ಮುಂಬೈ: ಹುಡುಗಿಯರು (Girls), ಅದರಲ್ಲೂ ಗರ್ಲ್ ಫ್ರೆಂಡ್ಸ್ (Girl Friends) ಹುಡುಗರಿಂದ (Boys) ಅಥವಾ ತಮ್ಮ ಬಾಯ್‌ಫ್ರೆಂಡ್ಸ್‌ಗಳಿಂದ (Boy Friends) ಭಾರೀ ಹಣ (Money) ಖರ್ಚು ಮಾಡಿಸ್ತಾರೆ ಅನ್ನೋದು ಎಲ್ಲರ ಕಂಪ್ಲೇಂಟ್ (Complaint). ಒಂದೆರಡು ಗರ್ಲ್ ಫ್ರೆಂಡ್ಸ್ ಮೆಂಟೇನ್ (Maintain) ಮಾಡೋದು ದೊಡ್ಡದೇನಲ್ಲ, ಆದರೆ ಅವರ ಖರ್ಚು ವೆಚ್ಚ ನೋಡಿಕೊಳ್ಳೋದು ಶ್ರೀಮಂತರ ಮನೆ ಮಕ್ಕಳಿಗೆ ಮಾತ್ರ ಸಾಧ್ಯ ಎನ್ನುವುದು ಎಲ್ಲಾ ಹುಡುಗರ ಗೋಳು. ಆದ್ರೆ ಇಲ್ಲೊಬ್ಬ ಭೂಪ ಅದ್ಯಾಕೋ ಏನೋ ತನ್ನ ಗರ್ಲ್ ಫ್ರೆಂಡ್ ಮನೆಗೆ ನುಗ್ಗಿ, ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿದ್ದಾನೆ. ಇದೀಗ ತಾನು ಮಾಡಿದ ತಪ್ಪಿಗೆ ಜೈಲು (Jail) ಸೇರಿದ್ದಾನೆ. ಅಂದಹಾಗೆ ದರೋಡೆ (Robbery) ಯಾಕಪ್ಪಾ ಮಾಡಿದೆ ಅಂತ ಕೇಳಿದ್ರೆ ಈತ ಹೇಳೋ ಕಾರಣ ಕೇಳಿದ್ರೆ ನಗಬೇಕೋ, ಅಳಬೇಕೋ ಎನ್ನುವುದು ನಿಮಗೇ ಗೊತ್ತಾಗಲ್ಲ!
ಪ್ರೇಯಸಿ ಮನೆ ದರೋಡೆ ಮಾಡಿದ ಪ್ರಿಯಕರ
ಮಹಾರಾಷ್ಟ್ರ ರಾಜ್ಯದ ಮುಂಬೈನ ಅಂಧೇರಿಯ ಲೋಖಂಡವಾಲಾ ಪ್ರದೇಶದಲ್ಲಿ ತನ್ನ ಗೆಳತಿಯ ಮನೆಗೆ ನುಗ್ಗಿದ ದರೋಡೆ ಮಾಡಿದ್ದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಸಹಾಯ ಮಾಡಿದ ಆರೋಪದ ಮೇಲೆ ಓಶಿವಾರ ಠಾಣೆ ಪೊಲೀಸರು ಒಟ್ಟು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರೀತೇಶ್ ಮಾಂಜ್ರೇಕರ್, ರೋಹಿತ್ ಕೋರ್ಡೆ ಮತ್ತು ರೋಹಿತ್ ಹೆಗ್ಡೆ ಎಂದು ಗುರುತಿಸಲಾಗಿದೆ. ಬಂಧಿತರಿಂದ ಐದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮುಖ್ಯ ಆರೋಪಿಯ ಹೆಸರು ಹೇಳಿದ ಬಂಧಿತರು
ಮನೆಯಲ್ಲಿ ದರೋಡೆ ಆಗಿರುವ ಬಗ್ಗೆ ಹುಡುಗಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡ ಬಳಿಕ ತನಿಖೆಯ ಸಮಯದಲ್ಲಿ ಪೊಲೀಸರು ಹತ್ತಿರದ ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಜೊತೆಗೆ ನೂರಾರು ಮೊಬೈಲ್ ಸಂಖ್ಯೆಗಳನ್ನು ಸ್ಕ್ಯಾನ್ ಮಾಡಿದರು. ಸಿಡಿಆರ್ ಡೇಟಾದಿಂದಾಗಿ ಘಟನೆಯ ಮರುದಿನವೇ ಬೊರಿವಲಿ ಮತ್ತು ದಹಿಸರ್ ಪ್ರದೇಶದಲ್ಲಿ ರೋಹಿತ್ ಕೋರ್ಡೆ ಮತ್ತು ರೋಹಿತ್ ಹೆಗ್ಡೆ ಎಂಬ ಇಬ್ಬರು ಆರೋಪಿಗಳನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದು. ಇಬ್ಬರನ್ನು ಹಿಡಿದು ವಿಚಾರಣೆ ನಡೆಸಿದಾಗ ಮುಖ್ಯ ಆರೋಪಿ ಪ್ರೀತೇಶ್ ಮಾಂಜ್ರೇಕರ್ ಹೆಸರು ಹೇಳಿದ್ದಾರೆ.
ಇದನ್ನೂ ಓದಿ: Accident: ಬರ್ತ್ ಡೇ ಪಾರ್ಟಿಗೆ ಹೋದವರಿಗಾಗಿ ಕಾದಿದ್ದ ಜವರಾಯ! ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು
ತನ್ನದೇ ಪ್ರಿಯತಮೆ ಮನೆಗೆ ಕನ್ನ ಹಾಕಲು ಪ್ಲಾನ್
ಬಳಿಕ ಪೊಲೀಸರು ಪ್ರೀತೇಶ್ ಮಾಂಜ್ರೇಕರ್‌ನನ್ನು ಹಿಡಿದು ವಿಚಾರಿಸಿದ್ದಾರೆ. ಈ ವೇಳೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಪ್ರೀತೇಶ್ ಮಾಂಜ್ರೇಕರ್ ಮತ್ತು ದೂರುದಾರ ಯುವತಿ ಒಂದೆರಡು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಕಳೆದ ಕೆಲವು ದಿನಗಳಲ್ಲಿ ಅವರ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ಇದರಿಂದಾಗಿ ದೂರುದಾರ ಯುವತಿ ಆತನಿಂದ ಬೇರೆಯಾಗಲು ನಿರ್ಧರಿಸಿದ್ದಾಳೆ. ಈ ವಿಷಯ ತಿಳಿದ ಮಂಜ್ರೇಕರ್ ಆಕೆಯ ಮನೆಯನ್ನು ದರೋಡೆ ಮಾಡಲು ಇಬ್ಬರು ಆರೋಪಿಗಳೊಂದಿಗೆ ಯೋಜನೆ ರೂಪಿಸಿದ್ದಾನೆ.
ಗೆಳತಿಯನ್ನು ಊಟಕ್ಕೆ ಕರೆಸಿ ದರೋಡೆ
ಪ್ರೀತೀಶ್ ಮಾಂಜ್ರೇಕರ್ ಈಗಾಗಲೇ ಸಿದ್ಧಪಡಿಸಿದ ಫ್ಲಾಟ್‌ನ ನಕಲಿ ಕೀಗಳನ್ನು ತನ್ನ ಗೆಳೆಯರಿಗೆ ನೀಡಿದ್ದಾನೆ. ಇತ್ತ ಬಳಿಕ ತನ್ನ ಗೆಳತಿಯ ಮನೆಯಿಂದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಕಳುವು ಮಾಡಲು ಹೇಳಿದ್ದಾನೆ. ಮತ್ತೊಂದೆಡೆ ನಿನ್ನ ಜೊತೆ ಮಾತನಾಡಬೇಕು ಅಂತ ಗೆಳೆತಿಯನ್ನು ಹೋಟೆಲ್‌ಗೆ ಊಟಕ್ಕೆ ಕರೆಸಿದ್ದಾನೆ. ಅತ್ತ ಅವರು ಹೋದಾಗ, ಇತ್ತ ಗೆಳೆಯರು ಈ ಮನೆಯಲ್ಲಿ ಬೆಲೆಬಾಳುವ ಬಂಗಾರ, ಹಣವನ್ನು ದೋಚಿದ್ದಾರೆ.
ಗೆಳತಿಯೊಂದಿಗೆ ದೂರು ಕೊಟ್ಟ ಆರೋಪಿ
ಆಕೆ ವಾಪಸ್ ಮನೆಗೆ ತಲುಪಿದ ನಂತರ ಚಿನ್ನಾಭರಣಗಳು, ಕೈಗಡಿಯಾರಗಳು ಮತ್ತು ನಗದು ಸೇರಿದಂತೆ ಎಲ್ಲಾ ಬೆಲೆಬಾಳುವ ವಸ್ತುಗಳು ಕಾಣೆಯಾಗಿರುವುದನ್ನು ಗಮಿಸಿದ್ದಾಳೆ. ಬಳಿಕ ಪ್ರೀತೀಶ್ ಮಾಂಜ್ರೇಕರ್ ಜತೆ ಠಾಣೆಗೆ ಬಂದು ದೂರು ನೀಡಿದ್ದಾಳೆ.
ಇದನ್ನೂ ಓದಿ: Accident: ಆಂಧ್ರದಲ್ಲಿ ಕರ್ನಾಟಕ ಪೊಲೀಸರ ವಾಹನ ಅಪಘಾತ; ಶಿವಾಜಿನಗರ ಪಿಎಸ್ಐ, ಕಾನ್ಸ್‌ಟೇಬಲ್ ಸೇರಿ ಮೂವರ ದುರ್ಮರಣ
ತನ್ನ ಮೇಲೆ ಅವಲಂಬಿತಳಾಗಿರಲಿ ಅಂತ ದರೋಡೆ
ಕೊನೆಗೆ ಸ್ನೇಹಿತರು ಬಾಯ್ಬಿಟ್ಟ ಬಳಿಕ ಪೊಲೀಸರು ಪ್ರೀತೀಶ್ ಮಾಂಜ್ರೇಕರ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಈತ ಪ್ರೇಯಸಿ ತನ್ನನ್ನು ತೊರೆದಿದ್ದಕ್ಕೆ ಬೇಸರ ಗೊಂಡಿದ್ದ. ಆಕೆ ಮನೆ ದರೋಡೆ ಆದ್ರೆ, ಆರ್ಥಿಕವಾಗಿ ಸಂಕಷ್ಟವಾಗಿ, ಕೊನೆಗೆ ನನ್ನ ಬಳಿಯೇ ಖರ್ಚಿಗೆ ಹಣ ಕೇಳುತ್ತಾಳೆ. ಈ ನೆಪದಲ್ಲಾದರೂ ಆಕೆಗೆ ಹತ್ತಿರ ಆಗಬಹುದು ಅಂತ ಯೋಚಿಸಿ, ಈ ರೀತಿಯ ದರೋಡೆ ಮಾಡಿಸಿದ್ದಾಗಿ ಹೇಳಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ