• Home
  • »
  • News
  • »
  • business
  • »
  • Union Budget: ಬಜೆಟ್​ನಲ್ಲಿ ಈ 5 ಪ್ರಮುಖ ಘೋಷಣೆ ಮೇಲಿದೆ ಎಲ್ಲರ ಕಣ್ಣು!

Union Budget: ಬಜೆಟ್​ನಲ್ಲಿ ಈ 5 ಪ್ರಮುಖ ಘೋಷಣೆ ಮೇಲಿದೆ ಎಲ್ಲರ ಕಣ್ಣು!

ನಿರ್ಮಲಾ ಸೀತಾರಾಮನ್​

ನಿರ್ಮಲಾ ಸೀತಾರಾಮನ್​

ನಿರ್ಮಲಾ ಸೀತಾರಾಮನ್ ತಮ್ಮ ಮುಂಬರುವ ಬಜೆಟ್‌ನಲ್ಲಿ ತೆರಿಗೆ ದರಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ನಂಬಲಾಗಿದೆ ಹಾಗೂ ಸಂಬಳ ಪಡೆಯುವವರಿಗೆ ಪರಿಷ್ಕೃತ ಮಾದರಿಗಳನ್ನು ಪರಿಚಯಸಲಿದ್ದಾರೆ ಎಂದು ಊಹಿಸಲಾಗಿದೆ.

  • Share this:

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರವರಿ 1 ರಂದು ಲೋಕಸಭೆಯಲ್ಲಿ (Likh Sabha) ಕೇಂದ್ರ ಬಜೆಟ್ 2023-24 ಅನ್ನು ಮಂಡಿಸಲಿದ್ದಾರೆ. ಹಾಗೂ ಜನಸಾಮಾನ್ಯರು ಸೇರಿದಂತೆ ದೇಶದ ಪ್ರತಿಯೊಬ್ಬ ಗಣ್ಯರು ಈ ಬಜೆಟ್‌ನತ್ತ (Budget) ಚಿತ್ತ ನೆಟ್ಟಿದ್ದಾರೆ. ಹೆಚ್ಚುತ್ತಿರುವ ಜೀವನ ಮಟ್ಟ ಹಾಗೂ ಹದಗೆಡುತ್ತಿರುವ ಉದ್ಯೋಗ (Job) ಕ್ಷೇತ್ರದಿಂದ ಕಂಗೆಟ್ಟಿರುವ ಮಧ್ಯಮ ವರ್ಗ ಈ ಬಾರಿಯ ಬಜೆಟ್‌ನ ಮೇಲೆ ಕೊಂಚ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದೆ.


ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ


2024 ರ ಸಾರ್ವತ್ರಿಕ ಚುನಾವಣೆಯ ಮುನ್ನ ಮಂಡನೆಯಾಗುತ್ತಿರುವ ಪೂರ್ಣ ವರ್ಷದ ಕೊನೆಯ ಬಜೆಟ್ ಕೂಡ ಹೌದು ಹಾಗಾಗಿ ಮಹತ್ವಾಕಾಂಕ್ಷೆ ಹೆಚ್ಚಿದೆ.


ಬಜೆಟ್ 2023: ಎಫ್‌ಎಂ ನಿರ್ಮಲಾ ಸೀತಾರಾಮನ್ ಅವರಿಂದ ನಿರೀಕ್ಷಿಸಲಾದ ಪ್ರಮುಖ ಘೋಷಣೆಗಳು ಇಲ್ಲಿದೆ


ಬಜೆಟ್ ನಿರೀಕ್ಷೆಗಳು: ಕಡಿಮೆ ಆದಾಯ ತೆರಿಗೆ ದರಗಳು


ನಿರ್ಮಲಾ ಸೀತಾರಾಮನ್ ತಮ್ಮ ಮುಂಬರುವ ಬಜೆಟ್‌ನಲ್ಲಿ ತೆರಿಗೆ ದರಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ನಂಬಲಾಗಿದೆ ಹಾಗೂ ಸಂಬಳ ಪಡೆಯುವವರಿಗೆ ಪರಿಷ್ಕೃತ ಮಾದರಿಗಳನ್ನು ಪರಿಚಯಸಲಿದ್ದಾರೆ ಎಂದು ಊಹಿಸಲಾಗಿದೆ.


ಕೆಲವು ವರ್ಷಗಳ ಹಿಂದೆ ರಿಯಾಯಿತಿ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸುವುದನ್ನು ಹೊರತುಪಡಿಸಿ 2016-17ರ ಬಜೆಟ್‌ನಿಂದ ತೆರಿಗೆ ಸ್ತರಗಳಲ್ಲಿ ಯಾವುದೇ ಮಾರ್ಪಾಡುಗಳಾಗಿಲ್ಲ. ಹೊಸ ನೀತಿಯಡಿಯಲ್ಲಿ ಸರ್ಕಾರವು 30 ಪ್ರತಿಶತ ಮತ್ತು 25 ಪ್ರತಿಶತ ತೆರಿಗೆ ದರಗಳನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.


ಕೇಂದ್ರ ಬಜೆಟ್ 2023: ಆದಾಯ ತೆರಿಗೆ ಮೂಲ ವಿನಾಯಿತಿ ಮಿತಿಯಲ್ಲಿ ಹೆಚ್ಚಳ


ಸಾಮಾನ್ಯ ಜನರ ವೇತನ ಉಳಿತಾಯದ ದೃಷ್ಟಿಯಿಂದ ಮೂಲ ವಿನಾಯಿತಿ ಮಿತಿಯನ್ನು ಪ್ರಸ್ತುತ ರೂ 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕೆಂದು ತಜ್ಞರು ಬಯಸುತ್ತಾರೆ.


ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ವರ್ಷ ವಯಸ್ಸಿನವರು) ಕನಿಷ್ಠ ತೆರಿಗೆ ವಿನಾಯಿತಿ ಮಿತಿಯನ್ನು ಪ್ರಸ್ತುತ ರೂ 3 ಲಕ್ಷದಿಂದ ರೂ 7.5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ತಜ್ಞರು ಹೇಳುತ್ತಾರೆ.


ಇದನ್ನೂ ಓದಿ: PAN-Adhaar Link: ಈಗಲೇ ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ ಮಾ.31ರ ನಂತರ ಅಲೆದಾಡಬೇಕಾಗುತ್ತೆ, ಎಚ್ಚರ!


ಬಜೆಟ್ ನಿರೀಕ್ಷೆಗಳು: ಈಕ್ವಿಟಿ LTCG ಮೇಲೆ ತೆರಿಗೆ ರಹಿತ ಮಿತಿ


ಈಕ್ವಿಟಿ ಷೇರುಗಳ ಮಾರಾಟದಿಂದ ದೀರ್ಘಾವಧಿಯ ಬಂಡವಾಳ ಲಾಭಗಳು (LTCG) ವಾರ್ಷಿಕವಾಗಿ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಲಾಭವು ತೆರಿಗೆಗೆ ಒಳಪಡುತ್ತಿವೆ. ದೀರ್ಘಾವಧಿಯ ಸ್ವತ್ತುಗಳ ಈ ವರ್ಗವು 2004 ರಿಂದ ಒಟ್ಟು ತೆರಿಗೆ ವಿನಾಯಿತಿಗೆ ಕಾರಣವಾಗಿವೆ.


ವರ್ಷಕ್ಕೆ 1 ಲಕ್ಷ ರೂಪಾಯಿಗಳ ತೆರಿಗೆ ರಹಿತ ಮಿತಿಯನ್ನು ಕನಿಷ್ಠ 2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬಹುದು ಎಂಬುದು ರಿಟೇಲ್ ಹೂಡಿಕೆದಾರರ ನಿರೀಕ್ಷೆಯಾಗಿದೆ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಸರಸ್ವತಿ ಕಸ್ತೂರಿರಂಗನ್ ತಿಳಿಸಿದ್ದಾರೆ.




ರೈಲ್ವೆ ಬಜೆಟ್: 400 ಹೆಚ್ಚುವರಿ ವಂದೇ ಭಾರತ್ ರೈಲು


ಕಳೆದ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಮೂರು ವರ್ಷಗಳಲ್ಲಿ 400 ಸೆಮಿ-ಹೈ-ಸ್ಪೀಡ್, ಮುಂದಿನ ಜನರೇಶನ್‌ನ ವಂದೇ ಭಾರತ್ ರೈಲುಗಳನ್ನು ಪರಿಚಯಿಸುವ ಬೃಹತ್ ಯೋಜನೆಯನ್ನು ಪ್ರಸ್ತಾಪಿಸಿದ್ದರು.


ಈ ಹಿಂದೆ ಘೋಷಿಸಿದ್ದಕ್ಕಿಂತ ಹೆಚ್ಚಾಗಿ, ಸರ್ಕಾರವು ಈ ವರ್ಷದ ಬಜೆಟ್‌ನಲ್ಲಿ ಇನ್ನೂ 400 ಹೊಸ ವಂದೇ ಭಾರತ್ ರೈಲುಗಳ ಯೋಜನೆಗಳನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ.


ಬಜೆಟ್: ಪಾನ್​ ಕಾರ್ಡ್ ಕಾನೂನುಬದ್ಧಗೊಳಿಸುವಿಕೆ


ಯೂನಿಯನ್ ಬಜೆಟ್ 2023-24 ಶಾಶ್ವತ ಖಾತೆ ಸಂಖ್ಯೆಯನ್ನು (PAN) ಏಕ ವ್ಯಾಪಾರ ಗುರುತಿಸುವಿಕೆಯಾಗಿ ಕಾನೂನುಬದ್ಧಗೊಳಿಸುವುದಕ್ಕೆ ಅವಕಾಶ ನೀಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪಾನ್​​ ಸಂಖ್ಯೆಯನ್ನು ಅಳವಡಿಸಿಕೊಳ್ಳಲು ಕಾನೂನು ಮತ್ತು ಕಾರ್ಯಾಚರಣೆಯ ಚೌಕಟ್ಟನ್ನು ಹೊರತರಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅನುಮೋದನೆಗಳನ್ನು ಪಡೆಯುವ ಎಲ್ಲಾ ವ್ಯವಹಾರಗಳಿಗೆ ಇದು ಅನ್ವಯಿಸುತ್ತದೆ ಎಂದು ಹೇಳಲಾಗಿದೆ.

First published: