ಹಳೆಯ ಹಣಕಾಸು ವರ್ಷ ಮುಕ್ತಾಯವಾಗಿ (Financial Year) 2023-24 ಹೊಸ ಹಣಕಾಸು ವರ್ಷ ಏಪ್ರಿಲ್ 1ರಿಂದ ಹಲವು ಬದಲಾವಣೆಗಳೊಂದಿಗೆ ಆರಂಭವಾಗುತ್ತದೆ. ಹೊಸ ತೆರಿಗೆ ಪದ್ಧತಿ (New Tax Slabs) , ಆದಾಯ ತೆರಿಗೆ (Income Tax) ಮಿತಿಯಲ್ಲಿ ಬದಲಾವಣೆ, ಸ್ಲ್ಯಾಬ್ ಬದಲಾವಣೆ ಹೀಗೆ ಅನೇಕ ಅಂಶಗಳು ಏಪ್ರಿಲ್‌ನಲ್ಲಿ ಬದಲಾಗುತ್ತವೆ. ಹಾಗಾದರೆ ತೆರಿಗೆ ಪಾವತಿದಾರರ (Tax Payers) ಮೇಲೆ ಹೆಚ್ಚಿನ ಪರಿಣಾಮ ಬೀರುವ ಬದಲಾವಣೆಗಳು ಯಾವುವು ಅಂತಾ ಇಲ್ಲಿ ನೋಡೋಣ.
1) ಡೀಫಾಲ್ಟ್ ತೆರಿಗೆ ಪದ್ಧತಿ
1 ಏಪ್ರಿಲ್ 2023 ರಿಂದ, ಹೊಸ ಆದಾಯ ತೆರಿಗೆ ಪದ್ಧತಿಯು ಡೀಫಾಲ್ಟ್ ತೆರಿಗೆ ಪದ್ಧತಿಯಾಗಿ ಕಾರ್ಯನಿರ್ವಹಿಸುತ್ತದೆ. ಅದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಬಳಕೆದಾರರು ಹಳೆಯ ಅಥವಾ ಹೊಸ, ಈ ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಯಾವುದನ್ನೂ ಆಯ್ಕೆ ಮಾಡದಿದ್ದರೆ ಅವರಿಗೆ ಡಿಫಾಲ್ಟ್ ಆಗಿ ಹೊಸ ತೆರಿಗೆ ಪದ್ಧತಿ ಅನ್ವಯವಾಗುತ್ತದೆ. ವೇತನದಾರರು ಮತ್ತು ಪಿಂಚಣಿದಾರರ ರೂ.15.5 ಲಕ್ಷಗಳನ್ನು ಮೀರಿದ ತೆರಿಗೆಯ ಆದಾಯಕ್ಕೆ ಹೊಸ ವ್ಯವಸ್ಥೆಯ ಪ್ರಮಾಣಿತ ಕಡಿತವು ₹52,500 ಆಗಿರುತ್ತದೆ.
2) ತೆರಿಗೆ ರಿಯಾಯಿತಿ ಮಿತಿ ₹7 ಲಕ್ಷಕ್ಕೆ ಹೆಚ್ಚಳ
ಈ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಇದ್ದ ತೆರಿಗೆ ರಿಯಾಯಿತಿ ಮಿತಿಯನ್ನು ಹೆಚ್ಚಿಸಿದೆ. ಈ ಮೊದಲು ಐದು ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಮಿತಿ ಇತ್ತು. ಆದರೆ ಈಗ ಆ ಮಿತಿ ಏಳು ಲಕ್ಷ ರೂ.ಗೆ ಏರಿಕೆಯಾಗಿದೆ. ಇದರರ್ಥ ₹ 7 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಯು ವಿನಾಯಿತಿಗಳನ್ನು ಪಡೆಯಲು ಏನನ್ನೂ ಹೂಡಿಕೆ ಮಾಡಬೇಕಾಗಿಲ್ಲ.
3) ಸ್ಟ್ಯಾಂಡರ್ಡ್ ಡಿಡಕ್ಷನ್
ಹಳೆಯ ತೆರಿಗೆ ಪದ್ಧತಿಯಲ್ಲಿ ಉದ್ಯೋಗಿಗಳಿಗೆ ಒದಗಿಸಲಾದ ₹ 50000 ಸ್ಟ್ಯಾಂಡರ್ಡ್ ಡಿಡಕ್ಷನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದ್ದರಿಂದ ₹ 15.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಪ್ರತಿಯೊಬ್ಬ ವೇತನದಾರರು ₹ 52,500 ಲಾಭ ಪಡೆಯುತ್ತಾರೆ.
ಇದನ್ನೂ ಓದಿ : ಏಪ್ರಿಲ್ 1 ರಿಂದ UPI ಪೇಮೆಂಟ್ ಮತ್ತಷ್ಟು ದುಬಾರಿ, ಶ್ರೀಸಾಮಾನ್ಯನಿಗೆ ಗಾಯದ ಮೇಲೆ ಬರೆ!
4) ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಗಳು
ಹೊಸ ಆದಾಯ ತೆರಿಗೆ ಸ್ಲ್ಯಾಬ್ ಈ ಕೆಳಗಿನಂತೆ ಇವೆ
0-3 ಲಕ್ಷ - ಶೂನ್ಯ
3-6 ಲಕ್ಷ - 5%
6-9 ಲಕ್ಷ- 10%
9-12 ಲಕ್ಷ - 15%
12-15 ಲಕ್ಷ - 20%
15 ಲಕ್ಷಕ್ಕಿಂತ ಹೆಚ್ಚು- 30%
5) LTA
ಸರ್ಕಾರೇತರ ಉದ್ಯೋಗಿಗಳಿಗೆ ರಜೆ ಎನ್‌ಕ್ಯಾಶ್‌ಮೆಂಟ್‌ಗೆ ನಿರ್ದಿಷ್ಟ ಮಿತಿಯವರೆಗೆ ವಿನಾಯಿತಿ ಇದೆ. 2002ರಿಂದ ₹3 ಲಕ್ಷ ಇದ್ದ ಈ ಮಿತಿಯನ್ನು ಈಗ ₹25 ಲಕ್ಷಕ್ಕೆ ಹೆಚ್ಚಿಸಲಾಗಿದೆ.
6) ಮ್ಯೂಚುಯಲ್ ಫಂಡ್‌ಗಳಲ್ಲಿ ಯಾವುದೇ LTCG ತೆರಿಗೆ ಪ್ರಯೋಜನವಿಲ್ಲ
ಎಪ್ರಿಲ್ 1 ರಿಂದ, ಸಾಲ ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಗಳಿಗೆ ಅಲ್ಪಾವಧಿಯ ಬಂಡವಾಳ ಲಾಭದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಈ ಕ್ರಮವು ಹೂಡಿಕೆದಾರರಿಗೆ ಅಂತಹ ಹೂಡಿಕೆಗಳನ್ನು ಜನಪ್ರಿಯಗೊಳಿಸಿದ ದೀರ್ಘಾವಧಿಯ ತೆರಿಗೆ ಪ್ರಯೋಜನಗಳನ್ನು ತೆಗೆದುಹಾಕುತ್ತದೆ.
7) ಮಾರುಕಟ್ಟೆ ಸಂಬಂಧಿತ ಡಿಬೆಂಚರ್
ಎಪ್ರಿಲ್ 1 ರ ನಂತರ, ಎಂಎಲ್‌ಡಿಗಳಲ್ಲಿನ ಹೂಡಿಕೆಯು ಅಲ್ಪಾವಧಿಯ ಬಂಡವಾಳ ಆಸ್ತಿಗಳಾಗಿರುತ್ತದೆ. ಇದರೊಂದಿಗೆ ಮ್ಯೂಚುವಲ್ ಫಂಡ್ ಉದ್ಯಮದ ಮೇಲೆ ಇಂತಹ ಕ್ರಮದ ಪರಿಣಾಮವು ಕೊಂಚಮಟ್ಟಿಗೆ ಋಣಾತ್ಮಕವಾಗಿರುತ್ತದೆ.
8) ಜೀವ ವಿಮಾ ಪಾಲಿಸಿಗಳು
ವಾರ್ಷಿಕ ಪ್ರೀಮಿಯಂ 5 ಲಕ್ಷ ರೂ.ಗಿಂತ ಹೆಚ್ಚಿನ ಜೀವ ವಿಮಾ ಪ್ರೀಮಿಯಂನಿಂದ ಬರುವ ಆದಾಯವು ಹೊಸ ಹಣಕಾಸು ವರ್ಷದಿಂದ ಅಂದರೆ ಎಪ್ರಿಲ್ 1, 2023 ರಿಂದ ತೆರಿಗೆಗೆ ಒಳಪಡುತ್ತದೆ.
9) ಹಿರಿಯ ನಾಗರಿಕರಿಗೆ ಪ್ರಯೋಜನಗಳು
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹಣ ಉಳಿತಾಯ ಮಾಡುವ ಮಿತಿಯನ್ನು ದ್ವಿಗುಣಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಹೇಳಲಾಗಿದೆ. ಆ ಪ್ರಕಾರ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ₹15 ಲಕ್ಷದಿಂದ ₹30 ಲಕ್ಷಕ್ಕೆ ಹೆಚ್ಚಿಸಲಾಗುವುದು.
ಮಾಸಿಕ ಆದಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ಏಕ ಖಾತೆಗಳಿಗೆ 4.5 ಲಕ್ಷದಿಂದ ₹ 9 ಲಕ್ಷಕ್ಕೆ ಮತ್ತು ಜಂಟಿ ಖಾತೆಗಳಿಗೆ ₹ 7.5 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಲಾಗುವುದು.
10) ಭೌತಿಕ ಚಿನ್ನವನ್ನು ಇ-ಚಿನ್ನದ ರಸೀದಿಯಾಗಿ ಪರಿವರ್ತನೆ
2023 ರ ಬಜೆಟ್ ಅನ್ನು ಪ್ರಸ್ತುತಪಡಿಸುವಾಗ, ಭೌತಿಕ ಚಿನ್ನವನ್ನು ಎಲೆಕ್ಟ್ರಾನಿಕ್ ಚಿನ್ನದ ರಶೀದಿ (ಇಜಿಆರ್) ಆಗಿ ಪರಿವರ್ತಿಸಿದರೆ ಯಾವುದೇ ಬಂಡವಾಳ ಲಾಭದ ತೆರಿಗೆ ಇರುವುದಿಲ್ಲ. ಈ ನಿಯಮ ಕೂಡ 1 ಎಪ್ರಿಲ್ 2023 ರಿಂದ ಜಾರಿಗೆ ಬರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ