• Home
  • »
  • News
  • »
  • business
  • »
  • Bank Holidays: ಜನವರಿ ತಿಂಗಳಲ್ಲಿ ಬ್ಯಾಂಕ್​ಗಳಿಗೆ 15 ದಿನ ರಜೆ: ಈ ದಿನಗಳು ಮಾತ್ರ ಓಪನ್ ಇರುತ್ತವೆ

Bank Holidays: ಜನವರಿ ತಿಂಗಳಲ್ಲಿ ಬ್ಯಾಂಕ್​ಗಳಿಗೆ 15 ದಿನ ರಜೆ: ಈ ದಿನಗಳು ಮಾತ್ರ ಓಪನ್ ಇರುತ್ತವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 ಹೊಸ ವರ್ಷವು ಶುರುವಾಗಿದ್ದು, 2023 ರ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿಯೇ ದೇಶಾದ್ಯಂತದ ಬ್ಯಾಂಕುಗಳಿಗೆ 15 ರಜಾ ದಿನಗಳಿವೆಯಂತೆ.

  • Trending Desk
  • 5-MIN READ
  • Last Updated :
  • Share this:

    ಒಂದು ತಿಂಗಳಿನಲ್ಲಿ ಎರಡನೇ ಮತ್ತು ನಾಲ್ಕನೆಯ ಶನಿವಾರಗಳು ಮತ್ತು ಭಾನುವಾರಗಳು, ಹಬ್ಬದ ದಿನಗಳು ಅಂತ ಈ ಬ್ಯಾಂಕುಗಳಿಗೆ ರಜಾ (Bank Holidays) ದಿನಗಳು ತುಂಬಾನೇ ಸಿಗುವುದನ್ನು ನಾವೆಲ್ಲಾ ನೋಡಿರುತ್ತೇವೆ. ಇದರ ಬಗ್ಗೆ ಮುಂಚೆಯೇ ತಿಳಿಯದೆ ಇರುವುದರಿಂದ ಸಾರ್ವಜನಿಕರಿಗೆ (Bank Customers) ಕೆಲವು ಬಾರಿ ಭಾರಿ ಅನಾನುಕೂಲತೆಯನ್ನು ಸಹ ಎದುರಿಸಬೇಕಾಗಿರುತ್ತದೆ ಅಂತ ಹೇಳಬಹುದು. ಹೌದು.. ಸಾಲು ಸಾಲಾಗಿ ಬಂದ ರಜಾ ದಿನಗಳಂದು ಬ್ಯಾಂಕ್ ಗಳಿಗೆ ಬೀಗ ಹಾಕಲಾಗಿದ್ದು, ಆ ವಾರ ಆಗಬೇಕಿದ್ದಂತಹ ಅನೇಕ ಜನರ ಬ್ಯಾಂಕ್ ಕೆಲಸಗಳೆಲ್ಲವೂ ಮುಂದಿನ ವಾರಕ್ಕೆ ಮುಂದೂಡುವ ಸಂದರ್ಭ ಬಂದೊದಗುತ್ತದೆ.


    ಕೆಲವೊಮ್ಮೆ ಅಂತೂ ಈ ಹಬ್ಬದ ದಿನಗಳಂದು ಮತ್ತು ಹೀಗೆ ಸಾಲು ಸಾಲಾಗಿ ಬಂದ ರಜಾ ದಿನಗಳಿಂದ ಎಟಿಎಂನಲ್ಲಿಯೂ (ATM) ಸಹ ಹಣ ಖಾಲಿಯಾಗಿರುತ್ತದೆ. ಕೆಲವೊಮ್ಮೆ ಹೀಗೆ ತುಂಬಾ ರಜಾ ದಿನಗಳು ಬಂದಾಗ ಹಣವನ್ನು ಹೇಗೆ ಪಡೆಯುವುದು ಅಂತ ತುಂಬಾನೇ ಪರದಾಡಿರುವ ಸಂದರ್ಭಗಳು ಸಾಕಷ್ಟಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು..ಅದಕ್ಕೆ ಈಗ ಜನರು ಸಹ ಕ್ಯಾಲೆಂಡರ್ ಗಳ ಮೇಲೆ ಒಂದು ಕಣ್ಣನ್ನು ಇಟ್ಟಿರುತ್ತಾರೆ. ಏಕೆಂದರೆ ಮತ್ತೆ ಸಾಲು ಸಾಲಾಗಿ ಬರುವ ಬ್ಯಾಂಕ್ ರಜೆಗಳು ತಮ್ಮ ವ್ಯವಹಾರಕ್ಕೆ ಅಡ್ಡಿಯಾಗಬಾರದು ಅಂತ ಮೊದಲೇ ಎಲ್ಲವನ್ನೂ ತಿಳಿದುಕೊಂಡಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


    ಇದನ್ನೂ ಓದಿ: Coins: ಬ್ಯಾಂಕ್​ ಖಾತೆಯಲ್ಲಿ ನೀವೆಷ್ಟು ನಾಣ್ಯಗಳನ್ನು ಡೆಪಾಸಿಟ್ ಮಾಡ್ಬಹುದು? ಆರ್​ಬಿಐ ರೂಲ್ಸ್​ ಏನಿದೆ ಅಂತ ನೋಡಿ


    ಜನವರಿಯಲ್ಲಿ ಬ್ಯಾಂಕುಗಳಿಗಿವೆಯಂತೆ 15 ದಿನಗಳ ರಜೆ


    ಹೊಸ ವರ್ಷವು ಶುರುವಾಗಿದ್ದು, 2023 ರ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿಯೇ ದೇಶಾದ್ಯಂತದ ಬ್ಯಾಂಕುಗಳಿಗೆ 15 ರಜಾ ದಿನಗಳಿವೆಯಂತೆ. ‘ಏನಪ್ಪಾ ಇದು 15 ದಿನ ರಜೆನಾ’ ಅಂತ ಗಾಬರಿಯಾಗಬೇಡಿ. ಇದು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳನ್ನು ಸಹ ಒಳಗೊಂಡಿದೆ ಅಂತ ಹೇಳಬಹುದು. ಇಷ್ಟೇ ಅಲ್ಲದೆ ಇವೆಲ್ಲಾ ರಜಾ ದಿನಗಳು ದೇಶದ ಎಲ್ಲಾ ರಾಜ್ಯಗಳಿಗೆ ಸಂಬಂಧಿಸಿದ್ದಲ್ಲ ಅಂತ ಹೇಳಬಹುದು. ಪ್ರತಿ ತಿಂಗಳು ಮೊದಲ ಮತ್ತು ಮೂರನೇ ಶನಿವಾರಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.




    ಈ ಕೆಲವು ಬ್ಯಾಂಕ್ ರಜಾದಿನಗಳು ರಾಜ್ಯ-ನಿರ್ದಿಷ್ಟವಾಗಿರುತ್ತವೆ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ, ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಜಾದಿನಗಳನ್ನು ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ರಜಾದಿನ ಎಂದು ಮೂರು ಬ್ರಾಕೆಟ್ ಗಳ ಅಡಿಯಲ್ಲಿ ಇರಿಸಿದೆ. ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಅಡಿಯಲ್ಲಿ ರಜೆ ಅಂತ ಹೇಳಲಾಗುತ್ತದೆ.


    ಜನವರಿ 2023 ರಲ್ಲಿ ಬ್ಯಾಂಕ್ ರಜಾ ದಿನಗಳ ಸಂಪೂರ್ಣವಾದ ಪಟ್ಟಿ ಇಲ್ಲಿದೆ ನೋಡಿ:


    ಜನವರಿ 1: ಭಾನುವಾರ (ಇಷ್ಟೇ ಅಲ್ಲದೆ ಹೊಸ ವರ್ಷದ ದಿನದಂದು ಬ್ಯಾಂಕುಗಳಿಗೆ ರಜೆ ಇರುತ್ತದೆ)


    ಜನವರಿ 2: ಹೊಸ ವರ್ಷದ ಆಚರಣೆಯಿಂದಾಗಿ ಐಜ್ವಾಲ್ ನಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.


    ಜನವರಿ 3: ಇಂಫಾಲದಲ್ಲಿ ಇಮೊಯ್ನು ಇರಾತ್ಪಾ ಕಾರಣದಿಂದಾಗಿ ಬ್ಯಾಂಕುಗಳಿಗೆ ರಜೆ ಇರುತ್ತದೆ.


    ಜನವರಿ 4: ಇಂಫಾಲದಲ್ಲಿ ಗಾನ್-ಎನ್ಗೈ ಕಾರಣದಿಂದಾಗಿ ಬ್ಯಾಂಕುಗಳಿಗೆ ರಜೆ ಇರುತ್ತದೆ.


    ಜನವರಿ 8: ಭಾನುವಾರ


    ಜನವರಿ 12: ಸ್ವಾಮಿ ವಿವೇಕಾನಂದರ ಜನ್ಮದಿನದ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.


    ಜನವರಿ 14: ಎರಡನೇ ಶನಿವಾರ ರಜೆ




    ಜನವರಿ 15: ಭಾನುವಾರ


    ಜನವರಿ 16: ತಿರುವಳ್ಳುವರ್ ದಿನದಿಂದಾಗಿ ಚೆನ್ನೈನಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.


    ಜನವರಿ 17: ಉಝಾವರ್ ತಿರುನಾಳ್ ಕಾರಣದಿಂದಾಗಿ ಚೆನ್ನೈನಲ್ಲಿರುವ ಬ್ಯಾಂಕುಗಳಿಗೆ ರಜೆ ಇರುತ್ತದೆ.


    ಜನವರಿ 22: ಭಾನುವಾರ


    ಜನವರಿ 23: ನೇತಾಜಿ ಜನ್ಮ ದಿನದಂದು ಕೋಲ್ಕತ್ತಾದಲ್ಲಿನ ಬ್ಯಾಂಕುಗಳಿಗೆ ರಜೆ ಇರುತ್ತದೆ.


    ಜನವರಿ 26: ಗಣರಾಜ್ಯೋತ್ಸವ ದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.


    ಜನವರಿ 28: ನಾಲ್ಕನೇ ಶನಿವಾರ ರಜೆ


    ಜನವರಿ 29: ಭಾನುವಾರ ರಜೆ

    Published by:Kavya V
    First published: