• Home
 • »
 • News
 • »
 • breaking-news
 • »
 • Weekly Horoscope: ಶ್ರಾವಣ ಮಾಸದ ಆರಂಭದಲ್ಲಿ ಹೇಗಿರಲಿದೆ ನಿಮ್ಮ ದಿನ? ಇಲ್ಲಿದೆ ಓದಿ ದ್ವಾದಶ ರಾಶಿಗಳ ಭವಿಷ್ಯ

Weekly Horoscope: ಶ್ರಾವಣ ಮಾಸದ ಆರಂಭದಲ್ಲಿ ಹೇಗಿರಲಿದೆ ನಿಮ್ಮ ದಿನ? ಇಲ್ಲಿದೆ ಓದಿ ದ್ವಾದಶ ರಾಶಿಗಳ ಭವಿಷ್ಯ

ವಾರ ಭವಿಷ್ಯ

ವಾರ ಭವಿಷ್ಯ

 • Share this:

  ಸೂರ್ಯನು (Sun) ಕರ್ಕರಾಶಿಯನ್ನು (Cancer) ಪ್ರವೇಶಿಸಿದ್ದಾನೆ. ಜುಲೈ 16ರಿಂದಲೇ ಸೂರ್ಯನು ಕರ್ಕ ರಾಶಿಯನ್ನು ಪ್ರವೇಶಿಸಿದ್ದು, ಶನಿಯು ಮಕರ ರಾಶಿಯಲ್ಲಿ (Capricorn) ಇದೆ. ಹೀಗಾಗಿ, ಎರಡು ಗ್ರಹಗಳು ಪರಸ್ಪರ ಮುಖಾಮುಖಿ ಆಗಿರುವುದರಿಂದ ಸಂಸಪ್ತ ಯೋಗವು ರೂಪುಗೊಳ್ಳುತ್ತದೆ. ಗ್ರಹಗಳು ಪರಸ್ಪರ ಶತ್ರು ಗ್ರಹಗಳಾಗಿವೆ. ಶನಿ ಮತ್ತು ಸೂರ್ಯನ ಅಶುಭ ಯೋಗದಿಂದ ಕೆಲವು ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಿದ್ರೆ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಬಗ್ಗೆ ಇಲ್ಲಿದೆ ಮಾಹಿತಿ…


  ಮೇಷ ರಾಶಿ: ಈ ವಾರ ಈ ರಾಶಿಯವರಿಗೆ ಹಣದ ಹರಿವು ಅವಶ್ಯಕತೆಗೆ ತಕ್ಕಷ್ಟು ಇರುತ್ತದೆ. ನೀವು ಕೆಲವು ಕಾರಣಗಳಿಗಾಗಿ ಎಲ್ಲೋ ಪ್ರಯಾಣ ಮಾಡಬೇಕಾಗಬಹುದು. ಇದರಿಂದಾಗಿ ನೀವು ಆಯಾಸ ಮತ್ತು ಒತ್ತಡದಿಂದ ಬಳಲುತ್ತೀರಿ. ರಕ್ತಸಂಬಂಧಿ ಕಾಯಿಲೆಗಳಿರುವವರು ಎಚ್ಚರ ವಹಿಸಿರಿ. ಸಂಗಾತಿಯ ಅತಿ ಹೆಚ್ಚು ಖರ್ಚು ತಲೆಬಿಸಿ ತರುತ್ತದೆ. ಕೆಲವು ಅನಿರೀಕ್ಷಿತ ಚಟುವಟಿಕೆಗಳಿಂದ ಆದಾಯ ಬರುತ್ತದೆ. ತಂದೆಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ.


  ವೃಷಭ ರಾಶಿ: ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿರೀಕ್ಷೆಯನ್ನು ತಲುಪುತ್ತದೆ. ಅನಿರೀಕ್ಷಿತವಾಗಿ ಕೆಲವೊಂದು ಖರ್ಚುಗಳು ಬರುವ ಸಾಧ್ಯತೆ ಇದೆ. ಈ ವಾರ ಸಂಬಂಧಿಕರ ಮನೆಯ ಶುಭ ಕಾರ್ಯಕ್ರಮದಲ್ಲಿ ನಿಮ್ಮ ಕುಟುಂಬವು ತಲ್ಲೀನವಾಗುತ್ತದೆ. ಇದರೊಂದಿಗೆ, ಈ ಸಮಯದಲ್ಲಿ, ದೂರದ ಸಂಬಂಧಿಯಿಂದ ಕೆಲವು ಒಳ್ಳೆಯ ಸುದ್ದಿಗಳು ನಿಮ್ಮ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣಗಳನ್ನು ತರುವ ಸಾಧ್ಯತೆಯಿದೆ. ಉದರಕ್ಕೆ ಸಂಬಂಧಪಟ್ಟ ಕಾಯಿಲೆ ಇರುವವರು ಚಿಕಿತ್ಸೆಗೆ ಹೋಗುವುದು ಒಳ್ಳೆಯದು.


  ಮಿಥುನ ರಾಶಿ: ಈ ವಾರ ಈ ರಾಶಿಯವರಿಗೆ ಆದಾಯದಷ್ಟೇ ಖರ್ಚು ಇರುತ್ತದೆ. ನಿಮ್ಮ ಸಂಗಾತಿಯ ವೃತ್ತಿಯಲ್ಲಿನ ಸ್ಥಾನ ವೃದ್ಧಿಯಾಗುತ್ತದೆ ಜೊತೆಗೆ ಆದಾಯವೂ ಹೆಚ್ಚುತ್ತದೆ. ಕೆಲವೊಂದು ಕೆಲಸಗಳು ಆಗದೆ ಬಹಳ ಸತಾಯಿಸಬಹುದು. ಈ ವಾರ ನೀವು ಆರೋಗ್ಯದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸಬಾರದು ಎಂದುಕೊಂಡಿದ್ದರೆ, ಯೋಗವನ್ನು ಅಳವಡಿಸಿಕೊಳ್ಳಿ. ಶನಿವಾರದಂದು ಅಂಗವಿಕಲರಿಗೆ ಮೊಸರನ್ನವನ್ನು ದಾನ ಮಾಡಿ.


  ಕರ್ಕಾಟಕ ರಾಶಿ: ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಉದರದಲ್ಲಿನ ತೊಂದರೆಗಳು ಗುಣಮುಖವಾಗುವ ಲಕ್ಷಣಗಳಿವೆ. ವೃತ್ತಿಯಲ್ಲಿ ಹಿತಶತ್ರುಗಳ ಕಾಟ ಹೆಚ್ಚಾಗುವ ಲಕ್ಷಣಗಳಿವೆ, ಎಚ್ಚರವಹಿಸಿರಿ. ಹೊಸ ಜನರ ಪರಿಚಯವಾಗುವ ಸಾಧ್ಯತೆಗಳಿವೆ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. "ಓಂ ಕೇತವೇ ನಮಃ" ಎಂದು ಪ್ರತಿದಿನ 108 ಬಾರಿ ಜಪಿಸಿ.


  ಇದನ್ನೂ ಓದಿ: Astrology: ಈ ರಾಶಿಯವರು ಇಂದು ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ! ಇಲ್ಲಿದೆ ಓದಿ ದ್ವಾದಶ ರಾಶಿಗಳ ದಿನ ಭವಿಷ್ಯ


  ಸಿಂಹ ರಾಶಿ: ಈ ವಾರ ಈ ರಾಶಿಯವರಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. . ಮೂಳೆ ತೊಂದರೆ ಇರುವವರಿಗೆ ಪಾರಂಪರಿಕ ಚಿಕಿತ್ಸೆಗಳಿಂದ ಅನುಕೂಲವಾಗಬಹುದು. ತಂದೆ ಮಕ್ಕಳ ನಡುವೆ ಕೆಲವೊಂದು ವಿಚಾರಗಳಿಗೆ ಕಾವೇರಿದ ಮಾತುಗಳು ಆಗುವ ಸಾಧ್ಯತೆಗಳಿವೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ವಾರವು ಅನುಕೂಲವಾಗಿದೆ. ಒಡಹುಟ್ಟಿದವರ ಬೆಂಬಲವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.


  ಕನ್ಯಾ ರಾಶಿ: ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸಾಲಗಾರರ ಕಾಟ ಹೆಚ್ಚಾಗುವ ಸಾಧ್ಯತೆಗಳಿವೆ. ಸಂಗಾತಿ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ನೀವು ಎಷ್ಟು ಹೆಚ್ಚು ಮುಚ್ಚಿಷ್ಟಷ್ಟೂ, ನೀವು ಭಾವನಾತ್ಮಕವಾಗಿ ಹೆಚ್ಚು ಸೂಕ್ಷ್ಮವಾಗುತ್ತೀರಿ. ವಾರದ ಕೊನೆಯ ಭಾಗದಲ್ಲಿ ಅಚಾನಕ್ಕಾಗಿ ದೂರದ ಸಂಬಂಧಿಯಿಂದ ಬರುವ ಯಾವುದೋ ಶುಭ ಸುದ್ದಿ ಇಡೀ ಕುಟುಂಬಕ್ಕೆ ಸಂತಸ ನೀಡುತ್ತದೆ.


  ತುಲಾ ರಾಶಿ: ಈ ವಾರ ಈ ರಾಶಿಯವರಿಗೆ ಹಣಕಾಸಿನ ಬಿಕ್ಕಟ್ಟುಗಳು ಹೆಚ್ಚಾಗಬಹುದು. ವೃತ್ತಿಯ ಸ್ಥಳದಲ್ಲಿದ್ದ ಗೋಜಲುಗಳು ಮರೆಯಾಗುತ್ತವೆ. . ನೀವು ನಂಬಿದ್ದ ಜನರು ಕೈಕೊಡುವ ಸಾಧ್ಯತೆಗಳಿವೆ. ನೀವು ನಿಮ್ಮ ಮೇಲಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಮೆಚ್ಚುಗೆ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಪ್ರತಿದಿನ 21 ಬಾರಿ "ಓಂ ಹನುಮತೇ ನಮಃ" ಎಂದು ಜಪಿಸಿ.ಧರ್ಮ ಕಾರ್ಯಗಳಿಂದ ಹಣ ಸಂಪಾದನೆಯಾಗುತ್ತದೆ.


  ವೃಶ್ಚಿಕ ರಾಶಿ: ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಹಿರಿಯರಿಂದ ನಿಮಗೆ ಸಲ್ಲಬೇಕಾದ ಆಸ್ತಿ ಪಾಲು ದೊರೆಯುತ್ತದೆ. ಪ್ರೀತಿ, ಪ್ರೇಮ ಯಶಸ್ವಿಯಾಗುವ ಲಕ್ಷಣವಿದೆ. ತಂದೆಯ ಸಹಾಯದಿಂದ ಕೆಲವರಿಗೆ ನೌಕರಿ ದೊರೆಯುತ್ತದೆ. ಈ ವಾರ ಯಾರೊಂದಿಗಾದರೂ ಜಗಳವಾಡುವುದು ನಿಮ್ಮ ಉತ್ತಮ ಸ್ವಭಾವವನ್ನು ಹಾಳುಮಾಡುತ್ತದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ನೀವು ಆತುರಪಡಬೇಕಾಗಿಲ್ಲ. ಇಲ್ಲದಿದ್ದರೆ, ಈ ಬಾರಿಯೂ ನೀವೇ ದೊಡ್ಡ ತೊಂದರೆಗೆ ಸಿಲುಕುತ್ತೀರಿ.


  ಧನು ರಾಶಿ: ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವೃತ್ತಿಯಲ್ಲಿ ನಿಮ್ಮ ವಿರುದ್ಧ ಚಾಡಿ ಹೇಳುವವರು ಹುಟ್ಟಿಕೊಳ್ಳಬಹುದು.  ಈ ವಾರ ಸಣ್ಣ ಆರೋಗ್ಯ ಸಮಸ್ಯೆಗಳನ್ನು ಹೊರತುಪಡಿಸಿ ಯಾವುದೇ ದೊಡ್ಡ ಕಾಯಿಲೆ ಬರುವ ಸಾಧ್ಯತೆ ಕಡಿಮೆ. ನಿಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ, ನೀವು ಅನೇಕ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ಆಲಸ್ಯದ ನಡವಳಿಕೆ ನಿಮ್ಮದಾಗಿರುತ್ತದೆ. ತೀಕ್ಷ್ಣವಾಗಿ ಮಾತನಾಡಿ ನಿಮ್ಮತನವನ್ನು ತೋರಿಸಿಕೊಳ್ಳುವಿರಿ.


  ಮಕರ ರಾಶಿ: ಈ ವಾರ ಈ ರಾಶಿಯವರಿಗೆ ಹಣದ ಹರಿವು ಕಡಿಮೆ ಇದ್ದರೂ ಜಾಣ್ಮೆಯಿಂದ ನಿಮ್ಮ ಆರ್ಥಿಕ ನಿರ್ವಹಣೆಯನ್ನು ಮಾಡುವಿರಿ. ನಡವಳಿಕೆಯಲ್ಲಿ ಹೆಚ್ಚಿನ ದೈವಭಕ್ತಿ ಕಂಡುಬರುತ್ತದೆ. ಹೆಚ್ಚು ಮಸಾಲೆಯುಕ್ತ ಮತ್ತು ಕರಿದ ಆಹಾರವನ್ನು ಸೇವಿಸುವಂತಹ ಅಭ್ಯಾಸಗಳು ನಿಮಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಕನಸುಗಳನ್ನು ವಾಸ್ತವಕ್ಕೆ ಪರಿವರ್ತಿಸುವ ಉಜ್ವಲ ಸಾಧ್ಯತೆಗಳಿವೆ. ಕೆಲಸದ ಒತ್ತಡ ಅಧಿಕವಾಗಿರುತ್ತದೆ. ಆಸ್ತಿ ವಿಚಾರದಲ್ಲಿ ಹೆಚ್ಚಿನ ತಗಾದೆ ಬೇಡ.


  ಕುಂಭ ರಾಶಿ: ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಉತ್ತಮವಾಗಿದ್ದರೂ ಸಹ ನಿರ್ವಹಣೆ ಅತಿ ಮುಖ್ಯ. ಕಣ್ಣಿನ ತೊಂದರೆ ಇರುವವರು ಎಚ್ಚರವಹಿಸಿರಿ. ಕೆಲಸ ಮಾಡುವವರು ಅಥವಾ ಉದ್ಯೋಗದಲ್ಲಿರುವವರು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಬೇಕಾಗಿದ್ದ ಎಲ್ಲ ರೀತಿಯ ಸವಲತ್ತುಗಳು ದೊರೆತು ವಿದ್ಯಾರ್ಥಿಗಳಿಗೆ ಸಂತೋಷವಾಗುತ್ತದೆ. ಯುವಕರ ಹಮ್ಮಿನ ಮಾತುಗಳು ಅವರಿಗೆ ಮುಳುವಾಗುವ ಸಾಧ್ಯತೆ ಇದೆ.


  ಇದನ್ನೂ ಓದಿ: Numerology: ಕೆಂಪು ಬಣ್ಣದ ಮೊಬೈಲ್ ಕವರ್ ಇವರಿಗೆ ಲಕ್ ತರುತ್ತಂತೆ!


  ಮೀನ ರಾಶಿ: ಈ ವಾರ ಈ ರಾಶಿಯವರಿಗೆ ಹಣದ ಒಳಹರಿಸು ಸಾಮಾನ್ಯವಾಗಿರುತ್ತದೆ. ಸಹೋದರಿಯರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಭೂ ವ್ಯವಹಾರ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ತಂದೆ ಮಕ್ಕಳ ನಡುವೆ ಆಸ್ತಿ ವಿಚಾರಕ್ಕಾಗಿ ಗಲಾಟೆ ಆಗಬಹುದು. ವೃತ್ತಿಯಲ್ಲಿ ನಿಮ್ಮ ನಡವಳಿಕೆಯಿಂದ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಮನೆಯ ಹಿರಿಯರ ಆರೋಗ್ಯವು ಆತಂಕವನ್ನು ಉಂಟುಮಾಡಬಹುದು. ಹಾಗಾಗಿ ಅವರನ್ನು ಉತ್ತಮ ವೈದ್ಯರ ಬಳಿ ಕರೆದುಕೊಂಡು ಹೋಗುವುದು ಉತ್ತಮ.

  Published by:Annappa Achari
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು