• Home
  • »
  • News
  • »
  • business
  • »
  • Business Idea: ನೀವು ಸಿಂಗಲ್​ ಪೇರೆಂಟಾ? ನಿಮ್ಗೆ ಅಂತಾನೇ 5 ಬೆಸ್ಟ್​ ಬ್ಯುಸಿನೆಸ್​ ಐಡಿಯಾ ಇಲ್ಲಿದೆ ನೋಡಿ!

Business Idea: ನೀವು ಸಿಂಗಲ್​ ಪೇರೆಂಟಾ? ನಿಮ್ಗೆ ಅಂತಾನೇ 5 ಬೆಸ್ಟ್​ ಬ್ಯುಸಿನೆಸ್​ ಐಡಿಯಾ ಇಲ್ಲಿದೆ ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂಟಿ ತಾಯಂದಿರ ಅಗತ್ಯಗಳಿಗೆ ಅನುಗುಣವಾಗಿ 5 ಸಣ್ಣ ಉದ್ಯಮಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಹೊಸ ವರ್ಷದಿಂದ ಹೊಸ ಉದ್ಯಮವನ್ನು ನಡೆಸಬೇಕು ಎಂಬ ಕನಸು ಹೊತ್ತವರು ಈ ಸಲಹೆಗಳನ್ನು ತೆಗೆದುಕೊಳ್ಳಬಹುದು.

  • Share this:

ಮನಸ್ಸು ಮಾಡಿದರೆ ಯಾವುದನ್ನಾದರೂ ಸಾಧಿಸಬಹುದು. ಆದರೆ ಆ ಸಾಧನೆ ಕಠಿಣ ಶ್ರಮ ಕೇಳುತ್ತದೆ. ಹೀಗೆ ಕಠಿಣ ಶ್ರಮ (Hard Work) ಹಾಗೂ ಸಾಧಿಸುವ ಮನಸ್ಸಿದ್ದರೆ ಖಂಡಿತಾ ನೀವು ಅಂದುಕೊಂಡಿದ್ದನ್ನು ಮಾಡಬಹುದು. ಅಂದಹಾಗೆ ಒಂಟಿಯಾಗಿ ಮಕ್ಕಳನ್ನು ಬೆಳೆಸುವುದು ತಾಯಿಯಾದವಳಿಗೆ (Single Parent) ಕಷ್ಟದ ಕೆಲಸವೇ. ಮಕ್ಕಳನ್ನು ನೋಡಿಕೊಂಡು, ಕೆಲಸವನ್ನು ನಿಭಾಯಿಸುವುದು ಎಂಥವರಿಗಾದರೂ ಕಷ್ಟವೇ ಆಗುತ್ತದೆ. ಅದರಲ್ಲೂ ಜೀವನವನ್ನು ಒಂಟಿ (Alone) ಯಾಗಿ ನಿಭಾಯಿಸುವ ತಾಯಂದಿರಿಗೆ ಇನ್ನಷ್ಟ ಕಷ್ಟ ಎನ್ನಬಹುದು. ಅಂಥ ಸಿಂಗಲ್‌ ಪೇರೆಂಟ್‌ ಆಗಿರೋ ತಾಯಂದಿರಿಗೆ ಸಮಯ ಹೊಂದಾಣಿಕೆಯಾಗುವಂಥ ವೃತ್ತಿಯನ್ನು ಹುಡುಕುವುದೂ ಕಷ್ಟ.


ತಾಯಂದಿರಿಗಾಗಿ ಇಲ್ಲಿವೆ 5 ಸೂಪರ್ ಬ್ಯುಸಿನೆಸ್‌ ಐಡಿಯಾಗಳು!


ಕೆಲವೊಮ್ಮೆ ಸಮಯದ ಅಭಾವದಿಂದ ಬ್ಯುಸಿನೆಸ್‌ ಮಾಡುವಂಥ ತಮ್ಮ ಕನಸನ್ನು ಅಂಥವರು ತ್ಯಜಿಸಬಹುದು. ಆದ್ರೆ ಸ್ವತಂತ್ರವಾಗಿ ಜೀವನ ನಡೆಸುವುದು ಬಹಳಷ್ಟು ಜನರ ಕನಸು. ಅದರಲ್ಲೂ ಒಂಟಿ ತಾಯಂದಿರ ಅಗತ್ಯಗಳಿಗೆ ಅನುಗುಣವಾಗಿ 5 ಸಣ್ಣ ಉದ್ಯಮಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಹೊಸ ವರ್ಷದಿಂದ ಹೊಸ ಉದ್ಯಮವನ್ನು ನಡೆಸಬೇಕು ಎಂಬ ಕನಸು ಹೊತ್ತವರು ಈ ಸಲಹೆಗಳನ್ನು ತೆಗೆದುಕೊಳ್ಳಬಹುದು.


1.ಕೇಟರಿಂಗ್‌ ಉದ್ಯಮ :


ನೀವು ಪಾಕಶಾಸ್ತ್ರದಲ್ಲಿ ಪ್ರವೀಣರಾಗಿದ್ದರೆ ಕೇಟರಿಂಗ್‌ ಬ್ಯುಸಿನೆಸ್‌ ಅನ್ನು ನೀವು ಮಾಡಬಹುದು. ಆಹಾರ ತಯಾರಿಸುವುದರಲ್ಲಿ ನೀವು ಉತ್ಸಾಹ ಹೊಂದಿದ್ದರೆ ಖಂಡಿತವಾಗಿಯೂ ಈ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ನೀವು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೊಂದಿಕೆಯಾಗುವ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು.


ಜೊತೆಗೆ, ನೀವು ಹೆಚ್ಚಿನ ಕ್ಲೈಂಟ್‌ಗಳನ್ನು ಗಳಿಸಿದಂತೆ ನಿಮ್ಮ ವ್ಯಾಪಾರವನ್ನು ಅಭಿವೃದ್ಧಿ ಪಡಿಸಬಹುದು. ಕ್ರಮೇಣ ಹತ್ತಿರದ ಈವೆಂಟ್‌ ಗಳಿಗೆ ಅಥವಾ ಬರ್ತ್‌ಡೇ ಪಾರ್ಟಿಗಳಿಗೆ ನೀವು ಫುಡ್‌ ಆರ್ಡರ್‌ ತೆಗೆದುಕೊಳ್ಳುವ ಮೂಲಕ ನಿಮ್ಮ ಬ್ಯುಸಿನೆಸ್‌ ಅನ್ನು ಅಭಿವೃದ್ಧಿಗೊಳಿಸಬಹುದು.


2.ಬೇಬಿ ಡೇಕೇರ್ ಸೆಂಟರ್:


ತಾವೇ ಬಾಸ್ ಆಗಲು ಮತ್ತು ಹೊಂದಿಕೊಳ್ಳುವ ವೇಳಾಪಟ್ಟಿಯನ್ನು ಹೊಂದಲು ಬಯಸುವ ಅಮ್ಮಂದಿರಿಗೆ ಮಕ್ಕಳ ಡೇಕೇರ್‌ ಸೆಂಟರ್‌ ಆರಂಭಿಸುವುದು ಉತ್ತಮ ಆಯ್ಕೆಯಾಗಿದೆ. ನೀವು ಇತರ ತಾಯಂದಿರಿಗೆ ಅವರ ಮಕ್ಕಳ ಅಗತ್ಯಗಳಿಗೆ ಸಹಾಯ ಮಾಡುವುದು ಮಾತ್ರವಲ್ಲದೆ, ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಸುರಕ್ಷಿತ ಮತ್ತು ಪ್ರೀತಿಯ ವಾತಾವರಣವನ್ನು ಒದಗಿಸಬಹುದು.


ಅಂದಹಾಗೆ ಡೇಕೇರ್ ಸೆಂಟರ್ ಪ್ರಾರಂಭಿಸುವುದಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನೀವು ಸರಿಯಾದ ರೀತಿಯಲ್ಲಿ ಸ್ಥಳಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಅದರಲ್ಲೂ ಹತ್ತಿರದಲ್ಲಿ ಶಾಲೆಗಳು, ಮನೆಗಳು ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ನಂತರದಲ್ಲಿ ಪರವಾನಗಿ ಪಡೆದ ಬಳಿಕ ಉದ್ಯಮ ಆರಂಭಿಸಬೇಕಾಗುತ್ತದೆ.


3.ಬ್ಲಾಗಿಂಗ್:


ಸಿಂಗಲ್ ಪೇರೆಂಟ್‌ ಆಗಿರೋ ತಾಯಂದಿರಿಗೆ ಬ್ಲಾಗಿಂಗ್ ಉತ್ತಮ ವ್ಯಾಪಾರ ಕಲ್ಪನೆಯಾಗಿದೆ. ಆದಾಯವನ್ನು ಗಳಿಸಲು ಇದು ಹೊಂದಿಕೊಳ್ಳುವ ಮಾರ್ಗವಾಗಿದೆ. ನೀವು ಅದನ್ನು ಮನೆಯಿಂದಲೇ ಮಾಡಬಹುದು.


ಯಶಸ್ವಿ ಬ್ಲಾಗ್ಅನ್ನು ಪ್ರಾರಂಭಿಸಲು, ನೀವು ಜೀವನಶೈಲಿ, ಪ್ರಯಾಣ, ಆಹಾರ ಅಥವಾ ವ್ಯಕ್ತಿತ್ವ ಅಭಿವೃದ್ಧಿಯಂತಹ ವಿಷಯಗಳಲ್ಲಿ ಆಸಕ್ತಿ ಹೊಂದಿರಬೇಕಾಗುತ್ತದೆ. ಇದಕ್ಕೆ ತಕ್ಕಂತೆ ಓದುಗರನ್ನು ಗಳಿಸಬೇಕಾಗುತ್ತದೆ. ಒಮ್ಮೆ ನೀವು ಅದನ್ನು ಮಾಡಿದ ನಂತರ, ಜಾಹೀರಾತು, ಮಾರ್ಕೆಟಿಂಗ್ ಮತ್ತು ಸಾಮಾಜಿಕ ಮಾಧ್ಯಮ ಪ್ರಚಾರ‌, ಉತ್ಪನ್ನಗಳು, ಸೇವೆಗಳ ಬಗ್ಗೆ ಬರೆದು ಅದನ್ನು ಮಾರಾಟ ಮಾಡುವ ಮೂಲಕ ನಿಮ್ಮ ಬ್ಲಾಗ್‌ನೊಂದಿಗೆ ಹಣಗಳಿಸಲು ಪ್ರಾರಂಭಿಸಬಹುದು.


4.ಟ್ಯೂಷನ್‌ ಹೇಳುವುದು:


ರಿಸರ್ಚ್ ಅಂಡ್ ಮಾರ್ಕೆಟ್ಸ್‌ನ (RM) ವರದಿಯು ಖಾಸಗಿ ಬೋಧನೆಗಾಗಿ ಜಾಗತಿಕ ಮಾರುಕಟ್ಟೆಯು 2027 ರ ವೇಳೆಗೆ US $ 218.1 ಶತಕೋಟಿಯನ್ನು ತಲುಪುತ್ತದೆ ಎಂದು ಹೇಳಿದೆ. ಹಾಗಾಗಿ ನೀವು ಸಿಂಗಲ್ ಪೇರೆಂಟ್‌ ಆಗಿದ್ದರೆ ಅಂಥ ಅಮ್ಮಂದಿರು ಖಾಸಗಿ ಬೋಧನೆಯನ್ನು ಆರಂಭಿಸಬಹುದು. ನೀವು ಶೈಕ್ಷಣಿಕ ಪರಿಣಿತರಾಗಿದ್ದು, ಭಾಷೆ ಮತ್ತು ಸಾಹಿತ್ಯದ ಉತ್ಸಾಹಿಯಾಗಿದ್ದರೆ, ನೀವು ಮಕ್ಕಳೊಂದಿಗೆ ಬೆರೆಯುವುದು ನಿಮಗೆ ಇಷ್ಟವಾಗಿದ್ದರೆ ನೀವು ಈ ಉದ್ಯಮವನ್ನು ಆರಂಭಿಸಬಹುದು. ಅಲ್ದೇ ವಿಷಯದಲ್ಲಿ ಪರಿಣತರಲ್ಲದಿದ್ದರೂ ಸಹ, ಬೋಧನಾ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ ಎಂದೇ ಹೇಳಬಹುದು.


ಇದನ್ನೂ ಓದಿ: ಓದಿದ್ದು ಎಂಬಿಎ, ಮಾಡ್ತಿರೋದು ಬಾಳೆಕಾಯಿ ಚಿಪ್ಸ್ ಬ್ಯುಸಿನೆಸ್​! ಇದ್ರಿಂದಲೇ ಕೋಟಿ ಕೋಟಿ ಸಂಪಾದನೆ


5.ಯೋಗ ಸ್ಟುಡಿಯೋವನ್ನು ಪ್ರಾರಂಭಿಸುವುದು:


ಜಗತ್ತಿನಲ್ಲಿ ಸುಮಾರು 300 ಮಿಲಿಯನ್ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಯೋಗಕ್ಕಾಗಿ ನಿಮ್ಮ ಉತ್ಸಾಹವನ್ನು ಅನುಸರಿಸಲು ನೀವು ನಿರ್ಧರಿಸಿದರೆ ನೀವು ಹೊಂದಬಹುದಾದ ಅವಕಾಶಗಳನ್ನು ಇದು ತೋರಿಸುತ್ತದೆ. ನಿಮ್ಮ ಯೋಗ ಕಲೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಮತ್ತು ಅವರು ಆರೋಗ್ಯಕರ ಮತ್ತು ಬಲಶಾಲಿಯಾಗಲು ಸಹಾಯ ಮಾಡಬಹುದು. ಈ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು.


ಅಂದಹಾಗೆ ನಿಮ್ಮ ಯೋಗ ವ್ಯವಹಾರವನ್ನು ಸ್ಥಾಪಿಸಲು ಎರಡು ಆಯ್ಕೆಗಳಿವೆ: ಫ್ರ್ಯಾಂಚೈಸಿಂಗ್ ಅಥವಾ ನಿಮ್ಮ ಸ್ವಂತ ಬ್ರ್ಯಾಂಡ್ ಅನ್ನು ರಚಿಸುವುದು. Honor Yoga, YogaOne ಅಥವಾ YogaPod ಮುಂತಾದ ಅನೇಕ ಪ್ರಸಿದ್ಧ ಬ್ರಾಂಡ್‌ಗಳು ಪ್ರಾಂಚೈಸಿಗಳನ್ನು ನೀಡುತ್ತವೆ. ಆದಾಗ್ಯೂ, ನಿಮಗೆ ಫ್ರಾಂಚೈಸಿಗಳನ್ನು ಪ್ರಾರಂಭಿಸುವುದು ಸ್ವಲ್ಪ ದುಬಾರಿ ಎನಿಸಬಹುದು.


ಇದನ್ನೂ ಓದಿ: ಆ ಉದ್ಯೋಗಿಗಳಿಗೆ ಬಂಪರ್​ ನ್ಯೂಸ್​​, ಖಾತೆ ಸೇರಲಿದೆ 50 ತಿಂಗಳ ಬೋನಸ್!


ಒಟ್ಟಿನಲ್ಲಿ ನೀವು ಒಂಟಿ ತಾಯಿಯಾಗಿದ್ದರೆ ವ್ಯಾಪಾರವನ್ನು ಪ್ರಾರಂಭಿಬೇಕೆಂದಿದ್ದರೆ ಮೇಲೆ ಪಟ್ಟಿ ಮಾಡಲಾದ ಆಯ್ಕೆಗಳಲ್ಲಿ ಒಂದನ್ನು ಪರಿಗಣಿಸಬಹುದು. ಕಠಿಣ ಪರಿಶ್ರಮ ಮತ್ತು ಮಾಡುವ ಮನಸ್ಸು ಇದ್ದರೆ ಕೈಗೊಳ್ಳುವ ಯಾವುದೇ ಸಾಹಸದಲ್ಲಿ ನೀವು ಯಶಸ್ವಿಯಾಗಬಹುದು.

Published by:ವಾಸುದೇವ್ ಎಂ
First published: