• Home
  • »
  • News
  • »
  • breaking-news
  • »
  • Viral Video: ಪಾತ್ರೆ, ಲೋಟ ಬಾರಿಸುತ್ತಾ ಮದುವೆ ಮನೆಯಲ್ಲಿ ದೇಶಿ ಹುಡುಗರ ಕ್ರೇಜಿ ಡ್ಯಾನ್​; ವಿಡಿಯೋ ನೋಡಿ

Viral Video: ಪಾತ್ರೆ, ಲೋಟ ಬಾರಿಸುತ್ತಾ ಮದುವೆ ಮನೆಯಲ್ಲಿ ದೇಶಿ ಹುಡುಗರ ಕ್ರೇಜಿ ಡ್ಯಾನ್​; ವಿಡಿಯೋ ನೋಡಿ

ವೈರಲ್ ವಿಡಿಯೋ

ವೈರಲ್ ವಿಡಿಯೋ

39 ಸೆಕೆಂಡಿನ ವಿಡಿಯೋ ತುಣುಕಿನಲ್ಲಿ ಒಂದು ಮದುವೆ ನಡೆಯುವ ಸ್ಥಳದಲ್ಲಿ ಹಾಡೊಂದಕ್ಕೆ ಯುವಕರು ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗಿದೆ.

  • Trending Desk
  • 5-MIN READ
  • Last Updated :
  • Share this:

ಈಗಂತೂ ಯಾರಾದರೂ ನಮ್ಮ ಮನೆಗೆ ಬಂದು ನಮ್ಮನ್ನು ‘ಮದುವೆ (Wedding Invite) ಇದೆ ಬನ್ನಿ, ಮಿಸ್ ಮಾಡದೇ ಬನ್ನಿ’ ಅಂತೆಲ್ಲಾ ಹೇಳಿ ಹೋದರೆ, ಅದನ್ನು ಯಾರೂ ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಈ ಕೋವಿಡ್-19 (COVID-19) ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದ ಮದುವೆಗಳು (Marriages) ಹಿಂದೆಗಿಂತಲೂ ಸ್ವಲ್ಪ ವಿಭಿನ್ನವಾಗಿ ನಡೆಯುತ್ತಿವೆ ಅಂತ ಹೇಳಿದರೆ ಸುಳ್ಳಲ್ಲ. ಈ ಎರಡೂವರೆ ವರ್ಷದಲ್ಲಿ ನಾವು ಈ ಮದುವೆಗಳಲ್ಲಿ ನಡೆದ ಅನೇಕ ಘಟನೆಗಳ ವಿಡಿಯೋಗಳನ್ನು (Wedding video) ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನೋಡಿದ್ದೇವೆ ಅಂತ ಹೇಳಬಹುದು.


ಅದರಲ್ಲೂ ಭಾರತೀಯರಿಗೆ ಮದುವೆಗಳು ಒಂದು ರೀತಿಯಲ್ಲಿ ಹಬ್ಬಗಳಿದ್ದಂತೆ. ಕನಿಷ್ಠ ಏನಿಲ್ಲಾ ಅಂತ ಹೇಳಿದರೂ ಒಂದು ವಾರದವರೆಗೆ ಮದುವೆ ಮನೆ ವಿವಿಧ ರೀತಿಯ ಕಾರ್ಯಕ್ರಮಗಳೊಂದಿಗೆ ಮತ್ತು ಅತಿಥಿಗಳಿಂದ ತುಂಬಿರುತ್ತದೆ.


ಮದುವೆ ಮಂಟಪದ ಅಲಂಕಾರದಿಂದ ಹಿಡಿದು ಮದುವೆ ಮಂಟಪಕ್ಕೆ ವಧು-ವರರ ಗ್ರ್ಯಾಂಡ್ ಎಂಟ್ರಿ ಆಗಿರಬಹುದು, ವಧುವಿನ ವಿಭಿನ್ನ ಉಡುಗೆಯಾಗಿರಬಹುದು, ಮದುವೆಗೆ ಬಂದ ವಧು-ವರರ ಸ್ನೇಹಿತರು, ಮದುವೆ ತಮಾಷೆಯಾಗಿರಬಹುದು ಹೀಗೆ ಒಂದೇ ಎರಡೇ, ಮದುವೆಗಳಿಗೆ ಹೋದರೆ ಸಾಕು ಒಂದು ರೀತಿಯ ಹಬ್ಬ ಮಾಡಲು ಹೋದಷ್ಟೆ ಸಂಭ್ರಮ ಅಂತ ಹೇಳಬಹುದು.


ಅದರಲ್ಲೂ ಮದುವೆ ಎಂದರೆ ಬಹುತೇಕರಿಗೆ ನೆನಪಾಗುವುದು ಒಂದು ಮದುವೆ ಊಟ ಮತ್ತು ಮದುವೆಯಲ್ಲಿ ಮಾಡುವ ಭರ್ಜರಿ ಡ್ಯಾನ್ಸ್ ಅಂತ ಹೇಳಬಹುದು.


ಮದುವೆ ಊಟ ಮತ್ತು ಡ್ಯಾನ್ಸ್ 


ಮದುವೆ ಊಟ ಅನ್ನೋ ವಿಷಯಕ್ಕೆ ಬಂದರೆ ಈ ದೇಸಿ ಮದುವೆಗಳಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ಮತ್ತು ಸಿಹಿ ತಿನಿಸುಗಳನ್ನು ಮದುವೆಗಳಲ್ಲಿ ಮಾಡಿಸಿರುತ್ತಾರೆ. ಹಾಗೆಯೇ ದೇಸಿ ಮದುವೆ ಡ್ಯಾನ್ಸ್ ವಿಷಯಕ್ಕೆ ಬಂದರೆ ಮದುವೆಗೆ ಬಂದ ಅತಿಥಿಗಳು ಸಹ ಮದುವೆ ಮನೆಯವರ ಜೊತೆಯಲ್ಲಿ ಹಾಡುಗಳಿಗೆ ಮತ್ತು ಡಿಜೆ ಗೆ ಒಂದೆರಡು ಹೆಜ್ಜೆ ಹಾಕುವರು ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಮೊದಲೆಲ್ಲಾ ಈ ಡೋಲು ವಾದ್ಯಗಳನ್ನು ಭಾರಿಸುತ್ತಿದ್ದು, ಮದುವೆ ಮೆರವಣಿಗೆಯಲ್ಲಿ ಆ ಡೋಲು ಬೀಟ್ ಗೆ ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಈಗೆಲ್ಲಾ ಡಿಜೆಗಳು ಬಂದಿವೆ.. ರಿಮಿಕ್ಸ್ ಹಾಡುಗಳ ಸೌಂಡ್ ಅನ್ನು ಜೋರಾಗಿ ಇಟ್ಟುಕೊಂಡು ಅದಕ್ಕೆ ತಕ್ಕಂತಹ ವಿವಿಧ ರೀತಿಯ ಬಣ್ಣ ಬಣ್ಣದ ಫೋಕಸ್ ಲೈಟ್ ಗಳು ಹೀಗೆ ಮದುವೆ ಮೆರವಣಿಗೆಯನ್ನು ಇನ್ನಷ್ಟು ಮೆರಗುಗೊಳಿಸುವಂತಿದೆ ಅಂತ ಹೇಳಬಹುದು.


ಅದರಲ್ಲೂ ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುವವರು ಒಮ್ಮೆ ಶುರು ಹಚ್ಚಿಕೊಂಡರೆ ಸಾಕು ಅದು ಅನೇಕ ಗಂಟೆಗಳ ಕಾಲ ಹಾಗೆಯೇ ನಡೆಯುತ್ತಿರುತ್ತದೆ. ಇಲ್ಲಿಯೂ ಸಹ ಅಂತಹದೇ ಒಂದು ಮದುವೆ ಡ್ಯಾನ್ಸ್ ನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಅಂತ ಹೇಳಬಹುದು.


ವೈರಲ್ ಆದ ವಿಡಿಯೋ ಕ್ಲಿಪ್ ನಲ್ಲಿ ಏನಿದೆ ನೋಡಿ


39 ಸೆಕೆಂಡಿನ ವಿಡಿಯೋ ತುಣುಕಿನಲ್ಲಿ ಒಂದು ಮದುವೆ ನಡೆಯುವ ಸ್ಥಳದಲ್ಲಿ ಹಾಡೊಂದಕ್ಕೆ ಯುವಕರ ಗುಂಪೊಂದು ಕೈಗೆ ಸಿಕ್ಕ ಕುರ್ಚಿಗಳು ಮತ್ತು ಖಾಲಿ ಪಾತ್ರೆಗಳನ್ನು ಸಹ ಕೈಯಲ್ಲಿ ಎತ್ತಿಕೊಂಡು ಅದನ್ನು ಜೋರಾಗಿ ಹೊಡೆಯುತ್ತಾ ಆ ಬೀಟ್ ಗಳಿಗೆ ಸಖತ್ತಾಗಿ ಡ್ಯಾನ್ಸ್ ಮಾಡಿರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದು.


ಇದನ್ನೂ ಓದಿ: Anand Mahindra: ಆನಂದ್‌ ಮಹೀಂದ್ರಾ ಅವರು ಶೇರ್​ ಮಾಡಿರುವ ವೈರಲ್​​ ಫೋಟೋ ಹೇಗಿದೆ ಗೊತ್ತಾ?


ಡಿಸೆಂಬರ್ 6 ರಂದು, ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಯಿತು. ಇದಕ್ಕೆ "ಹುಡುಗಿಯರು: ಇಲ್ಲಿ ಹೆಚ್ಚು ವಾದ್ಯಗಳು ಇಲ್ಲ, ಹಾಗಾಗಿ ನಾವು ಡ್ಯಾನ್ಸ್ ಮಾಡೋದಿಲ್ಲ ಅಂತ ಹೇಳಿದರೆ ಹುಡುಗರು ಕೈಗೆ ಸಿಕ್ಕ ಪಾತ್ರೆಗಳನ್ನು ಬಾರಿಸಿಕೊಂಡು ಆ ಬೀಟ್ ಗೆ ಡ್ಯಾನ್ಸ್ ಮಾಡಿದರು” ಎಂಬ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.


ಡ್ಯಾನ್ಸ್ ವಿಡಿಯೋಗೆ ಹೇಗೆಲ್ಲಾ ಪ್ರತಿಕ್ರಿಯಿಸಿದ್ದಾರೆ ನೆಟ್ಟಿಗರು?


ಟ್ವಿಟ್ಟರ್ ನಲ್ಲಿ ಈ ವಿಡಿಯೋವು ಇಲ್ಲಿಯವರೆಗೆ 650 ಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು 14,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಹ ಪಡೆದಿದೆ. ಈ ಸಂಖ್ಯೆ ಗಂಟೆ ಗಂಟೆಗೆ ಜಾಸ್ತಿಯಾಗುತ್ತಲೇ ಇದೆ ಅಂತ ಹೇಳಬಹುದು. ಆದರೆ ಈ ವಿಡಿಯೋವನ್ನು ಚಿತ್ರೀಕರಿಸಿದ ಸ್ಥಳ ಮತ್ತು ದಿನಾಂಕವು ಇನ್ನೂ ತಿಳಿದು ಬಂದಿಲ್ಲ.ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಂಗ್ಯದಿಂದ “ಸ್ವಲ್ಪ ಕುಡಿದ ನಂತರ ಹುಡುಗರು ಜನರೇಟರ್ ಶಬ್ದಕ್ಕೂ ಡ್ಯಾನ್ಸ್ ಮಾಡುವುದಕ್ಕೆ ಶುರು ಮಾಡಬಹುದು” ಎಂದು ಹೇಳಿದರು.


ಎರಡನೇ ಬಳಕೆದಾರರು “ವಧುವಿನ ಕಡೆಯವರಿಗೆ ಮದುವೆಯ ಖರ್ಚನ್ನು ಹೆಚ್ಚಿಸಿದ್ದಾರೆ” ಎಂದು ಹೇಳಿದರು. ಸೋನು ಸೂದ್ ಮತ್ತು ಇಶಾ ಕೊಪ್ಪಿಕರ್ ನಟಿಸಿರುವ ಬಾಲಿವುಡ್ ಚಲನಚಿತ್ರ "ಏಕ್ ವಿವಾಹ್ ಐಸಾ ಭಿ" ಯ ಪೋಸ್ಟರ್ ಅನ್ನು ಸಹ ಇನ್ನೊಬ್ಬ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

Published by:Mahmadrafik K
First published: