Puttakkana Makkalu: ದೊರೇನೇ ಶ್ರೀ, ಶ್ರೀನೇ ಕಂಠಿ! ಸ್ನೇಹಾಗೆ ಎಲ್ಲ ಸತ್ಯ ಗೊತ್ತಾಗುತ್ತಾ?

ಸ್ನೇಹ ತಂಗಿ ಸುಮಾ ಸಹ ಶ್ರೀ ಕಡೆಯವರ ಬಗ್ಗೆಯೇ ಅನುಮಾನ ಪಡುತ್ತಿದ್ದಾಳೆ. ನೀನು ಕೂಡಾ ದೊರೆಯನ್ನು ನೋಡಿಲ್ಲ. ಇವರಿಗೆ ಮಾತ್ರ ಹೇಳ್ತಾನಂತೆ. ಇವರಿಗೂ, ದೊರೆಗೂ ಯಾಕ್ ನಂಟಿರಬಾರದು ಎಂದು ಕೇಳುತ್ತಿದ್ದಾಳೆ.

ಸ್ನೇಹ

ಸ್ನೇಹ

  • Share this:
    ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ  (Sneha) ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ (Suma) ಓದಿನ ಜೊತೆ ಆಟಗಳಲ್ಲೂ ಮುಂದು.

    ಸ್ನೇಹಳಿಗೆ ಪ್ರೀತಿ ಹೇಳಿಕೊಳ್ಳಲು ಕಂಠಿ ಒದ್ದಾಟ
    ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಟ ನಡೆಸುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು. ಅಲ್ಲದೇ ಕಂಠಿ ಸ್ನೇಹ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಅಲ್ಲದೇ ಸ್ನೇಹಾಗೆ ಕಂಠಿ ಮತ್ತು ಅವರಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದ್ರೂ ಆಗಲ್ಲ ಅದಕ್ಕೆ. ಕಂಠಿ ಯಾವಾಗ ತನ್ನ ಪ್ರೀತಿ ಹೇಳಿ ಒಪ್ಪಿಸುತ್ತಾನೋ ಗೊತ್ತಿಲ್ಲ.

    ಪೂರ್ವಿ ಜೊತೆ ಕಂಠಿ ನಿಶ್ಚಿತಾರ್ಥ
    ಇನ್ನು ಬಂಗಾರಮ್ಮ ತನ್ನ ಮಗ ಕಂಠಿಗೆ, ಅಣ್ಣನ ಮಗಳು ಪೂರ್ವಿ ಜೊತೆ ನಿಶ್ಚಿತಾರ್ಥ ಮಾಡಲು ಬಂಗಾರಮ್ಮ ರೆಡಿ ಆಗಿದ್ದಾಳೆ. ಇರೋ ಒಬ್ಬ ಮಗನ ನಿಶ್ಚಿತಾರ್ಥ ಗ್ರ್ಯಾಂಡ್ ಆಗಿ ಮಾಡಲು ಮುಂದಾಗಿದ್ದಾಳೆ. ಅದಕ್ಕೆ ತನಗೆ ಪರಿಚಯ ಇರೋರನ್ನೆಲ್ಲಾ ಕರೆಯುತ್ತಿದ್ದಾಳೆ.

    ಇದನ್ನೂ ಓದಿ: Kannadathi: ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಗುತ್ತಾ? ಆತಂಕದಲ್ಲಿ ಮುದ್ದಿನ ಸೊಸೆ ಭುವಿ!

    ದೊರೆ ರೂಪದಲ್ಲಿ ಸ್ನೇಹಳಿಗೆ ಪತ್ರ
    ಸ್ನೇಹಳನ್ನು ಪ್ರೀತಿ ಮಾಡ್ತಿರೋ ಕಂಠಿ, ಅವಳ ಬಳಿ ಶ್ರೀ ಎಂದು ಹೇಳಿಕೊಂಡಿದ್ದಾನೆ. ಅದಲ್ಲದೇ ದೊರೆ ಎನ್ನುವವನ ಹೆಸರಿನಲ್ಲಿ ಪತ್ರ ಬರೆದು ಆಗಾಗ ಸ್ನೇಹಾಗೆ ಕಳಿಸುತ್ತಾ ಇರುತ್ತಾನೆ. ಸ್ನೇಹಾಗೂ ದೊರೆ ಮೇಲೆ ಗೌರವ ಹುಟ್ಟಿಕೊಂಡಿರುತ್ತೆ. ದೊರೆಯನ್ನು ನೋಡಬೇಕು ಎಂದು ಅಂದುಕೊಂಡಿದ್ದಾಳೆ.

    Zee Kannada serial, Kannada serial, Puttakkana Makkalu serial today episode, Puttakkana Makkalu serial cast, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ದೊರೆನೇ ಶ್ರೀ, ಶ್ರೀನೇ ಕಂಠಿ ಎಂದು ಗೊತ್ತಾಗುತ್ತಾ ಸ್ನೇಹಾಗೆ?, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಕಂಠಿ


    ಸ್ನೇಹ-ಶ್ರೀ ಫೋಟೋ ಎಲ್ಲೆಡೆ ಇವೆ
    ಯಾರೂ ಸ್ನೇಹ ಮತ್ತು ಶ್ರೀ ಯ ಫೋಟೋ ವನ್ನು ಊರಿನ ಗೋಡೆಯ ತುಂಬಾ ಅಂಟಿಸಿದ್ದಾರೆ. ಕೆಳಗೆ ಇಂತಿ ನಿಮ್ಮ ದೊರೆ ಎಂದು ಬರೆದಿದ್ದಾರೆ. ಅದನ್ನು ನೋಡಿದ ಸ್ನೇಹ ಕೋಪಗೊಂಡಿದ್ದಾಳೆ.

    ಇದನ್ನೂ ಓದಿ: Jothe Jotheyali: ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರವಾಗೋ ಟೈಮ್ ಬದಲಾಗುತ್ತಾ?

    ಅಲ್ಲದೇ ಸ್ನೇಹ ತಂಗಿ ಸುಮಾ ಸಹ ಶ್ರೀ ಕಡೆಯವರ ಬಗ್ಗೆಯೇ ಅನುಮಾನ ಪಡುತ್ತಿದ್ದಾಳೆ. ನೀನು ದೊರೆ ನೋಡಿಲ್ಲ. ಇವರಿಗೆ ಮಾತ್ರ ಹೇಳ್ತಾನಂತೆ. ಇವರಿಗೂ, ದೊರೆಗೂ ಯಾಕ್ ನಂಟಿರಬಾರದು ಎಂದು ಕೇಳುತ್ತಿದ್ದಾಳೆ.

    Zee Kannada serial, Kannada serial, Puttakkana Makkalu serial today episode, Puttakkana Makkalu serial cast, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ದೊರೆನೇ ಶ್ರೀ, ಶ್ರೀನೇ ಕಂಠಿ ಎಂದು ಗೊತ್ತಾಗುತ್ತಾ ಸ್ನೇಹಾಗೆ?, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಸುಮಾ


    ಶ್ರೀನೇ ದೊರೆ ಎಂದು ಗೊತ್ತಾಗುತ್ತಾ?
    ಸ್ನೇಹಗೆ ಶ್ರೀನೇ ದೊರೆ ಎಂದು ಗೊತ್ತಾಗುತ್ತಾ?, ಧೈರ್ಯವಾಗಿ ಎದುರು ಪ್ರೀತಿ ಹೇಳಿಕೊಳ್ಳಲಾಗದೇ ಈ ರೀತಿ ಮಾಡ್ತಿದ್ದಾನೆ ಎಂಬ ಸತ್ಯ ತಿಳಿಯುತ್ತಾ? ಇದನ್ನೆಲ್ಲಾ ಸ್ನೇಹ ಹೇಗೆ ಸ್ವೀಕರಿಸುತ್ತಾಳೆ? ಗೊತ್ತಾದ್ರೆ ಶ್ರೀ ಮೇಲಿನ ನಂಬಿಕೆಯೆಲ್ಲಾ ಹೋಗುತ್ತಾ? ಧಾರಾವಾಹಿ ತೀವ್ರ ಕುತೂಹಲ ಮೂಡಿಸುತ್ತಿದ್ದು ಮುಂದೇನಾಗುತ್ತೆ ಅಂತ ಪುಟ್ಟಕ್ಕನ ಮಕ್ಕಳು ಸೀರಿಯಲ್ ನೋಡಬೇಕು.
    Published by:Savitha Savitha
    First published: