ಸುಲಭವಾಗಿ ಹಣ (Money) ಗಳಿಸುವುದು ಹೇಗೆ? ಎಲ್ಲರಿಗೂ ಇದೊಂದು ಆಸೆ ಇದ್ದೇ ಇರುತ್ತೆ. ಹಣ ಎಂದರೆ ಯಾರಿಗೆ ಇಷ್ಟ ಇಲ್ಲ. ಹೆಚ್ಚಿನವರು ಹಣ ಸಂಪಾದಿಸುವುದು ತುಂಬಾ ಕಷ್ಟ ಎಂದು ಭಾವಿಸುತ್ತಾರೆ. ಆದರೆ ಸತ್ಯವೆಂದರೆ, ಹಣ ಸಂಪಾದಿಸುವುದು ತುಂಬಾ ಸುಲಭ (Easy) . ಆದರೆ ನೀವು ಸರಿಯಾದ ಮಾರ್ಗ (Right Way) ವನ್ನು ಆರಿಸಿಕೊಳ್ಳಬೇಕು. ಆಗ ಮಾತ್ರ ಹಣ ನಿಮ್ಮ ಕೈ (Hand) ಗೆ ತುಂಬಾ ಸುಲಭವಾಗಿ ಬರುತ್ತದೆ. ಕೆಲವರು ತಮ್ಮ ಜೀವನದುದ್ದಕ್ಕೂ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಆರ್ಥಿಕವಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಆದಾಯ (income) ಕಡಿಮೆ ಇರುತ್ತದೆ. ಪ್ರತಿ ತಿಂಗಳು ಸ್ಥಿರ ಆದಾಯ ಪಡೆದು ಬದುಕಲು ಬಂಡಿ ತಳ್ಳುತ್ತಾರೆ. ಆದರೆ, ಇನ್ನು ಕೆಲವರು ಇರುತ್ತಾರೆ. ಚಿಕ್ಕ ವಯಸ್ಸಿ (Age) ನಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಛಲ ಹೊಂದು, ಗುರಿ ಮುಟ್ಟುತ್ತಾರೆ. ಚಿಕ್ಕ ವಯಸ್ಸಿಗೇ ಮಿಲೇನಿಯರ್ ಆಗುತ್ತಾರೆ.
ಸೋಪು ಮಾರಿ ಮಿಲಿಯನೇರ್ ಆದ ಅಮೆರಿಕದ ಹುಡುಗಿ!
ಅಮೆರಿಕದ ಹುಡುಗಿಯೂ ಕೂಡ ಈ ವರ್ಗಕ್ಕೆ ಸೇರುತ್ತಾಳೆ. 13ನೇ ವಯಸ್ಸಿನಲ್ಲಿ ಸೋಪು ತಯಾರಿಕೆ ಉದ್ಯಮ ಆರಂಭಿಸಿದ ಈಕೆ ಈಗ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾಳೆ. ದಿ ಸನ್ ವೆಬ್ ಸೈಟ್ ವರದಿ ಪ್ರಕಾರ, ಅಮೆರಿಕದ ಲಿಲ್ಲಿ ಎಂಬ ಯುವತಿಗೆ 18 ವರ್ಷ. ಈ ವಯಸ್ಸಿನಲ್ಲಿ ಹೆಚ್ಚಿನವರು ಕಾಲೇಜಿಗೆ ಹೋಗುತ್ತಾರೆ. ಆದರೆ ಲಿಲ್ಲಿ ಈ ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಸಾಧನೆ ಮಾಡಿದ್ದಾಳೆ ಎಂದರೇ ನಿಮಗೆ ಆಶ್ಚರ್ಯವಾಗದೇ ಇರದು.ಇಷ್ಟು ಚಿಕ್ಕ ವಯಸ್ಸಿನಲ್ಲೇ ಮಿಲಿಯನೇರ್ ಆದ ಲಿಲ್ಲಿ, ಇತ್ತೀಚೆಗಷ್ಟೇ ಸ್ವಂತ ಹಣದಲ್ಲಿ ಬಿಎಂಡಬ್ಲ್ಯು ಕಾರು ಖರೀದಿಸಿದ್ದಾರೆ.
13 ವರ್ಷಕ್ಕೆ ಬ್ಯುಸಿನೆಸ್ ಶುರು ಮಾಡಿದ್ದ ಲಿಲಿ!
ಲಿಲಿ ಕೇವಲ 13 ವರ್ಷದವಳಿದ್ದಾಗ ಸೋಪ್ ವ್ಯಾಪಾರವನ್ನು ಪ್ರಾರಂಭಿಸಿದಳು. ಈಗ ಅವರು ವಿಶ್ವದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರು. ಲಿಲ್ಲಿ ಐಷಾರಾಮಿ ಸೋಪ್ ಕಂಪನಿಯನ್ನು ಪ್ರಾರಂಭಿಸಿದರು. ಇದು ಹ್ಯಾಂಡ್ ಮೇಡ್ ಸೋಪ್ ಕ್ಲಬ್ ಎಂಬ ಸದಸ್ಯತ್ವ ಕ್ಲಬ್ ಅನ್ನು ಸಹ ನಡೆಸುತ್ತಿದೆ. ತನ್ನ ತಂದೆ ಯಾವಾಗಲೂ ತನ್ನ ಭುಜವನ್ನು ತಟ್ಟಿ ಜೀವನದಲ್ಲಿ ಮುನ್ನಡೆಯಲು ಪ್ರೋತ್ಸಾಹಿಸುತ್ತಿದ್ದರು ಎಂದು ಲಿಲ್ಲಿ ಹೇಳಿದರು. ತಂದೆ ನೀಡಿದ ಪ್ರೇರಣೆಯಿಂದ ವ್ಯಾಪಾರದಲ್ಲಿ ಗೆಲುವು ಸಿಕ್ಕಿದೆ ಎಂದು ಲಿಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: 45 ಕೋಟಿ SBI ಗ್ರಾಹಕರಿಗೆ ಗುಡ್ ನ್ಯೂಸ್! ಶೀಘ್ರದಲ್ಲೇ ಹೊಸ ಸೇವೆ ಆರಂಭ
ಲಿಲ್ಲಿ ಶಾಲೆಯ ಶಿಕ್ಷಕರು ಇದಕ್ಕೆ ಸಹಾಯ ಮಾಡಿದರು. ಈ ಅಲ್ಪಾವಧಿಯಲ್ಲಿ ಲಿಲ್ಲಿ ಸೋಪುಗಳ ವ್ಯಾಪಾರವು ವೇಗವನ್ನು ಪಡೆಯಿತು. ಮೇಲಾಗಿ, ಲಿಲಿ ಪ್ರಪಂಚದ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾದರು. ತನ್ನ ಸೋಪ್ ಕಂಪನಿಯು ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾಗಿದೆ ಎಂದು ಲಿಲ್ಲಿ ಹೇಳಿದರು. ಕಂಪನಿ ಸ್ಥಾಪನೆಯ ಸಂಪೂರ್ಣ ಶ್ರೇಯಸ್ಸು ಅವರ ತಂದೆ-ತಾಯಿಗೆ ಸಲ್ಲುತ್ತದೆ ಎಂದರು. ಅವರ ಪ್ರೋತ್ಸಾಹದಿಂದಲೇ ಇದು ಸಾಧ್ಯವಾಗಿದೆ ಎನ್ನುತ್ತಾರೆ. ಹೊಸ ಕಾರನ್ನು ಖರೀದಿಸುವುದು ತನಗೆ ವಿಶೇಷವಾದ ಭಾವನೆಯನ್ನು ನೀಡಿತು ಎಂದು ಅವರು ಬಹಿರಂಗಪಡಿಸಿದರು.
ಇದನ್ನೂ ಓದಿ: 17 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ, ಲಿಸ್ಟ್ನಲ್ಲಿ ನಿಮ್ಮ ಜಿಲ್ಲೆ ಇದೆಯಾ?
ಲಿಲ್ಲಿ ಈಗ ಚಿಕ್ಕವಳು. 18 ನೇ ವಯಸ್ಸಿನಲ್ಲಿ, ಎಲ್ಲರೂ ಕೆಲಸ ಹುಡುಕಲು ಪ್ರಯತ್ನಿಸುತ್ತಿರುವಾಗ, ಅವರು ಒಬ್ಬಂಟಿಯಾಗಿ ಕಂಪನಿಯನ್ನು ನಡೆಸುತ್ತಿದ್ದಾಳೆ. ಅದರಲ್ಲಿ ಯಶಸ್ವಿಯಾಗುತ್ತಾ.. ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾ.. ಇಂದಿನ ಪೀಳಿಗೆಯ ಯುವಕರಿಗೆ ಮಾದರಿಯಾಗಿ ನಿಂತಿದ್ದಾರೆ. ಇವರ ಹಾಗೇ ಇನ್ನಷ್ಟು ಯುವಕ, ಯುವತಿಯರು ಕಾಲಹರಣ ಮಾಡದೇ, ಈ ರೀತಿ ಹೆಸರು ಮಾಡಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ