Obesity Problem: ಅಡುಗೆ ಮನೆಯಲ್ಲಿರುವ ಈ ವಸ್ತುಗಳಿಂದ ಹೆಚ್ಚುತ್ತಿರುವ ತೂಕಕ್ಕೆ ಮದ್ದು ಅರೆಯಬಹುದು!

ಕಠಿಣ ವ್ಯಾಯಾಮ ಮತ್ತು ಆಹಾರ ಕ್ರಮ ನಿಯಂತ್ರಿಸಿದರೂ ತೂಕ ಇಳಿಸಲು ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಪಟಿಯಾಲಾದ ಮಣಿಪಾಲ್ ಆಸ್ಪತ್ರೆಗಳ ಡಯೆಟಿಷಿಯನ್ ಮತ್ತು ಪೌಷ್ಟಿಕತಜ್ಞೆ ಡಾ ಭಾವನಾ ಶರ್ಮಾ ತೂಕ ಇಳಿಸಲು ಕೆಲವು ಎಲೆಗಳ ಸೇವನೆ ಮಾಡಬಹುದು. ನಿಮ್ಮ ಅಡುಗೆ ಮನೆಯಲ್ಲಿ ಸಿಗುವ ಎಲೆಗಳು ತೂಕ ಕಡಿಮೆ ಮಾಡಲು ನೆರವಾಗುತ್ತವೆ ಎಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸ್ಥೂಲಕಾಯ (Obesity) ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಗಂಭೀರ ಸಮಸ್ಯೆ (Serious Problem) ಆಗಿದೆ. ಇದು ನಿಮ್ಮ ಸೌಂದರ್ಯ (Beauty) ಕಡಿಮೆ ಮಾಡುವ ಜೊತೆಗೆ ಕೆಲವು ಗಂಭೀರ ಆರೋಗ್ಯ (Health) ತೊಂದರೆಗಳನ್ನೂ ಹುಟ್ಟು ಹಾಕುತ್ತದೆ. ಸ್ಥೂಲಕಾಯ ದೀರ್ಘಕಾಲ ದೇಹವನ್ನು ಹಿಡಿದಿಟ್ಟಿದ್ರೆ ಅದು ಮಧುಮೇಹ, ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ಕರೋನಾ ವೈರಸ್‌ನಂತಹ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚು ಮಾಡುತ್ತದೆ. ಸ್ಥೂಲಕಾಯದಿಂದ ಬಳಲುತ್ತಿರುವ ಅನೇಕರಿಗೆ ತೂಕ ನಷ್ಟವು ಒಂದು ದೊಡ್ಡ ಸಮಸ್ಯೆ ಆಗಿದೆ. ಹಾಗಾದ್ರೆ ತೂಕ ಕಡಿಮೆ ಮಾಡುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೆಲವು ಜನರು ಕ್ಯಾಲೊರಿ ಸೇವನೆ ಕಡಿಮೆ ಮಾಡಿದ ನಂತರವೂ ತೂಕ ಇಳಿಕೆ ಸಾಧ್ಯವಾಗಲ್ಲ.

    ತೂಕ ಇಳಿಸಲು ಕೆಲವು ಎಲೆಗಳ ಸೇವನೆ

    ಕಠಿಣ ವ್ಯಾಯಾಮ ಮತ್ತು ಆಹಾರ ಕ್ರಮ ನಿಯಂತ್ರಿಸಿದರೂ ತೂಕ ಇಳಿಸಲು ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಪಟಿಯಾಲಾದ ಮಣಿಪಾಲ್ ಆಸ್ಪತ್ರೆಗಳ ಡಯೆಟಿಷಿಯನ್ ಮತ್ತು ಪೌಷ್ಟಿಕತಜ್ಞ ಡಾ.ಭಾವನಾ ಶರ್ಮಾ ಪ್ರಕಾರ ತೂಕ ಇಳಿಸಲು ನೀವು ಕೆಲವು ರೀತಿಯ ಎಲೆಗಳ ಸೇವನೆ ಮಾಡಬಹುದು.  ನಿಮ್ಮ ಅಡುಗೆ ಮನೆಯಲ್ಲಿ ಸಿಗುವ ಎಲೆಗಳು ತೂಕ ಕಡಿಮೆ ಮಾಡಲು ನೆರವಾಗುತ್ತವೆ.

    ತೂಕ ನಷ್ಟಕ್ಕೆ ಕೊತ್ತಂಬರಿ ಸೊಪ್ಪು ಸೇವನೆ

    ಕೊತ್ತಂಬರಿ ಸೊಪ್ಪು ಭಾರತೀಯ ಅಡುಗೆ ಮನೆಯ ಪ್ರಮುಖ ಅಂಶ ಆಗಿದೆ. ಇದು ಚಯಾಪಚಯ ಮತ್ತು ತೂಕ ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿ ಆಗಿದೆ. ಸಲಾಡ್ ಮತ್ತು ಹಸಿರು ಚಟ್ನಿಗಳ ರೂಪದಲ್ಲಿ ಇದನ್ನೂ ಸೇವನೆ ಮಾಡಬಹುದು. ಇದು ಕ್ವೆರ್ಸೆಟಿನ್ ಎಂಬ ವಸ್ತು ಹೊಂದಿದೆ. ಇದು ತೂಕ ಕಡಿಮೆ ಮಾಡಲು ಬಹಳ ಪರಿಣಾಮಕಾರಿ.

    ಇದನ್ನೂ ಓದಿ: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!

    ತೂಕ ನಷ್ಟಕ್ಕೆ ತುಳಸಿ ಎಲೆಗಳ ಸೇವನೆ ಮಾಡುವುದು

    ತುಳಸಿ ಎಲೆಗಳನ್ನು ಭಾರತೀಯ ಮನೆಗಳಲ್ಲಿ ಪವಿತ್ರ ಎಂದು ಪರಿಗಣಿಸಲಾಗಿದೆ. ತುಳಸಿಯನ್ನು ಆಹಾರ ಪೂರಕವಾಗಿ ಸೇವನೆ ಮಾಡಲು ಅನೇಕ ಮಾರ್ಗಗಳಿವೆ. ಜೊತೆಗೆ ಇದು ಉತ್ತಮ ರುಚಿ ಸಹ ಹೊಂದಿದೆ.

    ತುಳಸಿ ಚಹಾವು ನಿಮ್ಮ ದೈನಂದಿನ ದಿನಚರಿಯಲ್ಲಿದ್ದರೆ ಆರೋಗ್ಯಕರ ಪಾನೀಯವಾಗಿದೆ. ಇದು ತೂಕ ಕಡಿಮೆ ಮಾಡುತ್ತದೆ. ಬೆಳಿಗ್ಗೆ 5 ರಿಂದ 6 ತುಳಸಿ ಎಲೆಗಳನ್ನು ನೀರಿನಲ್ಲಿ ಸೇವಿಸಿದರೆ ದೇಹದ ವಿಷಕಾರಿ ಅಂಶ ಹೊರ ಹೋಗುತ್ತದೆ. ಮತ್ತು ಚಯಾಪಚಯ ಹೆಚ್ಚಿಸುತ್ತದೆ.

    ಚಯಾಪಚಯ ಹೆಚ್ಚಿಸುವುದು ಕ್ಯಾಲೊರಿ ಸುಡುವುದು ಸುಲಭವಾಗುತ್ತದೆ. ಜೊತೆಗೆ ತುಳಸಿ ನೈಸರ್ಗಿಕವಾಗಿ ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಮತ್ತು ದೇಹದಿಂದ ವಿಷ ಹೊರ ಹಾಕುತ್ತದೆ.

    ತೂಕ ನಷ್ಟಕ್ಕೆ ಪಾಲಕ ಎಲೆಗಳ ಸೇವನೆ

    ಪಾಲಕ್ ಆರೋಗ್ಯಕರ ಹಸಿರು ತರಕಾರಿಗಳಲ್ಲಿ ಒಂದು. ಪಾಲಕ್ ಸೊಪ್ಪು ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ಇದು ಹೃದಯದ ಆರೋಗ್ಯ ಸುಧಾರಿಸುತ್ತದೆ. ಕೂದಲು ಒಡೆಯುವುದನ್ನು ತಡೆಯುತ್ತದೆ. ಮತ್ತು ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಒಂದು ಕಪ್ ಪಾಲಕ್ ಸೊಪ್ಪನ್ನು ನಿಮ್ಮ ಆಹಾರದಲ್ಲಿ ಸೇರಿಸಿದ್ರೆ ತೂಕ ಇಳಿಸಬಹುದು.

    ಪಾಲಕವನ್ನು ವಿವಿಧ ತರಕಾರಿಗಳಲ್ಲಿ ಮತ್ತು ಪಾನೀಯಗಳು ಮತ್ತು ಸ್ಮೂಥಿಗಳಲ್ಲಿ ಬಳಸಬಹುದು. ಇದು ಕಡಿಮೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮತ್ತು ಫೈಬರ್ ಮತ್ತು ಕಬ್ಬಿಣದಲ್ಲಿ ಸಮೃದ್ಧ. ರಕ್ತದೊತ್ತಡ ನಿಯಂತ್ರಿಸಲು, ಮೂಳೆಗಳ ಆರೋಗ್ಯಕ್ಕೆ, ಉತ್ತಮ ದೃಷ್ಟಿಗೆ ಅವಶ್ಯಕ.

    ತೂಕ ನಷ್ಟಕ್ಕೆ ಬೇವಿನ ಎಲೆ ರಸ ಸೇವನೆ

    ಬೇವಿನ ರಸ ಸೇವನೆ ವಿವಿಧ ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತದೆ. ತಾಜಾ ಬೇವಿನ ಎಲೆಗಳ ರಸ, ಬೇವಿನ ಪೇಸ್ಟ್ ತಯಾರಿಸಬಹುದು. ಇದನ್ನು ವಿವಿಧ ಉದ್ದೇಶಗಳಿಗೆ ಬಳಸಬಹುದು. ಬೇವಿನ ರಸ ನಿಯಮಿತವಾಗಿ ಕುಡಿಯುವುದು, ಚಯಾಪಚಯ ಹೆಚ್ಚಿಸುತ್ತದೆ. ವ್ಯಕ್ತಿಯ ಹೊಟ್ಟೆಯು ಸ್ವಚ್ಛವಾಗುತ್ತದೆ.

    ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ತೂಕ ನಿಯಂತ್ರಿಸುತ್ತದೆ. ಬೇವು, ನಿಂಬೆ ಮತ್ತು ಜೇನುತುಪ್ಪ ಬೆರೆಸಿ ತಯಾರಿಸಿದ ಮಿಶ್ರಣವು ಚಯಾಪಚಯ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ.

    ಇದನ್ನೂ ಓದಿ: ಯೂರಿಕ್ ಆಮ್ಲದಿಂದ ಬರಬಹುದು ಈ ಸಮಸ್ಯೆಗಳು, ಅದಕ್ಕೆ ಪರಿಹಾರ ಇಲ್ಲಿದೆ

    ತೂಕ ನಷ್ಟಕ್ಕೆ ಕರಿಬೇವಿನ ಎಲೆ ಸೇವನೆ

    ಕರಿಬೇವಿನ ಎಲೆಗಳು ದಕ್ಷಿಣ ಭಾರತದ ಅಡುಗೆ ಮನೆಯ ಪ್ರಮುಖ ಅಂಶ. ತೂಕ ಕಡಿಮೆ ಮಾಡುತ್ತದೆ. ಕರಿಬೇವಿನ ಎಲೆಗಳು ವಿಟಮಿನ್‌, ಖನಿಜ ಮತ್ತು ಸಸ್ಯ ಮೂಲದ ಆಲ್ಕಲಾಯ್ಡ್‌ಗಳಿಂದ ಸಮೃದ್ಧವಾಗಿದೆ. ಚಯಾಪಚಯ ದರ ಹೆಚ್ಚಿಸುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ.
    Published by:renukadariyannavar
    First published: