• Home
 • »
 • News
 • »
 • breaking-news
 • »
 • Ukrainian Plane Hijack: ಕಾಬೂಲ್​ನಿಂದ ಉಕ್ರೇನ್​ ವಿಮಾನ ಹೈಜಾಕ್​; ಇರಾನ್ ಹೇಳಿದ್ದೆ ಬೇರೆ!

Ukrainian Plane Hijack: ಕಾಬೂಲ್​ನಿಂದ ಉಕ್ರೇನ್​ ವಿಮಾನ ಹೈಜಾಕ್​; ಇರಾನ್ ಹೇಳಿದ್ದೆ ಬೇರೆ!

Ukrainian plane : ಅಪಹರಣಕ್ಕೊಳಗಾದ ವಿಮಾನದಲ್ಲಿ 31 ಉಕ್ರೇನ್ ಪ್ರಜೆಗಳು ಸೇರಿದಂತೆ 83 ಪ್ರಯಾಣಿಕರಿದ್ದರು ಎಂದು ಹೇಳಲಾಗಿ

Ukrainian plane : ಅಪಹರಣಕ್ಕೊಳಗಾದ ವಿಮಾನದಲ್ಲಿ 31 ಉಕ್ರೇನ್ ಪ್ರಜೆಗಳು ಸೇರಿದಂತೆ 83 ಪ್ರಯಾಣಿಕರಿದ್ದರು ಎಂದು ಹೇಳಲಾಗಿ

Ukrainian plane : ಅಪಹರಣಕ್ಕೊಳಗಾದ ವಿಮಾನದಲ್ಲಿ 31 ಉಕ್ರೇನ್ ಪ್ರಜೆಗಳು ಸೇರಿದಂತೆ 83 ಪ್ರಯಾಣಿಕರಿದ್ದರು ಎಂದು ಹೇಳಲಾಗಿ

 • Share this:

   ಆಫ್ಘಾನಿಸ್ತಾನದಲ್ಲಿ (Afghanistan Taliban)  ತಾಲಿಬಾನ್​ ಆಡಳಿತ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ, ಜನರು ವಲಸೆ ಹೋಗಲು ಆರಂಭಿಸಿದ್ದಾರೆ. ಈ ನಡುವೆ ಆಫ್ಘಾನಿಸ್ತಾನದಲ್ಲಿನ ಉಕ್ರೇನಿಯನ್ನರನ್ನು (Ukraine) ಕರೆ ತರಲು ಆಗಮಿಸಿದ್ದ ವಿಮಾನವನ್ನು ಅಪಹರಿಸಲಾಗಿದೆ (Plane hijack). ಕಾಬೂಲ್​ನಿಂದ (kabul) ಹೊರಟ ಈ ವಿಮಾನವನ್ನು ಇರಾನ್​ಗೆ (Iran) ಹಾರಿಸಲಾಗಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್​ ಆರೋಪಿಸಿದ್ದಾರೆ. ಉಕ್ರೇನ್​ ಸಚಿವರು ಕೂಡ ಉಕ್ರೇನ್​ಗೆ ಬರಬೇಕಿದ್ದ ವಿಮಾನವನ್ನು ಇರಾನ್​ನಲ್ಲಿ ಇಳಿಸಲಾಗಿದೆ ಎಂದು ಆರೋಪಿಸಿದ್ದಾರೆ.


  ಕಳೆದ ಭಾನುವಾರ ವಿಮಾನವನ್ನು ಹೈಜಾಕ್​ ಮಾಡಲಾಗಿದೆ. ಆಫ್ಘಾನಿಸ್ತಾನದಲ್ಲಿದ್ದ ಉಕ್ರೇನ್‍ನ ಪ್ರಜೆಗಳನ್ನು  ಸ್ಥಳಾಂತರಿಸಲಾಗುತ್ತಿತ್ತು. ಈ ವೇಳೆ ವಿಮಾನ ನಮ್ಮ ದೇಶಕ್ಕೆ ಬರುವ ಬದಲು ಇರಾನ್​ಗೆ ಹಾರಿಸಲಾಗಿದೆ.  ವಿಮಾನವನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ. ಅಪರಿಚಿತ ಅಪಹರಣಕಾರ ಗುಂಪು ಶಸ್ತ್ರಸಜ್ಜಿತರಾಗಿದ್ದರು. ವಿಮಾನ ಹೈಜಾಕ್ ಆದ ಬಳಿಕ ಮತ್ತಷ್ಟು ಉಕ್ರೇನ್ ಪ್ರಜೆಗಳನ್ನು ಸ್ಥಳಾಂತರಿಸಲು ನಡೆಸಿದ ಮೂರು ಪ್ರಯತ್ನಗಳು ಕೂಡ ಫಲ ನೀಡಿಲ್ಲ. ನಮ್ಮವರನ್ನು ಕಾಬೂಲ್‍ನ ವಿಮಾನ ನಿಲ್ದಾಣದವರೆಗೂ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಉಪ ವಿದೇಶಾಂಗ ಸಚಿವರು ರಷ್ಯಾನ್​ ನ್ಯೂಸ್​ ಎಜೆನ್ಸಿಗೆ ತಿಳಿಸಿದ್ದಾರೆ.


  ಇದನ್ನು ಓದಿ: ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ; ಮಾನನಷ್ಟ ಮೊಕದ್ಧಮೆ ಹೂಡುತ್ತೇನೆ ಎಂದ ನಟ ಕೋಮಲ್​​


  ಅಪಹರಣಕ್ಕೊಳಗಾದ ವಿಮಾನದಲ್ಲಿ 31 ಉಕ್ರೇನ್ ಪ್ರಜೆಗಳು ಸೇರಿದಂತೆ 83 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಆದರೆ,  ಈ ಆರೋಪವನ್ನು ಇರಾನ್‍ನ ನಾಗರಿಕ ವಿಮಾನ ಯಾನ ಸಂಸ್ಥೆ ಅಲ್ಲಗಳೆದಿದೆ.


  ಇನ್ನು ಐಎಎನ್​ಎಸ್​ ನ್ಯೂಸ್​ ಏಜೆನ್ಸಿ ವರದಿ ಪ್ರಕಾರ, ವಿಮಾನ ಉಕ್ರೇನ್‍ನ ಕೀವ್ ವಿಮಾನ ನಿಲ್ದಾಣಕ್ಕೆ 12ಕ್ಕೆ ಬಂದು ಇಳಿದಿದೆ. ಯಾವುದೇ ಅಪಹರಣಗಳು ನಡೆದಿಲ್ಲ. ಇದರ ಜೊತೆಗೆ 100 ಉಕ್ರೇನಿಯರು ಇನ್ನು ಸ್ಥಳಾಂತರಕ್ಕಾಗಿ ಆಫ್ಘಾನಿಸ್ತಾನದಲ್ಲಿ ಕಾಯುತ್ತಿದ್ದಾರೆ
  ಇರಾನ್‌ನ ವಾಯುಯಾನ ವಕ್ತಾರರು ಕೂಡ ಉಕ್ರೇನಿಯನ್ ವಿಮಾನವನ್ನು ಅಪಹರಿಸಿ ಇರಾನ್‌ಗೆ ಹಾರಿಸಲಾಗಿದೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಉಕ್ರೇನಿಯನ್ ವಿಮಾನವು ನಿನ್ನೆ ರಾತ್ರಿ ಮಶ್ಹಾದ್‌ನಲ್ಲಿ ಇಂಧನ ತುಂಬುವುದಕ್ಕಾಗಿ ನಿಲ್ಲಿಸಲಾಗಿತತು. ಬಳಿಕ ಉಕ್ರೇನ್‌ಗೆ ಹೊರಟಿತು. ವಿಮಾನ ಈಗಾಗಲೇ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಇಳಿದಿದೆ ಎಂದಿದ್ದಾರೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  First published: