• Home
  • »
  • News
  • »
  • breaking-news
  • »
  • V Somanna: ಮಹಿಳೆ ಮೇಲೆ ಒತ್ತಡ ಹಾಕಿ ಹೇಳಿಕೆ ಕೊಡಿಸಿದ್ರಾ ವಿ ಸೋಮಣ್ಣ?

V Somanna: ಮಹಿಳೆ ಮೇಲೆ ಒತ್ತಡ ಹಾಕಿ ಹೇಳಿಕೆ ಕೊಡಿಸಿದ್ರಾ ವಿ ಸೋಮಣ್ಣ?

ವಿ ಸೋಮಣ್ಣ

ವಿ ಸೋಮಣ್ಣ

ಯಾರೋ ಹೊಡೆದ್ರು ಅಂತ ತಪ್ಪು ತಿಳಿದುಕೊಂಡಿದ್ದಾರೆ. ಪುಣ್ಯಾತ್ಮ ನನಗೆ ಸೈಟ್ ಕೊಡಿಸಿ ಒಳ್ಳೆದು ಮಾಡಿದ್ದಾರೆ. ನಾನು ಕೊಟ್ಟಿರುವ ನಾಲ್ಕು ಸಾವಿರ ರೂಪಾಯಿಯನ್ನು ಸಹ ಮರಳಿ ಕೊಡಿಸಿದರು. ನನ್ನ ಮಕ್ಕಳಿಗೆ ದಾರಿ ಮಾಡಿ ಕೊಟ್ಟಿರುವ ಸಚಿವರಿಗೆ ಒಳ್ಳೆಯದಾಗಲಿ.

  • Share this:

ವಸತಿ ಸಚಿವ ವಿ ಸೋಮಣ್ಣ (Minister V Somanna) ಮಹಿಳೆಯ ಕಪಾಳಕ್ಕೆ ಹೊಡೆದ ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಚಿವರು ಸಹ ಇಷ್ಟವಿಲ್ಲದ ಮನಸ್ಸಿನಲ್ಲಿಯೇ ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದೀಗ ಮಹಿಳೆ ನಡೆದ ಘಟನೆ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಸಾಕ್ಷ್ಯವಿದ್ದರೂ ತನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಸಚಿವರೇ ಮಹಿಳೆ ಕೆಂಪಮ್ಮನ ಮೇಲೆ ಒತ್ತಡ ಹಾಕಿ ಈ ರೀತಿಯ ಹೇಳಿಕೆ ಕೊಡಿಸಿದ್ರಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ನ್ಯೂಸ್​ 18 ಕನ್ನಡದ ಜೊತೆ ಮಾತನಾಡುವ ವೇಳೆ ಮಹಿಳೆಯ ಪಕ್ಕದಲ್ಲಿಯೇ ಸಚಿವರು ನಿಂತಿದ್ದರು.


ಮಹಿಳೆ ಹೇಳಿದ್ದೇನು?


ಹಂಗಳ ಗ್ರಾಮಕ್ಕೆ ನಿನ್ನೆ ಸಚಿವರು ಬಂದಿದ್ದರು. ವೇದಿಕೆ ಮೇಲೆ ಹೋಗಿ ಎಲ್ಲರೂ ನಿವೇಶನ ಕೇಳ್ತಿದ್ದರು. ನಾನು ತುಂಬಾ ಬಡವಿ ಸರ್. ನಾನು ಎಲ್ಲರಂತೆ ವೇದಿಕೆ ಮೇಲೆ ಹೋಗಿ ನನಗೂ ಸೈಟ್ ಕೊಡಿ ಅಂತ ಕೇಳಲು ಹೋದೆ. ಈ ವೇಳೆ ನಾನು ಕಾಲಿಗೆ ಬಿದ್ದಾಗ ಕ್ಷೆಮ ಕೇಳಿ ನನ್ನನ್ನು ಮೇಲೆತ್ತಿ ಸಮಾಧಾನ ಮಾಡಿದರು.


ಯಾರೋ ಹೊಡೆದ್ರು ಅಂತ ತಪ್ಪು ತಿಳಿದುಕೊಂಡಿದ್ದಾರೆ. ಪುಣ್ಯಾತ್ಮ ನನಗೆ ಸೈಟ್ ಕೊಡಿಸಿ ಒಳ್ಳೆದು ಮಾಡಿದ್ದಾರೆ. ನಾನು ಕೊಟ್ಟಿರುವ ನಾಲ್ಕು ಸಾವಿರ ರೂಪಾಯಿಯನ್ನು ಸಹ ಮರಳಿ ಕೊಡಿಸಿದರು. ನನ್ನ ಮಕ್ಕಳಿಗೆ ದಾರಿ ಮಾಡಿ ಕೊಟ್ಟಿರುವ ಸಚಿವರಿಗೆ ಒಳ್ಳೆಯದಾಗಲಿ.


ನಾನು ಮತ್ತು ನನ್ನ ಮಕ್ಕಳು ಅಂಜಪ್ಪ ಮತ್ತು ಸೋಮಣ್ಣ ಅವರ ಫೋಟೋ ಇಟ್ಕೊಂಡು ಪೂಜೆ ಮಾಡ್ತಿದ್ದೀವಿ ಎಂದು ಮಹಿಳೆ ಕೆಂಪಮ್ಮ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.




ಏರು ಧ್ವನಿಯಲ್ಲಿಯೇ ವಿಷಾದ ಕೇಳಿದ ಸಚಿವರು


ನಿನ್ನೆ 173 ಜನಕ್ಕೆ ನಿವೇಶನ ಹಂಚಿಕೆ ಮಾಡಲಾಯ್ತು. ಇನ್ನು 9-10 ಸೈಟ್​ಗಳಿದ್ದು, ಸುಮಾರು 25 ಜನರು ಕೇಳುತ್ತಿದ್ದಾರೆ. ಈ ಮಹಿಳೆ ಐದಾರು ಬಾರಿ ಕಾಲಿಗೆ ನಮಸ್ಕಾರ ಮಾಡಿದರು. ನಾಲ್ಕೂವರೆ ಸಾವಿರ ರೂ. ಯಾರಿಗೋ ಕೊಟ್ಟಿದ್ದೀನಿ ಅಂದ್ರು.  ಆ ವೇಳೆ ನಾನೇ ಹಣ ನೀಡಿದೆ.


ನಾನು ಎಲ್ಲಾ ಹೆಣ್ಣು ಮಕ್ಕಳನ್ನು ಸೋದರಿಯ ಭಾವನೆಯಲ್ಲಿ ನೋಡುತ್ತೇನೆ. ಒಂದು ವೇಳೆ ಈ ಘಟನೆ ನಡೆದ್ರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕಾಲಿಗೆ ಬೀಳಲು ಬಂದಾಗ ತಡೆಯಲು ಹೋದಾಗ ಕೈ ತಾಗಿದೆಯೇ ಹೊರತು ಹೊಡೆದಿಲ್ಲ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದರು.


ಇದನ್ನೂ ಓದಿ:  HD Kumaraswamy: ಮೊದಲು ಜನರ ಬದುಕನ್ನು ಕಟ್ಟಲು ನೋಡಿ; ಸಾವರ್ಕರ್ ಮೊಮ್ಮಗನ ಹೇಳಿಕೆಗೆ HDK ಕಿಡಿ

 ನಾನು ಹೇಳೋದನ್ನ ಹೇಳಿದ್ದೀನಿ. ನೀವು ಎಷ್ಟರಮಟ್ಟಿಗೆ ಸ್ವೀಕರಿಸ್ತಿರೋ ಸ್ವೀಕರಿಸಿ. ನಾನು ಈ ಬಗ್ಗೆ ಆಮೇಲೆ ಮಾತನಾಡುತ್ತೇನೆ ಎಂದು ಏರುಧ್ವನಿಯಲ್ಲಿ ಮಾತನಾಡಿ ಕರೆಯನ್ನ ಕಡಿತಗೊಳಿಸಿದರು. ನ್ಯೂಸ್ 18 ಜೊತೆ ಮಾತನಾಡುತ್ತಿರುವಾ ಸಚಿವರ ಪಕ್ಕದಲ್ಲಿಯೇ ಹಲ್ಲೆಗೊಳಗಾದ ಮಹಿಳೆ ಇದ್ದರು.






ನಿನ್ನೆ ನಡೆದಿದ್ದೇನು?


ಶನಿವಾರ ಸಂಜೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ (Gundlupet, Chamarajangara) ತಾಲೂಕಿನ ಹಂಗಳ ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಮೇಲೆ ಬಂದಿದ್ದರು.


ಇದನ್ನೂ ಓದಿ:  V Somanna: ಮಹಿಳೆ ಮೇಲೆ ಒತ್ತಡ ಹಾಕಿ ಹೇಳಿಕೆ ಕೊಡಿಸಿದ್ರಾ ವಿ ಸೋಮಣ್ಣ?


ಮಹಿಳೆ ಸಚಿವರ ಕಾಲಿಗೆ ನಮಸ್ಕಾರ ಮಾಡಲು ಹೋದಾಗ ವಿ ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Published by:Mahmadrafik K
First published: