• ಹೋಂ
  • »
  • ನ್ಯೂಸ್
  • »
  • Breaking News
  • »
  • IND vs AUS: ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾಗೆ ಬಿಗ್​ ಶಾಕ್​, ಮಹತ್ವದ ಪಂದ್ಯಕ್ಕೂ ಮುನ್ನ ಸ್ಟಾರ್​ ಆಟಗಾರ್ತಿಯರು ಔಟ್​!

IND vs AUS: ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾಗೆ ಬಿಗ್​ ಶಾಕ್​, ಮಹತ್ವದ ಪಂದ್ಯಕ್ಕೂ ಮುನ್ನ ಸ್ಟಾರ್​ ಆಟಗಾರ್ತಿಯರು ಔಟ್​!

ಹರ್ಮನ್‌ಪ್ರೀತ್ ಕೌರ್

ಹರ್ಮನ್‌ಪ್ರೀತ್ ಕೌರ್

Women's T20 World Cup 2023: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳೆಯರ T20 ವಿಶ್ವಕಪ್ 2023 ಸೆಮಿಫೈನಲ್ ಹಂತ ತಲುಪಿದೆ. 10 ತಂಡಗಳೊಂದಿಗೆ ಆರಂಭವಾದ ಈ ಮೆಗಾ ಇವೆಂಟ್‌ನಲ್ಲಿ ಈಗ ಉಳಿದಿರುವುದು 4 ತಂಡಗಳು. ಇಂದು ಸಂಜೆ ಆಸ್ಟ್ರೇಲಿಯ ಮತ್ತು ಭಾರತ ಮೊದಲ ಸೆಮೀಸ್​ ಕಾಳಗದಲ್ಲಿ ಸೆಣಸಾಡಲಿದೆ.

ಮುಂದೆ ಓದಿ ...
  • Share this:

ಭಾರತ ಮಹಿಳಾ ಕ್ರಿಕೆಟ್ ತಂಡವು ಇಂದು ಆಸ್ಟ್ರೇಲಿಯಾ (IND vs AUS) ವಿರುದ್ಧ ಐಸಿಸಿ ಮಹಿಳಾ ಟಿ20 ವಿಶ್ವಕಪ್ (Women's T20 World Cup 2023) ಸೆಮಿಫೈನಲ್‌ನಲ್ಲಿ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗುವ ಲಕ್ಷಣ ಕಾಣುತ್ತಿದೆ. ವರದಿ ಪ್ರಕಾರ, ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮತ್ತು ಬೌಲರ್ ಪೂಜಾ ವಸ್ತ್ರಾಕರ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಬಿಸಿಸಿಐ (BCCI) ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಉಪನಾಯಕಿ ಸ್ಮೃತಿ ಮಂಧಾನ ಕೂಡ ಗಾಯದ ಸಮಸ್ಯೆಯಿಂದ ಪ್ಲೇಯಿಂಗ್ 11ನ ಭಾಗವಾಗಲು ಸಾಧ್ಯವಾಗಿರಲಿಲ್ಲ.


ಸ್ಟಾರ್​ ಆಟಗಾರ್ತಿಯರು ಔಟ್​:


ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ 8ನೇ ಆವೃತ್ತಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿದೆ. ಭಾರತ ತಂಡ ಅಮೋಘ ಆಟ ಪ್ರದರ್ಶಿಸುವ ಮೂಲಕ ಸೆಮಿಫೈನಲ್‌ಗೇರಿದೆ. ಇಂದು ಸಂಜೆ ಟೀಂ ಇಂಡಿಯಾವು ಆಸ್ಟ್ರೇಲಿಯಾ ವಿರುದ್ಧ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೂ ಮುನ್ನದ ವರದಿ ಪ್ರಕಾರ, ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಬೌಲರ್ ಪೂಜಾ ವಸ್ತ್ರಾಕರ್ ಅವರ ಆರೋಗ್ಯ ಹದಗೆಟ್ಟಿದೆ. ಇವರಿಬ್ಬರೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನವಿದೆ ಎನ್ನಲಾಗುತ್ತಿದೆ.


ಪಂದ್ಯದ ಒಂದು ದಿನದ ಮೊದಲು ಹರ್ಮನ್‌ಪ್ರೀತ್ ಕೌರ್ ಮತ್ತು ಪೂಜಾ ವಸ್ತ್ರಾಕರ್ ಅವರ ಆರೋಗ್ಯ ಹದಗೆಟ್ಟಿದೆ. ಇಬ್ಬರನ್ನೂ ಕೇಪ್ ಟೌನ್ ಬಳಿಯ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಹರ್ಮನ್‌ಪ್ರೀತ್ ಮತ್ತು ಪೂಜಾ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು, ಆದರೆ ಇಬ್ಬರೂ ಸಂಜೆ ಡಿಸ್ಚಾರ್ಜ್ ಆಗಿದ್ದರೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ.


ಇದನ್ನೂ ಓದಿ: IPL 2023: CSK ತಂಡದಿಂದ ಹೊರನಡೆದ ಸ್ಟಾರ್​ ಪ್ಲೇಯರ್​! ಚೆನ್ನೈಗೆ ಕೈಕೊಟ್ಟ ಕೋಟಿ ವೀರ


ಮಂಧಾನಾಗೆ ನಾಯಕತ್ವ:


ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ತಂಡದ ಉಪನಾಯಕಿ ಸ್ಮೃತಿ ಮಂಧಾನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹರ್ಮನ್​ಪ್ರೀತ್​ ಸ್ಥಾನದಲ್ಲಿ ಹರ್ಲೀನ್ ಡಿಯೋಲ್ ಅವರಿಗೆ ಪ್ಲೇಯಿಂಗ್ ಹನ್ನೊಂದರಲ್ಲಿ ಸ್ಥಾನ ನೀಡಬಹುದು. ಅಂದಹಾಗೆ, ಈ ಪಂದ್ಯಕ್ಕೂ ಮುನ್ನ ರಾಧಾ ಯಾದವ್ ಅವರ ಆರೋಗ್ಯವೂ ಹದಗೆಟ್ಟಿದ್ದರಿಂದ ಅವರು ಹೊರಗೆ ಕುಳಿತುಕೊಳ್ಳಬೇಕಾಗಬಹುದು. ಪೂಜಾ ಬದಲಿಗೆ ವೇಗಿ ಅಂಜಲಿ ಸರ್ವಾನಿಗೆ ಆಡುವ ಇಲೆವೆನ್‌ನಲ್ಲಿ ಅವಕಾಶ ನೀಡಬಹುದು.


ಆಸೀಸ್​ ವಿರುದ್ಧ ಹರ್ಮನ್​ ದಾಖಲೆ:


ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ 2017ರ ODI ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 171 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. 115 ಎಸೆತಗಳಲ್ಲಿ 20 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಈ ಅದ್ಭುತ ಇನ್ನಿಂಗ್ಸ್‌ ಆಡಿದ್ದರು. ಈ ಪಂದ್ಯವನ್ನು ಭಾರತ 36 ರನ್‌ಗಳಿಂದ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತ್ತು.




ಭಾರತ ಸಂಭಾವ್ಯ ತಂಡ:


ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ದೇವಿಕಾ ವೈದ್ಯ, ಪೂಜಾ ವಸ್ತ್ರಾಕರ್, ಶಿಖಾ ಪಾಂಡೆ, ರೇಣುಕಾ ಸಿಂಗ್ ಮತ್ತು ರಾಜೇಶ್ವರಿ ಗಾಯಕ್ವಾಡ್.


ಪಂದ್ಯದ ವಿವರ:


ಇಂದು ಪಂದ್ಯವು ಕೇಪ್​ಟೌನ್​ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಸಂಜೆ 6.30ಕ್ಕೆ ಆರಂಭವಾಗಲಿದೆ. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ಸ್ ನೇರ ಪ್ರಸಾರ ಮಾಡಲಾಗುತ್ತದೆ. ಇನ್ನು, ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿ ಭಾರತವನ್ನು ಆಸ್ಟ್ರೇಲಿಯಾ ಸೋಲಿಸಿತ್ತು. ಕಳೆದ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸೀಸ್ ಎದುರು ಸೋತಿತ್ತು.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು