• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Sudha Murthy: ಇನ್ಪೋಸಿಸ್‌ ಆರಂಭಿಸುವಾಗ ಪತಿಗೆ ಕೊಟ್ಟ 10,000 ರೂಪಾಯಿ ಸಾಲ, ನನ್ನ ಬೆಸ್ಟ್‌ ಇನ್ವೆಸ್ಟ್‌ಮೆಂಟ್‌: ಸುಧಾ ಮೂರ್ತಿ

Sudha Murthy: ಇನ್ಪೋಸಿಸ್‌ ಆರಂಭಿಸುವಾಗ ಪತಿಗೆ ಕೊಟ್ಟ 10,000 ರೂಪಾಯಿ ಸಾಲ, ನನ್ನ ಬೆಸ್ಟ್‌ ಇನ್ವೆಸ್ಟ್‌ಮೆಂಟ್‌: ಸುಧಾ ಮೂರ್ತಿ

ಸುಧಾಮೂರ್ತಿ

ಸುಧಾಮೂರ್ತಿ

ಸುಧಾ ಮೂರ್ತಿ ಅವರು ಕಪಿಲ್​ ಶರ್ಮಾ ಶೋನಲ್ಲಿ ಇನ್ಫೋಸಿಸ್ ಕಂಪನಿಯನ್ನು ಆರಂಭಿಸುವಾಗ ತಮ್ಮ ಪತಿ ನಾರಾಯಣ ಮೂರ್ತಿ ಅವರಿಗೆ ಹೇಗೆ ಸಹಾಯ ಮಾಡಿದರು ಎಂಬುದರ ಕುರಿತು ಹೇಳಿದ್ದಾರೆ.

  • Share this:

ಇನ್ಫೋಸಿಸ್ (Infosys) ಒಡೆಯ ನಾರಾಯಣ ಮೂರ್ತಿ (Narayana Murthy) ಮತ್ತು ಸರಳತೆಗೆ ಮತ್ತೊಂದು ಹೆಸರಾದ ಅವರ ಪತ್ನಿ ಸುಧಾಮೂರ್ತಿ (Sudha Murthy) ಯಾರಿಗೆ ಗೊತ್ತಿಲ್ಲ ಹೇಳಿ. ಸುಧಾಮೂರ್ತಿ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಾಗಿದ್ದು, ನಮ್ಮಂತಹ ಯುವಕ-ಯುವತಿಯರಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಸುಧಾ ಮೂರ್ತಿ ಅವರು ಇನ್ಫೋಸಿಸ್ ಕಂಪನಿಯನ್ನು ಆರಂಭಿಸುವಾಗ ತಮ್ಮ ಪತಿ ನಾರಾಯಣ ಮೂರ್ತಿ ಅವರಿಗೆ ಹೇಗೆ ಸಹಾಯ ಮಾಡಿದರು ಎಂಬುದರ ಕುರಿತು ಹೇಳಿದ್ದಾರೆ.


ನಾರಾಯಣ ಮೂರ್ತಿ ಅವರ ಇನ್ಫೋಸಿಸ್ ಕಂಪನಿಯಲ್ಲಿ ಹಣವನ್ನು ಹೇಗೆ ಹೂಡಿಕೆ ಮಾಡಿದರು ಎಂಬುದರ ಕುರಿತು ಮಾತನಾಡಿದ್ದಾರೆ. ಕಷ್ಟದ ಸಮಯದಲ್ಲಿ ಪತ್ನಿ ಪತಿಗೆ ಸಹಾಯ ಮಾಡುವುದು ಸರ್ವೆ ಸಾಮಾನ್ಯ. ಆದ್ದರಿಂದ ಕಷ್ಟದ ಸಮಯಕ್ಕೆ ಹಣ ಬೇಕಾಗುವುದರಿಂಭ ಆಗಾಗ ಅಷ್ಟೊ ಇಷ್ಟೋ ಹಣವನ್ನು ಮಹಿಳೆಯರು ತಮ್ಮ ಗಂಡನಿಗೆ ತಿಳಿಯದೇ ಉಳಿಸುವುದು ಸೂಕ್ತ ಎಂದು ಸುಧಾ ಮೂರ್ತಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.


ಕಂಪನಿಯನ್ನು ಆರಂಭಿಸುವಾಗ ಸುಧಾ ಮೂರ್ತಿ ಅವರು ಪತಿ ನಾರಾಯಣ ಮೂರ್ತಿ ಅವರಿಗೆ ಆರಂಭಿಕ ಸಾಲ ನೀಡುವ ಮೂಲಕ ಕಂಪನಿಯಲ್ಲಿ ಅತ್ಯುತ್ತಮ ಹೂಡಿಕೆ ಮಾಡಿದರ ಕುರಿತು ಮಾತನಾಡಿದರು.


ದಿ ಕಪಿಲ್ ಶರ್ಮಾನ ಶೋನಲ್ಲಿ ತಮ್ಮ ಹಳೆಯ ಸಂಗತಿಗಳನ್ನು ಹಂಚಿಕೊಂಡ ಸರಳತೆಯ ಮೂರ್ತಿ ಸುಧಾ ಮೂರ್ತಿ


ದಿ ಕಪಿಲ್ ಶರ್ಮಾ ಶೋನ ಇತ್ತೀಚಿನ ಸಂಚಿಕೆಯು ಸುಧಾ ಮೂರ್ತಿಯವರ ಸರಳತೆಯ ಮತ್ತೊಂದು ಭಾಗವನ್ನು ಮುನ್ನೆಲೆಗೆ ತಂದಿತು. ಇತ್ತೀಚೆಗೆ ಪದ್ಮಭೂಷಣ ಗೌರವಕ್ಕೆ ಪಾತ್ರರಾದ ಶಿಕ್ಷಣತಜ್ಞ ಮತ್ತು ಉದ್ಯಮಿ ರವೀನಾ ಟಂಡನ್ ಮತ್ತು ಗುನೀತ್ ಮೊಂಗಾ ಅವರೊಂದಿಗೆ ಸುಧಾ ಮೂರ್ತಿ ಸಹ ಒಬ್ಬರಾಗಿದ್ದರು.


ಇದನ್ನೂ ಓದಿ: ಯಾವ್ಯಾವ ಜಿಲ್ಲೆಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಂದು ಎಷ್ಟಿದೆ? ಇಲ್ಲಿದೆ ವಿವರ

ಈ ಮೂವರು ಮಹಿಳೆಯರು ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದರು. ಕುಟುಂಬ ಜೀವನ ಮತ್ತು ವೃತ್ತಿ ಜೀವನವನ್ನು ಹೇಗೆ ಸಮತೋಲನದಿಂದ ನೋಡಿಕೊಂಡರು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.


ನಾರಾಯಣ ಮೂರ್ತಿ ಅವರೊಂದಿಗಿನ ಪ್ರೇಮ ಕಥೆ ಹಂಚಿಕೊಂಡ ಸುಧಾ ಮೂರ್ತಿ


ಸುಧಾ ಮೂರ್ತಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರೊಂದಿಗಿನ ತಮ್ಮ ಪ್ರೇಮಕಥೆಯ ಬಗ್ಗೆ ಹೇಳಿಕೊಂಡಿದ್ದು ಮಾತ್ರವಲ್ಲದೇ,ಕೌಟಂಬಿಕ ಮತ್ತು ವೃತ್ತಿ ಜೀವನದಲ್ಲಿ ದಂಪತಿಗಳಿಬ್ಬರು ಎದುರಿಸಿದ ಸವಾಲುಗಳನ್ನು ಬಹಿರಂಗಪಡಿಸಿದರು. ನಾರಾಯಣ ಮೂರ್ತಿ ಅವರನ್ನು ಸುಧಾ ಮೂರ್ತಿ ಮದುವೆಯಾದಾಗ ಅವರು ನಿರುದ್ಯೋಗಿಯಾಗಿದ್ದನ್ನು ಸಹ ಹಂಚಿಕೊಂಡರು. ಆದಾದ ನಂತರ ತಮ್ಮ ಕುಟುಂಬಕ್ಕೊಸ್ಕರ ಹೇಗೆ ಸಂಪಾದಿಸಿದರು ಎಂಬುದರ ಬಗ್ಗೆಯೂ ಹೇಳಿಕೊಂಡಿದ್ದಾರೆ.


ನಾರಾಯಣ ಮೂರ್ತಿ ಅವರ ಹೆಮ್ಮೆಯ ಪತ್ನಿ ಸುಧಾ ಅವರು ಇನ್ಫೋಸಿಸ್ ಅನ್ನು ಸ್ಥಾಪಿಸುವಾಗ 10,000 ರೂಪಾಯಿಗಳ ಸಾಲವನ್ನು ನೀಡಿದ್ದರು. ಆ ಹಣವೇ ಆಗ 'ಅತ್ಯುತ್ತಮ ಹೂಡಿಕೆ' ಆಗಿತ್ತು ಎಂದು ಹೇಳಿದ್ದಾರೆ..ಸುಧಾಮೂರ್ತಿ ಮತ್ತು ನಾರಾಯಣ್ ಮೂರ್ತಿ

"ಅವರು 1981 ರಲ್ಲಿ ಇನ್ಫೋಸಿಸ್ ಅನ್ನು ಪ್ರಾರಂಭಿಸಿದರು. ಆಗ ನಾವು ಮುಂಬೈನ ಬಾಂದ್ರಾದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದೆವು.


ಒಂದು ದಿನ ಅವರು ನನ್ನ ಬಳಿ ಬಂದು ಒಂದು ಸಾಫ್ಟ್‌ವೇರ್ ಕಂಪನಿಯನ್ನು ಪ್ರಾರಂಭಿಸುತ್ತಿರುವುದಾಗಿ ಹೇಳಿದರು. ನಮ್ಮ ಕುಟುಂಬ ಮಿಡ್ಲ್ ಕ್ಲಾಸ್ ಆಗಿರೋದರಿಂದ ಆ ಕಂಪನಿ ಆರಂಭಿಸುವಷ್ಟು ಹಣ ನನ್ನಲ್ಲಿ ಇಲ್ಲ ಎಂದಾಗ ನಾನು ಮತ್ತೆ ಅದಕ್ಚೆ ಬೇಕಾದ ಹಣವನ್ನು ಹೇಗೆ ಹೊಂದಿಸುತ್ತಿರಿ ಎಂದು ಕೇಳಿದೆ.


ಆಗ ನಾರಾಯಣ ಮೂರ್ತಿ ಭಾರತಕ್ಕೆ ಎಷ್ಟರ ಮಟ್ಟಿಗೆ ಸಾಫ್ಟ್‌ವೇರ್ ಕ್ರಾಂತಿಯ ಅಗತ್ಯವಿದೆ ಎಂಬುದರ ಕುರಿತು ಅವರು ಮಾತನಾಡಿದರು. ಅದರ ಬಗ್ಗೆ ದೊಡ್ಡ ಭಾಷಣವನ್ನೆ ನೀಡಿದರು”ಎಂದು ಸುಧಾ ಮೂರ್ತಿ ಅವರು ನಗುತ್ತಾ ಹಂಚಿಕೊಂಡರು.


"ಮುಂದಿನ ಮೂರು ವರ್ಷಗಳ ಕಾಲ ನಾನು ಸಂಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ನೀನೇ ಕುಟುಂಬವನ್ನು ನೋಡಿಕೊ ಎಂದರು. ಆಗ ನಾನು ಅವರಿಗೆ ಗೊತ್ತಿಲ್ಲದೆ 10,250 ರೂ ಉಳಿಸಿದ್ದೆ ಮತ್ತು ಅವರಿಗೆ 10 ಸಾವಿರ ಕೊಟ್ಟು ಉಳಿದ ಹಣವನ್ನು ತುರ್ತು ಪರಿಸ್ಥಿತಿಗಾಗಿ ಉಳಿಸಿಕೊಂಡೆ. ನಂತರ ಕಂಪನಿಯ ಬೆಳವಣಿಗೆ ಬಗ್ಗೆ ನಿಮಗೆ ಗೊತ್ತಿದೆ. ಆಗ ನೀಡಿದ 10,000 ರೂ. ಬಿಲಿಯನ್‌ಗಳಲ್ಲಿ ಹಿಂದಿರುಗಿದ ಕಾರಣ ಇದು ಅತ್ಯುತ್ತಮ ಹೂಡಿಕೆ ಎಂದು ನಾನು ಭಾವಿಸುತ್ತೇನೆ, ”ಎಂದು ಸುಧಾ ಮೂರ್ತಿ ಅವರು ಹಂಚಿಕೊಂಡರು.


 


ಕಪಿಲ್ ಶರ್ಮಾ ಅವರು " ನಾರಾಯಣ ಮೂರ್ತಿ ಅವರು ನಿಮ್ಮ ಹಣವನ್ನು ಹಿಂದಿರುಗಿಸಿದ್ದಾರೆಯೇ ಅಥವಾ ಎಲ್ಲ ಗಂಡಂದಿರು ಹೇಳುವಂತೆ ‘ಎಲ್ಲವೂ ನಿಮ್ಮದೇ’ ಎಂದು ಹೇಳಿದ್ರಾ ಎಂದು ಸುಧಾ ಮೂರ್ತಿ ಅವರನ್ನು ಪ್ರಶ್ನೆ ಮಾಡಿದರು.


ಆಗ ಸುಧಾ ಮೂರ್ತಿ ಅವರು "ಆಗೆಲ್ಲ ಏನಿಲ್ಲ. ನಾವಿಬ್ಬರೂ ಲೆಕ್ಕದಲ್ಲಿ ಪಕ್ಕಾ..ನೀವೆನೇ ಸಂಪಾದಿಸಿದರೂ ಅದರಲ್ಲಿ ನೀವು ನನ್ನ ಸಾಲವನ್ನು ಪ್ರತ್ಯೇಕವಾಗಿ ಕಟ್ಟಬೇಕು ಎಂದು ಹೇಳಿದ್ದೆ" ಎಂದರು. ಸುಧಾ ಮೂರ್ತಿ ಅವರು ಮಹಿಳೆಯರಿಗೆ ತಮ್ಮ ಗಂಡನಿಗೆ ತಿಳಿಯದೇ ಹಣವನ್ನು ಉಳಿತಾಯ ಮಾಡಬೇಕು. ಇದರಿಂದ ಸಂಸಾರದಲ್ಲಿ ಬರೋ ಆರ್ಥಿಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು ಎಂದು ಸಾಮಾಜಿಕ ಸಂದೇಶವನ್ನು ನೀಡಿದ್ದಾರೆ.

top videos
    First published: