Disney Layoff: 4,000 ಉದ್ಯೋಗಿಗಳನ್ನು ಕೈಬಿಡಲಿದೆಯಂತೆ ಡಿಸ್ನಿ! ಏಪ್ರಿಲ್​ 3ಕ್ಕೆ ಡೆಡ್​ಲೈನ್​

ಸಿಇಒ ಬಾಬ್ ಇಗರ್

ಸಿಇಒ ಬಾಬ್ ಇಗರ್

ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಹಾಗೂ ಕಂಪನಿಯನ್ನು ಪುನರ್‌ ರಚನೆ ಮಾಡುವ ಕ್ರಮದ ಭಾಗವಾಗಿ ಡಿಸ್ನಿ ಉದ್ಯೋಗ ಕಡಿತದಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿದೆ.

  • Share this:
  • published by :

ಐಟಿ ಜಗತ್ತಿನಲ್ಲಿ ಉದ್ಯೋಗ ವಜಾಗೊಳಿಸುವಿಕೆಯ ಮಹಾಪರ್ವ ನಿಲ್ಲುವಂತೆ ಕಾಣುತ್ತಿಲ್ಲ. ಫೆಬ್ರವರಿಯಲ್ಲಿ ತನ್ನ ಉದ್ಯೋಗಿಗಳನ್ನು ಮುಲಾಜಿಲ್ಲದೇ ಮನೆಗೆ ಕಳುಹಿಸುವ ಆದೇಶದ ಬೆನ್ನಲ್ಲೇ ಮತ್ತೊಂದು ಹಂತದ ಲೇ-ಆಫ್‌ಗೆ ಚಿತ್ರ ನಿರ್ಮಾಣ ಸಂಸ್ಥೆ ಡಿಸ್ನಿ ಪ್ರಸ್ತುತ ಮುಂದಾಗಿದೆ. ಈಗಾಗಲೇ ಫೆಬ್ರುವರಿಯಲ್ಲಿ ಡಿಸ್ನಿ 7,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಮತ್ತೆ ಮುಂಬರುವ ಏಪ್ರಿಲ್‌ನಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಲಿದೆ ಎಂದು ವರದಿಗಳು ತಿಳಿಸಿವೆ.


ಏಪ್ರಿಲ್‌ನಲ್ಲಿ 4,000 ಉದ್ಯೋಗಿಗಳನ್ನು ಕೈಬಿಡಲಿದೆ ಡಿಸ್ನಿ


ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಹಾಗೂ ಕಂಪನಿಯನ್ನು ಪುನರ್‌ ರಚನೆ ಮಾಡುವ ಕ್ರಮದ ಭಾಗವಾಗಿ ಡಿಸ್ನಿ ಉದ್ಯೋಗ ಕಡಿತದಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿದ್ದು, ಎರಡನೇ ಹಂತದಲ್ಲಿ 4,000 ಪ್ರಸ್ತುತ ಉದ್ಯೋಗಿಗಳನ್ನು ಕೈಬಿಡಲಿದೆ ಎಂದು ಬ್ಯುಸಿನೆಸ್ ಇನ್ಸೈಡರ್, ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.


ಅಲ್ಲದೇ ಕೆಲ ಬಲ್ಲ ಮಾಹಿತಿಗಳು, ಡಿಸ್ನಿ ಈಗಾಗ್ಲೇ ವಜಾ ಮಾಡಲಿರುವ ತನ್ನ 4,000 ಉದ್ಯೋಗಿಗಳ ಪಟ್ಟಿಯನ್ನು ರಚನೆ ಮಾಡುವಂತೆ ತನ್ನ ವ್ಯವಸ್ಥಾಪಕರಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಈ ಹಂತದ ಉದ್ಯೋಗ ಕಡಿತ ಬ್ಯಾಚ್‌ಗಳ ಪ್ರಕಾರ ನಡೆಯುತ್ತದೆಯೇ ಅಥವಾ ಎಲ್ಲರನ್ನೂ ಒಟ್ಟಿಗೆ ಮನೆಗೆ ಕಳುಹಿಸಲಾಗುತ್ತದೆಯೇ ಎಂಬುದರ ಬಗ್ಗೆ ಕಂಪನಿ ಇನ್ನೂ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.


ಇದನ್ನೂ ಓದಿ: Credit Card: ಒಂದು ಕ್ರೆಡಿಟ್​ ಕಾರ್ಡ್ ಬಿಲ್​ನ ಮತ್ತೊಂದು ಕ್ರೆಡಿಟ್​ ಕಾರ್ಡ್​ನಿಂದ ಹೀಗೆ ಕಟ್ಟಿ!


ಏಪ್ರಿಲ್ 3ಕ್ಕೆ ಡೆಡ್‌ಲೈನ್


ಡಿಸ್ನಿ ಕಂಪನಿ ಈಗಾಗ್ಲೇ ಯೋಜಿಸಿಕೊಂಡಿರುವಂತೆ ಕಂಪನಿಯ ವಾರ್ಷಿಕ ಸಭೆಗೆ ಮುಂಚಿತವಾಗಿ ಅಂದರೆ ಏಪ್ರಿಲ್ 3ರರೊಳಗೆ ಈ ವಜಾಗೊಳಿಸುವಿಕೆ ನಡೆಯುತ್ತದೆ ಎನ್ನಲಾಗಿದೆ.


ವಯಸ್ಕರನ್ನು ಗುರಿಯಾಗಿಸಿಕೊಂಡಿರುವ ಸಾಮಾನ್ಯ ಮನರಂಜನೆಯಲ್ಲಿ ಸಂಸ್ಥೆ ಕಡಿತವನ್ನು ನಡೆಸಲಿದೆ ಎಂದು ವರದಿಯಾಗಿದೆ. ಆದರೆ ಯಾವ ವಿಭಾಗದ ಮೇಲೆ ಪರಿಣಾಮ ಹೆಚ್ಚು ಬೀರುತ್ತದೆ? ಯಾವ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ತೆಗೆದುಹಾಕುತ್ತದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.


ಫೆಬ್ರವರಿಯಲ್ಲಿ, CEO ಬಾಬ್ ಇಗರ್ ಕಂಪನಿಯ ವ್ಯಾಪಕ ಪುನರ್ ರಚನೆಯ ಭಾಗವಾಗಿ 7,000 ಉದ್ಯೋಗಿಗಳನ್ನು ವಜಾಗೊಳಿಸುವ ಯೋಜನೆಯನ್ನು ಘೋಷಿಸಿದ್ದರು. ಈಗ ಅದರ ಬೆನ್ನಲ್ಲೇ ಕಂಪನಿಯು ಉದ್ಯೋಗಿಗಳಿಗೆ ಮತ್ತೊಂದು ಶಾಕ್‌ ನೀಡಿದೆ.




ವಾಲ್ಟ್ ಡಿಸ್ನಿ ಲೇಆಫ್ಸ್ ಮ್ಯಾನೇಜರ್‌ಗಳು ಈ ಎರಡು ಹಂತದ ಉದ್ಯೋಗ ಕಡಿತ ಕಾರ್ಯಚರಣೆಗಳಿಗೂ ಏಪ್ರಿಲ್ ಗಡುವನ್ನು ನೀಡಿದೆ. ಕಂಪೆನಿಯ ಕಾರ್ಯತಂತ್ರದ ಮರುಸಂಘಟನೆಯು ಕಾರ್ಯಾಚರಣೆಗಳಿಗೆ ಪರಿಣಾಮಕಾರಿ ಎಂದೆನಿಸಿದ್ದು, ಸಂಘಟಿತ ಮತ್ತು ಸುವ್ಯವಸ್ಥಿತ ವಿಧಾನವನ್ನು ಉಂಟುಮಾಡುತ್ತದೆ, ಅದೂ ಅಲ್ಲದೆ ಸಂಸ್ಥೆಯ ವ್ಯವಹಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ನಾವು ಬಾಧ್ಯಸ್ಥರಾಗಿದ್ದೇವೆ, ಹಾಗಾಗಿ ನಾವು ಕಂಪನಿಯಾದ್ಯಂತ $ 5.5 ಶತಕೋಟಿ ವೆಚ್ಚವನ್ನು ಉಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಬಾಬ್‌ ಇಗರ್‌ ಈ ಹಿಂದಿನ ಘೋಷಣೆಯಲ್ಲಿ ತಿಳಿಸಿದ್ದರು.


ಏತಕ್ಕೆ ದೊಡ್ಡ ಪ್ರಮಾಣದ ಕಡಿತ?


ಕಂಪನಿಯಾದ್ಯಂತ $5.5 ಶತಕೋಟಿಯನ್ನು ಉಳಿಸುವ ಡಿಸ್ನಿಯ ಪ್ರಯತ್ನಗಳ ಭಾಗವಾಗಿ ಉದ್ಯೋಗಿಗಳನ್ನು ಕಂಪನಿಯಿಂದ ಕೈಬಿಡಲಾಗುತ್ತಿದೆ ಎಂದು ವರದಿಗಳು ಹೇಳಿವೆ. ಕಾರ್ಯತಂತ್ರ ಮರುಸಂಘಟನೆಯಡಿಯಲ್ಲಿ ಮೂರು ಪ್ರಮುಖ ವ್ಯಾಪಾರ ವಿಭಾಗಗಳನ್ನು ಘೋಷಿಸಲಾಗಿದ್ದು ಅವುಗಳಲ್ಲಿ ಡಿಸ್ನಿ ಎಂಟರ್‌ಟೈನ್‌ಮೆಂಟ್, ಇಎಸ್‌ಪಿಎನ್ ಹಾಗೂ ಡಿಸ್ನಿ ಪಾರ್ಕ್ಸ್, ಎಕ್ಸ್‌ಪೀರಿಯನ್ಸಸ್ ಹಾಗೂ ಪ್ರಾಡಕ್ಟ್ಸ್ ಒಳಗೊಂಡಿವೆ.


ಏನಿದು ಡಿಸ್ನಿ ?


ಡಿಸ್ನಿ ಎಂಬುದು ಅಮೆರಿಕಾದ ಚಂದಾದಾರಿಕೆ ವೀಡಿಯೊ ವೇದಿಕೆಯಾಗಿದ್ದು, ದಿ ವಾಲ್ಟ್ ಡಿಸ್ನಿ ಕಂಪನಿಯ ಮಾಧ್ಯಮ ಮತ್ತು ಮನರಂಜನಾ ವಿತರಣಾ ವಿಭಾಗದ ಒಡೆತನದ ಮತ್ತು ನಿರ್ವಹಿಸುತ್ತಿರುವ ಸ್ಟ್ರೀಮಿಂಗ್ ಸೇವೆಯಾಗಿದೆ. ಕೋವಿಡ್-19 ಸಾಂಕ್ರಾಮಿಕ ಕಂಪನಿಯ ಮೇಲೆ ವ್ಯಾಪಕವಾದ ಪರಿಣಾಮ ಬೀರಿತ್ತು. ಇದರ ಹಿನ್ನೆಲೆ ಹಲವು ಉಪವಿಭಾಗಗಳನ್ನು ಸಹ ಕಂಪನಿ ಸ್ಥಗಿತಗೊಳಿಸಿದೆ.


ಡಿಸ್ನಿ ಕಠಿಣ ಪರಿಸ್ಥಿತಿಯಲ್ಲೂ ಮತ್ತೆ ಪುಟಿದೇಳಲು ತನ್ನ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದ್ದು, ಈ ತಿಂಗಳ ಆರಂಭದಲ್ಲಿ ಡಿಸ್ನಿ + 100 ಮಿಲಿಯನ್ ಚಂದಾದಾರರನ್ನು ತಲುಪಿದೆ.

top videos
    First published: