ಉತ್ತಮವಾದ ಬ್ಯುಸಿನೆಸ್ ಪ್ಲಾನ್‌ಗಳನ್ನು (Best Business Plans) ಕಾರ್ಯಗತಗೊಳಿಸುವುದು ಕಷ್ಟವಾಗಬಹುದು. ಆದರೆ ಸರಿಯಾದ ಯೋಜನೆ (Correct Plan) ಮತ್ತು ಸಿದ್ಧತೆಯೊಂದಿಗೆ ನೀವು ಸುಲಭವಾಗಿ ಸಣ್ಣ ವ್ಯಾಪಾರವನ್ನು (Small Business) ಪ್ರಾರಂಭಿಸಬಹುದು. ಆದರೆ ಬ್ಯುಸಿನೆಸ್‌ಗೆ ಮುಖ್ಯವಾಗಿ ಪರಿಶ್ರಮ, ಸಮಯ, ಶಕ್ತಿ ಮತ್ತು ಬಂಡವಾಳದ ಅಗತ್ಯವಿರುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವ ವಿವಿಧ ವ್ಯವಹಾರಗಳನ್ನು ನೀವು ನಡೆಸಬಹುದು. ಆ ವ್ಯಾಪಾರವನ್ನು ಮಾಡುವುದರಿಂದ ಮಾತ್ರ ನೀವು ಲಕ್ಷಗಳಲ್ಲಿ ಗಳಿಸಬಹುದು. ಆದ್ದರಿಂದ, ನೀವು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸಬಹುದು.
ಆದ್ದರಿಂದ ನೀವು ಬ್ಯುಸಿನೆಸ್ ಮಾಡಲು ಯೋಚಿಸುತ್ತಿದ್ದರೆ ಹಾಗೆಯೇ ಯಾವ ವ್ಯಾಪಾರ ಮಾಡಬೇಕು ಎಂದು ಗೊತ್ತಾಗದೇ ಗೊಂದಲದಲ್ಲಿದ್ದರೆ ಇಲ್ಲಿ ಕೆಲವು ಲಾಭ ತಂದುಕೊಡುವ ಬ್ಯುಸಿನೆಸ್ ಐಡಿಯಾಗಳನ್ನು ನೀಡಲಾಗಿದೆ.
ಸಲೂನ್ ಬ್ಯುಸಿನೆಸ್ : ಸಲೂನ್‌ಗಳು ಮತ್ತು ಪಾರ್ಲರ್‌ಗಳು ಹಣವನ್ನು ಗಳಿಸಲು ಉತ್ತಮ ಮಾರ್ಗವಾಗಿದೆ. ಈ ವ್ಯವಹಾರವನ್ನು ಎಲ್ಲಿಯಾದರೂ ಪ್ರಾರಂಭಿಸುವ ಮೂಲಕ ನೀವು ಸಾಕಷ್ಟು ಹಣವನ್ನು ಗಳಿಸಬಹುದು. ಇದಕ್ಕಾಗಿ ಉತ್ತಮ ತರಬೇತಿ ಪಡೆದ ಉದ್ಯೋಗಿಗಳು ಮತ್ತು ಮೂಲಸೌಕರ್ಯಗಳ ಅಗತ್ಯವಿದೆ. ಅಲ್ದೇ ಇದನ್ನು ಚಿಕ್ಕದಾಗಿಯೂ ಪ್ರಾರಂಭವಾಗಬಹುದು. ಅಲ್ಲದೇ ಬಳಸುವ ಉತ್ಪನ್ನಗಳು ಗ್ರಾಹಕರಿಗೆ ಸುರಕ್ಷಿತವಾಗಿವೆ ಎನಿಸಿದರೆ ಸಲೂನ್ ವ್ಯವಹಾರವು ತ್ವರಿತವಾಗಿ ಬೆಳೆಯುತ್ತದೆ.
ಕಾರ್ ವಾಶಿಂಗ್ ಬಿಸಿನೆಸ್: ಆಟೋಮೊಬೈಲ್ ಉದ್ಯಮದ ಬೆಳವಣಿಗೆ ಮತ್ತು ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಮೋಟಾರ್ ಸೈಕಲ್‌ಗಳು ಮತ್ತು ಆಟೋಮೊಬೈಲ್‌ಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಆದರೆ ಅದಕ್ಕೆ ಸರಿಯಾದ ನಿರ್ವಹಣೆಯ ಅಗತ್ಯವಿರುತ್ತದೆ. ಇಂದಿನ ಬ್ಯುಸಿ ಲೈಫ್‌ನಲ್ಲಿ ಜನರಿಗೆ ತಮ್ಮ ವಾಹನಗಳನ್ನು ಕ್ಲೀನ್ ಮಾಡಲು ಸಮಯ ಇರೋದಿಲ್ಲ. ಹಾಗಾಗಿ ಈ ಅವಕಾಶವು ಕಾರ್ ವಾಶ್ ವ್ಯವಹಾರದಲ್ಲಿ ಲಾಭ ಗಳಿಸಲು ಸಹಕಾರಿ. ಈ ವ್ಯವಹಾರವನ್ನು ಪ್ರಾರಂಭಿಸಲು ನೀವು ಸ್ವಚ್ಛಗೊಳಿಸುವ ಯಂತ್ರವನ್ನು ಖರೀದಿಸಬೇಕಾಗುತ್ತದೆ. ಈ ವ್ಯವಹಾರದಿಂದ ನೀವು ಪ್ರತಿದಿನ ಸಾಕಷ್ಟು ಹಣವನ್ನು ಗಳಿಸಬಹುದು.
ದಿನಸಿ ಅಂಗಡಿ : ಬೇಳೆ ಕಾಳು, ಮಸಾಲೆಗಳು, ಧಾನ್ಯಗಳು ಮತ್ತು ಗೃಹೋಪಯೋಗಿ ವಸ್ತುಗಳು ಮುಂತಾದವು ಕಿರಾಣಿ ಅಂಗಡಿಗಳಲ್ಲಿ ಮಾರಾಟವಾಗುವ ಸಾಮಾನ್ಯ ವಸ್ತುಗಳು. ಕಿರಾಣಿ ಅಂಗಡಿಯಲ್ಲಿ ನೀವು ಸಾಕಷ್ಟು ಹಣವನ್ನು ಗಳಿಸಬಹುದು. ನಿಮ್ಮ ಅಂಗಡಿಯಲ್ಲಿ ದೈನಂದಿನ ಅಗತ್ಯಗಳನ್ನು ಸಂಗ್ರಹಿಸುವ ಮೂಲಕ ನಿಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ಸಾಹಸಕ್ಕೆ ನೀವು ಸ್ವಲ್ಪ ಬಂಡವಾಳ ಹಾಕಬೇಕಾಗುತ್ತದೆ.
ಇದನ್ನೂ ಓದಿ: ಬೇಸಿಗೆ ಬಂದ್ರೆ ಸಾಕು ಈ ಉದ್ಯಮಕ್ಕೆ ಹೆಚ್ಚುತ್ತೆ ಬೇಡಿಕೆ! ಈ ಸರಳ ಬ್ಯುಸಿನೆಸ್ ನೀವೂ ಆರಂಭಿಸಿ ತಿಂಗಳಿಗೆ 3 ಲಕ್ಷ ಗಳಿಸಿ
ಕ್ಲೌಡ್ ಕಿಚನ್ : ಡೆಲಿವರಿ ಕಿಚನ್ ಅಥವಾ ವರ್ಚುವಲ್ ಕಿಚನ್ ಎಂದು ಕರೆಸಿಕೊಳ್ಳುವ ಕ್ಲೌಡ್ ಕಿಚನ್‌ಗೆ ಇದೊಂದು ವಾಣಿಜ್ಯ ಅಡುಗೆ ಸ್ಥಳವಾಗಿದೆ. ಅದು ಆಹಾರ ತಯಾರಿಕೆ ವ್ಯವಹಾರಗಳು, ಸೌಲಭ್ಯಗಳು ಮತ್ತು ಸೇವೆಗಳನ್ನು ನೀಡುತ್ತದೆ. ಕ್ಲೌಡ್ ಕಿಚನ್ ಎನ್ನುವುದು ಕೇಂದ್ರೀಕೃತ ವಾಣಿಜ್ಯ ಆಹಾರ ಉತ್ಪಾದನಾ ಸೌಲಭ್ಯವಾಗಿದ್ದು, ಅನೇಕ ರೆಸ್ಟೋರೆಂಟ್‌ಗಳು ಸಂಪನ್ಮೂಲಗಳನ್ನು ಹಂಚಿಕೊಳ್ಳಬಹುದು. ಭಾರತದಲ್ಲಿ ಕ್ಲೌಡ್ ಕಿಚನ್‌ಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ 50% ಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ.
ಟಿಫಿನ್ ಸರ್ವೀಸ್ ಬ್ಯುಸಿನೆಸ್ : ರುಚಿಕರವಾದ ಊಟ ಯಾರಿಗೆ ಬೇಡ ಹೇಳಿ? ಇಂದು ಅನೇಕ ಗ್ರಾಹಕರು ರುಚಿಕರವಾದ, ಶುದ್ಧವಾದ ಆಹಾರವನ್ನು ಹೆಚ್ಚು ಬಯಸುತ್ತಾರೆ. ಹಾಗಾಗಿ ನೀವು ಅಡುಗೆ ಮಾಡುವುದನ್ನು ಆನಂದಿಸಿದರೆ ಅದನ್ನೇ ಮಾರಾಟ ಮಾಡಿ ಆದಾಯ ಗಳಿಸಬಹುದು. ಇಂಟರ್ನೆಟ್ ಬಳಕೆ ಹೆಚ್ಚಾದಂತೆ ಸ್ಥಳೀಯ ಭಕ್ಷ್ಯಗಳು ಅಥವಾ ನಿರ್ದಿಷ್ಟ ಊಟಗಳನ್ನು ನೀಡಲು ಅನೇಕರು ಮುಂದೆ ಬರುತ್ತಿದ್ದಾರೆ. ಟಿಫಿನ್ ಸರ್ವೀಸ್ ಬ್ಯುಸಿನೆಸ್ ಪರಿಕಲ್ಪನೆಯು ಸರಳ ಮತ್ತು ಪರಿಣಾಮಕಾರಿಯಾಗಿದೆ. ಗ್ರಾಹಕರು ರುಚಿಕರವಾದ ಮತ್ತು ಆರೋಗ್ಯಕರ ಆಹಾರವನ್ನು ಹುಡುಕುತ್ತಿರುವಾಗ ಇದು ವಿಶೇಷವಾಗಿ ಲಾಭದಾಯಕವಾಗಬಹುದು.
ಇನ್ನು ಆನ್‌ಲೈನ್ ತರಗತಿಗಳಿಂದಲೂ ಸಾಕಷ್ಟು ಗಳಿಸಬಹುದು. ಇಂದಿನ ವಿದ್ಯಾರ್ಥಿಗಳು ಹೆಚ್ಚಾಗಿ ಆನ್‌ಲೈನ್ ಶಿಕ್ಷಣವನ್ನು ಹುಡುಕುತ್ತಿದ್ದಾರೆ. ಪದವೀಧರ ಮಟ್ಟದ ಆನ್‌ಲೈನ್ ಬೋಧಕರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ, ನೀವು ನಿರ್ದಿಷ್ಟ ವಿಷಯಗಳಲ್ಲಿ ಅಗತ್ಯವಾದ ಜ್ಞಾನವನ್ನು ಹೊಂದಿದ್ದರೆ ಮತ್ತು ಆನ್‌ಲೈನ್‌ನಲ್ಲಿ ಹಣವನ್ನು ಗಳಿಸುವ ಬಯಕೆಯನ್ನು ಹೊಂದಿದ್ದರೆ, ನೀವು ಆನ್‌ಲೈನ್ ತರಗತಿಗಳನ್ನು ನೀಡುವುದನ್ನು ಪರಿಗಣಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ