• Home
  • »
  • News
  • »
  • business
  • »
  • Facebook: ಫೇಸ್​​ಬುಕ್​ ಉದ್ಯೋಗಿಗಳಿಗೆ ಬಿಗ್​ ಶಾಕ್​, 1200 ಮಂದಿಗೆ ಕೆಲಸ ಕಳೆದುಕೊಳ್ಳುವ ಭೀತಿ!

Facebook: ಫೇಸ್​​ಬುಕ್​ ಉದ್ಯೋಗಿಗಳಿಗೆ ಬಿಗ್​ ಶಾಕ್​, 1200 ಮಂದಿಗೆ ಕೆಲಸ ಕಳೆದುಕೊಳ್ಳುವ ಭೀತಿ!

ಫೇಸ್​ಬುಕ್

ಫೇಸ್​ಬುಕ್

ದೊಡ್ಡ ದೊಡ್ಡ ಟೆಕ್ ಕಂಪೆನಿ (Tech Company) ಗಳು ಇದೀಗ ಉದ್ಯೋಗಿ (Employee) ವಜಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಫೇಸ್‌ಬುಕ್ (Facebook) ಕೂಡ ಸದ್ದಿಲ್ಲದೆ ಉದ್ಯೋಗಿಗಳನ್ನು ಸಂಸ್ಥೆಯಿಂದ ವಜಾಗೊಳಿಸುತ್ತಿದೆ.

  • Share this:

ಆರ್ಥಿಕ ಸಮಸ್ಯೆ (Financial Problem) ಗಳನ್ನು ಎದುರಿಸುತ್ತಿರುವ ದೊಡ್ಡ ದೊಡ್ಡ ಟೆಕ್ ಕಂಪೆನಿ (Tech Company) ಗಳು ಇದೀಗ ಉದ್ಯೋಗಿ (Employee) ವಜಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಫೇಸ್‌ಬುಕ್ (Facebook) ಕೂಡ ಸದ್ದಿಲ್ಲದೆ ಉದ್ಯೋಗಿಗಳನ್ನು ಸಂಸ್ಥೆಯಿಂದ ವಜಾಗೊಳಿಸುತ್ತಿದೆ. ಕಂಪೆನಿಯ ಉದ್ಯೋಗಿಗಳು ಹಾಗೂ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ (Mark Zuckerberg) ನಡುವಿನ ಪ್ರಶ್ನೋತ್ತರ ಅವಧಿಗೆ ಮುನ್ನ ಅಗತ್ಯ ಬೆಂಬಲವನ್ನೊದಗಿಸುವ 15% ದಷ್ಟು ತಂಡಗಳನ್ನು ಮಾತ್ರವೇ ಆಯ್ಕೆಮಾಡಬೇಕು ಎಂದು ಮಾರ್ಕ್ ಜುಕರ್‌ಬರ್ಗ್ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.ಈ ಆಯ್ದ ಪುನರ್ ರಚನೆಯು ಸುಮಾರು 15% ರಷ್ಟು ಉದ್ಯೋಗಿಗಳನ್ನು ಅಥವಾ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಸುಳಿವು ನೀಡಿದೆ.


ಸದ್ದಿಲ್ಲದೆ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಮೆಟಾ


ಟೆಕ್ ಉದ್ಯೋಗಿಗಳ ಅಪ್ಲಿಕೇಶನ್ ಆಗಿರುವ ಬ್ಲೈಂಡ್‌ನಲ್ಲಿ ಮೆಟಾದಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿಯೊಬ್ಬರು ಅನಾಮಧೇಯ ಐಡಿಯನ್ನು ಬಳಸಿಕೊಂಡು ಸಂಸ್ಥೆಯಲ್ಲಿ ನಡೆಯುತ್ತಿರುವ ಉದ್ಯೋಗಿ ವಜಾ ಕುರಿತು ಮಾಹಿತಿ ನೀಡಿದ್ದಾರೆ.


ಆಯ್ಕೆಮಾಡಿದ 15% ದಷ್ಟು ಉದ್ಯೋಗಿಗಳನ್ನು ಕಾರ್ಯಕ್ಷಮತೆ ಸುಧಾರಣೆ ಯೋಜನೆ (ಪಿಐಪಿ) ಯಲ್ಲಿ ಇರಿಸಲಾಗುತ್ತದೆ ಹಾಗೂ ನಂತರ ತೆಗೆದುಹಾಕಲಾಗುತ್ತದೆ ಎಂಬುದಾಗಿ ಈ ಉದ್ಯೋಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಹಲವಾರು ಮೆಟಾ ಉದ್ಯೋಗಿಗಳು ಬೆಂಬಲಿಸಿದ್ದು, ಎಷ್ಟು ಜನರನ್ನು ಕೈಬಿಡಬಹುದು ಮೊದಲಾದ ಚರ್ಚೆಗಳನ್ನು ನಡೆಸಲಾಗಿದೆ.


ಕಂಪೆನಿ ಉದ್ಯೋಗಿಗಳನ್ನು ಹೇಗೆ ವಜಾಗೊಳಿಸುತ್ತಿದೆ?


ಫೇಸ್‌ಬುಕ್‌ನ ಉದ್ಯೋಗಿ ವಿಮರ್ಶೆ ಪ್ರಕ್ರಿಯೆಯಲ್ಲಿ ಅಗತ್ಯ ಬೆಂಬಲವನ್ನೀಯುವ ಯಾರನ್ನಾದರೂ ಕಂಪೆನಿಯ ಮಾನದಂಡಗಳ ಕೆಳಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಅಂತಹವರನ್ನು PIP ನಲ್ಲಿ ಇರಿಸಲಾಗುತ್ತದೆ, ಇದು ಹೆಚ್ಚಾಗಿ ವಜಾಗೊಳಿಸುವಿಕೆಗೆ ಕಾರಣವಾಗುತ್ತದೆ.


ಇದನ್ನೂ ಓದಿ: ಮಕ್ಕಳ PPF ಖಾತೆಗೆ ತಂದೆ-ತಾಯಿ ಹಣ ಡೆಪಾಸಿಟ್​ ಮಾಡ್ಬಹುದಾ? ಏನ್​ ಹೇಳುತ್ತೆ ರೂಲ್ಸ್​ ನೀವೇ ನೋಡಿ


ಹಲವಾರು ಜನರು ಕಡಿಮೆ ಕಾರ್ಯಕ್ಷಮತೆಯನ್ನು ಹೊಂದಿದ್ದಾರೆಂದು ಪರಿಗಣಿಸಲಾಗಿದೆ ಮತ್ತು ಕೆಲವರಿಗೆ ಕಂಪನಿಯಲ್ಲಿ ಹೊಸ ಸ್ಥಾನವನ್ನು ಹುಡುಕಲು ಅಥವಾ ಸಂಸ್ಥೆಯನ್ನು ತೊರೆಯಲು 30 ದಿನಗಳ ಕಾಲಾವಕಾಶವನ್ನು ನೀಡಲಾಗುತ್ತದೆ, ಮೆಟಾ ಮೂಲತಃ ನಿಶ್ಯಬ್ಧವಾಗಿ ವಜಾ ಪ್ರಕ್ರಿಯೆಗಳನ್ನು ನಡೆಸುತ್ತಿದೆ ಎಂದು ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದಾರೆ.


ಆರ್ಥಿಕ ಹಿಂಜರಿತದ ಭಯ ಎದುರಿಸುತ್ತಿರುವ ಕಂಪೆನಿಗಳು


ಕಳೆದ ವಾರ, ಮೆಟಾ ನೇಮಕಾತಿ ಮತ್ತು ನಂತರದ ಪುನರ್ ರಚನೆಯಲ್ಲಿ ವಿರಾಮವನ್ನು ಘೋಷಿಸಿತು. ಇದಕ್ಕೆ ಕಾರಣ ಆರ್ಥಿಕ ಹಿಂಜರಿತದ ಭಯವಾಗಿದ್ದು ಇದು ಪ್ರಪಂಚದಾದ್ಯಂತ ಅತಿದೊಡ್ಡ ಸಮಸ್ಯೆಯನ್ನುಂಟು ಮಾಡಿದೆ. ಫೇಸ್‌ಬುಕ್‌ನ ಅದೇ ನಿರ್ಧಾರವನ್ನು ಟೆಕ್ ದೈತ್ಯ ಕಂಪೆನಿಗಳಾದ ಆ್ಯಪಲ್, ಮೈಕ್ರೋಸಾಫ್ಟ್, ಗೂಗಲ್ ಕೂಡ ಅನುಸರಿಸಿದೆ.ಈ ಸಂಸ್ಥೆಗಳು ನೇಮಕಾತಿಯನ್ನು ಸ್ಥಗಿತಗೊಳಿಸಿವೆ ಅಥವಾ ವೆಚ್ಚವನ್ನು ಸರಿದೂಗಿಸಲು ಮತ್ತು ಕಾರ್ಯಾಚರಣೆಯ ಹಂತಗಳನ್ನು ನಿರ್ವಹಿಸಲು ತಮ್ಮ ಸಿಬ್ಬಂದಿಗೆ ವಜಾಗೊಳಿಸುವ ಸೂಚನೆಯನ್ನು ನೀಡುತ್ತಿವೆ.


"ಆರ್ಥಿಕತೆಯು ಈಗ ಹೆಚ್ಚು ಸ್ಪಷ್ಟವಾಗಿ ಸ್ಥಿರವಾಗಿರುತ್ತದೆ ಎಂದು ನಾನು ಭಾವಿಸಿದ್ದೇನೆ, ಆದರೆ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದಾಗ ಎಲ್ಲವೂ ಈ ಹಿಂದೆ ಇದ್ದಂತಿಲ್ಲ ಹಾಗಾಗಿ ನಾವು ಸ್ವಲ್ಪ ಸಂಪ್ರದಾಯಬದ್ಧವಾಗಿ ಯೋಜಿಸಲು ಬಯಸುತ್ತೇವೆ" ಎಂದು ಜುಕರ್‌ಬರ್ಗ್ ಸಾಪ್ತಾಹಿಕ ಪ್ರಶ್ನೋತ್ತರ ಅವಧಿಯಲ್ಲಿ ಉದ್ಯೋಗಿಗಳಿಗೆ ಹೇಳಿದ್ದರು.


ಮೆಟಾ ನಡೆಯನ್ನೇ ಅನುಸರಿಸುತ್ತಿರುವ ಇತರ ಸಂಸ್ಥೆಗಳು


ಮೆಟಾ ಹೆಚ್ಚಿನ ತಂಡಗಳಲ್ಲಿ ಬಜೆಟ್‌ಗಳನ್ನು ಕಡಿತಗೊಳಿಸುತ್ತದೆ ಮತ್ತು ವೈಯಕ್ತಿಕ ತಂಡಗಳಲ್ಲಿ ಸದಸ್ಯರ ಸಂಖ್ಯೆಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ ಎಂಬುದಾಗಿ ಉದ್ಯೋಗಿಗಳಿಗೆ ಅವರು ತಿಳಿಸಿದ್ದರು. ಜೂನ್‌ನಲ್ಲಿ, ಮೆಟಾ ತನ್ನ ಎಂಜಿನಿಯರ್‌ಗಳ ನೇಮಕಾತಿಯನ್ನು ಈ ವರ್ಷ ಕನಿಷ್ಠ 30% ರಷ್ಟು ಕಡಿತಗೊಳಿಸಲು ಯೋಜಿಸಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಸಾವಿರಾರು ರೈತರಿಗೆ ಸಹಾಯವಾದ ಐಐಎಂ, ಪದವೀಧರನ ‘ಸಿಟಿ ಗ್ರೀನ್ಸ್’ ಸ್ಟಾರ್ಟ್‌ಅಪ್!


ಇನ್ಫೋಸಿಸ್, ವಿಪ್ರೋ, ಟೆಕ್ ಮಹೀಂದ್ರಾ ಮೊದಲಾದ ಸಂಸ್ಥೆಗಳು ಫ್ರೆಶರ್‌ಗಳಿಗೆ ನೀಡಿದ್ದ ಆಫರ್ ಲೆಟರ್‌ಗಳನ್ನು ರದ್ದುಗೊಳಿಸಿದ್ದು, ಕಂಪೆನಿಯ ಮಾನದಂಡಗಳನ್ನು ಪೂರೈಸದೇ ಇರುವ ಕಾರಣ ಈ ಕ್ರಮವನ್ನು ಕೈಗೊಂಡಿರುವುದಾಗಿ ತಿಳಿಸಿದೆ.

Published by:ವಾಸುದೇವ್ ಎಂ
First published: