ಕೆಲವೊಮ್ಮೆ ನಾವು ಈ ಸಂಸಾರದಲ್ಲಿ ಗಂಡ ಹೆಂಡತಿಗೆ ಗೊತ್ತಿಲ್ಲದೆ ಇನ್ನೊಬ್ಬ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ಮತ್ತು ಕೆಲವೊಮ್ಮೆ ಹೆಂಡತಿ (Wife) ತನ್ನ ಗಂಡನ (Husband) ಬೆನ್ನ ಹಿಂದೆ ಇನ್ನೊಬ್ಬ ಗಂಡಸಿನ ಜೊತೆಗೆ ಲವ್ವಿ ಡವ್ವಿ ಸಂಬಂಧ ಇಟ್ಟುಕೊಂಡಿರುವುದನ್ನು ನಾವು ನೋಡಿರುತ್ತೇವೆ ಮತ್ತು ಇಂತಹ ಅನೇಕ ಘಟನೆಗಳ ಬಗ್ಗೆ ನಾವು ತುಂಬಾ ಸಲ ಕೇಳಿಯೂ ಇರುತ್ತೇವೆ. ಮೊದಲಿನಿಂದಲೂ ಈ ರೀತಿಯ ಘಟನೆಗಳು (Insident) ಸಮಾಜದಲ್ಲಿ ನಡೆಯುತ್ತಲೇ ಬಂದಿವೆ, ಆದರೆ ಇತ್ತೀಚೆಗೆ ಈ ಘಟನೆಗಳು ಜಾಸ್ತಿ ಬೆಳಕಿಗೆ ಬರುತ್ತಿವೆ.
ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಇಲ್ಲೊಂದು ಘಟನೆ ನಡೆದಿದೆ ನೋಡಿ, ಅದು ಏನು ಅಂತ ನಿಮಗೆ ತಿಳಿದರೆ ಒಬ್ಬ ಮಹಿಳೆ ತನ್ನ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ಹೀಗೆಲ್ಲಾ ಮಾಡ್ತಾರಾ ಅಂತ ನೀವು ಅಂದುಕೊಳ್ಳುವುದು ಗ್ಯಾರೆಂಟಿ.
ತನ್ನ ಪತಿಗಾಗಿ ಹೊಸ ಗೆಳತಿಯನ್ನು ಹುಡುಕಿದ ಪತ್ನಿ..
ಮಹಿಳೆಯೊಬ್ಬಳು ತನ್ನ ಪತಿ ತನಗೆ ಮೋಸ ಮಾಡುತ್ತಿದ್ದಾನೆ ಅಂತ ತಿಳಿದ ನಂತರ ತನ್ನ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ತನ್ನ ಪತಿರಾಯನಿಗೆ ಹೊಸ ಗೆಳತಿಯನ್ನು ಹುಡುಕಿ ಮನೆಗೆ ಕರೆದುಕೊಂಡು ಬಂದು ಗಂಡನಿಗೆ ಸರ್‌ಪ್ರೈಸ್ ನೀಡಿದ್ದಾಳೆ. ಇಲ್ಲಿ ಕುತೂಹಲಕಾರಿ ವಿಷಯವೇನೆಂದರೆ ಆ ವ್ಯಕ್ತಿಯ ಹೊಸ ಗೆಳತಿ ಡಿಟ್ಟೊ ಅವನ ಹೆಂಡತಿಯಂತೆಯೇ ಕಾಣುತ್ತಾಳೆ.
ತೆಹ್ಮೀನಾ ಮತ್ತು ಅವರ ಪತಿ ಬ್ರ್ಯಾಂಟ್ ಮದುವೆಯಾಗಿ ಐದು ವರ್ಷಗಳಾಗಿವೆ. ಆದರೆ, ತನ್ನ ಪತಿ ಬ್ರ್ಯಾಂಟ್ ಈಗ ಮೊದಲಿನಂತೆ ಆಕೆಯ ಜೊತೆ ಅಷ್ಟೊಂದು ಖುಷಿಯಿಂದ ಉಳಿದಿಲ್ಲ ಅಂತ ತೆಹ್ಮೀನಾ ಅವರು ಕಂಡುಕೊಂಡ ನಂತರ ಸಂಸಾರದಲ್ಲಿ ಮೊದಲಿದ್ದ ಪ್ರೀತಿ, ಸಂತೋಷ ನಿಧಾನವಾಗಿ ಮಾಯವಾಗುವುದಕ್ಕೆ ಶುರುವಾದವು.
ಇದನ್ನೂ ಓದಿ: Old Couple: ಮದ್ವೆಗೆ ಪೋಷಕರ ವಿರೋಧ; 60 ವರ್ಷದ ನಂತರ ಒಂದಾದ ಜೋಡಿ; ಇಲ್ಲಿದೆ ನೋಡಿ ರಿಯಲ್ ಲವ್ ಸ್ಟೋರಿ
ವಿಷಯಗಳು ಇನ್ನಷ್ಟು ಹದಗೆಡುವ ಮುನ್ನ, ತನ್ನ ಮದುವೆಯನ್ನು ಮತ್ತು ಸಂಸಾರವನ್ನು ಹೇಗಾದ್ರೂ ಮಾಡಿ ಉಳಿಸಿಕೊಳ್ಳಬೇಕು ಅಂತ ತನ್ನ ಗಂಡ ತನ್ನ ಮನೆಯಲ್ಲಿಯೇ ತನ್ನ ಜೊತೆಯೆ ಇರಬೇಕು ಅಂತ ತೆಹ್ಮೀನಾ ತನ್ನ ಗಂಡನಿಗಾಗಿ ಹೊಸ ಗೆಳತಿಯನ್ನು ಹುಡುಕಿ ಮನೆಗೆ ಕರೆದುಕೊಂಡು ಬರಲು ನಿರ್ಧರಿಸಿದಳು.
ಗಂಡನ ಹೊಸ ಗೆಳತಿ ಮತ್ತು ಹೆಂಡತಿ ಇಬ್ಬರು ಸೇಮ್ ಟು ಸೇಮ್ ಅಂತೆ..
ಆನ್‌ಲೈನ್ ನಲ್ಲಿ ಹುಡುಕಿದ ನಂತರ, ಆಸ್ಟ್ರೇಲಿಯಾದ 29 ವರ್ಷದ ಕೈರಾ ಅವರನ್ನು ತೆಹ್ಮೀನಾ ಅವರು ಭೇಟಿಯಾದರು. ಆಕೆಯ ಉದ್ದನೆಯ ಜಡೆಗಳು, ನಕಲಿ ಕಣ್ಣಿನ ರೆಪ್ಪೆಗಳಿಂದ ಹಿಡಿದು ಟ್ಯಾಟೂ ಮತ್ತು ತೊಟ್ಟಿರುವ ಉಡುಪುಗಳವರೆಗೆ, ಕೈರಾ ಮತ್ತು ತೆಹ್ಮೀನಾ ತುಂಬಾನೇ ಹೋಲುತ್ತಾರೆ ಮತ್ತು ಇದು ಅವರಿಬ್ಬರ ಹೊಂದಾಣಿಕೆಗೆ ಸಹಾಯವಾಗಿದೆ.
"ಬ್ರ್ಯಾಂಟ್ ನನ್ನನ್ನು ಇಷ್ಟಪಡುವುದರಿಂದ ನಾನು ನನ್ನಂತೆ ಕಾಣುವ ಮಹಿಳೆಯನ್ನು ಹುಡುಕುತ್ತಿದ್ದೆ" ಎಂದು ತೆಹ್ಮೀನಾ ಹೇಳಿದರು. "ನಾವು ಈಗ ಉತ್ತಮ ಸ್ನೇಹಿತರಾಗಿದ್ದೇವೆ, ಈಗ ನಮ್ಮ ಸಂಬಂಧ ಮೊದಲಿಗಿಂತಲೂ ಗಟ್ಟಿಯಾಗಿದೆ ಮತ್ತು ಜನರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ತೆಹ್ಮೀನಾ ಹೇಳಿದರು.
ಗಂಡನಿಗಾಗಿ ಹೊಸ ಗೆಳತಿಯನ್ನು ಹುಡುಕುವುದು ಪತ್ನಿಯ ವಿಚಾರವಾಗಿತ್ತಂತೆ..
ಮತ್ತೊಂದೆಡೆ, ತೆಹ್ಮೀನಾ ಅವರ ಸ್ನೇಹಿತರು ಬ್ರ್ಯಾಂಟ್ ಅವರಿಗೆ ಬಹುಪತ್ನಿ ಸಂಬಂಧಕ್ಕೆ ಬ್ರೈನ್ ವಾಶ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೊಂದೆಡೆ ತೆಹ್ಮೀನಾ ಖುದ್ದು ಅವರೇ ಕೈರಾ ಅವರನ್ನು ಹುಡುಕಿಕೊಂಡು ಬಂದಿರುವುದು ತನ್ನ ಆಲೋಚನೆ ಎಂದು ಹೇಳುತ್ತಾರೆ.
"ನಾನು ಸುಳ್ಳು ಹೇಳಲು ಬಯಸುವುದಿಲ್ಲ, ನಾನು ಮೂರನೆಯವರನ್ನು ಹುಡುಕಲು ಪ್ರಾರಂಭಿಸಿದಾಗ ನನಗೆ ಸ್ವಲ್ಪ ಮಟ್ಟಿಗೆ ಅಸುರಕ್ಷತೆಯ ಭಾವನೆ ಬಂದಿದ್ದು ನಿಜ. ಆದರೆ, ನಾನು ಬಹುಪತ್ನಿತ್ವದ ಸಂಬಂಧದಲ್ಲಿರಲು ಬಯಸುವ ಒಂದು ಕಾರಣವೆಂದರೆ ಅದು ಬ್ರ್ಯಾಂಟ್ ಅವರ ಗಮನವನ್ನು ಮನೆಯಲ್ಲಿಯೇ ಉಳಿಸುತ್ತದೆ ಅನ್ನೋದು" ಎಂದು ಅವರು ಒಪ್ಪಿಕೊಂಡರು.
"ನನ್ನ ಜೀವನದುದ್ದಕ್ಕೂ ನನ್ನ ಗಂಡ ನನ್ನ ಜೊತೆ ಇರಬೇಕು, ಅವನು ಏನು ಬಯಸುತ್ತಾನೋ, ಯಾವುದು ಅವನಿಗೆ ಸಂತೋಷವನ್ನು ನೀಡುತ್ತದೆಯೋ ಅದನ್ನು ನಾನು ಅವನಿಗೆ ನೀಡುತ್ತೇನೆ" ಎಂದು ತೆಹ್ಮೀನಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ