Crime News: ಇನ್ನೊಂದು ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವಕನ ಕತ್ತು ಸೀಳಿ ಕೊಲೆ

ಇನ್ನೊಂದು ತಿಂಗಳಲ್ಲಿ ತಾನು ಇಷ್ಟಪಟ್ಟ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಬೇಕಾದ ಯುವಕ ಇಂದು ಧಾರುಣವಾಗಿ ಸಾವನ್ನಪ್ಪಿದ್ದಾನೆ.

ಆನೇಕಲ್ ಪೊಲೀಸ್ ಠಾಣೆ

ಆನೇಕಲ್ ಪೊಲೀಸ್ ಠಾಣೆ

  • Share this:
ಆನೇಕಲ್: ರಾತ್ರಿ ಹತ್ತು ಗಂಟೆ ಸರಿ ಸುಮಾರು. ಆತ ಆಗ ತಾನೇ ಮಧ್ಯಾಹ್ನ ಪಾಳಿ ಕೆಲಸ (Second Shift Work) ಮುಗಿಸಿ ರೂಮಿನತ್ತ ಹೊರಟಿದ್ದ . ಮಾರು ದೂರು ಸಾಗುತ್ತಿದ್ದಂತೆ ಮೂರು ಮಂದಿ ದುತ್ತನೆ ಪ್ರತ್ಯಕ್ಷರಾಗಿದ್ದಾರೆ. ಕುತ್ತಿಗೆಗೆ ಚಾಕು (Knife) ಹಿಡಿದು ಮೊಬೈಲ್ ಕೊಡು ಎಂದಿದ್ದಾನೆ. ಆತ ಮೊಬೈಲ್ (Mobile) ಕೊಡುವುದಿಲ್ಲ ಎಂದು ಪ್ರತಿರೋಧ ತೋರುತ್ತಿದ್ದಂತೆ ಆತನ ಕುತ್ತಿಗೆ ಸೀಳಿ ಮೊಬೈಲ್ ಸಮೇತ ಕ್ಷಣ ಮಾತ್ರದಲ್ಲಿ ಕಿರಾತಕರು ಪರಾರಿಯಾಗಿದ್ದಾರೆ. ಬೆಂಗಳೂರಿನ (Bengaluru) ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ರಾತ್ರಿ ಒಬ್ಬರೇ ಹೊರ ಬರೋದು ಎಷ್ಟು ಸೇಫ್ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಸೋನು ಥಾಮ್ಸನ್ ಕೊಲೆಯಾದ ವ್ಯಕ್ತಿ. ಮೂಲತಃ ಕೇರಳದವರಾದ ಸೋನು, ಜಿಗಣಿ ಕೈಗಾರಿಕಾ ಪ್ರದೇಶದ ಟಾಟಾ ಅಡ್ವಾನ್ಸ್ ಕಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಸೆಕೆಂಡ್ ಶಿಫ್ಟ್ ಕೆಲಸ ಮುಗಿಸಿ ಹೊರ ಬರುತ್ತಿದ್ದಂತೆ ಅಡ್ಡಗಟ್ಟಿದ ಮೂರು ಮಂದಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.

ಕತ್ತು ಸೀಳಿ ಮೊಬೈಲ್ ಪಡೆದು ಪರಾರಿ

ಕಂಪನಿಯಿಂದ ಹೊರ ಬರುವುದನ್ನೇ ಹೊಂಚು ಹಾಕಿ ಕುಳಿತ್ತಿದ್ದ ಖದೀಮರು ಅಡ್ಡಗಟ್ಟಿ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಪ್ರತಿರೋಧ ವ್ಯಕ್ತಪಡಿಸಿದಾಗ ಚಾಕುವಿನಿಂದ ಕುತ್ತಿಗೆ ಸೀಳಿ ಕಿರಾತಕರು ಪರಾರಿಯಾಗಿದ್ದಾರೆ.

ಇದನ್ನೂ ಓದಿ:  Viral Video: ನಡುರಸ್ತೆಯಲ್ಲಿ ನಾಗಿನ್ ಡ್ಯಾನ್ಸ್! ಯುವಕರ ವಿಡಿಯೋ ನೋಡಿ ನೆಟ್ಟಿಗರು ಖುಷ್

ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ಗಸ್ತು ಸೇರಿದಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರಾದ ಸುರೇಶ್  ಜಿಗಣಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

youth killed by mobile thieves at jigani bengaluru cank mrq
ಸಾಂದರ್ಭಿಕ ಚಿತ್ರ


ಕಳ್ಳರಿಗೆ ಕಾರ್ಮಿಕರೇ ಟಾರ್ಗೆಟ್

ಇನ್ನೂ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಮಂದಿ ವಲಸಿಗರು ಬದುಕು ಕಟ್ಟಿಕೊಂಡಿದ್ದಾರೆ. ಜೊತೆಗೆ ಸ್ಥಳೀಯರು ದುಡಿಯುತ್ತಿದ್ದು, ಕಳ್ಳರ ಹಾವಳಿ ಹೆಚ್ಚಾಗಿದೆ. ತಿಂಗಳ ಮೊದಲ ವಾರದಲ್ಲಿ ಸಂಬಳ ನೀಡುವುದರಿಂದ ಕಾರ್ಮಿಕರನ್ನು ಟಾರ್ಗೆಟ್ ಮಾಡುವ ಕಳ್ಳರು ಹಣ ಮೊಬೈಲ್ ದೋಚುತ್ತಾರೆ. ನೀಡದಿದ್ದರೆ ಚಾಕು ಚೂರಿ ತೋರಿಸಿ ಹೆದರಿಸುತ್ತಾರೆ. ಅದಕ್ಕೆ ಬಗ್ಗದಿದ್ದಾಗ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಾರೆ .

ಕಳ್ಳರ ಹಾವಳಿ ನಿಯಂತ್ರಿಸಬೇಕಿದೆ

ಅದರಲ್ಲೂ ಉತ್ತರ ಭಾರತದ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದು ಮನೆ ತಲುಪಬೇಕಾದ ಸ್ಥಿತಿ ಇದೆ. ಪದೇ ಪದೇ ಕಾರ್ಮಿರನ್ನು ಹೆದರಿಸಿ ಮೊಬೈಲ್ ಸೇರಿದಂತೆ ಹಣವನ್ನು ದೋಚುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಕಳ್ಳರ ಮೇಲೆ ಕಣ್ಣಿಟ್ಟು ಕಳ್ಳರ ಹಾವಳಿ ನಿಯಂತ್ರಿಸಬೇಕು ಎಂದು ಕಾರ್ಮಿಕರಾದ ನಾಗೇಶ್ ಪೊಲೀಸರನ್ನು ಒತ್ತಾಯಿಸಿದ್ದಾರೆ .

ಇನ್ನೊಂದು ವಾರದಲ್ಲಿ ನಿಶ್ವಿತಾರ್ಥ ಇತ್ತು

ಒಟ್ಟಿನಲ್ಲಿ ತಾನು ಮಾಡದ ತಪ್ಪಿಗೆ ಅಮಾಯಕ ಸೋನು ಥಾಮ್ಸನ್ ಬೀದಿ ಹೆಣವಾಗಿದ್ದು ದುರಂತವೇ ಸರಿ. ಇನ್ನೊಂದು ತಿಂಗಳಲ್ಲಿ ತಾನು ಇಷ್ಟಪಟ್ಟ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಬೇಕಾದ ಯುವಕ ಇಂದು ಧಾರುಣವಾಗಿ ಸಾವನ್ನಪ್ಪಿದ್ದಾನೆ. ಇನ್ನಾದರೂ ಜಿಗಣಿ ಪೊಲೀಸರು ಅಮಾಯಕನನ್ನು ಕೊಲೆಗೈದು ಕಿರಾತಕರನ್ನು ಹೆಡೆಮುರಿ ಕಟ್ಟಿ ಮೃತನ ಸಾವಿಗೆ ನ್ಯಾಯ ಒದಗಿಸಬೇಕಿದೆ.

ಇದನ್ನೂ ಓದಿ:  Santosh Patil: ರಾಜ್ಯಪಾಲರಿಗೆ ಪತ್ರ ಬರೆದ ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ನಿ, ಪತಿ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ

NWKRTC ಐರಾವತ ಬಸ್ ಸೀಜ್!

ಅಪಘಾತದಲ್ಲಿ (Accident) ಮೃತ ವ್ಯಕ್ತಿಗೆ (Dead Person) ಪರಿಹಾರ ನೀಡದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ಕೋರ್ಟ್ (Court) ಶಾಕ್ ನೀಡಿದೆ. ಹುಬ್ಬಳ್ಳಿಯ ಕೋರ್ಟ್ (Hubballi Court) ಆದೇಶದಂತೆ ಸಾರಿಗೆ ಬಸ್ ನ್ನು (Bus) ಜಪ್ತಿ ಮಾಡಲಾಗಿದೆ. ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕ ಅಪಘಾತದಲ್ಲಿ ಮೃತಪಟ್ಟರೂ ಪರಿಹಾರ (compensation) ನೀಡದೆ ಸಂಸ್ಥೆ ಸತಾಯಿಸುತ್ತಿತ್ತು.

youth killed by mobile thieves at jigani bengaluru cank mrq
ಸಾಂದರ್ಭಿಕ ಚಿತ್ರ


ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಕುಟುಂಬದವರು (Family), ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರೆಂಟ್ (Warrant) ಜಾರಿ ಮಾಡಿತ್ತು. ಇದರ ಅನ್ವಯ ಕೋರ್ಟ್ ಸಿಬ್ಬಂದಿ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ (Bus Station) ಐರಾವತ ಬಸ್ (Airavat Bus) ಜಪ್ತಿ ಮಾಡಿದ್ದಾರೆ. ಸದ್ಯ ಬಸ್‌ ಅನ್ನು ಹುಬ್ಬಳ್ಳಿ ಕೋರ್ಟ್ ಎದುರು ತಂದು ನಿಲ್ಲಿಸಲಾಗಿದೆ.
Published by:Mahmadrafik K
First published: