ಬಾಗಲಕೋಟೆ: ಒಂದೇ ಕುಟುಂಬದ ಎಂಟು ಜನರು ಭಾನುವಾರ ಪುಣ್ಯ ಕ್ಷೇತ್ರಗಳ ಪ್ರವಾಸ ಕೈಗೊಂಡು ಬಾದಾಮಿ ಬನಶಂಕರಿ ಹಾಗೂ ಶಿವಯೋಗ ಮಂದಿರಕ್ಕೆ ಭೇಟಿ ನೀಡಿತ್ತು. ಎರಡೂ ಪುಣ್ಯ ಕ್ಷೇತ್ರಗಳಲ್ಲಿ ದೇವರ ದರ್ಶನ ಪಡೆದು ಮನೆಗೆ ವಾಪಸ್ಸಾಗ ಬೇಕು ಎನ್ನುವಷ್ಟರಲ್ಲಿ ನಡೆಯಬಾರದ ಘಟನೆ ನಡೆದುಹೋಗಿದೆ. ಪ್ರವಾಸಕ್ಕೆ ತೆರಳಿದ್ದ ಎಂಟು ಜನರ ಕುಟುಂಬದಲ್ಲಿ ಮೂರು ಜನ ನದಿಯಲ್ಲಿ ನೀರು ಪಾಲಾಗಿ ದುರ್ಮರಣ ಹೊಂದಿದ್ದಾರೆ. ಮೂರು ಜನರ ಪೈಕಿ ತಂದೆ, ಮಗಳು ಹಾಗೂ ಅತ್ತಿಗೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು ಇನ್ನುಳಿದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದ್ದು, ಮುಂದೇನು? ಎಂಬುದೇ ತೋಚದಂತಾಗಿದೆ.
ಮಲಪ್ರಭಾ ನದಿಯಲ್ಲಿ ಮುಳುಗಿ ತಂದೆ ಮಗಳು ಮತ್ತು ಅತ್ತಿಗೆ ಸಾವು..!
ಹೌದು, ದೇವರ ದರ್ಶನಕ್ಕೆ ಬಂದಿದ್ದ ಒಂದೇ ಕುಟುಂಬದ ಮೂವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ನಡೆದಿದೆ.
ಮಲಪ್ರಭಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದವರನ್ನು ವಿಶ್ವನಾಥ್ ಮಾವಿನಮರದ 40 ವರ್ಷ, ಅತ್ತಿಗೆ (ಮೃತ ವಿಶ್ವನಾಥನ ಸಹೋದರನ ಪತ್ನಿ) ಶ್ರೀದೇವಿ ಮಾವಿನಮರದ 32 ವರ್ಷ, ಹಾಗೂ (ವಿಶ್ವನಾಥನ ಮಗಳು )ನಂದಿನಿ ಮಾವಿನಮರದ 12 ವರ್ಷ ಎಂದು ಗುರುತಿ ಸಲಾಗಿದೆ. ಮೃತರು ಗದಗ ಜಿಲ್ಲೆಯ ರೋಣ ಪಟ್ಟಣ ದಲ್ಲಿ ವಾಸವಾಗಿದ್ದರು ಎಂದು ತಿಳಿಸಿದು ಬಂದಿದೆ.
ಒಂದೇ ಕುಟುಂಬದ 8 ಜನರು ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ಬಳಿಕ ಬಾದಾಮಿ ತಾಲೂಕಿನ ಶಿವಯೋಗ ಮಂದಿರಕ್ಕೆ ತೆರಳಿದ್ದರು. ಈ ಬಗ್ಗೆ ವೇಳೆ ದೇವರ ದರ್ಶನ ಪಡೆದು ನಂತರ ಶಿವಯೋಗಮಂದಿರದ ಬಳಿ ಇರುವ ಮಲಪ್ರಭಾ ನದಿ ದಡದಲ್ಲಿ ಕುಳಿತು ಉಪಹಾರ ಸೇವಿಸಿದ್ದಾರೆ.
ಊಟ ಮುಗಿದ ಬಳಿಕ ಬಾಲಕಿ ನಂದಿನಿ ಮಾವಿನಮರದ ನದಿಯಲ್ಲಿ ಕೈ ತೊಳೆಯಲು ಹೋಗಿ, ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಮಗಳನ್ನು ರಕ್ಷಿಸಲು ತಂದೆ ವಿಶ್ವನಾಥ್ ಮತ್ತು ಬಾಲಕಿಯ ದೊಡ್ಡಮ್ಮ ಶ್ರೀದೇವಿ ನದಿಗೆ ಹಾರಿದ್ದು ನದಿಯಲ್ಲಿ ಈಜಿ ಹೊರಗೆ ಬರಲಾಗಿದೆ ಮುಳುಗಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮದ ಜನರು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕೂಡಲೇ ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳನ್ನ ಕರೆಸಿ ನೀರು ಪಾಲಾದವರ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಶ್ರೀದೇವಿ ಮಾವಿನಮರದ ಹಾಗೂ ವಿಶ್ವಮಾಥ್ ಮಾವಿನಮರದ ಅವರ ಶವ ಹೊರಕ್ಕೆ ತೆಗೆಯಲಾಗಿದ್ದು, ಬಾಲಕಿ ನಂದಿನಿ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಅಫ್ಘನ್ ಕ್ರಿಕೆಟ್ ಬೋರ್ಡಿಗೆ ಹಂಗಾಮಿ ಅಧ್ಯಕ್ಷನನ್ನು ನೇಮಿಸಿದ ತಾಲಿಬಾನ್
ಸ್ಥಳಕ್ಕೆ ಬಾದಾಮಿ ಪಿ.ಎಸ್.ಐ ನೇತ್ರಾವತಿ ಪಾಟೀಲ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ನುರಿತ ಈಜುಗಾರರ ಜೊತೆಗೆ ಅಗ್ನಿಶಾಮಕದಳದ ಸಿಬ್ಬಂದಿ ನಂದಿನಿ ಶವಕ್ಕಾಗಿ ನಡೆಸಿರುವ ಶೋಧಕಾರ್ಯ ಮುಂದುವರೆದಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧ ದಲ್ಲಿ ಪ್ರತಿಯೊಬ್ಬರು ಕೈ ಜೋಡಿಸ ಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿ ನಿಂದ ತಮ್ಮನ್ನು ತಾವು ಕಾಪಾಡಿ ಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿ ತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯು ತವಾಗಿ ನಡೆದುಕೊ ಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ