ನ್ ಸಲ್ಲಿಸುವಾಗ ಹೆಚ್ಚಿನ ದಂಡವನ್ನು ತೆರಬೇಕಾಗಿರುತ್ತದೆ.

  3) ಪಾನ್-ಆಧಾರ್ ಜೋಡಣೆ : ನೆನಪಿಡಿ, ಮಾರ್ಚ್ 31, 2022, ನಿಮ್ಮ ಪರ್ಮನೆಂಟ್ ಅಕೌಂಟ್ ನಂಬರ್ ಅಂದರೆ ಪ್ಯಾನ್ (PAN) ಅನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕವಾಗಿದೆ. ಈಗ ನೀಡಲಾಗಿರುವ ಗಡುವಿನೊಳಗೆ ನೀವು ಈ ಜೋಡಣೆ ಕಾರ್ಯ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಬಹುದು ಮತ್ತು ತದನಂತರ ನೀವು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಬಂದಾಗ 1,000 ರೂಪಾಯಿಗಳ ಶುಲ್ಕವನ್ನು ಕೊಡಬೇಕಾಗುತ್ತದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡದಿದ್ದರೆ, ಮ್ಯೂಚುವಲ್ ಫಂಡ್‌ಗಳು, ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲು ಅಥವಾ ಬ್ಯಾಂಕ್ ಖಾತೆಯನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಈ ಎಲ್ಲ ಸಂದರ್ಭಗಳಲ್ಲಿ ಪ್ಯಾನ್ ಕಾರ್ಡ್ ಅನ್ನು ಒದಗಿಸುವುದು ಅತ್ಯಗತ್ಯವಾಗಿರುತ್ತದೆ.

  ಈ ಲಿಂಕಿಂಗ್ ಕಾರ್ಯವನ್ನು ನೀವು 567678 ಅಥವಾ 56161 ಗೆ SMS ಕಳುಹಿಸುವ ಮೂಲಕ ಮತ್ತು UIDPAN ಟೈಪ್ ಮಾಡುವ ಮೂಲಕ ಇಲ್ಲವೆ ಇ-ಫೈಲಿಂಗ್ ವೆಬ್‌ಸೈಟ್ ಮೂಲಕ ಸುಲಭವಾಗಿ ಮಾಡಬಹುದು ಅಥವಾ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ಮತ್ತು UTIITSL ನ PAN ಸೇವಾ ಕೇಂದ್ರಗಳ ಮೂಲಕ ಆಫ್‌ಲೈನ್‌ನಲ್ಲಿಯೂ ಮಾಡಬಹುದು.

  4) ನಿಮ್ಮ ಬ್ಯಾಂಕ್ ಖಾತೆಗಳಲ್ಲಿ KYC ಅಪ್‌ಡೇಟ್ ಮಾಡಿ : ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಕೆವೈಸಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31, 2022. ಈ ಹಿಂದೆ ಇದಕ್ಕಾಗಿ ಡಿಸೆಂಬರ್ 31, 2021ರವರೆಗೆ ಗಡುವು ನೀಡಲಾಗಿತ್ತು. ಆದರೆ, ದೇಶದಲ್ಲುಂಟಾದ ಕೋವಿಡ್ ಹಾಗೂ ಒಮಿಕ್ರಾನ್ ಸಂಕಷ್ಟಗಳಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ತದನಂತರ ಈ ಗಡುವನ್ನು ಮಾರ್ಚ್ 31, 2022 ರವರೆಗೆ ವಿಸ್ತರಿಸಿದೆ. ಗ್ರಾಹಕರು ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಒಳಗೊಂಡಿರುವ ಸ್ವಯಂ-ದೃಢೀಕರಿಸಿದ ದಾಖಲೆಗಳ ಜೊತೆಗೆ ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಕೆವೈಸಿಯನ್ನು ಅಪ್ಡೇಟ್ ಮಾಡಿಕೊಳ್ಳಬಹುದು.

  ಇದನ್ನೂ ಓದಿ: Bank​ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ: FD ಮೇಲಿನ ಬಡ್ಡಿ ದರ ಹೆಚ್ಚಳ

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಂತಹ ಕೆಲವು ಪ್ರಮುಖ ಬ್ಯಾಂಕ್‌ಗಳು ಗ್ರಾಹಕರು ತಮ್ಮ ಕೆವೈಸಿ ವಿವರಗಳನ್ನು ಇಮೇಲ್ ಅಥವಾ ಪೋಸ್ಟ್ ಮೂಲಕ ನವೀಕರಿಸುವಂತೆ ಅನುಕೂಲವಾಗಲು ತಮ್ಮ ದಾಖಲೆಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿವೆ. ಈ ಗಡುವಿನೊಳಗೆ ನೀವು ಕೆವೈಸಿ ವಿವರ ಸಲ್ಲಿಸದಿದ್ದಲ್ಲಿ ಬ್ಯಾಂಕ್ ನಿಮ್ಮ ಖಾತೆಯನ್ನು ಫ್ರೀಜ್ ಮಾಡಬಹುದು.

  5) ಅಡ್ವಾನ್ಸ್ ತೆರಿಗೆ ಕಂತಿನ ಸಮ: ಮಾರ್ಚ್ ಎಂದರೆ ಮುಂಗಡ ತೆರಿಗೆ ಸಲ್ಲಿಸುವ ಗಡುವು ಸಮೀಪಿಸುತ್ತಿದೆ ಎಂದರ್ಥ. ಅಂದಾಜು ವರ್ಷಕ್ಕೆ ರೂ 10,000 ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆ ಕಟ್ಟಬೇಕಾಗಿರುವವರು ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮುಂಗಡ ತೆರಿಗೆಯನ್ನು ಆರ್ಥಿಕ ವರ್ಷದಲ್ಲಿಯೇ ನಾಲ್ಕು ಕಂತುಗಳಲ್ಲಿ ಪಾವತಿಸಬೇಕು. ಮುಂಗಡ ತೆರಿಗೆಯ ನಾಲ್ಕನೇ ಕಂತನ್ನು ಪಾವತಿಸಲು ಕೊನೆಯ ದಿನಾಂಕ ಮಾರ್ಚ್ 15, 2022 ಆಗಿದೆ.

  ಇದು ಎಲ್ಲಾ ತೆರಿಗೆದಾರರು, ಸಂಬಳದಾರರು, ಸ್ವತಂತ್ರೋದ್ಯೋಗಿಗಳು ಮತ್ತು ವ್ಯವಹಾರಗಳಿಗೆ ಅನ್ವಯಿಸುತ್ತದೆ. ಆದರೆ, ಹಿರಿಯ ನಾಗರಿಕ ಅಂದರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು ವ್ಯಾಪಾರ ಅಥವಾ ವೃತ್ತಿಯಿಂದ ಆದಾಯವನ್ನು ಗಳಿಸುತ್ತಿಲ್ಲದವರು ಮುಂಗಡ ತೆರಿಗೆಯನ್ನು ಪಾವತಿಸುವ ಅವಶ್ಯಕತೆಯಿಲ್ಲ. ಸಂಬಳದ ಹೊರತಾಗಿ ಯಾವುದೇ ಆದಾಯವನ್ನು ಹೊಂದಿರದ ವೇತನದಾರರು ಮುಂಗಡ ತೆರಿಗೆ ಕಂತುಗಳನ್ನು ಪಾವತಿಸಬೇಕಾಗಿಲ್ಲ, ಏಕೆಂದರೆ ಉದ್ಯೋಗದಾತರು ಅನ್ವಯವಾಗುವ ತೆರಿಗೆಯನ್ನು ಮಾಸಿಕ ಸಂಬಳದಿಂದ ಕಡಿತಗೊಳಿಸಿ ಇಲಾಖೆಗೆ ಪಾವತಿಸುತ್ತಿರುತ್ತಾರೆ. ಹಾಗಿಲ್ಲದಿದ್ದಲ್ಲಿ ಇದನ್ನು ಸಮಯಕ್ಕನುಸಾರ ಪಾವತಿಸುವುದು ಒಳ್ಳೆಯದು, ಇಲ್ಲದಿದ್ದಲ್ಲಿ ಇದಕ್ಕೆ ದಂಡ ವಿಧಿಸಲಾಗುತ್ತದೆ.
  Published by:Kavya V
  First published: