Stock Market: ಷೇರು ಮಾರುಕಟ್ಟೆಯಲ್ಲಿ ಧೂಳಿಪಟವಾದ ಜನಪ್ರಿಯ ಕಂಪನಿ ಷೇರುಗಳಿವು: ಆತಂಕದಲ್ಲಿ ಹೂಡಿಕೆದಾರರು

ಷೇರು ಮಾರುಕಟ್ಟೆಯಲ್ಲಿ ನಷ್ಟದಲ್ಲಿರುವ ನಾಲ್ಕು ಕಂಪನಿಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ. ಈ ಷೇರುಗಳು ಹೂಡಿಕೆದಾರರಿಗೆ ಒಂದು ಸಮಯದಲ್ಲಿ ಅಪಾರವಾದ ಲಾಭವನ್ನು ತಂದುಕೊಟ್ಟಿದೆ ಆದರೆ ಸದ್ಯ ಈ ಕಂಪನಿಗಳ ಷೇರು ಡೋಲಾಯಮಾನವಾಗಿದ್ದು, ಹೂಡಿಕೆದಾರರು ಸಂಕಷ್ಟದಲ್ಲಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಷೇರು ಮಾರುಕಟ್ಟೆಯಲ್ಲಿ (Shares Market) ಹೂಡಿಕೆ ಮಾಡುವುದು ಎಂದರೆ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಷೇರು ಮಾರುಕಟ್ಟೆಯಲ್ಲಿ ಲಾಭ ಮತ್ತು ನಷ್ಟ ಸಹಜವಾಗಿದ್ದು, ನಷ್ಟದ ಸಮಯದಲ್ಲೂ ಧೈರ್ಯವಾಗಿ ಅದನ್ನು ಎದುರಿಸಬೇಕು. ಹೂಡಿಕೆದಾರರು ಷೇರುಗಳಲ್ಲಿ ಹೂಡುವುದಾದರೆ ಬೃಹತ್ ಕಂಪನಿಯ (Company) ಷೇರುಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ ಎನ್ನಲಾಗುತ್ತದೆ. ಆದಾಗ್ಯೂ, ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಂತೆ ಇವುಗಳು ಸಹ ಒಮ್ಮೊಮ್ಮೆ ನಷ್ಟ ಅನುಭವಿಸುತ್ತವೆ. ಈ ರೀತಿಯ ಸಂದರ್ಭಗಳಿಗೆ ಉತ್ತಮ ಉದಾಹರಣೆ ಎಂದರೆ ಯುನಿಟೆಕ್, ಸುಜ್ಲಾನ್ ಎನರ್ಜಿ ಮತ್ತು ಆರ್‌ಕಾಮ್ ಕಂಪನಿಗಳು. ಒಂದು ಕಾಲದಲ್ಲಿ ಇವು ಮಾರುಕಟ್ಟೆ ಪ್ರಿಯರಾಗಿದ್ದು, ಸಾಕಷ್ಟು ಲಾಭದಾಯಕವಾಗಿದ್ದವು (Profit). ಆದರೆ ಕಾಲಕ್ರಮೇಣ ಈ ಬೃಹತ್ ಮಲ್ಟಿಬ್ಯಾಗರ್ (Multibagger) ಲಾಭದ ಕಂಪನಿಗಳು ನಷ್ಟ (Loss) ಅನುಭವಿಸಿದವು.

ಇದೇ ರೀತಿ ನಷ್ಟದಲ್ಲಿರುವ ನಾಲ್ಕು ಕಂಪನಿಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ. ಈ ಷೇರುಗಳು ಹೂಡಿಕೆದಾರರಿಗೆ ಒಂದು ಸಮಯದಲ್ಲಿ ಅಪಾರವಾದ ಲಾಭವನ್ನು ತಂದುಕೊಟ್ಟಿದೆ ಆದರೆ ಸದ್ಯ ಈ ಕಂಪನಿಗಳ ಷೇರು ಡೋಲಾಯಮಾನವಾಗಿದ್ದು, ಹೂಡಿಕೆದಾರರು ಸಂಕಷ್ಟದಲ್ಲಿದ್ದಾರೆ.

1) ಪಿಸಿ ಜ್ಯುವೆಲರ್
ಪಿಸಿ ಜ್ಯುವೆಲರ್ ಚಿನ್ನದ ಆಭರಣಗಳು, ವಜ್ರ-ಹೊದಿಕೆಯ ಆಭರಣಗಳು ಮತ್ತು ಬೆಳ್ಳಿ ವಸ್ತುಗಳ ತಯಾರಿಕೆ, ಮಾರಾಟ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ನಷ್ಟದಲ್ಲಿರುವ ಕಂಪನಿ ಹೂಡಿಕೆದಾರರಿಗೆ ಉರುಳಾಗಿದೆ. 2018ರಲ್ಲಿ, ಪಿಸಿ ಜ್ಯುವೆಲರ್ ಷೇರಿನ ಬೆಲೆ ₹ 600ರ ಆಸುಪಾಸಿನಲ್ಲಿತ್ತು. ಆದರೆ ಇಂದು, ಇದು ₹ 55 ಕ್ಕಿಂತ ಕಡಿಮೆ ಬೆಲೆಯೊಂದಿಗೆ ಪೆನ್ನಿ ಸ್ಟಾಕ್ ಆಗಿದೆ. 2018ರ ಜನವರಿಯಲ್ಲಿ ₹230 ಬಿಲಿಯನ್ ಮಾರುಕಟ್ಟೆಯನ್ನು ಹೊಂದಿದ್ದು, 10 ತಿಂಗಳ ಅವಧಿಯಲ್ಲಿ 90% ಕ್ಕಿಂತ ಹೆಚ್ಚಿನ ಷೇರು ಕುಸಿತ ಕಂಡಿದೆ.

ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುವುದರ ಜೊತೆ ಕಂಪನಿಯ ಷೇರುಗಳನ್ನು ಸಂಬಂಧಿಕರಿಗೆ ಮಾರಿದ ಸಂಬಂಧ ಪಿಸಿ ಜ್ಯುವೆಲರ್ಸ್ ಎಂಡಿ ಬಲರಾಮ್ ಗಾರ್ಗ್ ಅವರನ್ನು ಬಂಧಿಸಲಾಯಿತು.

ಇದೆಲ್ಲವೂ ಹೂಡಿಕೆದಾರರಲ್ಲಿ ಆತಂಕವನ್ನು ಉಂಟುಮಾಡಿತು. ನಂತರದ ದಿನಗಳಲ್ಲಿ ಪಿಸಿ ಜ್ಯುವೆಲರ್‌ನ ಷೇರುಗಳು ಸಾಕಷ್ಟು ಕುಸಿತಗೊಂಡು, ಮಾರ್ಚ್ 2020ರ ವೇಳೆಗೆ ₹8 ರಷ್ಟು ಇಳಿಕೆ ಕಂಡು ಕಂಪನಿ ಧೂಳಿಪಟವಾಯಿತು. ಮುಂದಿನ ದಿನಗಳಲ್ಲಿ ನಷ್ಟದಿಂದ ಚೇತರಿಸಿಕೊಳ್ಳುವ ಭರವಸೆಯನ್ನು ಕಂಪನಿ ಎದುರು ನೋಡುತ್ತಿದೆ.

2) ಯೆಸ್ ಬ್ಯಾಂಕ್
ನಷ್ಟ ಅನುಭವಿಸುತ್ತಿರುವ, ಕ್ಷೀಣಿಸುತ್ತಿರುವ ಆಸ್ತಿ ಗುಣಮಟ್ಟ, ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿಗಳು, ಹದಗೆಡುತ್ತಿರುವ ಬಂಡವಾಳ ಮಟ್ಟಗಳು, ಕಾರ್ಪೊರೇಟ್ ಆಡಳಿತದ ಸಮಸ್ಯೆಗಳು ಹೀಗೆ ಹಲವಾರು ಕಾರಣಗಳಿಂದ ಯೆಸ್ ಬ್ಯಾಂಕ್ ಷೇರಿನ ಬೆಲೆ ಆಗಸ್ಟ್ 2018ರಲ್ಲಿ ಸಾರ್ವಕಾಲಿಕ ಗರಿಷ್ಠವಾದ ₹393 ರಿಂದ 2020ರಲ್ಲಿ ₹11 ರೂಪಾಯಿಗೆ ಕುಸಿತ ಕಂಡಿತು. 2018ರ ಆಗಸ್ಟ್ ನಲ್ಲಿ ₹ 908 ಬಿಲಿಯನ್‌ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದ್ದ ಷೇರುಗಳು ಮುಂದಿನ ಎರಡು ವರ್ಷಗಳಲ್ಲಿ ₹270 ಬಿಲಿಯನ್‌ಗಳ ಮಾರುಕಟ್ಟೆ ಕ್ಯಾಪ್‌ನೊಂದಿಗೆ ₹ 11ಕ್ಕೆ ಕುಸಿಯಿತು. ಈ ಕಂಪನಿಗಳಲ್ಲಿ ಅನಿಲ್ ಅಂಬಾನಿ ಗುಂಪು, ಎಸ್ಸೆಲ್ ಗುಂಪು, DHFL ಮತ್ತು IL&FS ಸೇರಿವೆ.

ಇದನ್ನೂ ಓದಿ: Stock Market: ಲಿಕ್ಕರ್ ಕಂಪನಿಯ ಸ್ಟಾಕ್, ಒಂದು ಲಕ್ಷ ಹೂಡಿಕೆಗೆ 20 ಲಕ್ಷ ಆದಾಯ!

ಯೆಸ್ ಬ್ಯಾಂಕ್‌ನ ಸ್ವತಂತ್ರ ನಿರ್ದೇಶಕ ಉತ್ತಮ್ ಪ್ರಕಾಶ್ ಅಗರ್ವಾಲ್ ಅವರು ಕಾರ್ಪೊರೇಟ್ ಆಡಳಿತದ ಗುಣಮಟ್ಟ ಮತ್ತು ವೈಫಲ್ಯದ ಸಂಬಂಧ ರಾಜೀನಾಮೆ ನೀಡಿದ್ದಾರೆ. 2018-19 ರಲ್ಲಿ, ಬ್ಯಾಂಕ್ ₹ 32.8 ಶತಕೋಟಿ ಮೊತ್ತದ NPA ಗಳನ್ನು ಕಡಿಮೆ ವರದಿ ಮಾಡಿದೆ. ಇನ್ನೇನು ಯೆಸ್ ಬ್ಯಾಂಕ್ ದಿವಾಳಿತನದಲ್ಲಿದೆ ಎನ್ನುವಷ್ಟರಲ್ಲಿ ಯೆಸ್ ಬ್ಯಾಂಕ್ ಚೇತರಿಕೆ ಕಾಣುತ್ತಿದೆ. ಕುಸಿತದ ನಂತರ, ಬ್ಯಾಂಕ್ 2020ರ ಪುನರ್ನಿರ್ಮಾಣ ಯೋಜನೆಯಿಂದ ಒಂದು ಗಮನಾರ್ಹ ಪ್ರಗತಿಯನ್ನು ವರದಿ ಮಾಡಿದೆ.

3) ಎಚ್ ಡಿಐಎಲ್ (HDIL)
ರಿಯಲ್ ಎಸ್ಟೇಟ್ ಕಂಪನಿಗಳು ಅಸ್ತಿತ್ವದಲ್ಲಿರುವ ಯೋಜನೆಯನ್ನು ಪೂರ್ಣಗೊಳಿಸುವ ಮೊದಲೇ ಹೊಸ ಯೋಜನೆಯನ್ನು ಪ್ರಾರಂಭಿಸುವಲ್ಲಿ ಕುಖ್ಯಾತವಾಗಿವೆ. ಇದೇ ಹಾದಿಯಲ್ಲಿ ಸಾಗಿದ ಎಚ್ ಡಿಐಎಲ್ ಅಂತಿಮವಾಗಿ ಅವನತಿ ಹಾದಿ ಕಂಡಿದೆ. ಜುಲೈ 2007ರಲ್ಲಿ ಅದರ ಆರಂಭಿಕ ಸಾರ್ವಜನಿಕ ಕೊಡುಗೆ (IPO) ನಂತರ, HDIL ನ ಷೇರಿನ ಬೆಲೆಯು ಮುಂದಿನ ವರ್ಷ ಗರಿಷ್ಠ ಮಟ್ಟಕ್ಕೆ ತಲುಪಿತು ಮತ್ತು ಜನವರಿ 2008ರಲ್ಲಿ ₹434 ರಿಂದ ₹1,084ಕ್ಕೆ ಏರಿಕೆ ಕಂಡಿತು. HDIL ಅನ್ನು ಭಾರತದಲ್ಲಿ ಮೂರನೇ ಅತಿದೊಡ್ಡ ರಿಯಾಲ್ಟಿ ಡೆವಲಪರ್ ಎಂದು ಸಹ ಪರಿಗಣಿಸಲಾಗಿತ್ತು.

ಮೊದಲು ಸಾಕಷ್ಟು ಲಾಭದಲ್ಲಿದ್ದ ಕಂಪನಿ ಡಿಸೆಂಬರ್ 2008ರಲ್ಲಿ ಷೇರಿನ ಬೆಲೆ ₹ 20.4 ಬಿಲಿಯನ್‌ನ ಮಾರುಕಟ್ಟೆಯೊಂದಿಗೆ ₹ 70ಕ್ಕೆ ಕುಸಿಯಿತು.

4) ಡಿಎಚ್ಎಫ್ ಎಲ್ (DHFL)
1998 ರಿಂದ 2008 ರ ನಡುವೆ, DHFL ನ ಷೇರುಗಳು 2,000% ಕ್ಕಿಂತ ಹೆಚ್ಚಾಯಿತು, ₹ 5.5 ರಿಂದ 2008 ರಲ್ಲಿ ₹ 120ಕ್ಕೆ ತಲುಪಿತು. ನಂತರ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಪರಿಣಾಮಗಳಿಗೆ ಪ್ರತಿಕ್ರಿಯೆಯಾಗಿ, 2009ರಲ್ಲಿ ₹ 25 ಕ್ಕೆ 75% ಕ್ಕಿಂತ ಹೆಚ್ಚು ಕುಸಿಯಿತು. ಮತ್ತೆ, ಕಂಪನಿಯು 2009 ರಲ್ಲಿ ತನ್ನ ಪುನರ್ರಚನೆಯನ್ನು ಪ್ರಾರಂಭಿಸಿತು ಮತ್ತು 2009 ರ ಕನಿಷ್ಠ ಮಟ್ಟದಿಂದ, ಸೆಪ್ಟೆಂಬರ್ 2018 ರಲ್ಲಿ DHFL ಗರಿಷ್ಠ ₹ 678 ಅನ್ನು ತಲುಪಿತು. ಆದರೆ ನಂತರ ಎನ್‌ಬಿಎಫ್‌ಸಿಗಳಿಗೆ ಸಾಲದ ಸಮಸ್ಯೆ ಕಾಣಿಸಿಕೊಂಡಿತು ಮತ್ತು ಪ್ರಮುಖ ಎನ್‌ಬಿಎಫ್‌ಸಿಗಳ ಜೊತೆಗೆ, ಡಿಎಚ್‌ಎಫ್‌ಎಲ್ ಕೂಡ ಕುಸಿಯಿತು ಮತ್ತು ಎಂದಿಗೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:  Stock Market: ಅಂದು ಈ ಷೇರಿನ ಬೆಲೆ 30 ಪೈಸೆ, ಇಂದು 37 ಲಕ್ಷ! ಇದು ಮ್ಯಾಜಿಕ್​ ಅಲ್ಲದೇ ಮತ್ತೇನು ಹೇಳಿ!

2018 ರಲ್ಲಿ, ಮತ್ತೊಂದು ಪ್ರಮುಖ NBFC IL&FS ಸ್ಥಗಿತಗೊಂಡಿತು, ಇದರಿಂದಾಗಿ ಉದ್ಯಮದಾದ್ಯಂತ ಅಪಾಯ ಹೆಚ್ಚಿದವು. ನಂತರ ಎನ್‌ಬಿಎಫ್‌ಸಿಗಳಿಗೆ ಸಾಲ ನೀಡುವ ಬಗ್ಗೆ ಬ್ಯಾಂಕ್‌ಗಳು ಮೀನಾಮೇಷ ಎಣಿಸಲು ಆರಂಭಿಸಿದವು. ಸಾಲಕ್ಕೆ ಸೀಮಿತ ಪ್ರವೇಶವಿರುವುದರಿಂದ ಇದು ದ್ರವ್ಯತೆ ಬಿಕ್ಕಟ್ಟಿಗೆ ಕಾರಣವಾಯಿತು. 2018 ರಲ್ಲಿ ಎನ್‌ಬಿಎಫ್‌ಸಿ ಸಾಲ ಸಮಸ್ಯೆಯಾಗಿ ಪ್ರಾರಂಭವಾದದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಪೂರ್ಣ ಪ್ರಮಾಣದ ಸ್ಟಾಕ್ ಮಾರುಕಟ್ಟೆ ಬಿಕ್ಕಟ್ಟಿಗೆ ಸಿಲುಕಿತು.

ಹೀಗೆ ಪ್ರಾರಂಭದಲ್ಲಿ ಹೂಡಿಕೆದಾರರಿಗೆ ಲಾಭದಾಯಕವಾಗಿದ್ದ ಕಂಪನಿಗಳು ಪ್ರಸ್ತುತ ನೆಲಕಚ್ಚಿದ್ದು, ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ.
Published by:Ashwini Prabhu
First published: