Education Loan ತಗೋಳ್ಳೋಕೆ ಈ ಬ್ಯಾಂಕ್ಗಳು ಬೆಸ್ಟ್! ಬಡ್ಡಿ ದರ ಅಂತೂ ತುಂಬಾ ಕಡಿಮೆ
Education Loan ತಗೋಳ್ಳೋಕೆ ಈ ಬ್ಯಾಂಕ್ಗಳು ಬೆಸ್ಟ್! ಬಡ್ಡಿ ದರ ಅಂತೂ ತುಂಬಾ ಕಡಿಮೆ
ನೀವು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಥವಾ ನಿಮ್ಮ ಓದಿಗೆ ಲೋನ್ ಪಡೀಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಈ ಪಬ್ಲಿಕ್ ಮತ್ತು ಪ್ರೈವೇಟ್ ಬ್ಯಾಂಕ್ಗಳಿಗೆ ಶಿಕ್ಷಣ ಸಾಲವನ್ನು ಕಡಿಮೆ ದರದಲ್ಲಿ ನೀಡುತ್ತೆ. BankBazaar.com ಈ ಬಗ್ಗೆ ವರದಿ ಮಾಡಿದೆ. ಹಾಗಿದ್ದರೆ, ಯಾವ ಬ್ಯಾಂಕ್ನಲ್ಲಿ ಎಷ್ಟು ಬಡ್ಡಿದರ ಇದೆ ಅಂತ ನೋಡೋಣ ಬನ್ನಿ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಬಡ್ಡಿ ದರ ಶೇ.6.70 ರಷ್ಟಿದೆ. ಮರುಪಾವತಿಗೆ ಏಳು ವರ್ಷಗಳ ಸಮಯ ಇರಲಿದ್ದು, 20 ಲಕ್ಷ ರೂ. ಸಾಲಕ್ಕೆ ನೀವು 29,039 ರೂ. ಇಎಂಐ ಪಾವತಿಸಬೇಕಾಗುತ್ತದೆ.
ಎಸ್‌ಬಿಐ ಬಡ್ಡಿ ದರ ಶೇ.7.25 ರಷ್ಟಿದೆ. 20 ಲಕ್ಷ ಸಾಲಕ್ಕೆ ನೀವು 30,340 ರೂಪಾಯಿ EMI ಪಾವತಿಸಬೇಕಾಗುತ್ತದೆ.
ಕೆನರಾ ಬ್ಯಾಂಕ್ ಶೇ.7.30ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಇಲ್ಲಿಂದ ಲೋನ್ ತೆಗೆದುಕೊಂಡ ಮೇಲೆ ನೀವು 30,480 ರೂಪಾಯಿ ಇಎಂಐ ಪಾವತಿಸಬೇಕು.
ಇಂಡಿಯನ್ ಬ್ಯಾಂಕ್ ಬಡ್ಡಿ ದರವು ಶೇಕಡಾ 7.40% ಆಗಿದ್ದು, ನೀವು 30,088 ರೂಪಾಯಿ EMI ಪಾವತಿಸಬೇಕಾಗುತ್ತದೆ.
ಬ್ಯಾಂಕ್ ಆಫ್ ಬರೋಡಾ- ನೀವು ಬ್ಯಾಂಕ್ ಆಫ್ ಬರೋಡಾದಿಂದ ಶೇಕಡಾ 7.75 ರ ಬಡ್ಡಿದರದಲ್ಲಿ ಸಾಲವನ್ನು ಪಡೆಯುತ್ತೀರಿ.
IDBI ಬ್ಯಾಂಕ್ : ಈ ಬ್ಯಾಂಕ್ ಶೇಕಡಾ 7.50 ರ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. 20 ಲಕ್ಷ ರೂಪಾಯಿ ಸಾಲದ ಮರುಪಾವತಿಗೆ 7 ವರ್ಷಗಳು ಅವಧಿ ಸಿಗಲಿದೆ. ಒಂದು ಇಎಂಐ 29,942 ರೂ ಆಗಿರುತ್ತದೆ.
ಯೂನಿಯನ್ ಬ್ಯಾಂಕ್- ಇದು 7.50 ಶೇಕಡಾ ಬಡ್ಡಿದರದಲ್ಲಿ ಶಿಕ್ಷಣ ಸಾಲ ನೀಡುತ್ತದೆ. 30,340 ರೂಪಾಯಿ EMI ಪಾವತಿಸಬೇಕಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿ ದರ ಶೇ.7.65 ರಿಂದ ಆರಂಭಗೊಳ್ಳುತ್ತದೆ. ಸಾಲ ಪಡೆಯುವ ಮೊತ್ತದ ಮೇಲೆ ನಿಮ್ಮ ಬಡ್ಡಿದರ ನಿಗದಿಯಾಗಲಿದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನಲ್ಲಿಯೂ ಬಡ್ಡಿ ದರ ಕೇವಲ ಶೇ. 7.25 ಇದೆ.. ಏಳು ವರ್ಷಗಳಲ್ಲಿ ಸಾಲ ಮರುಪಾವತಿ ಮಾಡಬೇಕು.
ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ 7.75ರಷ್ಟು ಬಡ್ಡಿ ದರದಲ್ಲಿ ಎಜುಕೇಷನ್ ಲೋನ್ ನೀಡುತ್ತೆ.
top videos
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ