• Home
  • »
  • News
  • »
  • business
  • »
  • Digital Currency: ಭಾರತವನ್ನು ಆಳಲಿದ್ಯಾ ಡಿಜಿಟಲ್ ಕರೆನ್ಸಿ? ಯಾಕೆ ಎನ್ನುವುದಕ್ಕೆ ಇಲ್ಲಿದೆ 10 ಕಾರಣಗಳು!

Digital Currency: ಭಾರತವನ್ನು ಆಳಲಿದ್ಯಾ ಡಿಜಿಟಲ್ ಕರೆನ್ಸಿ? ಯಾಕೆ ಎನ್ನುವುದಕ್ಕೆ ಇಲ್ಲಿದೆ 10 ಕಾರಣಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿಲ್ಲರೆ ವಿಭಾಗದಲ್ಲಿ ಪ್ರಾಯೋಗಿಕ ಡಿಜಿಟಲ್ ರೂಪಾಯಿ ಬಿಡುಗಡೆಗಾಗಿ 9 ಬ್ಯಾಂಕ್​ಗಳನ್ನು ಆರ್​ಬಿಐ ಗುರುತಿಸಿದೆ.

  • Share this:

2022-23ರ ಕೇಂದ್ರ ಬಜೆಟ್‌ (Budget) ನಲ್ಲಿ ಘೋಷಣೆ ಮಾಡಿದಂತೆ ಸೆಂಟ್ರಲ್‌ ಬ್ಯಾಂಕ್‌ (Central Bank) ಡಿಜಿಟಲ್ ಕರೆನ್ಸಿ (Digital Currency) ಅಥವಾ “ಇ-ರೂಪಾಯಿ’ (E-Rupee) ಪರಿಕಲ್ಪನೆಯನ್ನು ಪ್ರಯೋಗಿಕವಾಗಿ ಜಾರಿಗೆ ತಂದಿದೆ. ದೇಶ ಎಲ್ಲವನ್ನೂ ಡಿಜಿಟಲ್‌ (Digital) ಮಯವಾಗಿ ನೋಡುತ್ತಿರುವ ಈ ಸಂದರ್ಭದಲ್ಲಿ ಡಿಜಿಟಲ್ ರೂಪಾಯಿ ಒಂದು ದೊಡ್ಡ ಮೈಲಿಗಲ್ಲಾಗಲಿದೆ. ವ್ಯಾಪಾರ-ವಹಿವಾಟಿನ ಸುಲಭತೆಯನ್ನು ಸಮರ್ಥವಾಗಿ ಹೆಚ್ಚಿಸುವ, ಸಂಪೂರ್ಣ ಪಾವತಿ ಮೂಲಸೌಕರ್ಯದ ಸ್ಥಿತಿಸ್ಥಾಪಕತ್ವ ಮತ್ತು ಭದ್ರತೆಯನ್ನು ಸುಧಾರಿಸುವುದನ್ನು ಸೇರಿ ಇನ್ನೂ ಹೆಚ್ಚಿನ ಅನುಕೂಲತೆಗಳನ್ನು ಈ ಡಿಜಿಟಲ್‌ ಕರೆನ್ಸಿಯಿಂದ ನೀರೀಕ್ಷಿಸಲಾಗಿದೆ.


ಚಿಲ್ಲರೆ ವಿಭಾಗದಲ್ಲಿ ಪ್ರಾಯೋಗಿಕ ಡಿಜಿಟಲ್ ರೂಪಾಯಿ ಬಿಡುಗಡೆಗಾಗಿ 9 ಬ್ಯಾಂಕ್​ಗಳನ್ನು ಆರ್​ಬಿಐ ಗುರುತಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್​ಡಿಎಫ್​ಸಿ ಬ್ಯಾಂಕ್​, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಹಾಗೂ ಎಚ್​​ಎಸ್​ಬಿಸಿ ಬ್ಯಾಂಕ್​ಗಳು ಸರ್ಕಾರಿ ಬಾಂಡ್‍ಗಳಲ್ಲಿನ ವಹಿವಾಟುಗಳಿಗಾಗಿ ವರ್ಚುವಲ್‌ ಕರೆನ್ಸಿಯನ್ನು ವಿತರಿಸಲಿವೆ.


ಹಾಗಾದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮತ್ತು ಬಹುನೀರೀಕ್ಷಿತ ಡಿಜಿಟಲ್ ರೂಪಾಯಿ, ಹಣದ ಭವಿಷ್ಯವೇ? ಹೇಗೆ ಇದು ಕಾಗದ ಹಣದ ಪರ್ಯಾಯ? ಹೇಗೆ ಇದು ಸಹಕಾರಿ ಎಂಬುದರ ಬಗ್ಗೆ ನಾವಿಲ್ಲಿ ತಿಳಿಯೋಣ.


ಡಿಜಿಟಲ್ ಕರೆನ್ಸಿ ಹಣದ ಭವಿಷ್ಯವಾಗಲು 10 ಕಾರಣಗಳು


1) ಕೇಂದ್ರೀಕೃತ


ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಕೇಂದ್ರೀಯ ಬ್ಯಾಂಕ್‌ಗಳಿಂದ ನೀಡಲಾದ ಹಣದ ಹೊಸ ಡಿಜಿಟಲ್ ರೂಪ ಆಗಿದೆ. ಹೀಗಾಗಿ ಹೆಚ್ಚು ನಂಬಿಕೆ, ಸ್ಥಿತಿಸ್ಥಾಪಕತ್ವ ಮತ್ತು ದಕ್ಷತೆಯನ್ನು ಹೆಚ್ಚಿಸಲು ಜನರಿಗೆ ಅಗತ್ಯವಿರುವ ಹೊಸ ಮೂಲಸೌಕರ್ಯವಾಗಲಿದೆ ಎಂದು ನೀರೀಕ್ಷಿಸಬಹುದು.


ಇತರ ಕ್ರಿಪ್ಟೋಕರೆನ್ಸಿಗಳಂತೆ ಹಣವು ವರ್ಚುವಲ್ ರೂಪದಲ್ಲಿರುತ್ತದೆ ಆದರೆ ಡಿಜಿಟಲ್ ರೂಪಾಯಿಯನ್ನು ವಿಕೇಂದ್ರೀಕರಿಸಲಾಗುವುದಿಲ್ಲ, ಆದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಿಸುತ್ತದೆ ಎಂದು ಪ್ರೋಸೆಟ್ಜ್ ಎಕ್ಸ್‌ಚೇಂಜ್ ಸಂಸ್ಥಾಪಕ ಮತ್ತು ನಿರ್ದೇಶಕ ಮನೋಜ್ ದಾಲ್ಮಿಯಾ ಹೇಳಿದ್ದಾರೆ. ಮುಖ್ಯವಾಗಿ ಡಿಜಿಟಲ್ ರೂಪಾಯಿ ಸಂಪೂರ್ಣವಾಗಿ ಕಾನೂನುಬದ್ಧವಾಗಿರುತ್ತದೆ ಮತ್ತು ಭಾರತ ಸರ್ಕಾರದಿಂದ ಸ್ವೀಕಾರಾರ್ಹವಾಗಿರುತ್ತದೆ.


2) ಸುಲಭ ಬಳಕೆ


ಭಾರತದಲ್ಲಿನ ಆಕ್ಸೆಂಚರ್‌ನ ಅಪ್ಲೈಡ್ ಇಂಟೆಲಿಜೆನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಲೀಡ್ ಪ್ರಣವ್ ಅರೋರಾ, ಮಾತನಾಡಿ "CBDCಯ ಪ್ರತಿಯೊಂದು ಘಟಕವನ್ನು ಗುರುತಿಸಬಹುದು ಮತ್ತು ಪತ್ತೆಹಚ್ಚಬಹುದು" ಎಂದು ಹೇಳಿದರು. ಎರಡನೆಯದಾಗಿ, ಇದನ್ನು ಪ್ರೋಗ್ರಾಮೆಬಲ್ ಮಾಡಬಹುದು ಅಂದರೆ, ನಿಗದಿತ ಅಂತಿಮ ಬಳಕೆಗಳು, ಸಮಯ ಮಿತಿ ಮತ್ತು ವರ್ಗಾವಣೆಯಂತಹ ಬಹು ಆಯಾಮಗಳನ್ನು ಸೇರಿಸುವ ಸಾಮರ್ಥ್ಯವಿದೆ.


3) ಜಾಗತಿಕ ಸ್ವೀಕಾರ


ಈ ಡಿಜಿಟಲ್‌ ಕರೆನ್ಸಿಯನ್ನು ಜಾಗತಿಕವಾಗಿ ಬಳಸಬಹುದಾಗಿದೆ. ಯುಎಸ್‌ ಡಾಲರ್‌ಗಳು ವಿಶ್ವದ ಮೂಲೆಮೂಲೆಯಲ್ಲೂ ಅರ್ಹವಾಗಿವೆ. ಅಂತೆಯೇ ಈ ಡಿಜಿಟಲ್‌ ಕರೆನ್ಸಿ ಕೂಡ ಜಾಗತಿಕ ಸ್ವೀಕಾರ ಆಗಿರುತ್ತದೆ. ಹೀಗಾಗಿ ಇದರ ಭವಿಷ್ಯ ಕೂಡ ಗಟ್ಟಿಯಾಗಿರುತ್ತದೆ. "ಅನಿವಾಸಿಗಳು ಹೊಂದಬಹುದಾದ ಮತ್ತು ಗಡಿಯಾಚೆಗಿನ ಹಣಕಾಸು ವಹಿವಾಟುಗಳನ್ನು ನಡೆಸಲು ಲಭ್ಯವಿರುವ ಡಿಜಿಟಲ್ ರೂಪಾಯಿ ಹೊಸ ಚಿಲ್ಲರೆ ಪಾವತಿ ಸಾಧ್ಯತೆಗಳು ಮತ್ತು ವ್ಯಾಪಾರ ಉದ್ಯಮಗಳನ್ನು ಸಕ್ರಿಯಗೊಳಿಸಲು ನೈಸರ್ಗಿಕ ವಿಸ್ತರಣೆಯಾಗಿದೆ"ಎಂದು ಪ್ರಣವ್ ಅರೋರಾ ಹೇಳಿದ್ದಾರೆ.


4) ಪಾರದರ್ಶಕತೆ


"ಭಾರತದಲ್ಲಿ ಡಿಜಿಟಲ್ ರೂಪಾಯಿಯ ಉಡಾವಣೆಯು ನಮ್ಮ ಕರೆನ್ಸಿ ನಿರ್ವಹಣಾ ವ್ಯವಸ್ಥೆಯಲ್ಲಿ ಹೆಚ್ಚು ದಕ್ಷತೆ, ಪಾರದರ್ಶಕತೆ, ವ್ಯವಸ್ಥಿತ ಸ್ಥಿತಿಸ್ಥಾಪಕತ್ವ ಮತ್ತು ಆಡಳಿತವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ" ಎಂದು ಪ್ರಣವ್ ಅರೋರಾ ಹೇಳಿದರು.


5) ಯುಪಿಐ (UPI) ಗಾಗಿ ಯಾವುದೇ ಬ್ಯಾಂಕ್ ಖಾತೆ ಅಗತ್ಯವಿಲ್ಲ


ಡಿಜಿಟಲ್‌ ಪಾವತಿಯಲ್ಲಿ ನಮಗೆ ಅವಶ್ಯವಾಗಿ ವ್ಯಾಂಕ್‌ ಖಾತೆಯ ಅಗತ್ಯವಿದೆ. ಆದರೆ ಡಿಜಿಟಲ್‌ ಕರೆನ್ಸಿ ಬಂದ ಮೇಲೆ ವಹಿವಾಟು ಮಾಡಲು ಬ್ಯಾಂಕ್ ಖಾತೆ ಅವಶ್ಯಕತೆ ಇಲ್ಲ. ಇನ್-ಸೊಲ್ಯೂಷನ್ಸ್ ಗ್ಲೋಬಲ್ ಲಿಮಿಟೆಡ್ ಡೊಮೆಸ್ಟಿಕ್ ಸಿಇಒ ಅನುಪ್ ನಾಯರ್ ಅವರು ವಹಿವಾಟು ಮಾಡಲು ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗಿಲ್ಲ ಎಂದು ಡಿಜಿಟಲ್‌ ಕರೆನ್ಸಿಯ ಪ್ರಯೋಜನವನ್ನು ತಿಳಿಸಿದರು.


ಇದನ್ನೂ ಓದಿ: ಇಲ್ಲಿ ಯಾರೇ ಹೂಡಿಕೆ ಮಾಡಿದ್ರೂ ಡಬಲ್ ಫ್ರಾಪಿಟ್​! ದೀಪಿಕಾ ಪಡುಕೋಣೆಗೂ ಸಿಕ್ತು ಕೋಟಿ ಕೋಟಿ ಲಾಭ!


6) ಡಿಜಿಟಲ್ ಕರೆನ್ಸಿ ಅಥವಾ ರೂಪಾಯಿ ಮೂಲಕ ಪಾವತಿ ನೈಜವಾಗಿರುತ್ತದೆ


ಡಿಜಿಟಲ್ ರೂಪಾಯಿಯನ್ನು ಪ್ರಾರಂಭಿಸಿದ ನಂತರ ಸರ್ಕಾರವು ಅಧಿಕೃತ ನೆಟ್‌ವರ್ಕ್‌ಗಳಲ್ಲಿ ಎಲ್ಲಾ ವಹಿವಾಟುಗಳನ್ನು ಸುಲಭವಾಗಿ ಪ್ರವೇಶಿಸಬಹುದು, ನೈಜ-ಸಮಯದ ಖಾತೆಯ ವಸಾಹತುಗಳು ಮತ್ತು ಲೆಡ್ಜರ್ ನಿರ್ವಹಣೆಯನ್ನು ಸಕ್ರಿಯಗೊಳಿಸಬಹುದು ಎಂದು ಅನುಪ್ ನಾಯರ್ ಹೇಳಿದರು.


7) ನೋಟುಗಳನ್ನು ಮುದ್ರಿಸುವ, ವಿತರಿಸುವ ಮತ್ತು ಸಂಗ್ರಹಿಸುವ ವೆಚ್ಚ ಉಳಿತಾಯ


ಕಾಗದ ನೋಟುಗಳನ್ನು ಮುದ್ರಿಸುವ, ವಿತರಿಸುವ ಮತ್ತು ಸಂಗ್ರಹಿಸುವ ಇಡೀ ಪ್ರಕ್ರಿಯೆಗೆ ಸಹಜವಾಗಿಯೇ ಹೆಚ್ಚಿನ ಹಣದ ವೆಚ್ಚವನ್ನು ಮಾಡಬೇಕಾಗುತ್ತದೆ. ಆದರೆ ಈ ಡಿಜಿಟಲ್‌ ಕರೆನ್ಸಿ ನಗದು ಮುದ್ರಣ, ವಿತರಣೆ ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆಯಲ್ಲಿ ಒಳಗೊಂಡಿರುವ ವೆಚ್ಚವನ್ನು ಕಡಿಮೆ ಮಾಡುತ್ತದೆ.


8) ಅಧಿಕೃತ ನೆಟ್‌ವರ್ಕ್‌ಗಳಲ್ಲಿ ನಡೆಯುವ ಎಲ್ಲಾ ವಹಿವಾಟುಗಳನ್ನು ಸರ್ಕಾರಗಳು ಪರಿಶೀಲಿಸಬಹುದು.


ಡಿಜಿಟಲ್ ರೂಪಾಯಿಯ ಅಳವಡಿಕೆಯು ನೇರ ಲಾಭ ವರ್ಗಾವಣೆಗಳ (ಡಿಬಿಟಿ) ಸುಲಭ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ ಎಂದು ಅನುಪ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ. ಇದು ತುಲನಾತ್ಮಕವಾಗಿ ವೇಗವಾಗಿ ಮತ್ತು ಪಾವತಿ ವ್ಯವಸ್ಥೆಯಲ್ಲಿನ ದುರ್ಬಳಕೆಗಳನ್ನು ಕಡಿಮೆ ಮಾಡುತ್ತದೆ. ಡಿಜಿಟಲ್ ವಹಿವಾಟುಗಳ ದಕ್ಷತೆಯನ್ನು ಹೆಚ್ಚಿಸುವುದು ಖಂಡಿತವಾಗಿಯೂ ಡಿಜಿಟಲ್ ಆಡಳಿತಕ್ಕೆ ಮತ್ತೊಂದು ಆಯಾಮವನ್ನು ಸೇರಿಸುತ್ತದೆ ಎಂದಿದ್ದಾರೆ.


ಇದನ್ನೂ ಓದಿ: ಟಿಡಿಎಸ್ ಕಡಿತದಿಂದ ವಿನಾಯಿತಿ: ಅರ್ಜಿ ಸಲ್ಲಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ


9) ಹರಿದು ಹೋಗುವುದು, ಕಳೆದು ಹೋಗಲು ಸಾಧ್ಯವಾಗುವುದಿಲ್ಲ


ಕಾಗದ ನೋಟುಗಳ ದೊಡ್ಡ ತೊಂದರೆಯೇ ಅದರ ಹಾನಿಯ ಗುಣ. ಅಂದರೆ ಸುಲಭವಾಗಿ ಅದನ್ನು ಹರಿಯಬಹುದು ಅಥವಾ ಅದು ಕಳೆದು ಹೋಗಬಹುದು. ಆದರೆ ಈ ಡಿಜಿಟಲ್‌ ಕರೆನ್ಸಿಯಲ್ಲಿ ಈ ತಾತ್ಪತ್ರೆಯ ಇರುವುದಿಲ್ಲ.ಕ್ಲಿಯರ್‌ನ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಮಾತನಾಡಿ, ಡಿಜಿಟಲ್ ಕರೆನ್ಸಿಯ ಪ್ರಯೋಜನವೆಂದರೆ ಅವು ಹರಿದು ಹೋಗುವುದಿಲ್ಲ, ಸುಟ್ಟುಹೋಗುವುದಿಲ್ಲ ಅಥವಾ ಹಾನಿಗೊಳಗಾಗುವುದಿಲ್ಲ. ಅದನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದರು.


10) ವಂಚನೆ


ಡಿಜಿಟಲ್ ರೂಪಾಯಿ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. CBDC ಇದನ್ನು ಎಂಬೆಡೆಡ್ ಪ್ರೋಗ್ರಾಮೆಬಿಲಿಟಿ ಮತ್ತು ನಿಯಂತ್ರಿತ ಪತ್ತೆಹಚ್ಚುವಿಕೆಯೊಂದಿಗೆ ಪೂರ್ವಭಾವಿಯಾಗಿ ಪರಿಹರಿಸಬಹುದು ಎಂದು ಪ್ರಣವ್ ಅರೋರಾ ಹೇಳಿದರು.

First published: