• Home
  • »
  • News
  • »
  • breaking-news
  • »
  • Yadagiri: ದೀಪದ ಬುಡದಲ್ಲಿ ಕತ್ತಲು; ಜಿಲ್ಲೆಯಲ್ಲಿ ಜಲಾಶಯವಿದ್ರೂ ಕಾಲುವೆಗೆ ಹರಿಯದ ನೀರು; ರೈತರ ಆಕ್ರೋಶ

Yadagiri: ದೀಪದ ಬುಡದಲ್ಲಿ ಕತ್ತಲು; ಜಿಲ್ಲೆಯಲ್ಲಿ ಜಲಾಶಯವಿದ್ರೂ ಕಾಲುವೆಗೆ ಹರಿಯದ ನೀರು; ರೈತರ ಆಕ್ರೋಶ

ಕಾಲುವೆ

ಕಾಲುವೆ

ಬಸವ ಸಾಗರ ಜಲಾಶಯು 33.33 ಟಿಎಂಸಿ ಸಂಗ್ರಹ ಸಾಮರ್ಥ ಹೊಂದಿದ್ದು, ಜಲಾಶಯದಲ್ಲಿ 29.82 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದೆ.

  • Share this:

ಯಾದಗಿರಿ: ಬಸವ ಸಾಗರ ಜಲಾಶಯವು (Basava Sagara Dam) ಭರ್ತಿಯಾಗಿದ್ದು, ಕೃಷ್ಣಾ ನದಿಗೆ (Krishna River) ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಕೃಷ್ಣಾ ನದಿಗೆ ನೀರು ಹರಿಸಿದರೆ, ಕಾಲುವೆಗೆ (Canal) ಮಾತ್ರ ಒಂದು ಹನಿ ನೀರು ಹರಿಯುತ್ತಿಲ್ಲ. ಯಾದಗಿರಿ (Yadagiri) ಜಿಲ್ಲೆಯಲ್ಲಿ ಜಲಾಶಯವಿದ್ದರೂ, ರೈತರು (Farmers) ನೀರಿನಿಂದ ವಂಚಿತರಾಗಿದ್ದಾರೆ. ಜಿಲ್ಲೆಯ ರೈತರ ಪಾಲಿಗೆ ದೀಪದ ಬುಡಕ್ಕೆ ಕತ್ತಲು ಎನ್ನುವಂತಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ (Narayanapura) ಸಮೀಪದ ಬಸವ ಸಾಗರ ಜಲಾಶಯವು, ನಾಲ್ಕು ಜಿಲ್ಲೆಯ ರೈತರ ಪಾಲಿಗೆ ಜೀವನಾಡಿಯಾಗಿದೆ. ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯ ರೈತರ ಜೀವನಾಡಿಯಾಗಿದೆ.


ಜಲಾಶಯವು ಭರ್ತಿಯಾದರೆ ನಾರಾಯಣಪುರ ಎಡದಂಡೆ ಹಾಗೂ ಬಲದಂಡೆ ಕಾಲುವೆ ಮೂಲಕ ನಾಲ್ಕು ಜಿಲ್ಲೆಗೆ ನೀರು ಹರಿಸಲಾಗುತ್ತದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಕಾಲುವೆ ಮೂಲಕ ನೀರು ಬಿಡಲಾಗುತ್ತದೆ.


ರೈತರ ಜಮೀನಿಗೆ ಹರಿಯುತ್ತಿಲ್ಲ ನೀರು


ಯಾದಗಿರಿ, ರಾಯಚೂರು, ವಿಜಯಪುರ ಹಾಗೂ ಕಲಬುರಗಿ ಸೇರಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 20 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ವ್ಯಾಪ್ತಿ ಹೊಂದಿದೆ. ಆದರೆ,ನಾಲ್ಕು ಜಿಲ್ಲೆಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ನೀರು ಹರಿಯುತ್ತಿಲ್ಲ‌.


Yadagiri farmers demand release water to agriculture
ಬೆಳೆ


ಬಸವಸಾಗರ ಜಲಾಶಯ ಭರ್ತಿಯಾದರು ಕಾಲುವೆ ಮೂಲಕ ನೀರು ಬಿಡುತ್ತಿಲ್ಲ. ಇದಕ್ಕೆ ರೈತ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಹರಿಸಬೇಕು. ಜಲಾಶಯ ಬೇಗ ಭರ್ತಿಯಾದರೇ ಬೇಗ ನೀರು ಬಿಡಬೇಕು. ಕಾಲುವೆ ದುರಸ್ಥಿ ಕಾಮಗಾರಿ ವಿಳಂಬದಿಂದ ನೀರು ಹರಿಸುವದು ತಡ ಮಾಡಬಾರದೆಂದರು.


ಇದನ್ನೂ ಓದಿ:  Anekal: ಆಮೆಗತಿಯಲ್ಲಿ ಹುಸ್ಕೂರು ಅಂಡರ್ ಪಾಸ್ ಕಾಮಗಾರಿ; ಮಳೆ ಬಂದ್ರೆ ಕೆರೆಯಂತಾಗುವ ರಸ್ತೆ


ನೀರು ಹರಿಸುವಂತೆ ಆಗ್ರಹ


ಈ ಬಗ್ಗೆ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕಾಮನಾಟಗಿ ಅವರು ಮಾತನಾಡಿ, ಜಲಾಶಯ ಭರ್ತಿಯಾದರೆ ಬೇಗ ಕಾಲುವೆಗೆ ನೀರು ಹರಿಸುವ ಕೆಲಸವಾಗಬೇಕು. ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬೇಗ ನೀರು ಹರಿಸಬೇಕು ಎಂದು ಆಗ್ರಹಿಸಿದ್ದಾರೆ.


ಬಸವ ಸಾಗರ ಜಲಾಶಯು 33.33 ಟಿಎಂಸಿ ಸಂಗ್ರಹ ಸಾಮರ್ಥ ಹೊಂದಿದ್ದು, ಜಲಾಶಯದಲ್ಲಿ 29.82 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದೆ.


Yadagiri farmers demand release water to agriculture
ಬೆಳೆ


ಕಾಲುವೆಗೆ ನೀರು ಹರಿಸದ ಹಿನ್ನೆಲೆ ಯಾದಗಿರಿ, ರಾಯಚೂರು,  ವಿಜಯಪುರ, ಕಲಬುರಗಿ ಜಿಲ್ಲೆಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರು ಹತ್ತಿ, ಭತ್ತ ಹಾಗೂ ಇನ್ನಿತರ ಬೆಳೆಯಲು ಸಂಕಷ್ಟ ಎದುರಿಸುತ್ತಿದ್ದಾರೆ. ಭತ್ತದ ಬೆಳೆಗೆ ಹೆಚ್ಚು ನೀರು ಬೇಕಾಗಿರುವದಿಂದ ಕಾಲುವೆಗೆ ನೀರು ಬಿಡುಗಡೆ ಮಾಡಿದರೆ ರೈತರು ಭತ್ತದ ಬೆಳೆಗೆ ನೀರು ಹರಿಸಿಕೊಳ್ಳುತ್ತಾರೆ.


ಜುಲೈ 26 ರಂದು ನೀರಾವರಿ  ಸಲಹಾ ಸಮಿತಿ ಸಭೆ


ಯಾದಗಿರಿ ಜಿಲ್ಲೆಯ ಪ್ರತಿಶತ 50 ರಷ್ಟು ಮಾತ್ರ ಭತ್ತ ರೈತರು ನಾಟಿ ಮಾಡಿದ್ದಾರೆ. ಆದರೆ, ಕಾಲುವೆಗೆ ನೀರು ಹರಿಸದ ಹಿನ್ನೆಲೆ ಇನ್ನೂಳಿದ 50 ರಷ್ಟು ಪ್ರತಿಶತ ರೈತರು ಭತ್ತ ನಾಟಿ ಮಾಡಿಲ್ಲ. ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯ ಭರ್ತಿಯಾದರೆ ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಕರೆದು ಸಭೆಯಲ್ಲಿ ನೀರು ಹರಿಸುವ ಬಗ್ಗೆ ನಿರ್ಧಾರ ಮಾಡಿ, ನೀರು ಹರಿಸಲಾಗುತ್ತದೆ.


Yadagiri farmers demand release water to agriculture
ಬೆಳೆ


ಆದರೆ, ಸಭೆಯು ಜುಲೈ 26 ಕ್ಕೆ ಮುಂದೂಡಲಾಗಿದೆ. ಇದು ಅಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಶಹಾಪುರ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಮಾತನಾಡಿ, ಸಭೆ ಮುಂದೂಡಿದ್ದು ,ಜುಲೈ 26 ರಂದು ಸಭೆ ಕರೆಯಲಾಗಿದೆ ಎಂದರು.


ಇದನ್ನೂ ಓದಿ:  Chitradurga: ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ನಕಲಿ ಗೊಬ್ಬರದ ಹಾವಳಿ; ಮಹಾ ವಂಚನಗೆ ಬಲಿಯಾದ ರೈತರು


ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಬೇಕಾದಷ್ಟು ಮಳೆ ಬಂದಿಲ್ಲ.ಆದರೆ, ಭತ್ತದ ಬೆಳೆಗೆ ಹೆಚ್ಚಿನ ನೀರು ಹರಿಸುವದು ಅವಶ್ಯವಿದೆ.ಆದಷ್ಟು ಬೇಗ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಅಂದೆ ನೀರು ಹರಿಸಿ ರೈತರಿಗೆ ಅನುಕೂಲ ಮಾಡಬೇಕಿದೆ.

Published by:Mahmadrafik K
First published: