• Home
  • »
  • News
  • »
  • business
  • »
  • Farmers: ಕ್ಯಾಪ್ಸಿಕಂ ಬೆಳೆ ಬೆಳೆದು 35 ಲಕ್ಷ ರೂ. ಗಳಿಕೆ! ಪಾಲಿಹೌಸ್ ಕೃಷಿಯಲ್ಲಿ ರೈತನ ಸಾಧನೆ

Farmers: ಕ್ಯಾಪ್ಸಿಕಂ ಬೆಳೆ ಬೆಳೆದು 35 ಲಕ್ಷ ರೂ. ಗಳಿಕೆ! ಪಾಲಿಹೌಸ್ ಕೃಷಿಯಲ್ಲಿ ರೈತನ ಸಾಧನೆ

ಕ್ಯಾಪ್ಸಿಕಮ್‌

ಕ್ಯಾಪ್ಸಿಕಮ್‌

ಈ ಪಾಲಿಹೌಸ್‌ ಎಂಬುದು ಒಂದು ಹೊಸ ವಿಧಾನವಾಗಿದ್ದು. ಇಲ್ಲಿ ಬೆಳೆಗಳನ್ನು ಯಾವುದೇ ಮಳೆಯ ನೀರಿನ ಸಹಾಯವಿಲ್ಲದೇ ಸುಲಭದಲ್ಲಿ ಬೆಳೆಯಬಹುದಾಗಿದೆ.

  • Share this:

    ಭಾರತ ಹೇಳಿಕೇಳಿ ಅತಿಹೆಚ್ಚು ಜನಸಂಖ್ಯೆ ಇರುವ ದೇಶ. ಚೀನಾದ (China) ನಂತರದ ಸ್ಥಾನದಲ್ಲಿರುವ ಭಾರತ (India) ಪ್ರಸ್ತುತ ವಿಶ್ವದ ಎರಡನೇ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ. 2027ರ ಹೊತ್ತಿಗೆ ಚೀನಾದ ಜನಸಂಖ್ಯೆಯನ್ನು ಮೀರಿಸಬಹುದು ಎನ್ನಲಾಗಿದೆ. ಇಷ್ಟು ದೊಡ್ಡ ಜನಸಂಖ್ಯೆ ಇರುವ ದೇಶಕ್ಕೆ ಮೂಲಸೌಕರ್ಯಗಳು ಸಹ ಅಪಾರ ಪ್ರಮಾಣದಲ್ಲಿ ಬೇಕು. ಮುಖ್ಯವಾಗಿ ಆಹಾರವನ್ನು ಪೂರೈಸಲು ವರ್ಷಪೂರ್ತಿ ಬೆಳೆಗಳನ್ನು ಬೆಳೆಯುವುದು ಅತ್ಯಗತ್ಯ. ಈ ಸಮಸ್ಯೆಯನ್ನು ಪರಿಹರಿಸಲು, ಪಾಲಿಹೌಸ್ ಕೃಷಿಯು ಒಂದು ಕಾರ್ಯಸಾಧ್ಯವಾದ ಆಯ್ಕೆಯಾಗಿ ಹೊರಹೊಮ್ಮುತ್ತಿದೆ.


    ಈ ಪಾಲಿಹೌಸ್‌ ಎಂಬುದು ಒಂದು ಹೊಸ ವಿಧಾನವಾಗಿದ್ದು. ಇಲ್ಲಿ ಬೆಳೆಗಳನ್ನು ಯಾವುದೇ ಮಳೆಯ ನೀರಿನ ಸಹಾಯವಿಲ್ಲದೇ ಸುಲಭದಲ್ಲಿ ಬೆಳೆಯಬಹುದಾಗಿದೆ.


    ಪಾಲಿಹೌಸ್‌ ಫಾರ್ಮ್‌ನಲ್ಲಿ ಕ್ಯಾಪ್ಸಿಕಂ ಬೆಳೆದು 35 ಲಕ್ಷ ಗಳಿಕೆ
    ಸಹಾಯಧನ, ತರಬೇತಿ, ಕಾರ್ಯಗಾರ ಸೇರಿ ಹಲವಾರು ಕ್ರಮಗಳಲ್ಲಿ ಜಾರಿಗೆ ತರುವ ಮೂಲಕ ಈ ಪಾಲಿಹೌಸ್ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಪಾಲಿಹೌಸ್ ಕೃಷಿ ಮೂಲಕ ಹಲವಾರು ಬೆಳೆಗಳನ್ನು ಬೆಳೆದು ಅನೇಕ ಕೃಷಿಕರು ಯಶಸ್ಸಿನ ರುಚಿ ಅನುಭವಿಸುತ್ತಿದ್ದಾರೆ. ಇದೇ ಪ್ರಕಾರ ಪಾಲಿಹೌಸ್‌ ಕೃಷಿಯಲ್ಲಿ ಕ್ಯಾಪ್ಸಿಕಂ ಬೆಳೆ ಬೆಳೆದು ಇಲ್ಲೊಬ್ಬ ರೈತ ವರ್ಷಕ್ಕೆ 35 ಲಕ್ಷ ರೂ ಸಂಪಾದಿಸುತ್ತಿದ್ದಾರೆ.


    35 lakhs of capsicum crop grown Earnings Farmer s Achievement in Polyhouse Farming
    ಕ್ಯಾಪ್ಸಿಕಮ್‌ ಪಾಲಿಹೌಸ್


    ಪಾಲಿಹೌಸ್‌ ಕೃಷಿ ಎಂದರೆನು?
    ಪಾಲಿಹೌಸ್ ಕೃಷಿಯು ಒಂದು ಹೊಸ ವಿಧಾನವಾಗಿದ್ದು, ಕಡಿಮೆ ಭೂಮಿಯಲ್ಲಿ ಹಾಗೂ ಮಳೆಯ ಮೇಲಿನ ಅವಲಂಬನೆ ಇಲ್ಲದೇ ಉತ್ತಮ ಬೆಳೆ ಬೆಳೆಯಲು ಸಹಾಯಕವಾಗಿದೆ. ಪಾಲಿಹೌಸ್ ಅಥವಾ ಹಸಿರುಮನೆ ಕೃಷಿ ಎಂದರೆ ಸಂರಕ್ಷಿತ ರಚನೆಗಳ ಒಳಗೆ ಕೆಲವು ಬೆಳೆಗಳನ್ನು ಸುರಕ್ಷಿತವಾಗಿ ಬೆಳೆಯುವುದು.


    ಇದನ್ನೂ ಓದಿ: ನಿಮ್ಮ ಕೈಯಲ್ಲಿ 25 ಸಾವಿರ ಇದ್ರೆ ಸಾಕು! ಈ ನಾಲ್ಕು ಬ್ಯುಸಿನೆಸ್​ನಿಂದ ತಿಂಗಳಿಗೆ 50 ಸಾವಿರ ಗಳಿಸಿ!


    ಹಸಿರುಮನೆಯನ್ನು ನಿರ್ಮಿಸುವಲ್ಲಿ ಗಾಜು ಮುಖ್ಯ ಘಟಕವಾಗಿದೆ. ಪಾಲಿಹೌಸ್ ಅನ್ನು ಪಾಲಿಥೀನ್ ವಸ್ತುವಿನಿಂದ ತಯಾರಿಸಲಾಗುತ್ತದೆ. ಹೀಗೆ ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ವಿಧಾನಗಳನ್ನು ಬಳಸಿಕೊಂಡು ಬೆಳೆಗಳನ್ನು ಬೆಳೆಯುವುದೇ ಪಾಲಿಹೌಸ್ ಕೃಷಿ.


    ಪಾಲಿಹೌಸ್ ಕೃಷಿ ಲಾಭದಾಯಕವೇ?
    ಕೃಷಿ ವಿಧಾನವನ್ನು ಸರಿಯಾಗಿ ಅನುಸರಿಸಿದರೆ ಪಾಲಿಹೌಸ್ ಕೃಷಿಯು 100% ಲಾಭದಾಯಕವಾಗಿರುತ್ತದೆ. ಹೂವುಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಭಾರತದಲ್ಲಿ ವಾಣಿಜ್ಯ ರೈತರು ಈ ವಿಧಾನವನ್ನು ಬಳಸಿಕೊಂಡು ಬೆಳೆಯುತ್ತಾರೆ. ಪಾಲಿಹೌಸ್‌ನಲ್ಲಿ ವಿವಿಧ ರೀತಿಯ ಸಸ್ಯಗಳನ್ನು ಕೃಷಿಕರು ಬೆಳೆಸಬಹುದು. ಸ್ಟ್ರಾಬೆರಿ, ಪಪ್ಪಾಯಿಗಳಂತಹ ಹಣ್ಣುಗಳನ್ನು. ಟೊಮೆಟೊ, ಪಾಲಕ್, ಈರುಳ್ಳಿ, ಕೊತ್ತಂಬರಿ, ಮೆಣಸಿನಕಾಯಿ, ಹೂಕೋಸು, ಮೂಲಂಗಿ, ಕ್ಯಾಪ್ಸಿಕಂ, ಹಾಗಲಕಾಯಿ ಮತ್ತು ಎಲೆಕೋಸು ಸೇರಿದಂತೆ ವಿವಿಧ ತರಕಾರಿ, ಸೊಪ್ಪುಗಳನ್ನು ಈ ತಂತ್ರವನ್ನು ಬಳಸಿಕೊಂಡು ಬೆಳೆಯಬಹುದು.


    ಲಾಭಗಳು
    ಪಾಲಿಹೌಸ್ ಕೃಷಿಯ ಅತ್ಯಂತ ಉಪಯುಕ್ತ ಅಂಶವೆಂದರೆ, ಇಲ್ಲಿ ನೀವು ವಿವಿಧ ರೀತಿಯ ಸುಂದರವಾದ ಹೂವುಗಳನ್ನು ಬೆಳೆಸಲೂಬಹುದು. ಕೋವಿಡ್‌ನಂತಹ ಹೊಸ ಹೊಸ ರೋಗಗಳ ಕಾರಣದಿಂದಾಗಿ ಜನ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ ಮತ್ತು ಗುಣಮಟ್ಟದ ಆಹಾರವನ್ನು ಎದುರು ನೋಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ಪಾಲಿಹೌಸ್ ಕೃಷಿಯು ಉತ್ತಮ ಆಯ್ಕೆಯಾಗಿದ್ದು, ಗುಣಮಟ್ಟದ ಫಲಿತಾಂಶಗಳನ್ನು ನೀಡುತ್ತದೆ. ಪಾಲಿಹೌಸ್ ಕೃಷಿಯಲ್ಲಿ ಬೆಳೆಯು ಸುರಕ್ಷಿತವಾಗಿರುತ್ತದೆ ಮತ್ತು ಸುಧಾರಿತ ತಂತ್ರಜ್ಞಾನವು ಇಳುವರಿಯನ್ನು ಟ್ರ್ಯಾಕ್‌ ಮಾಡುತ್ತದೆ.


    ಕ್ಯಾಪ್ಸಿಕಂ ಅನ್ನು ಹಸಿರುಮನೆ/ಪಾಲಿಹೌಸ್‌ನಲ್ಲಿ ಬೆಳೆಸಬಹುದೇ?
    ತಂಪಾದ-ಋತುವಿನ ಬೆಳೆಯಾಗಿದ್ದರೂ, ಕ್ಯಾಪ್ಸಿಕಂ ಅನ್ನು ವರ್ಷಪೂರ್ತಿ ಪಾಲಿಹೌಸ್‌ಗಳಲ್ಲಿ ಬೆಳೆಸಬಹುದು. ಈ ಬೆಳೆಗೆ ಹಗಲಿನಲ್ಲಿ 25 ರಿಂದ 30 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 18 ಮತ್ತು 200 ಡಿಗ್ರಿ ಸೆಲ್ಸಿಯಸ್ ಇರಬೇಕು. ವಿವಿಧ ಬಣ್ಣಗಳ ಕ್ಯಾಪ್ಸಿಕಂಗಳಿಗೆ ನಗರದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.‌


    ಕ್ಯಾಪ್ಸಿಕಮ್‌ ಪಾಲಿಹೌಸ್


    ಈ ಪ್ರಕಾರ ಹಸಿರು ಕ್ಯಾಪ್ಸಿಕಂ ಅನ್ನು ಪಾಲಿಹೌಸ್‌ ಕೃಷಿಯಲ್ಲಿ ಬೆಳೆಸುವ ಮೂಲಕ ಪ್ರತಿ ಹೆಕ್ಟೇರ್‌ಗೆ 20 ರಿಂದ 40 ಟನ್‌ಗಳನ್ನು ಉತ್ಪಾದಿಸಬಹುದು. ಹಸಿರು ಮತ್ತು ಬಣ್ಣದ ಕ್ಯಾಪ್ಸಿಕಂಗಳನ್ನು 7– 10 ತಿಂಗಳವರೆಗೆ ಹಸಿರುಮನೆ/ಪಾಲಿಹೌಸ್‌ಗಳಲ್ಲಿ ಬೆಳೆಯಬಹುದು ಮತ್ತು ಪ್ರತಿ ಹೆಕ್ಟೇರಿಗೆ 80–100 ಟನ್ ಇಳುವರಿ ಪಡೆಯಬಹುದು.


    ಕ್ಯಾಪ್ಸಿಕಂ ಬೆಳೆಯಲ್ಲಿ ರೈತ ಭಿಕ್ಷಾಪತಿಯವರ ಯಶೋಗಾಥೆ
    ಒಮ್ಮೆ ಗಲ್ಫ್ ದೇಶದ ಸಣ್ಣ ಕಂಪನಿಯೊಂದರಲ್ಲಿ ಮೇಲ್ವಿಚಾರಕರಾಗಿದ್ದ ಶ್ರೀ ಭಿಕ್ಷಾಪತಿ ಅವರಿಗೆ ಹಣಕಾಸಿನ ಸಮಸ್ಯೆ ಇತ್ತು ಮತ್ತು ಕುಟುಂಬದಿಂದ ದೂರವಿರಲು ಇಷ್ಟಪಡದ ಇವರು ತವರೂರಿಗೆ ಮರಳಿದರು. ತೆಲಂಗಾಣದ ವಾರಂಗಲ್ ಜಿಲ್ಲೆಯ ತಮ್ಮ ಹಳ್ಳಿಯಲ್ಲಿ ಸ್ವಂತವಾಗಿ ಏನಾದರೂ ಮಾಡುವ ಆಲೋಚನೆಯೊಂದಿಗೆ ಕೃಷಿಯ ಬಗ್ಗೆ ಯೋಚಿಸಿದರು .
    ಕೆಲವು ದಿನಗಳ ನಂತರ ಕಾರ್ಯಾಗಾರದಲ್ಲಿ ಭಾಗವಹಿಸಿದ ಇವರು ಪಾಲಿಹೌಸ್ ಕೃಷಿ ಮತ್ತು ಅದರ ಉಪಯೋಗಗಳ ಬಗ್ಗೆ ತಿಳಿದುಕೊಂಡರು. ಹಾಗಾದರೆ ಇಲ್ಲಿ ಭಿಕ್ಷಾಪತಿ ಹೇಗೆ ಗಿಡಗಳ ಆಯ್ಕೆಯನ್ನು ಮಾಡಿಕೊಂಡರು, ಭೂಮಿಯನ್ನು ಹೇಗೆ ನಿರ್ವಹಿಸಿದರು ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


    ಗಿಡಗಳ ಆಯ್ಕೆ
    ಪಾಲಿಹೌಸ್‌ಗಳಲ್ಲಿ ಟೊಮೇಟೊ, ಸೌತೆಕಾಯಿಗಳು ಭಿಕ್ಷಾಪತಿಯವರು ಬೆಳೆಸಿದರು. ನಂತರ ಇಲ್ಲಿ ಹೆಚ್ಚು ಬೇಡಿಕೆ ಇರುವ ಬೆಳೆಯನ್ನು ಬೆಳೆಸಲು ಯೋಜಿಸಿ ಕ್ಯಾಪ್ಸಿಕಂ ಅನ್ನು ಬೆಳೆಯಲು ಮುಂದಾದರು. ಪ್ರತಿ ನಾಟಿಗೆ 4 ರೂಪಾಯಿಯಂತೆ ಅವರು ಪುಣೆಯಿಂದ ಸಸಿ ಖರೀದಿಸಿದರು. ಸದ್ಯ ಕೃಷಿಕರ 4 ಎಕರೆ ಪಾಲಿಹೌಸ್ ಫಾರ್ಮ್‌ನಲ್ಲಿ 38,670 ಕ್ಯಾಪ್ಸಿಕಂ ಗಿಡಗಳಿವೆ.


    ಕ್ಯಾಪ್ಸಿಕಮ್‌


    ಪಾಲಿಹೌಸ್ ನಿರ್ಮಾಣ
    ಭಿಕ್ಷಾಪತಿ ಅವರು ನಾಲ್ಕು ಎಕರೆಯ ತಮ್ಮ ಜಮೀನಿನಲ್ಲಿ ಪಾಲಿಹೌಸ್ ನಿರ್ಮಿಸಿದ್ದಾರೆ. 35 ಲಕ್ಷ ವೆಚ್ಚದೊಂದಿಗೆ ಮೂರು ತಿಂಗಳಲ್ಲಿ ಈ ಹಸಿರುಮನೆಯನ್ನು ನಿರ್ಮಿಸಿದರು. ಅವರು ತಮ್ಮ ಕೃಷಿ ಭೂಮಿಗೆ ಸುಮಾರು 100 ಟ್ರ್ಯಾಕ್ಟರ್‌ ಕೆಂಪು ಮಣ್ಣನ್ನು ಹಾಯಿಸಿದರು. ನಂತರ ಈ ಮಣ್ಣನ್ನು ಚೆನ್ನಾಗಿ ಉಳಿಮೆ ಮಾಡಿ ಪ್ರತಿ ಚದರ ಮೀಟರ್‌ಗೆ 20-25 ಕೆಜಿ ಚೆನ್ನಾಗಿ ಕೊಳೆತ ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಿದರು.
    ಒಂದು ಬಾರಿಯ ಬೆಳೆಯಲ್ಲಿ ಮೂರು ಬಾರಿ ಕ್ಯಾಪ್ಸಿಕಂ ಕೊಯ್ಲುಗಳನ್ನು ಮಾಡಬಹುದು ಎನ್ನುತ್ತಾರೆ ಭಿಕ್ಷಾಪತಿ. 90 ರಿಂದ 100 ಸೆಂ.ಮೀ ಅಗಲ ಮತ್ತು 15 ರಿಂದ 22 ಸೆಂ.ಮೀ ಎತ್ತರದ ಹಾಸಿಗೆ ಸೂಕ್ತವಾಗಿದೆ ಎಂದು ಕೃಷಿಕ ಹೇಳುತ್ತಾರೆ.


    ಭಿಕ್ಷಾಪತಿ ಅವರ ಕ್ಯಾಪ್ಸಿಕಂ ಪಾಲಿಹೌಸ್ ಫಾರ್ಮ್‌
    ಭಿಕ್ಷಾಪತಿ ಅವರ ಗ್ರಾಮದಲ್ಲಿ ನೀರಿನ ಕೊರತೆ ಇರುವ ಕಾರಣ ಅವರು ಕೃಷಿಯನ್ನು ಸಂರಕ್ಷಿಸಲು ಪಾಲಿಥಿಲೀನ್‌ನೊಂದಿಗೆ ಸಣ್ಣ ಕೊಳವನ್ನು ಸ್ಥಾಪಿಸಿದರು. ಈ ಹೊಂಡಕ್ಕೆ ಪಾಲಿಹೌಸ್ ಮೇಲ್ಭಾಗದಿಂದ ವಿವಿಧ ಪೈಪ್ ಗಳನ್ನು ಜೋಡಿಸಿದರು. ಈ ಪೈಪ್‌ಗಳ ಮೂಲಕ ಮಳೆ ಬಂದರೆ ಮಳೆನೀರು ಈ ಕೊಳದಲ್ಲಿ ಸೇರುತ್ತದೆ.


    ಅವರು ಅಂತರ್ಜಲ ಮೋಟಾರ್ ಅನ್ನು ನೀರಿನ ಮೂಲವಾಗಿಯೂ ಬಳಸುತ್ತಾರೆ. ಅಗತ್ಯವಿದ್ದಾಗ ಮಾತ್ರ ಪಾಲಿಹೌಸ್‌ನಲ್ಲಿ ಬೆಳೆಗಳಿಗೆ ಹನಿ ನೀರಿನ ವ್ಯವಸ್ಥೆಯಿಂದ ನೀರುಣಿಸಲಾಗುತ್ತದೆ. ಹನಿ ನೀರಾವರಿ ಅತ್ಯಗತ್ಯ ಅಂಶಗಳಲ್ಲಿ ಒಂದಾಗಿದೆ ಎಂದು ಭಿಕ್ಷಾಪತಿ ಹೇಳುತ್ತಾರೆ.


    ರೈತರಿಗೆ ಆರ್ಥಿಕ ನಷ್ಟಕ್ಕೆ ಕಾರಣವಾಗುವ ಎಲ್ಲಾ ಋತುಗಳಲ್ಲಿಯೂ ಕೆಲವು ಲಾಭದಾಯಕ ಬೆಳೆಗಳನ್ನು ಬೆಳೆಯಲು ಅವಕಾಶ ನೀಡದ ಕಠಿಣ ಹವಾಮಾನ ಪರಿಸ್ಥಿತಿಗಳನ್ನು ತಪ್ಪಿಸಲು, ಪಾಲಿಹೌಸ್ ಕೃಷಿ ವಿಕಸನಗೊಂಡಿದೆ. ಪಾಲಿಹೌಸ್ ಕೃಷಿಯನ್ನು ಉತ್ತೇಜಿಸಲು, ಸರ್ಕಾರವು ರೈತರಿಗೆ ಪಾಲಿಹೌಸ್ ಸಬ್ಸಿಡಿಗಳನ್ನು ಒದಗಿಸುತ್ತದೆ. ಪಾಲಿಹೌಸ್ ವ್ಯವಸಾಯವು ರೈತರ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸುವಲ್ಲಿ ಹಸಿರು ಕ್ರಾಂತಿಯನ್ನು ಹೋಲುವ ಒಂದು ಕ್ರಾಂತಿಕಾರಿ ಕಲ್ಪನೆಯಾಗಿದೆ.

    Published by:Precilla Olivia Dias
    First published: