Online Business: ಕೇವಲ 2 ಲಕ್ಷದಿಂದ ಉದ್ಯಮ ಆರಂಭಿಸಿದ ಸ್ನೇಹಿತರು! ಈಗ 135 ಕೋಟಿ ಒಡೆಯರು

ಈ ಪ್ರೇರಣಾ ಕಥೆಯಲ್ಲಿ ಬರುವುದು ಪ್ರಮುಖವಾಗಿ ಮೂವರು ಸ್ನೇಹಿತರು. ಇವರು ದ್ವಾರಕಾದ ನೇತಾಜಿ ಸುಭಾಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಒಟ್ಟಿಗೆ ಅಧ್ಯಯನ ನಡೆಸಿದ್ದಾರೆ. ನಂತರ 2010 ರಲ್ಲಿ ಕೇವಲ ರೂ. 2 ಲಕ್ಷದಲ್ಲಿ ತಮ್ಮದೇ ಆದ ವಿಶಿಷ್ಟ ಆನ್‌ಲೈನ್ ಉದ್ಯಮ ಬೇಕಿಂಗ್‌ಗೋವನ್ನು ಪ್ರಾರಂಭಿಸಿದರು. ಈಗ ಅದರ ವಹಿವಾಟಿನ ಬಗ್ಗೆ ನೀವು ಏನಾದರೂ ಕೇಳಿದರೆ ಆಶ್ಚರ್ಯ ಪಡುತ್ತೀರಿ. ಏಕೆಂದರೆ ಅದರ ವಹಿವಾಟು ಬರೋಬ್ಬರಿ ಈಗ ರೂ. 135 ಕೋಟಿ ವ್ಯಹಾರ ವಹಿವಾಟನ್ನು ನಡೆಸುತ್ತದೆ.

ಉದ್ಯಮ ಆರಂಭಿಸಿದ 3 ಸ್ನೇಹಿತರು

ಉದ್ಯಮ ಆರಂಭಿಸಿದ 3 ಸ್ನೇಹಿತರು

  • Share this:
ಪ್ರಪಂಚದ ಯಾವುದೇ ದೇಶಗಳಲ್ಲೂ ಇಲ್ಲದಷ್ಟು ಯುವಶಕ್ತಿ (youth power) ನಮ್ಮ ದೇಶದಲ್ಲಿದೆ. ಆ ಯುವಶಕ್ತಿಯಲ್ಲಿ ಕೆಲವರು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಬಳಸಿ, ಉತ್ತಮ ಸಾಧನೆ (achievement) ಮಾಡುತ್ತಾರೆ. ಅಂತಹ ಮೂವರು ಸ್ನೇಹಿತರು  (Three Friends) ಒಟ್ಟುಗೂಡಿ ಬೃಹತ್‌ ಕಂಪನಿಯನ್ನು (Company) ಆರಂಭಿಸಿ ಅದರಿಂದ ಉತ್ತಮ ಆದಾಯವನ್ನು (Income) ಸಹ ಗಳಿಸುತ್ತಿರುವ ಕಥೆ ದೇಶದ ಯುವಕರಿಗೆ ಪ್ರೇರಣೆ ನೀಡದೆ ಇರಲಾರದು. ಈ ಮೂವರು ಸ್ನೇಹಿತರು ಹೇಗೆ ಹೊಸ ಕಂಪನಿಯನ್ನು ಆರಂಭಿಸಿದರು? ಅದರ ವಹಿವಾಟು ಈಗ ಎಷ್ಟಿದೆ? ಹೀಗೆ ಇತರ ಮಾಹಿತಿಗಳನ್ನು ಈ ಲೇಖನದಲ್ಲಿಂದು ನಾವು ತಿಳಿಯೋಣ.

ಆನ್‌ಲೈನ್ ಉದ್ಯಮ ಬೇಕಿಂಗ್‌ಗೋ
ಈ ಪ್ರೇರಣಾ ಕಥೆಯಲ್ಲಿ ಬರುವುದು ಪ್ರಮುಖವಾಗಿ ಮೂವರು ಸ್ನೇಹಿತರು. ಇವರು ದ್ವಾರಕಾದ ನೇತಾಜಿ ಸುಭಾಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಒಟ್ಟಿಗೆ ಅಧ್ಯಯನ ನಡೆಸಿದ್ದಾರೆ. ನಂತರ 2010 ರಲ್ಲಿ ಕೇವಲ ರೂ. 2 ಲಕ್ಷದಲ್ಲಿ ತಮ್ಮದೇ ಆದ ವಿಶಿಷ್ಟ ಆನ್‌ಲೈನ್ ಉದ್ಯಮ ಬೇಕಿಂಗ್‌ಗೋವನ್ನು ಪ್ರಾರಂಭಿಸಿದರು. ಈಗ ಅದರ ವಹಿವಾಟಿನ ಬಗ್ಗೆ ನೀವು ಏನಾದರೂ ಕೇಳಿದರೆ ಆಶ್ಚರ್ಯ ಪಡುತ್ತೀರಿ. ಏಕೆಂದರೆ ಅದರ ವಹಿವಾಟು ಬರೋಬ್ಬರಿ ಈಗ ರೂ. 135 ಕೋಟಿ ವ್ಯಹಾರ ವಹಿವಾಟನ್ನು ನಡೆಸುತ್ತದೆ.

ಮೊದಲ ಉದ್ಯಮ ಫ್ಲವರ್ ಔರಾ
ಇದಕ್ಕೂ ಮೊದಲು ಈ ಮೂವರು ಸ್ನೇಹಿತರಾದ ಹಿಮಾಂಶು ಚಾವ್ಲಾ, ಸುಮನ್ ಪತ್ರ ಮತ್ತು ಶ್ರೇಯ್ ಸೆಹಗಲ್ ಅವರು ತಮ್ಮ ಮೊದಲ ಉದ್ಯಮ ಫ್ಲವರ್ ಔರಾ ಎಂಬ ಆನ್‌ಲೈನ್‌ನಲ್ಲಿ ಹೂವು, ಕೇಕ್ ಮತ್ತು ವೈಯಕ್ತಿಕವಾಗಿ ಉಡುಗೊರೆ ಕಳಿಸುವ ಕಂಪನಿಯನ್ನು 2010 ರಲ್ಲಿ ಪ್ರಾರಂಭಿಸಿದರು. ಆ ಉದ್ಯಮವು ಕೂಡ ಈಗ ಯಶಸ್ವಿ ಕಂಪನಿಯಾಗಿ ಹೊರಹೊಮ್ಮಿದೆ.

ಇದನ್ನೂ ಓದಿ:  Starbucks: ಕಾಫಿ ದೈತ್ಯ ಸ್ಟಾರ್‌ಬಕ್ಸ್‌ನ ನೂತನ ಸಿಇಒ ಆಗಿ ಭಾರತೀಯನ ಆಯ್ಕೆ! ನಿಜಕ್ಕೂ ಇದು ನಾವು ಹೆಮ್ಮೆ ಪಡುವ ವಿಚಾರ

ಎರಡೂ ಕಂಪನಿಯ ಒಟ್ಟು ಆದಾಯ 
ಇವರ ಎರಡು ಕಂಪನಿಗಳಾದ ಫ್ಲವರ್ ಔರಾ ಮತ್ತು ಬೇಕಿಂಗೊ ಉದ್ಯಮಗಳ ಒಟ್ಟು ವಹಿವಾಟು ರೂ. 135 ಕೋಟಿ ಆಗಿದೆ. ಈ ಕಂಪನಿಗಳು ಸುಮಾರು 650 ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿವೆ ಮತ್ತು 11 ನಗರಗಳಲ್ಲಿ ತನ್ನ ಇತರ ಶಾಖೆಗಳನ್ನು ತೆರೆದಿದೆ. ಬೇಕಿಂಗ್‌ ಗೋ ಕಂಪನಿಯು ಕ್ಲೌಡ್ ಕಿಚನ್ ಮಾದರಿಯಲ್ಲಿ ಕೆಲಸ ಮಾಡುವ ಒಂದು ವಿಶಿಷ್ಠ ಆನ್‌ಲೈನ್ ಬೇಕರಿಯಾಗಿದೆ.

ಉದ್ಯಮದ ಬಗ್ಗೆ ಶ್ರೇಯ್‌ ಅವರು ಏನ್ ಹೇಳ್ತಾರೆ 
ಈ ಕಂಪನಿಗಳ ಕುರಿತು "ನಮ್ಮ ಆರಂಭವು ನಿಜವಾಗಿಯೂ ಆಸಕ್ತಿದಾಯಕವಾಗಿತ್ತು. ನಾವು ಕಂಪನಿಯ ಆರಂಭಿಕ ದಿನಗಳಲ್ಲಿ ಕೇವಲ ಒಬ್ಬ ನೌಕರನನ್ನು ಮಾತ್ರ ಗ್ರಾಹಕ ಸೇವಾ ಪ್ರತಿನಿಧಿಯಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದೆವು. ಅವರ ಜೊತೆ ನಾವೇ ಕಂಪನಿಯ ಕಾರ್ಯಾಚರಣೆಗಳು ಮತ್ತು ವಿತರಣೆಯನ್ನು ಸಹ ನಿರ್ವಹಿಸುತ್ತಿದ್ದೆವು. ಫೆಬ್ರವರಿ 2010 ರಲ್ಲಿ ಎಫ್‌ಎ ಗಿಫ್ಟ್ಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಫ್ಲವರ್ ಔರಾ ಕಂಪನಿಯ ಬ್ರಾಂಡ್ ಅಂಬಾಸಿಡರ್‌ ಆಗಿ ಹಿಮಾಂಶು ಆಯ್ಕೆ ಆದರು. ಕಂಪನಿಯು ಇದರ ಅಡಿಯಲ್ಲಿ ಫ್ಲವರ್‌ ಔರಾ ಕಂಪನಿಯು ಕಾರ್ಯ ನಿರ್ವಹಿಸಲು ಆರಂಭಿಸಿತು. ಈ ಸಮಯದಲ್ಲಿ ಸುಮನ್‌ ಅವರು ಎಂಬಿಎ ಮಾಡುತ್ತಿದ್ದರಿಂದ ಒಂದು ವರ್ಷದ ನಂತರ ಕಂಪನಿಗೆ ಸೇರಿದರು” ಎಂದು ವೀಕೆಂಡ್ ಲೀಡರ್ ಶ್ರೇಯ್‌ ಅವರು ಹೇಳಿದರು.

500 ಜನರ ಉದ್ಯೋಗಿಗಳನ್ನು ಹೊಂದಿರುವ ಬೃಹತ್‌ ಕಂಪನಿ
ಆರಂಭದಲ್ಲಿ ವ್ಯಾಪಾರವು ಸಣ್ಣ ಪ್ರಮಾಣದಲ್ಲಿತ್ತು. ಆದರೆ ನಂತರ ಅದು ಉತ್ತಮವಾಗಿ ನಡೆಯಲು ಪ್ರಾರಂಭವಾಯಿತು ಮತ್ತು ಅವರು ಮೊದಲ ವರ್ಷ ರೂ. 10 ಲಕ್ಷ ವರೆಗೂ ವ್ಯಾಪಾರ ವಹಿವಾಟು ನಡೆಸಿದರು. ಫ್ಲವರ್ ಔರಾ ಕಂಪನಿಯು ಇಂದು ರೂ. 60 ಕೋಟಿ ವಹಿವಾಟು (2021-22 ರಲ್ಲಿ) ಮತ್ತು 150 ಉದ್ಯೋಗಿಗಳೊಂದಿಗೆ ಎತ್ತರವಾಗಿ ಬೆಳೆಯುತ್ತಿದೆ. ಆದರೆ, 2021-22 ರಲ್ಲಿ, ಬೇಕಿಂಗೋ ಕಂಪನಿಯು ಸುಮಾರು ರೂ.75 ಕೋಟಿ ವ್ಯಾಪಾರ ವಹಿವಾಟಿನಲ್ಲಿ ಪ್ರಗತಿ ಸಾಧಿಸಿದೆ ಮತ್ತು 500 ಜನರ ಉದ್ಯೋಗಿಗಳನ್ನು ಹೊಂದಿರುವ ಬೃಹತ್‌ ಕಂಪನಿ ಆಗಿ ಬೆಳೆದು ನಿಂತಿದೆ.

ಇದನ್ನೂ ಓದಿ:  Zomato: ವಿಮಾನದ ಮೂಲಕ ಡೆಲಿವರಿ ಮಾಡುತ್ತೆ ಝೊಮ್ಯಾಟೋ, ಎಲ್ಲಿಂದ ಏನ್ ಬೇಕಾದ್ರೂ ಆರ್ಡರ್​ ಮಾಡಿ!

ಫ್ಲವರ್ ಔರಾದ ಕಂಪನಿಯ ಯಶಸ್ಸಿನ ನಂತರ, ಅವರು 2016 ರಲ್ಲಿ ಹೊಸದಾಗಿ ನೋಂದಾಯಿತ ಕಂಪನಿಯಾದ ಬೇಕ್ ವಿಶ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಬೇಕಿಂಗೋ ಕಂಪನಿಯನ್ನು ಪ್ರತ್ಯೇಕ ಬ್ರಾಂಡ್ ಕಂಪನಿ ಆಗಿ ಪ್ರಾರಂಭಿಸಿದರು. “ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಆಹಾರವು ಒಂದು ಅವಿಭಾಜ್ಯ ಭಾಗವಾಗಿದೆ. ಆದರೆ ಭಾರತದಲ್ಲಿ ಪಿಜ್ಜಾ ಹಟ್ ಅಥವಾ ಮೆಕ್‌ಡೊನಾಲ್ಡ್‌ನಂತಹ ಪ್ರಮುಖ ಆಹಾರ ಬ್ರ್ಯಾಂಡ್‌ಗಳು ನಮ್ಮ ದೇಶದಲ್ಲಿ ಇಲ್ಲ. " ಎನ್ನುತ್ತಾರೆ ಹಿಮಾಂಶು.

ಅತೀ ಹೆಚ್ಚು ಬೇಡಿಕೆಯಲ್ಲಿರುವ ವ್ಯಾಪಾರ
"ಭಾರತದಲ್ಲಿ ಬೇಕರಿ ವ್ಯಾಪಾರವು ಹೆಚ್ಚು ಬೇಡಿಕೆಯಲ್ಲಿರುವ ವ್ಯಾಪಾರ ಆಗಿದೆ. ಸ್ಥಳೀಯ ಬೇಕರಿ ಉತ್ಪನ್ನಗಳನ್ನು ನೀಡುವಲ್ಲಿ ಈ ಬೇಕರಿ ವ್ಯಾಪಾರವು ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕ ಅಂಗಡಿಯಂತೆಯೇ, ಅದು ಅತ್ಯುತ್ತಮ ಉತ್ಪನ್ನವನ್ನು ಪೂರೈಸುತ್ತದೆ” ಎಂದು ಅವರು ಹೇಳಿದರು.

ಇದಲ್ಲದೆ, “ಈಗ ಎಲ್ಲೆಡೆ ಆನ್‌ಲೈನ್‌ ವ್ಯಾಪಾರ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ ಹಿನ್ನೆಲೆ ಫ್ಲವರ್‌ ಔರಾ ಕಂಪನಿಯು ಆನ್‌ಲೈನ್ ಆರ್ಡರ್‌ಗಳನ್ನು ಸ್ವೀಕರಿಸಿದ ನಂತರ ಭಾರತದಲ್ಲಿ ಎಲ್ಲಿ ಬೇಕಾದರೂ ಪ್ರೀಮಿಯಂ ಗುಣಮಟ್ಟದ ಕೇಕ್‌ಗಳನ್ನು ತಲುಪಿಸುವ ಆಲೋಚನೆಯೊಂದಿಗೆ ಬೇಕಿಂಗ್ ಗೋ ಕಂಪನಿಯನ್ನು ಪ್ರಾರಂಭಿಸಲಾಗಿದೆ. ಒಂದೇ ಬಾರಿಗೆ ಸುಮಾರು 5-10 ವಿಧದ ಕೇಕ್‌ಗಳನ್ನು ನೀಡುವ ಸ್ಥಳೀಯ ಬೇಕರಿಗಳಿಗೆ ಹೋಲಿಸಿದರೆ, ಬೇಕಿಂಗ್‌ ಗೊ ಕಂಪನಿಯು ನಿಮಗೆ ಒಂದೇ ಸಮಯಕ್ಕೆ 500 ವಿಧದ ಕೇಕ್‌ಗಳನ್ನು ಒದಗಿಸುವಲ್ಲಿ ಸಮರ್ಥವಾದ ಕಂಪನಿ ಆಗಿದೆ. ನಾವು ಈಗ ಮೀರತ್, ಪಾಣಿಪತ್, ರೋಹ್ಟಕ್, ಕರ್ನಾಲ್, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ 11 ನಗರಗಳಲ್ಲಿ ಇದರ ಶಾಖೆಗಳನ್ನು ಆರಂಭಿಸಿ, ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ” ಎಂದು ಅವರು ಹೇಳಿದರು.

ದೆಹಲಿಯ ಎನ್‌ಸಿಆರ್‌ ನ ಟಾಪ್ 3 ಬೇಕರಿ ಕಂಪನಿಗಳಲ್ಲಿ ಒಂದಾದ ಬೇಕಿಂಗ್‌ ಗೋ
“ನಮ್ಮ ಮಳಿಗೆಗಳು ಸ್ವಿಗ್ಗಿ ಮತ್ತು ಜೊಮಾಟೊ ಮೂಲಕ 8-10 ಕಿಮೀ ವ್ಯಾಪ್ತಿಯಲ್ಲಿ ನಮ್ಮ ಕಂಪನಿಯ ಕೇಕ್‌ಗಳನ್ನು ಗ್ರಾಹಕರಿಗಗೆ ತಲುಪಿಸುವ ಕೆಲಸವನ್ನು ಅತ್ಯಂತ ಉತ್ಸಾಹದಿಂದ ಮಾಡುತ್ತವೆ. ನಾವು ಪೂರೈಕೆ ಮತ್ತು ಬೇಡಿಕೆಯ ಅಂತರವನ್ನು ಸೂಕ್ತವಾಗಿ ಅರ್ಥಮಾಡಿಕೊಂಡಿದ್ದೇವೆ ಮತ್ತು ಅದಕ್ಕಾಗಿಯೇ ನಾವು ನಮ್ಮ ಗ್ರಾಹಕರ ಅಗತ್ಯತೆಗಳು ಏನು ಎಂಬುದನ್ನು ತಿಳಿಯಲು ಸಾದ್ಯವಾಗಿದೆ. ಇದರ ಕಾರಣದಿಂದ ನಮ್ಮ ಬೇಕಿಂಗ್‌ ಗೋ ಕಂಪನಿಯು ಇಂದು ದೆಹಲಿಯ ಎನ್‌ಸಿಆರ್‌ ನ ಟಾಪ್ 3 ಬೇಕರಿ ಕಂಪನಿಗಳಲ್ಲಿ ಒಂದಾಗಿದೆ. ಇದು ನಿಜಕ್ಕೂ ಸಂತಸ ಪಡುವ ವಿಚಾರ ಆಗಿದೆ. ಇದರಿಂದ ನಮ್ಮ ಕೆಲಸ ಸಾರ್ಥಕತೆಯನ್ನು ಪಡೆಯುತ್ತಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ:  Business Startup: ತನ್ನದೇ ಆದ ಎರಡು ಮಲ್ಟಿ ಕ್ರೋರ್ ಮೆನ್ಸ್ ವೇರ್ ಬ್ರಾಂಡ್ ಅನ್ನು ನಿರ್ಮಿಸಿದ ಕೇರಳದ ಯುವಕ

ಬೇಕಿಂಗೊ ಮತ್ತು ಫ್ಲವರ್ ಔರಾದೊಂದಿಗೆ, ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಇನ್ನು ಉತ್ತಮ ಆದಾಯ ಗಳಿಸಬೇಕೆಂದು ಬಯಸುವ ಈ ಮೂವರು ಯುವಜನರು ಇಂದು ಹೆಚ್ಚಾಗಿ ಆಚರಣೆ ಮಾಡುವ ಹುಟ್ಟುಹಬ್ಬಗಳು, ಮದುವೆಗಳು ಮತ್ತು ವಿವಾಹ ವಾರ್ಷಿಕೋತ್ಸವದಂತಹ ಸಂದರ್ಭಗಳಲ್ಲಿ ಎಲ್ಲರೂ ವಿಶೇಷ ಕೇಕ್‌ಗಳನ್ನು ಕತ್ತರಿಸುವ ಮೂಲಕ ತಮ್ಮ ಸಂಭ್ರಮಾಚರಣೆಗೆ ಮತ್ತಷ್ಟು ಖುಷಿಯನ್ನು ಸೇರಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಬೇಕಿಂಗ್‌ ಗೋ ಕಂಪನಿಯು ದೊಡ್ಡ ಗಾತ್ರದ ಮತ್ತು ವಿಶೇಷತೆಯಿಂದ ಕೂಡಿರುವ ಕೇಕ್‌ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಇದರಿಂದ ಬೇಕಿಂಗ್‌ ಗೋ ಬೇಕರಿಯು ಗ್ರಾಹಕರ ನೆಚ್ಚಿನ ಬೇಕರಿ ಆಗಿ ಹೊರಹೊಮ್ಮುತ್ತಿದೆ.

ಪ್ರಸ್ತಕ ವರ್ಷವಾದ 2021-22 ರಲ್ಲಿ, ಬೇಕಿಂಗ್‌ ಗೋ ರೂ. 75 ಕೋಟಿ ವ್ಯಾಪಾರ ವಹಿವಾಟು ಅನ್ನು ಸಾಧಿಸಿದೆ ಮತ್ತು 500 ಜನರನ್ನು ಉದ್ಯೋಗಕ್ಕೆ ತೆಗೆದುಕೊಂಡಿದೆ. ಸ್ವಿಗ್ಗಿ ಮತ್ತು ಜ್ಯೊಮ್ಯಾಟೊ ನಂತಹ ಇತರ ಆಹಾರ ಪೋರ್ಟಲ್‌ಗಳಲ್ಲಿ ಸುಮಾರು 70% ರಷು ಆಹಾರ ಮಾರಾಟಗಳು ನಡೆಯುತ್ತವೆ. ಆದರೆ ಅವುಗಳ ಮಾರಾಟದ 30% ರಷ್ಟು ವ್ಯಾಪಾರವು ಅವುಗಳ ವೆಬ್‌ಸೈಟ್‌ನಲ್ಲಿಯೇ ನಡೆಯುತ್ತದೆ.

ಕಂಪನಿಗಳ ಜವಬ್ದಾರಿಗಳನ್ನು ಸಮನಾಗಿ ಹಂಚಿಕೊಂಡ ಮೂವರು ಸ್ನೇಹಿತರು
ಇವೆರಡು ಕಂಪನಿಗಳ ಜವಬ್ದಾರಿಗಳನ್ನು ಈ ಮೂವರು ಸ್ನೇಹಿತರು ಸಮನಾಗಿ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಸುಮನ್ ಮಾರ್ಕೆಟಿಂಗ್ ಅನ್ನು ನೋಡಿಕೊಳ್ಳುತ್ತಿದ್ದರೆ, ಶ್ರೇ ಮತ್ತು ಹಿಮಾಂಶು ಅವರು ಕಾರ್ಯಾಚರಣೆ, ವಿಸ್ತರಣೆ, ಆರ್ & ಡಿ ಮತ್ತು ಅಗ್ರಿಗೇಟರ್‌ಗಳನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ:  Business: ದಿನಕ್ಕೆ 12 ಟನ್ ಕೋಕಮ್ ಶರ್ಬತ್ ತಯಾರಿಸಿ ಕೋಟಿ ಹಣ ಸಂಪಾದಿಸಿ ಯಶಸ್ಸು ಕಂಡ ಮಹಿಳೆ

ಹೀಗೆಯೇ ದೇಶದ ಅಭಿವೃದ್ಧಿಗೆ ಯುವಜನತೆ ಹೇಗೆಲ್ಲ ತಮ್ಮ ಶಕ್ತಿ ಸಾಮರ್ಥ್ಯವನ್ನು ಸದುಪಯೋಗ ಮಾಡಿಕೊಳ್ಳಬಹುದು ಎಂಬುದಕ್ಕೆ ಈ ಮೂವರು ಅನೇಕ ಯುವಕರಿಗೆ ದೊಡ್ಡ ಮಾದರಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಯುವ ಪೀಳಿಗೆಯಲ್ಲಿರುವ ಧನಾತ್ಮಕ ಚಿಂತನೆಗಳು ದೇಶಕ್ಕೆ ಮತ್ತು ಸಮಾಜಕ್ಕೆ ಎಷ್ಟು ಪೂರಕ ಎಂಬುದು ಇವರ ಕಥೆಯಿಂದ ನಮಗೆ ತಿಳಿದು ಬರುತ್ತದೆ. ಯುವಕರು ತಮ್ಮಲ್ಲಿರುವ ವೈವಿಧ್ಯಮಯ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಅಭಿವ್ಯಕ್ತಿಗೊಳಿಸಲು ಒಳ್ಳೆಯ ವೇದಿಕೆಯನ್ನು ಸೃಷ್ಠಿಸಿಕೊಳ್ಳಲು ತಮ್ಮನ್ನು ತಾವೇ ಪ್ರೇರೇಪಿಸಿಕೊಳ್ಳಬೇಕು. ಆಗ ಯುವಕರ ಬಾಳಲ್ಲಿ ಮ್ಯಾಜಿಕ್‌ಗಳು ನಡೆಯುತ್ತವೆ.
Published by:Ashwini Prabhu
First published: