Upendra Tweet: ಹುಟ್ಟುಹಬ್ಬಕ್ಕೆ ಮನೆಗೆ ಬನ್ನಿ, ಈ ಗಿಫ್ಟ್​ ತನ್ನಿ, ಬಂಪರ್​ ಬಹುಮಾನ ಗೆಲ್ಲಿ ಅಂತಿದ್ದಾರೆ ಉಪೇಂದ್ರ!

ಹುಟ್ಟುಹಬ್ಬಕ್ಕೆ ನನ್ನ ಮನೆಗೆ ಬನ್ನಿ, ಹಾರ-ಕೇಕ್​ ಬದಲು ನನ್ನ ಈ ವಿಭಿನ್ನ ಕೋರಿಕೆ ಈಡೇರಿಸಿ ಎಂದು ಅಭಿಮಾನಿಗಳ ಬಳಿ ನಟ ಉಪೇಂದ್ರ ಕೇಳಿಕೊಂಡಿದ್ದಾರೆ. ನಟ ಉಪೇಂದ್ರ ಹುಟ್ಟುಹಬ್ಬಕ್ಕೆ ಬರುವವರು ಮರೆಯದೇ ಈ ಉಡುಗೊರೆಯನ್ನು ತರಲೇಬೇಕು ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ನಟ ಉಪೇಂದ್ರ

ನಟ ಉಪೇಂದ್ರ

  • Share this:
ಕೊರೊನಾ (Corona) ಕಾರಣದಿಂದ 2 ವರ್ಷಗಳಿಂದ ಸ್ಟಾರ್ಸ್​ಗಳು  ತಮ್ಮ ಹುಟ್ಟು ಹಬ್ಬವನ್ನು (Stars Birthday) ಆಚರಿಸಿಕೊಳ್ಳಲಿಲ್ಲ. ಇನ್ನು ಕೆಲವರು ಅಪ್ಪು ನಿಧನದಿಂದಾಗಿ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಇದೀಗ ಒಬ್ಬೊಬ್ಬರಾಗಿ ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಳ್ತಿದ್ದಾರೆ. ಇತ್ತ ಅಭಿಮಾನಿಗಳು ಸಹ ನೆಚ್ಚಿನ ನಟ-ನಟಿಯರ (Hero, Heroine) ಹುಟ್ಟುಹಬ್ಬವನ್ನು ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ನಟರ ಬರ್ತಡೇ ಅಂದ್ರೆ ಸಾಕು ಅಭಿಮಾನಿಗಳು ರಾತ್ರೋ ರಾತ್ರಿಯೇ ಮನೆ ಮುಂದೆ ಜಮಾಯಿಸುತ್ತಾರೆ. ನಟರ ಜೊತೆ ಕೇಕ್​ ಕತ್ತರಿಸಿ ಸಂಭ್ರಮಿಸುತ್ತಾರೆ. ಜೊತೆಗೆ ಹಲವು ಗಿಫ್ಟ್​​ (Gift) ಗಳನ್ನು ಸಹ ನೀಡುತ್ತಾರೆ. ಆದ್ರೆ ಇಲ್ಲಿ ಉಪೇಂದ್ರ (Upendra) ಅವರು ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್​ ಕೊಡೋದಾಗಿ ಘೋಷಣೆ ಮಾಡಿದ್ದಾರೆ.

ಅಭಿಮಾನಿಗಳ ಬಳಿ ಸ್ಪೆಷಲ್​ ಗಿಫ್ಟ್​​ ಕೇಳಿದ ಉಪ್ಪಿ

ಇದೇ ಸೆಪ್ಟೆಂಬರ್ 18ಕ್ಕೆ ನಟ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಕಳೆದ ಎರಡು ವರ್ಷಗಳಿಂದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿರುವ ನಟ ಉಪೇಂದ್ರ ತಮ್ಮ ಅಭಿಮಾನಿಗಳ ಜೊತೆಗೆ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಉಪೇಂದ್ರ ಎಲ್ಲರಿಗೂ ತಮ್ಮ ಮನೆಗೆ ಆಹ್ವಾನ ನೀಡಿದ್ದಾರೆ. ಆದರೆ ಈ ಬಾರಿ ಕೇಕ್, ಹಾರ, ಬಗೆಬಗೆಯ ಉಡುಗೊರೆ ಬದಲಿಗೆ ಉಪೇಂದ್ರ ವಿಶೇಷವಾದ ಗಿಫ್ಟ್ ಒಂದನ್ನ ಕೇಳಿದ್ದಾರೆ.

ಸೆಪ್ಟೆಂಬರ್​ 18 ರಂದು ಉಪೇಂದ್ರ ಹುಟ್ಟುಹಬ್ಬ

ನೆಚ್ಚಿನ ನಟನ ಬರ್ತಡೇ ಅಂದ್ರೆ ಸಾಕು ಅಭಿಮಾನಿಗಳು ಹೂಗುಚ್ಚ, ಕೇಕ್​, ಹಾರ, ಗಿಫ್ಟ್​​ ನೊಂದಿಗೆ ರಾತ್ರಿಯೇ ಮನೆಮುಂದೆ ಕಾಯುತ್ತಾರೆ. ಆದ್ರೆ ಈ ಸಂಪ್ರದಾಯಕ್ಕೆಲ್ಲಾ ಉಪ್ಪಿ ಫುಲ್​ಸ್ಟಾಪ್​ ಇಟ್ಟಿದ್ದಾರೆ. ಹುಟ್ಟುಹಬ್ಬಕ್ಕೆ ನನ್ನ ಮನೆಗೆ ಬನ್ನಿ, ಹಾರ-ಕೇಕ್​ ಬದಲು ನನ್ನ ಈ ವಿಭಿನ್ನ ಕೋರಿಕೆ ಈಡೇರಿಸಿ ಎಂದು ಅಭಿಮಾನಿಗಳ ಬಳಿ ನಟ ಉಪೇಂದ್ರ ಕೇಳಿಕೊಂಡಿದ್ದಾರೆ. ನಟ ಉಪೇಂದ್ರ ಹುಟ್ಟುಹಬ್ಬಕ್ಕೆ ಬರುವವರು ಮರೆಯದೇ ಈ ಉಡುಗೊರೆಯನ್ನು ತರಲೇಬೇಕು ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.





ಇದನ್ನೂ ಓದಿ: Movie News: ಸಿನಿ ಪ್ರಿಯರಿಗೆ ಸಂತಸದ ಸುದ್ದಿ; ಕೇವಲ 75 ರೂಪಾಯಿಗಳಲ್ಲಿ ಐನಾಕ್ಸ್, PVRಗಳಲ್ಲಿ ಚಿತ್ರ ನೋಡಬಹುದು!

ಉಪೇಂದ್ರ ಕೊಡ್ತಾರೆ ಬಂಪರ್​ ಗಿಫ್ಟ್​

ಹುಟ್ಟು ಹಬ್ಬಕ್ಕೆ ನಿಮ್ಮ ಹೊಸ ವಿಚಾರಗಳನ್ನೇ ಉಡುಗೊರೆಯಾಗಿ ಕೇಳಿದ್ದಾರೆ ನಟ ಉಪೇಂದ್ರ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಉಪೇಂದ್ರ, ವಿಚಾರವಂತರಾಗೋಣಾ?, ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ, ಗಿಫ್ಟ್ ಎಲ್ಲಾ ಬಿಟ್ಟು, ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

ನಟ ಸುದೀಪ್ ಕೊರೊನಾಗೂ ಮೊದಲೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಹಾಗಾಗಿ ಹಲವು ವರ್ಷಗಳ ಗ್ಯಾಪ್ ಬಳಿಕ ಇದೀಗ ತಮ್ಮ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈಗ ಮುಂದಿನ ಸರದಿ ರಿಯಲ್ ಸ್ಟಾರ್ ಉಪೇಂದ್ರ ಅವರದ್ದು.

ಇದನ್ನೂ ಓದಿ: Radhika Pandit: ಮಕ್ಕಳ ಜೊತೆ ಗಣಪತಿ ಹಬ್ಬ ಆಚರಿಸಿದ ರಾಧಿಕಾ ಪಂಡಿತ್; ಐರಾ, ಯಥರ್ವ್ ಫುಲ್ ಬ್ಯುಸಿ!

ಈ ಬಾರಿಯ ಉಪೇಂದ್ರ ಬರ್ತ್‌ಡೇ ಅತ್ಯಂತ ವಿಶೇಷವಾಗಿ ಇರಲಿದೆ. ನಟ ಉಪೇಂದ್ರ ತಾವು ನಿರೀಕ್ಷೆ ಮಾಡಿರುವ ಉಡುಗೊರೆಯನ್ನು ಅಭಿಮಾನಿಗಳು ಮರೆಯದೇ ತರುತ್ತಾರೆ ಎನ್ನುವ ಆಕಾಂಕ್ಷೆ ಯಲ್ಲಿ ಇದ್ದಾರೆ. ಅವರುಈ ಬಾರಿಯ ಹುಟ್ಟುಹಬ್ಬದ ಮೂಲಕ ಯಾವ ವಿಚಾರಗಳನ್ನು ಮಂಡಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
Published by:Pavana HS
First published: