• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Accenture Layoffs: ಅಕ್ಸೆಂಚರ್‌ನಲ್ಲಿ 19 ಸಾವಿರ ಉದ್ಯೋಗಿಗಳ ವಜಾ! ವೆಚ್ಚ ತಗ್ಗಿಸೋಕೆ ಕಂಪೆನಿಯಿಂದ ಕಠಿಣ ನಿರ್ಧಾರ

Accenture Layoffs: ಅಕ್ಸೆಂಚರ್‌ನಲ್ಲಿ 19 ಸಾವಿರ ಉದ್ಯೋಗಿಗಳ ವಜಾ! ವೆಚ್ಚ ತಗ್ಗಿಸೋಕೆ ಕಂಪೆನಿಯಿಂದ ಕಠಿಣ ನಿರ್ಧಾರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಕ್ಸೆಂಚರ್ ಭಾರತದಲ್ಲಿ ಸುಮಾರು 3 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ವಜಾಗೊಳಿಸುವಿಕೆ ಪರಿಣಾಮ ಬೀರಲಿರುವುದು ಪ್ರಸ್ತುತ ಉದ್ಯೋಗಿಗಳಲ್ಲಿ ಕೇವಲ 2.5% ಜನರ ಮೇಲೆ ಮಾತ್ರ ಎಂದು ಅಂದಾಜಿಸಲಾಗಿದೆ.

  • Share this:

ಟೆಕ್ ಕಂಪೆನಿಗಳಲ್ಲಿ (Tech Company) ಉದ್ಯೋಗಿ ವಜಾಗೊಳಿಸುವಿಕೆ ಪರ್ವ ಮುಗಿದಂತೆ ಕಾಣುತ್ತಿಲ್ಲ. ಮೆಟಾ, ಟ್ವಿಟರ್, ಅಮೆಜಾನ್ ಹೀಗೆ ಟೆಕ್ ದೈತ್ಯ ಕಂಪೆನಿಗಳು ಸಾವಿರಗಟ್ಟಲೆ ಉದ್ಯೋಗಿಗಳನ್ನು ಸಂಸ್ಥೆಗಳಿಂದ ವಜಾಗೊಳಿಸಿದೆ. ವೆಚ್ಚ ಕಡಿತ ಹಿನ್ನಲೆಯಲ್ಲಿ ಮುಲಾಜಿಲ್ಲದೆ ಪಿಂಕ್ ಸ್ಲಿಪ್ (Pink Slip) ನೀಡಿ ಹೊರಗಟ್ಟಿದೆ. ಇದೀಗ ಅಕ್ಸೆಂಚರ್ ಕೂಡ ವಜಾಗೊಳಿಸುವಿಕೆಯನ್ನು ಆರಂಭಿಸಿದ್ದು ಮುಂದಿನ 18 ತಿಂಗಳಲ್ಲಿ ಬರೋಬ್ಬರಿ 19,000 ಉದ್ಯೋಗಿಗಳನ್ನು ಉದ್ಯೋಗದಿಂದ ತೆಗೆದುಹಾಕುವ ಯೋಜನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಸಂಸ್ಥೆಯ ಭಾರತೀಯ ಕಾರ್ಯಾಚರಣೆಗಳ ಮೇಲೆ ಇದು ಹೇಗೆ ಪರಿಣಾಮ (Effects) ಬೀರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


2.5% ದಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿರುವ ವಜಾಗೊಳಿಸುವಿಕೆ


ಅಕ್ಸೆಂಚರ್ ಭಾರತದಲ್ಲಿ ಸುಮಾರು 3 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ವಜಾಗೊಳಿಸುವಿಕೆ ಪರಿಣಾಮ ಬೀರಲಿರುವುದು ಪ್ರಸ್ತುತ ಉದ್ಯೋಗಿಗಳಲ್ಲಿ ಕೇವಲ 2.5% ಜನರ ಮೇಲೆ ಮಾತ್ರ ಎಂದು ಅಂದಾಜಿಸಲಾಗಿದೆ.


ವಜಾಗೊಳಿಸುವಿಕೆ ದೇಶ ಹಾಗೂ ಮಾರುಕಟ್ಟೆಗಿಂತ ಭಿನ್ನವಾಗಿದೆ ಮತ್ತು ಎಲ್ಲಾ ಭೌಗೋಳಿಕತೆಗಳಿಗೆ ಅನ್ವಯಿಸುವ ಅಂಕಿ ಅಂಶವಾಗಿ ತೆಗೆದುಕೊಳ್ಳಬಾರದು ಎಂದು ಕಂಪೆನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದ ಭಾರತದ ಉದ್ಯೋಗಿಗಳ ಮೇಲೂ ವಜಾಗೊಳಿಸುವಿಕೆಯ ಕರಿನೆರಳು ಪರಿಣಾಮಕಾರಿಯಾಗಿರಬಹುದು ಎಂದು ಊಹಿಸಲಾಗಿದೆ.


ಸಾಂಕೇತಿಕ ಚಿತ್ರ


19,000 ಉದ್ಯೋಗಿಗಳನ್ನು ವಜಾಗೊಳಿಸಲಿರುವ ಸಂಸ್ಥೆ


19,000 ಉದ್ಯೋಗಿಗಳ ಪೈಕಿ ಅರ್ಧದಷ್ಟು ಉದ್ಯೋಗಿಗಳು ನಿರ್ವಹಣೆ ಹಾಗೂ ಕ್ಲೈಂಟ್ ಸರ್ವೀಸ್ ವಿಭಾಗಗಳಲ್ಲಿ ಸೇವೆ ಸಲ್ಲಿಸುವವರಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಮುಖ್ಯ ಹಣಕಾಸು ಅಧಿಕಾರಿ ಕೆಸಿ ಮೆಕ್‌ಕ್ಲೂರ್, ಈ ಪೈಕಿ ಅರ್ಧದಷ್ಟು ವಜಾಗೊಳಿಸುವಿಕೆಯು ಆರ್ಥಿಕ ವರ್ಷ 23 ಅಥವಾ ಆಗಸ್ಟ್ 31 ರ ಮೊದಲು ಇರುತ್ತದೆ ಎಂದು ಸೂಚನೆ ನೀಡಿದ್ದಾರೆ.


ಇದನ್ನೂ ಓದಿ: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್


ಕಂಪೆನಿಯು $1.2 ಬಿಲಿಯನ್ ಉದ್ಯೋಗಿಗಳ ಬೇರ್ಪಡಿಕೆ ಮತ್ತು ಇತರ ಸಿಬ್ಬಂದಿ ವೆಚ್ಚಗಳನ್ನು ನಿರೀಕ್ಷಿಸುತ್ತಿದ್ದು ಆರ್ಥಿಕ ವರ್ಷ 23 ರಲ್ಲಿ $500 ಮಿಲಿಯನ್ ಮತ್ತು ಆರ್ಥಿಕ ವರ್ಷ 24 ರಲ್ಲಿ $700 ಮಿಲಿಯನ್ ಎಂಬುದಾಗಿ ಅಂದಾಜಿಸಲಾಗಿದೆ. ಇದು FY23 ಮತ್ತು FY24 ರಲ್ಲಿ ಕಂಪೆನಿಯು ವ್ಯಾಪಾರದ ಹೆಚ್ಚು ಪರಿಣಾಮಕಾರಿ ಕಾರ್ಯಾಚರಣೆ ವೆಚ್ಚಗಳಿಗಾಗಿ $1.5 ಶತಕೋಟಿಯ ಭಾಗವಾಗಿದೆ.


ಆದಾಯದ ಮೇಲೆ ಹೊಡೆತ ಬಿದ್ದಿದೆ


ಸಂಸ್ಥೆಯು ತನ್ನ ಆದಾಯವು ಆರ್ಥಿಕ ವರ್ಷ 23, ವರ್ಷದಿಂದ ವರ್ಷಕ್ಕೆ 8-10 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದು, ಅದರ ಮಾರ್ಗದರ್ಶನದ ಉನ್ನತ ಅಂಶವನ್ನು 11% ದಿಂದ ಕಡಿತಗೊಳಿಸುತ್ತದೆ. ಅಕ್ಸೆಂಚರ್ ಸೆಪ್ಟೆಂಬರ್-ಆಗಸ್ಟ್ ಆರ್ಥಿಕ ವರ್ಷವನ್ನು ಅನುಸರಿಸುತ್ತದೆ. ತನ್ನ ಆದಾಯವನ್ನು 0.4% ದಷ್ಟು ಹೆಚ್ಚಿಸಿರುವ ಸಂಸ್ಥೆ, ನಿವ್ವಳ ಆದಾಯವು ಕಳೆದ ತ್ರೈಮಾಸಿಕಕ್ಕಿಂತ 22.46% ಕಡಿಮೆಯಾಗಿದೆ.


ಒತ್ತಡ ಹೇರುತ್ತಿರುವ ಹಣದುಬ್ಬರ


ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೂಲಿ ಸ್ವೀಟ್ ಮಾತನಾಡಿ, ಕಂಪೆನಿಯು ವೇತನ ಹಣದುಬ್ಬರವನ್ನು ಅತ್ಯಂತ ಕಷ್ಟಕರವಾಗಿ ನಿರ್ವಹಿಸುತ್ತಿದ್ದು ಸುಧಾರಿತ ಬೆಲೆ ಮತ್ತು ವೆಚ್ಚದ ಸಂಯೋಜನೆಯ ಮೂಲಕ ಇಷ್ಟರವರೆಗೆ ಸುಧಾರಿಸಿದೆ ಎಂದು ತಿಳಿಸಿದ್ದಾರೆ. ಕಂಪೆನಿಯು ಉತ್ತಮ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಆದಷ್ಟು ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುತ್ತಿದೆ ಎಂದು ಹಣಕಾಸು ಅಧಿಕಾರಿ ಮ್ಯಾಕ್‌ಕ್ಲೂರ್ ತಿಳಿಸಿದ್ದಾರೆ. ಕಂಪೆನಿಯ ಸಿಬ್ಬಂದಿ ಸಂಖ್ಯೆಯು 7,38,000, ಮತ್ತು ವಾರ್ಷಿಕ ಸ್ವಯಂಪ್ರೇರಿತ ಆಟ್ರಿಷನ್ ಅದೇ ಅವಧಿಯಲ್ಲಿ 13% ದಿಂದ 12% ಕ್ಕೆ ಇಳಿದಿದೆ. ಇದರ ಸಂವಹನ, ಮಾಧ್ಯಮ ಮತ್ತು ತಂತ್ರಜ್ಞಾನವು ಸ್ಥಳೀಯ ಕರೆನ್ಸಿಯಲ್ಲಿ ವರ್ಷದಿಂದ ವರ್ಷಕ್ಕೆ ಯಾವುದೇ ಬೆಳವಣಿಗೆಯನ್ನು ಕಾಣಲಿಲ್ಲ ಎಂದು ಜೂಲಿ ಸ್ವೀಟ್ ತಿಳಿಸಿದ್ದಾರೆ.

First published: