• ಹೋಂ
  • »
  • ನ್ಯೂಸ್
  • »
  • Breaking News
  • »
  • How to Save Money: ದುಡಿದ ಹಣ ಸೇವ್​ ಮಾಡೋಕಾಗ್ತಿಲ್ವಾ? ಈ ರೀತಿ ಮಾಡಿದ್ರೆ ಕೋಟಿ ಕೋಟಿ ಹಣ ಗಳಿಸಬಹುದು

How to Save Money: ದುಡಿದ ಹಣ ಸೇವ್​ ಮಾಡೋಕಾಗ್ತಿಲ್ವಾ? ಈ ರೀತಿ ಮಾಡಿದ್ರೆ ಕೋಟಿ ಕೋಟಿ ಹಣ ಗಳಿಸಬಹುದು

How to save money: ಸಾಮಾನ್ಯವಾಗಿ ಹೂಡಿಕೆದಾರರು ತಮ್ಮ ಮಾಸಿಕ SIP ಉಳಿತಾಯದಲ್ಲಿ 30 ವರ್ಷಗಳ ಅವಧಿಯಲ್ಲಿ ಇಲ್ಲವೇ ಅವರು ನಿವೃತ್ತರಾಗುವವರೆಗೆ 10% ವಾರ್ಷಿಕ ಹೆಚ್ಚಳವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ

How to save money: ಸಾಮಾನ್ಯವಾಗಿ ಹೂಡಿಕೆದಾರರು ತಮ್ಮ ಮಾಸಿಕ SIP ಉಳಿತಾಯದಲ್ಲಿ 30 ವರ್ಷಗಳ ಅವಧಿಯಲ್ಲಿ ಇಲ್ಲವೇ ಅವರು ನಿವೃತ್ತರಾಗುವವರೆಗೆ 10% ವಾರ್ಷಿಕ ಹೆಚ್ಚಳವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ

How to save money: ಸಾಮಾನ್ಯವಾಗಿ ಹೂಡಿಕೆದಾರರು ತಮ್ಮ ಮಾಸಿಕ SIP ಉಳಿತಾಯದಲ್ಲಿ 30 ವರ್ಷಗಳ ಅವಧಿಯಲ್ಲಿ ಇಲ್ಲವೇ ಅವರು ನಿವೃತ್ತರಾಗುವವರೆಗೆ 10% ವಾರ್ಷಿಕ ಹೆಚ್ಚಳವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ

  • Share this:

    ಕಷ್ಟಪಟ್ಟು ಎಷ್ಟು ದುಡಿದರೂ ಹಣ ಉಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಬಹುತೇಕರ ಸಮಸ್ಯೆ. ದುಡ್ಡು ಹೇಗೆ ಪೋಲಾಗುತ್ತದೆ, ಅದನ್ನು ತಡೆಯೋದು ಹೇಗೆ, ಉಳಿಸಿದರೂ ಅದನ್ನು ಎಲ್ಲಿ ಹೂಡಿಕೆ ಮಾಡಬೇಕು, ಹೂಡಿಕೆ ಎಷ್ಟು ಸುರಕ್ಷಿತ ಈ ಎಲ್ಲಾ ಅನುಮಾಗಳೂ ಪ್ರತಿಯೊಬ್ಬ ಉದ್ಯೋಗಿಯಲ್ಲೂ ದಿನಕ್ಕೊಮ್ಮೆಯಾದರೂ ಕಾಡುವ ಪ್ರಶ್ನೆಗಳು.  ಈ ಲೇಖನದಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಯ ಬಗ್ಗೆ ಕೆಲವಷ್ಟು ಅಮೂಲ್ಯ ಮಾಹಿತಿ ನೀಡುತ್ತಿದ್ದೇವೆ. ಇದರಿಂದ ನಿಮ್ಮ ಹಣ ಉಳಿತಾಯ ಮಾಡಲು ಸಹಕಾರಿಯಾಗಬಹುದು. 


    ಮ್ಯೂಚುವಲ್ ಫಂಡ್ ಅನ್ನು ವರ್ಷಕ್ಕೆ ಒಂದು ಹೆಚ್ಚುವರಿ ಪಾವತಿಯೊಂದಿಗೆ ಟಾಪ್ ಮಾಡುವುದು ನಿಮ್ಮ ಮೆಚ್ಯುರಿಟಿ ಮೊತ್ತವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ. ನಿರಂತರ ಉಳಿತಾಯ ಹಾಗೂ ಹೂಡಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇವುಗಳು ಸಂಪತ್ತಿನ ಸೃಷ್ಟಿಯಲ್ಲಿ ಪ್ರಧಾನವಾಗಿವೆ. ಮಾರುಕಟ್ಟೆ ಚಕ್ರಗಳು ಅಥವಾ ಬಡ್ಡಿದರಗಳು ನಿಮ್ಮ ಸಂಪತ್ತಿನ ಧನಾತ್ಮಕ ಋಣಾತ್ಮಕ ಅಂಶಗಳ ಮೇಲೆ ಪರಿಣಾಮ ಬೀರಬಹುದು ನಿಮ್ಮ ಸಂಪತ್ತಿನ ಗರಿಷ್ಠ ಭಾಗವನ್ನು ವ್ಯವಸ್ಥಿತವಾಗಿ ಹೂಡಿಕೆ ಮಾಡುವುದರಿಂದ ಸ್ವಲ್ಪ ಸಮಯದ ನಂತರ ನಿಮಗೆ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುತ್ತದೆ. ನೀವು ಎಷ್ಟು ಬೇಗ ಆರಂಭಿಸುತ್ತೀರೋ ಅಷ್ಟು ಲಾಭ ನಿಮಗೆ ಒದಗಿ ಬರುತ್ತದೆ.


    ಮ್ಯೂಚುವಲ್ ಫಂಡ್‌ಗಳ ವ್ಯವಸ್ಥಿತ ಹೂಡಿಕೆ ಯೋಜನೆಗಳು ದೊಡ್ಡ ಮೊತ್ತದ ಹೂಡಿಕೆ ಮಾಡಲು ಸಾಧ್ಯವಿಲ್ಲದ ಹೂಡಿಕೆದಾರರಿಗೆ ಉತ್ತಮ ವಿಧಾನವಾಗಿದೆ. ಆದಾಗ್ಯೂ, ಸಂಪತ್ತು ಸಂಗ್ರಹಣೆಯ ಪ್ರಕ್ರಿಯೆಯನ್ನು ಹೆಚ್ಚಿಸಲು ನಿಮ್ಮ ವಾರ್ಷಿಕ ಆದಾಯದ ಹೆಚ್ಚಳದೊಂದಿಗೆ ನಿಮ್ಮ SIP ಅನ್ನು ಹೆಚ್ಚಿಸುವುದು ಸಹ ಮುಖ್ಯವಾಗಿದೆ. ಇದು ದೀರ್ಘಾವಧಿಯಲ್ಲಿ ಸಂಯೋಜನೆಯ ಲಾಭದೊಂದಿಗೆ ಹೂಡಿಕೆದಾರರಿಗೆ ಗರಿಷ್ಠ ಲಾಭವನ್ನು ಪಡೆಯಲು ಸಹಾಯ ಮಾಡುತ್ತದೆ. ತಜ್ಞರು ಹೇಳುವ ಪ್ರಕಾರ ವಾರ್ಷಿಕ ಹೆಚ್ಚುವರಿ SIP ಗಳು ಗರಿಷ್ಠ ಲಾಭವನ್ನು ಪಡೆಯಲು ಸಹಕಾರಿಯಾಗಿವೆ ಮುಖ್ಯವಾಗಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಇದು ಉತ್ತಮವಾಗಿವೆ. ಸಂಬಳದಲ್ಲಿನ ಹೆಚ್ಚಳದೊಂದಿಗೆ SIP ಗಳಲ್ಲಿ ವಾರ್ಷಿಕ ಹೆಚ್ಚಳವನ್ನು ಆಯ್ಕೆಮಾಡಿಕೊಳ್ಳಬಹುದಾಗಿದ್ದು ಮಾಸಿಕ ಆಧಾರದ ಮೇಲೆ ಹೂಡಿಕೆ ಮಾಡಬಹುದಾಗಿದೆ. ಇದರರ್ಥ ನೀವು SIP ಅನ್ನು ಪ್ರತೀ ವರ್ಷ ನಿರ್ದಿಷ್ಟ ಶೇಕಡಾವಾರಿನಂತೆ ಹೆಚ್ಚಿಸುತ್ತಿದ್ದೀರಿ ಎಂದಾಗಿದೆ ಉದಾ. 2015 ರಲ್ಲಿ ರೂ 10,000 ಹಾಗೂ 2016 ರಲ್ಲಿ 10,000 ಜೊತೆಗೆ 10% ಹೆಚ್ಚು ಹೀಗೆ.


    ಇದನ್ನೂ ಓದಿ: ಕೆಲಸ ಬದಲಾವಣೆ ಬಳಿಕ ಇವುಗಳನ್ನು ಮಾಡದಿದ್ದರೆ PF ಹಣ ಕೈಸೇರಲ್ಲ


    ಸಾಮಾನ್ಯವಾಗಿ ಹೂಡಿಕೆದಾರರು ತಮ್ಮ ಮಾಸಿಕ SIP ಉಳಿತಾಯದಲ್ಲಿ 30 ವರ್ಷಗಳ ಅವಧಿಯಲ್ಲಿ ಇಲ್ಲವೇ ಅವರು ನಿವೃತ್ತರಾಗುವವರೆಗೆ 10% ವಾರ್ಷಿಕ ಹೆಚ್ಚಳವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಗಣನೀಯ ಆದಾಯವನ್ನು ಗಳಿಸಲು ಮತ್ತು ಕಡಿಮೆ ಅವಧಿಯಲ್ಲಿ ಗುರಿಯನ್ನು ಸಾಧಿಸುವ ಅಗತ್ಯವಿರುವಾಗ ಹೂಡಿಕೆಗಳನ್ನು ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಮಾಡಬಹುದಾಗಿದೆ.


    SBI ನ ಮ್ಯೂಚುಯಲ್ ಫಂಡ್ SIP ಕ್ಯಾಲ್ಕುಲೇಟರ್ ಪ್ರಕಾರ, ಹೂಡಿಕೆದಾರರು 10 ವರ್ಷಗಳ ಅವಧಿಯಲ್ಲಿ ರೂ 2.47 ಕೋಟಿ ಸಂಗ್ರಹವನ್ನು ಒಟ್ಟುಗೂಡಿಸಬಹುದು, ತಿಂಗಳಿಗೆ 23,500 ರ ಟಾಪ್-ಅಪ್‌ನೊಂದಿಗೆ ರೂ 23,500 ಅನ್ನು ಹೂಡಿಕೆ ಮಾಡುವ ಮೂಲಕ ಅಥವಾ ವಾರ್ಷಿಕವಾಗಿ ಒಂದು ಹೆಚ್ಚುವರಿ SIP ವಾರ್ಷಿಕವಾಗಿ ಮತ್ತು 12% ರಿಟರ್ನ್‌ನೊಂದಿಗೆ ತೊಡಗಿಸಿಕೊಳ್ಳಬಹುದಾಗಿದೆ.


    ಈ ಲೆಕ್ಕಾಚಾರವು ಆಯ್ದ ಟಾಪ್-ಅಪ್ ಆವರ್ತನೆ ವಿಜ್‌ನೊಂದಿಗೆ ಮಾಸಿಕ SIP ಅನ್ನು ಆಧರಿಸಿದೆ ಅಂದರೆ ಆಯ್ಕೆಮಾಡಿದ 12% ದರವನ್ನು ಆಧರಿಸಿ ಅರ್ಧವಾರ್ಷಿಕ ಅಥವಾ ವಾರ್ಷಿಕ ಎಂಬುದಾಗಿದೆ. ರಿಟರ್ನ್‌ಗಳನ್ನು ನಿಖರವಾದ ನಿಯಮಗಳಲ್ಲಿ ವಿವರವಾಗಿ ಪ್ರಸ್ತುತಪಡಿಸಲಾಗಿದೆ. ಈ ಅವಧಿಯಲ್ಲಿ ನೀವು ಹೂಡಿಕೆ ಮಾಡಿದ ಹಣ 1.5 ಕೋಟಿಯಾಗಿದ್ದರೆ ಮೆಚ್ಯೂರಿಟಿ ಮೊತ್ತ 2.47 ಕೋಟಿ ರೂ ಆಗಿರುತ್ತದೆ.


    ಇದೇ ರೀತಿ, ನೀವು ಬಿಟ್​ ಕಾಯಿನ್​, ಡೋಜಿಕಾಯಿನ್​ ಮತ್ತಿತರ ಕ್ರಿಪ್ಟೋ ಕರೆನ್ಸಿಗಳ ಮೇಲೂ ನಿಯಮಿತವಾಗಿ ಹೂಡಿಕೆ ಮಾಡಬಹುದು. ಆದರೆ ಆರ್ಥಿಕ ತಜ್ಞರ ಪ್ರಕಾರ ನಿಮ್ಮ ಗಳಿಕೆ ಹೆಚ್ಚಿನ ಹೂಡಿಕೆಯನ್ನು ಶೇರು, ಮ್ಯೂಚುವಲ್​ ಫಂಡ್ಸ್​ ಮತ್ತಿತರ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ. ಹೂಡಿಕೆ ಒಂದು ಭಾಗವನ್ನು ಮಾತ್ರ ಕ್ರಿಪ್ಟೋಕರೆನ್ಸಿ ಮೇಲೆ ಮಾಡಿ ಅನ್ನೋದು ತಜ್ಞರ ಅಭಿಪ್ರಾಯ.

    top videos
      First published: