ಕೆಲವೊಮ್ಮೆ ತಂದೆ ಶುರು ಮಾಡಿದ ವ್ಯವಹಾರವನ್ನು ಮಕ್ಕಳು ತಮ್ಮ ಶಿಕ್ಷಣವನ್ನು ಪೂರ್ಣ ಗೊಳಿಸಿದ ನಂತರ ತಮ್ಮದೇ ಆದ ರೀತಿಯಲ್ಲಿ ಅದನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಕೆಲವರಿಗೆ ತಂದೆಗಿಂತ ಹೆಚ್ಚು ಯಶಸ್ಸು ದೊರೆತರೆ, ಇನ್ನೂ ಕೆಲವರು ಕೈಸುಟ್ಟುಕೊಳ್ಳುತ್ತಾರೆ. ಆದರೆ ಇಲ್ಲಿ ಒಬ್ಬಳು ಮಗಳ ಕಥೆ ಇದೆ. ಈ ಸ್ಟೋರಿ ನಿಜಕ್ಕೂ ಅನೇಕರಿಗೆ ಸ್ಪೂರ್ತಿಯಾಗೋದರಲ್ಲಿ ಸಂಶಯವೇ ಇಲ್ಲ.
ಹೌದು.. ವಡೋದರಾ ಮೂಲದ ಕಾನೂನು ಪದವೀಧರೆ ಕಲ್ಯಾಣಿ ಪಾಂಡ್ಯ (29) ಅವರು ಶಂಕರ್ ಫಾರ್ಮ್ಸ್ ಎಂಬ ಹೆಸರಿನಲ್ಲಿ ಉದ್ಯಮಕ್ಕೆ ಕೈ ಹಾಕ್ತಾರೆ. ಶಂಕರ್ ಫಾರ್ಮ್ಸ್ ಹೆಸರಿನಲ್ಲಿ ನೈಸರ್ಗಿಕ ತುಪ್ಪವನ್ನು ಜನರಿಗೆ ಪರಿಚಯಿಸಲು ನಿರ್ಧರಿಸಿದರು. ಆರಂಭದಲ್ಲಿ ತಮ್ಮ ಮನೆಯಲ್ಲೇ ಆರಂಭಿಸಿದ ಈ ಬ್ಯುಸಿನೆಸ್ ಮುಂದಕ್ಕೆ ಅದು ತನ್ನನ್ನು ಬಹು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಅವರು ಕನಸಿನಲ್ಲೂ ಅಂದುಕೊಂಡಿರಲಿಲ್ಲವಂತೆ.
ಇದನ್ನೂ ಓದಿ: Dakshina Kannada: ಒಂದೇ ಎಕರೆಯಲ್ಲಿ 30 ವಿಧದ 60 ಹಲಸಿನ ಮರಗಳನ್ನು ಬೆಳೆದ ವಿಟ್ಲದ ಕೃಷಿಕ!
2012 ರಲ್ಲಿ ಶುರು ಮಾಡಿದ್ರಂತೆ ಈ ಶಂಕರ್ ಫಾರ್ಮ್ಸ್
2012ರಲ್ಲಿ ತನ್ನ ತಂದೆ ವಿಕ್ರಮ್ ಪಾಂಡ್ಯ ಅವರ ಅವರ ಸಹಖಾರದೊಂದಿಗೆ ಶಂಕರ್ ಫಾರ್ಮ್ಸ್ ಅನ್ನು ಪ್ರಾರಂಭಿಸ್ತಾರೆ. ಅರೆಕಾಲಿಕ ಉದ್ಯಮಿ ಮತ್ತು ಅರೆಕಾಲಿಕ ಕೃಷಿಕರಾಗಿದ್ದ ಅವರು ಸಾವಯವ ಕೃಷಿಯ ಅಬ್ಬರವನ್ನು ಕಂಡು ಉತ್ಸುಕರಾದ್ರು. ಕಲ್ಯಾಣಿ ಹೇಳೋ ಪ್ರಕಾರ ಈ ಹೊಸ ಉದ್ಯಮದಿಂದ ಆರಂಭದಲ್ಲಿ ಗ್ರಾಹಕ ಜನರ ಪ್ರೀತಿಗೆ ಪಾತ್ರರಾದರೂ, ಮಾರಾಟ ಮತ್ತು ಬ್ರ್ಯಾಂಡಿಂಗ್ ವಿಷಯದಲ್ಲಿ ಮಾರ್ಕೆಟ್‌ನಲ್ಲಿ ಹೆಚ್ಚು ಖ್ಯಾತಿ ಗಳಿಸಲು ಸಾಧ್ಯವಾಗಿಲ್ಲ. ಆ ಸಮಯದಲ್ಲಿ ನಾನು ಲಂಡನ್ ನಲ್ಲಿ ಸ್ನಾತಕೋತ್ತರ ಕಾನೂನು ಅಧ್ಯಯನ ಮಾಡುತ್ತಿದ್ದೆ. ಅದನ್ನು ಮುಗಿಸಿದ ನಂತರ ಭಾರತಕ್ಕೆ ಮರಳಿ ಒಂದು ವರ್ಷ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದೆ. ಆಗ ನನಗೆ ಅದು ಅಷ್ಟೊಂದು ತೃಪ್ತಿ ನೀಡಲಿಲ್ಲ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಕಲ್ಯಾಣಿ ಆ ಬಳಿಕ ಕೆಲಸವನ್ನು ತೊರೆದು ಬರೋಡಾಗೆ ಮರಳಿದೆ. ಊರಿನಲ್ಲಿದ್ದಾಗ ಅಪ್ಪನ ಜೊತೆ ಕೃಷಿ ಉದ್ಯಮ ಮತ್ತು ಅದರ ವ್ಯಾಪ್ತಿಯನ್ನು ಸಂಶೋಧನೆ ಮಾಡಲು ಶುರು ಮಾಡಿದೆ ಎಂದು ಹೇಳುತ್ತಾರೆ.
'ಒಂದು ಉತ್ಪನ್ನ ಬದುಕನ್ನೇ ಬದಲಾಯಿಸಿತು'
ನಾವು ಸಕ್ಸಸ್ ಆಗಬಹುದಾದ ಹಲವಾರು ಕ್ಷೇತ್ರಗಳಿವೆ ಎಂಬುದನ್ನು ನಾನು ಗಮನಿಸಿದೆ. ಆ ಸಮಯದಲ್ಲಿ ಈ ಉದ್ಯಮವು ಅಷ್ಟೊಂದು ಲಾಭದಾಯಕವಲ್ಲದಿದ್ದರೂ, ನಾನು ಅದನ್ನು ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದೆ ಎಂದು ಹೇಳುವ ಕಲ್ಯಾಣಿ, 2019 ರಲ್ಲಿ ಈ ವ್ಯವಹಾರದಲ್ಲಿ ಒಂದು ದಿಟ್ಟ ಹೆಜ್ಜೆ ಇಡಲು ನಿರ್ಧರಿಸಿದೆ. ಅದು ನಮ್ಮ ತುಪ್ಪವನ್ನು ಬ್ರ್ಯಾಂಡ್ ಮಾಡುವುದು. ಮತ್ತು ಈಗ ಮಾರ್ಕೆಟ್‌ನಲ್ಲಿ ಇರುವ ಉತ್ಪನ್ನಗಳ ಸಾಲಿಗೆ ಅದನ್ನುನ ಸೇರಿಸೋದು.
ನಂತರ ನಾನು ನಮ್ಮ ಬ್ರ್ಯಾಂಡೆಡ್ ತುಪ್ಪವನ್ನು ಅಮೆಜಾನ್ ಮತ್ತು ಇತರ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ. ಮತ್ತು 2020 ರಲ್ಲಿ ಆನ್ಲೈನ್ ಜಾಹೀರಾತುಗಳನ್ನು ನಡೆಸಿದೆ ಎಂದು ಕಲ್ಯಾಣಿ ಹೇಳುತ್ತಾರೆ. ಮುಂದುವರಿದು, 'ನಾನು ಉದ್ಯಮ ಪ್ರಾರಂಭಿಸಿದಾಗಿನಿಂದ ನಮ್ಮ ಉತ್ಪನ್ನವು ಒಂದೂವರೆ ವರ್ಷದಲ್ಲಿ ಅನೇಕ ಅಂಗಡಿಗಳಿಗೆ ತಲುಪಿತು ಎಂದು ಖುಷಿ ಪಡುತ್ತಾರೆ.
ಇದನ್ನೂ ಓದಿ: Farming Tips: ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಬೇಕಾ? ಈ ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಸಿಗುತ್ತೆ!
ತಂದೆ-ಮಗಳ ಸಾವಯವ ಕೃಷಿ ಮತ್ತು ಹೈನುಗಾರಿಕೆ
ನಾವು ಇದಕ್ಕೂ ಮೊದಲು ಸಾವಯವ ಕೃಷಿ ಮತ್ತು ಹೈನುಗಾರಿಕೆ ಮಾಡುತ್ತಿದ್ದೆವು. ನಮ್ಮಲ್ಲಿ 100ಕ್ಕೂ ಹೆಚ್ಚು ಹಸುಗಳಿವೆ ಮತ್ತು ಹಸುವಿನ ಸಗಣಿಯನ್ನು ಗೊಬ್ಬರವಾಗಿ ಬಳಸುತ್ತಿದ್ದೇವೆ ಎಂದು ಹೇಳುವ ಕಲ್ಯಾಣಿ, ನಾವು ಯಾವಾಗಲೂ ಬೆಳವಣಿಗೆಯ ಸುಸ್ಥಿರ ಮಾರ್ಗಗಳ ಮೇಲೆ ಕೇಂದ್ರೀಕರಿಸಿದ್ದೇವೆ. ಆದರೆ ಈಗ ನಾವು ಈ ತುಪ್ಪವನ್ನು ಬ್ರ್ಯಾಂಡ್ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳುತ್ತಾರೆ.
ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕೆಲವು ಅಂಶಗಳನ್ನು ನಾವು ಕಂಡುಕೊಳ್ಳಬೇಕಾಗಿದೆ ಎನ್ನುವ ಕಲ್ಯಾಣಿ, 'ನನ್ನ ಪ್ರಕಾರ ಕೃಷಿ ರಾಜ್ಯದಲ್ಲಿ ಬೆಳೆಯುತ್ತಿರುವುದನ್ನು ನಾನು ನೋಡಿದ್ದೇನೆ, ಗಿರ್ ಹಸುಗಳ ಹಾಲಿಗೆ ತುಪ್ಪಕ್ಕಿಂತಲೂ ಹೆಚ್ಚು ಬೇಡಿಕೆ ಇದೆ. ಏಕೆಂದರೆ ಅದರ ಕೆನೆಯುಕ್ತ ಹಾಲು ಮತ್ತು ಸುವಾಸನೆಯ ಕಾರಣಕ್ಕೆ ಜನರು ಅದು ಉತ್ತಮ ಎಂದು ಭಾವಿಸುತ್ತಾರೆ ಎಂದು ಹೇಳುತ್ತಾರೆ.
'ನಮ್ಮ ಬ್ರ್ಯಾಂಡ್ ತುಪ್ಪವನ್ನು ಜನ ಇಷ್ಟಪಟ್ಟರು'
ಜನರು ನಮ್ಮ ತುಪ್ಪವನ್ನು ಸವಿಯಲು ಪ್ರಾರಂಭಿಸಿದ ನಂತರ, ಅವರು ಅದನ್ನು ಪ್ರೀತಿಸಲು ಪ್ರಾರಂಭಿಸಿದರು ಮತ್ತು ಅದನ್ನೇ ಹೆಚ್ಚು ಕೊಂಡುಕೊಳ್ಳಳು ಶುರು ಮಾಡಿದರು ಎಂಬುದಾಗಿ ನಾನು ಅಂದ್ಕೊಳ್ತೀನಿ ಎನ್ನುವ ಕಲ್ಯಾಣಿ, ಗಿರ್ ಹಸುಗಳಿಂದ ಮಾತ್ರ ತುಪ್ಪವನ್ನು ತಯಾರಿಸುವ ಕೆಲವು ಬ್ರ್ಯಾಂಡ್‌ಗಳಿಗಿಂತಲೂ ನಮ್ಮ ಉತ್ಪಾದನೆಯ ತುಪ್ಪ ಉತ್ತಮ ರುಚಿಯನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ, ಈ ಉತ್ತಮ ಗುಣಮಟ್ಟದ ತುಪ್ಪವು ಹಸುಗಳಿಗೆ ಸಾವಯವಯುಕ್ತ ಮೇವು ನೀಡಿದ್ದರಿಂದಲೇ ಸಾಧ್ಯವಾಗಿದೆ ಎನ್ನುತ್ತಾರೆ.
ತರಕಾರಿ ಕೃಷಿಯಲ್ಲೂ ಶಂಕರ್ ಫಾರ್ಮ್ಸ್ ಎತ್ತಿದ ಕೈ
ಶಂಕರ್ ಫಾರ್ಮ್ಸ್ ಬರೀ ಹೈನುಗಾರಿಕೆಯಲ್ಲಿ ಮಾತ್ರವಲ್ಲದೆ, ತರಕಾರಿ ಕೃಷಿಯಲ್ಲಿಯೂ ಮುಂಚೂಣಿಯಲ್ಲಿದೆ. 12 ರೈತರ ಗುಂಪು ಮೂರು ಎಕರೆ ಭೂಮಿಯಲ್ಲಿ ಕೆಲಸ ಮಾಡುತ್ತಾರೆ. ಮೆಂತ್ಯೆ, ಬೆಂಡೆಕಾಯಿ, ಐವಿ ಸೋರೆಕಾಯಿ, ಹಸಿರು ಚಪ್ಪಟೆ ಬೀನ್ಸ್, ಅಕ್ಕಿ, ಗೋಧಿ, ರಾಗಿ, ಚಿಕೂ, ಪೇರಳೆ ಸೇರಿ ಅನೇಕ ಬೆಳೆ ಬೆಳೆಯುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ