Koppala: ಸೌಟು ಹಿಡಿಯುವ ಕೈಯಲ್ಲಿ ಸ್ಟೇರಿಂಗ್! ಕೊಪ್ಪಳದಲ್ಲಿ ಯುವತಿಯರ ಸಾಹಸ

ಸಾಮಾನ್ಯವಾಗಿ ಗ್ರಾಮ ಪಂಚಾಯತ್​ಗಳಲ್ಲಿ ಕಸಗುಡಿಸುವ, ಸ್ವಚ್ಛ ಮಾಡುವ ಕೆಲಸವನ್ನು ಮಹಿಳೆಯರು ಮಾಡುತ್ತಾರೆ. ಆದರೆ ಈಗ ಕೊಪ್ಪಳ ಜಿಲ್ಲೆಯ ಹಲವು ಗ್ರಾಮ ಪಂಚಾಯತ್​​ನಲ್ಲಿ ಕಸ ವಿಲೇವಾರಿಯನ್ನು ಮಾಡುವ ಮಿನಿ ವಾಹನಗಳಲ್ಲಿ ಮಹಿಳೆಯರೇ ಡ್ರೈವರ್​​ಗಳು ಅಂದರೆ ನಂಬಲೇಬೇಕು.

ಕೊಪ್ಪಳದಲ್ಲಿ ಸಾಧನೆ

ಕೊಪ್ಪಳದಲ್ಲಿ ಸಾಧನೆ

  • Share this:
ಇಂದು ಮಹಿಳೆಯು ಪುರುಷರ ಸರಿಸಮಾನವಾದ ಎಲ್ಲಾ ಕೆಲಸ ಮಾಡ್ತಾಳೆ. ಅವಕಾಶ ಸಿಕ್ಕರೆ ನಾವು ಪುರುಷರಿಗಿಂತ ಏನು ಕಡಿಮೆ ಇಲ್ಲ ಎಂಬುವದನ್ನು ಮಹಿಳೆ ತೋರಿಸಿದ್ದಾಳೆ. ಹಳ್ಳಿಯಿಂದ ದಿಲ್ಲಿವರೆಗೆ ಮಹಿಳೆ ತನ್ನ ಸಾಮರ್ಥ್ಯ ತೋರಿಸಿದ್ದಾಳೆ. ಈಗ ಗ್ರಾಮ ಪಂಚಾಯತ್ ನಲ್ಲಿ ವಾಹನ ಚಾಲನೆಗೆ ಯುವತಿಯರು ಸಿದ್ಧರಾಗಿದ್ದಾರೆ. ಈಗ ಕೊಪ್ಪಳ ಜಿಲ್ಲೆಯ ಹಲವು ಕಡೆ ಗ್ರಾಮ ಪಂಚಾಯತ್ ಕಸ ವಿಲೇವಾರಿಯನ್ನು ಮಾಡುವ ಮಿನಿ ವಾಹನಗಳಲ್ಲಿ ಯುವತಿಯರೇ ಡ್ರೈವರ್​ಗಳು ಅಂದರೆ ನಂಬಲೇಬೇಕು. ಈಗಾಗಲೇ 8 ಜನ ಯುವತಿಯರು ಕಸ ವಿಲೇವಾರಿ ವಾಹನ ಚಾಲನೆ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಬರುವ ದಿನಗಳಲ್ಲಿ 153 ಗ್ರಾಮ ಪಂಚಾಯತ್ ವಾಹನಗಳ ಚಾಲನೆಗೆ ಮಹಿಳೆಯರೇ ಇರಲಿದ್ದಾರೆ.

ಸಾಮಾನ್ಯವಾಗಿ ಗ್ರಾಮ ಪಂಚಾಯತ್ ಗಳಲ್ಲಿ ಕಸಗುಡಿಸುವ, ಚರಂಡಿ ಸ್ವಚ್ಛ ಮಾಡುವ ಕೆಲಸವನ್ನು ಮಹಿಳೆಯರು ಮಾಡುತ್ತಾರೆ. ಆದರೆ ಈಗ ಕೊಪ್ಪಳ ಜಿಲ್ಲೆಯ ಹಲವು ಗ್ರಾಮ ಪಂಚಾಯತ್ನಲ್ಲಿ ಕಸ ವಿಲೇವಾರಿಯನ್ನು ಮಾಡುವ ಮಿನಿ ವಾಹನಗಳಲ್ಲಿ ಮಹಿಳೆಯರೇ ಡ್ರೈವರ್​​ಗಳು.

ಕಸ ಸಾಗಾಟದ ವಾಹನಗಳಲ್ಲಿ ಡ್ರೈವಿಂಗ್

ಕಸ ವಿಲೇವಾರಿಯ ವಾಹನ ಚಾಲನೆ ಮಾಡುತ್ತಿರುವ ಯುವತಿಯರು ನಿತ್ಯ ಗ್ರಾಮಗಳಲ್ಲಿ ಸಂಚರಿಸಿ ಕಸಗಳನ್ನು ತುಂಬಿಕೊಂಡು ನಿಗಿದಿ ಸ್ಥಳದಲ್ಲಿ ಡಂಪ್ ಮಾಡುತ್ತಿದ್ದಾರೆ. ಅವರು ಯಾವುದೇ ಹಿಂಜರಿಕೆ ಇಲ್ಲದಂತೆ ಸರಾಗವಾಗಿ ವಾಹನಗಳನ್ನು ಓಡಿಸುತ್ತಾರೆ.

women driving in village panchayat vehicle in Koppal
ಕಸದ ಗಾಡಿಗೆ ಮಹಿಳೆಯರೇ ಡ್ರೈವರ್


ಯುವತಿಯರಿಗೆ ಒಂದು ತಿಂಗಳು ಟ್ರೈನಿಂಗ್

ಯುವತಿಯರು ಗ್ರಾಮಗಳಲ್ಲಿ ಸಹನೆಯಿಂದ ಕಸವನ್ನು ವಾಹನಗಳಲ್ಲಿ ತುಂಬಿಸಿಕೊಳ್ಳುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಕುದರಿಮೋತಿ, ಕಂದಕೂರು, ಚಳಗೇರಾ, ಮುದೇನೂರ ಸೇರಿ 8 ಗ್ರಾಮ ಪಂಚಾಯತ್ ಗಳಲ್ಲಿ ಯುವತಿಯರು ಕಸದ ವಾಹನವನ್ನು ಓಡಿಸುತ್ತಿದ್ದಾರೆ. ಈ ಡ್ರೈವರ್ ಗಳು ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಒಂದು ತಿಂಗಳ ತರಬೇತಿ ಪಡೆದಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಗದ್ದೆ ನಾಟಿ ಕೆಲಸಕ್ಕೆ ಹುಬ್ಬೇರಿಸಿದ ಗ್ರಾಮಸ್ಥರು

ಗ್ರಾಮಗಳಿಗೆ ತೆರಳಿ ಕಸ ಸಂಗ್ರಹ

ತರಬೇತಿ ಪಡೆದು ವಾಹನ ಚಾಲನೆಯ ಪರವಾನಿಗೆ ಪಡೆದ ನಂತರ ಗ್ರಾಮ ಪಂಚಾಯತ್ ಕಸ ವಿಲೇವಾರಿ ವಾಹನಗಳನ್ನು ಓಡಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಕಸ ವಿಲೇವಾರಿಯನ್ನು ಸಹ ಜಿಪಿಎಲ್ಎಫ್ ಗುಂಪುಗಳಿಗೆ ನೀಡಿದ್ದಾರೆ. ಅದರಲ್ಲಿ 34 ಜಿಪಿಎಲ್ಎಫ್ ಗುಂಪುಗಳಲ್ಲಿ ಒಬ್ಬೊಬ್ಬ ಯುವತಿಯವರಿಗೆ ವಾಹನ ಚಾಲನೆಯ ತರಬೇತಿ ನೀಡಲಾಗಿದೆ.

women driving in village panchayat vehicle in Koppal
ಕೊಪ್ಪಳದ ಗ್ರಾಮ ಪಂಚಾಯ್ತಿಯಲ್ಲಿ ಸಾಧನೆ


8 ಜನ ಯುವತಿಯರಿಗೆ ಟ್ರೈನಿಂಗ್

ಈಗಾಗಲೇ 34 ಜನರೂ ತರಬೇತಿ ಪೂರ್ಣಗೊಳಿಸಿದ್ದು ಅದರಲ್ಲಿ 8 ಜನ ಯುವತಿಯರು ವಾಹನ ಚಾಲನೆ ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 153 ಗ್ರಾಮ ಪಂಚಾಯತ್ ಗಳಿವೆ. ಅವುಗಳಲ್ಲಿ 138 ಗ್ರಾಮ ಪಂಚಾಯತ್ ಗಳಲ್ಲಿ ಕಸ ವಿಲೇವಾರಿ ವಾಹನಗಳಿವೆ.

ಯುವತಿಯರಿಗೆ ಉದ್ಯೋಗ ಒದಗಿಸುವ ಉದ್ದೇಶ ಸಕ್ಸಸ್

ಗ್ರಾಮ ಪಂಚಾಯ್ತಿಯ ಹಲವು ವಾಹನಗಳಿಗೆ ಚಾಲಕರಿರಲಿಲ್ಲ. ಈಗ ತರಬೇತಿ ಪಡೆದ ಯುವತಿಯರು ಕಸ ವಿಲೇವಾರಿ ವಾಹನ ಚಾಲನೆ ಮಾಡಿ ನಾವು ಯಾರಿಗೂ ಕಮ್ಮಿ ಇಲ್ಲ ಎಂದು ಸಾಬೀತು ಪಡಿಸುತ್ತಿದ್ದಾರೆ. ಯುವತಿಯರಿಗೆ ಉದ್ಯೋಗ ಒದಗಿಸುವ ಉದ್ದೇಶ ಒಂದು ಕಡೆಯಾದರೆ ಇನ್ನೊಂದು ಕಡೆ ಗ್ರಾಮ ಸ್ವಚ್ಛತೆ ಮಾಡುವ ಒಕ್ಕೂಟದ ಸದಸ್ಯರಿಗೆ ಉದ್ಯೋಗ ನೀಡಿದಂತಾಗಿದೆ.

ಕುಕನೂರು ತಾಲೂಕಿನ ಕುದರಿಮೋತಿಯ ಶಿಲ್ಪಾ ಎಂಬ ಯುವತಿ ಚಾಲನೆಯ ತರಬೇತಿ ಪಡೆದ ನಂತರ ನಿತ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದರಿಮೋತಿ, ಚಂಡಿನಾಳ ಹಾಗು ಬೈರನಾಯಕನಹಳ್ಳಿಯಲ್ಲಿ ಕಸ ತುಂಬಿಸಿಕೊಂಡು ಬಂದು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಘಟಕಕ್ಕೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಎರಡು ದಿನ ನೀರು ಬಂದ್; ಮಿತ ಬಳಕೆಗೆ BWSSB ಮನವಿ

ಮೊದಲು ಅವಮಾನ, ಈಗ ಸನ್ಮಾನ

ಮೊದಲು ವಾಹನ ಚಾಲನೆ ಮಾಡಲು ಆರಂಭಿಸಿದಾಗ ಹಲವರು ನಿಮ್ಮಿಂದ ವಾಹನ ಚಾಲನೆ ಮಾಡಲು ಆಗುತ್ತಾ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ಹಣಾಧಿಕಾರಿಗಳ ಬೆಂಬಲದಿಂದ ವಾಹನ ಮಾಡುತ್ತಿದ್ದೇನೆ. ನನಗೆ ಉದ್ಯೋಗ ಸಿಕ್ಕಿದೆ. ಇದರಿಂದ ನನ್ನ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಯುವತಿಯರು ತಿಳಿಸಿದ್ದಾರೆ.

ಮಹಿಳೆ ಸೌಟು ಹಿಡಿಯಬಲ್ಲಳು. ಅದರೊಂದಿಗೆ ವಾಹನದ ಸ್ಟೇರಿಂಗ್ ಸಹ ಹಿಡಿಯಬಲ್ಲಳು. ಈ ನಿಟ್ಟಿನಲ್ಲಿ ಇಲ್ಲಿ ತರಬೇತಿ ಪಡೆದು ಮಹಿಳೆಗೆ ಸ್ವಾವಲಂಬಿ ಜೀವನಕ್ಕೆ ನಾಂದಿ ಹಾಡಲಾಗುತ್ತಿದೆ.
Published by:Thara Kemmara
First published: