Independence Day: ಬೆಳಗಾವಿಯಲ್ಲಿ ಹಾರಾಡಿತು ದೇಶದ ಅತೀ ಎತ್ತರದ ಧ್ವಜ! ಸಂಭ್ರಮಕ್ಕೆ ಸಾಕ್ಷಿಯಾದ ಕುಂದಾನಗರಿ

ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ‌ 75 ಕೆಜಿ ತೂಕದ ತಿರಂಗಾದ ಧ್ವಜಾರೋಹಣಕ್ಕೆ ಕುಂದಾನಗರಿ ಬೆಳಗಾವಿ ಸಾಕ್ಷಿಯಾಯಿತು. ಮಳೆಯಲ್ಲೂ  ಭಾರತ ಮಾತಾಕೀ ಜೈ.. ವಂದೇ ಮಾತರಂ ಜಯಘೋಷಗಳು ಅಮೃತ ಮಹೋತ್ಸವದ ಮೇರಗು ಹೆಚ್ವಿಸಿದ್ದವು.

ಅತೀ ಎತ್ತರದಲ್ಲಿ ಧ್ವಜ ಹಾರಾಟ

ಅತೀ ಎತ್ತರದಲ್ಲಿ ಧ್ವಜ ಹಾರಾಟ

  • Share this:
ಬೆಳಗಾವಿ: 75 ನೇ ಸ್ವಾತಂತ್ರ್ಯದ (75th indepandance day) ಅಮೃತ ಮಹೋತ್ಸವ (Amrit Mahotsav) ಸಂಭ್ರಮ ದೇಶಾದ್ಯಂತ ಆಚರಿಸಲಾಗುತ್ತಿದೆ. ನಿನ್ನೆಯೇ ಹರ್ ಘರ್ ತಿರಂಗಾ (Har Ghar Tiranga) ಅಭಿಯಾನಕ್ಕೆ (Campaign) ಚಾಲನೆ ಸಿಕ್ಕಿದ್ದು, ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ‌ 75 ಕೆಜಿ ತೂಕದ ತಿರಂಗಾದ ಧ್ವಜಾರೋಹಣಕ್ಕೆ ಕುಂದಾನಗರಿ ಬೆಳಗಾವಿ (Belagavi) ಸಾಕ್ಷಿಯಾಯಿತು. ಮಳೆಯಲ್ಲೂ  ಭಾರತ ಮಾತಾಕೀ ಜೈ.. ವಂದೇ ಮಾತರಂ ಜಯಘೋಷಗಳು ಅಮೃತ ಮಹೋತ್ಸವದ ಮೇರಗು ಹೆಚ್ವಿಸಿದ್ದವು. ದೇಶಾದ್ಯಂತ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದ ಸಡಗರ ಮನೆ ಮನೆಯಲ್ಲೂ ಮನೆ ಮಾಡಿದೆ. ದೇಶದ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಕ್ಷಣಗಳಿಗೆ ಕುಂದಾನಗರಿ ಬೆಳಗಾವಿ ಸಾಕ್ಷಿಯಾಗಿದ್ದು, ಇಲ್ಲಿನ ಜನರ ಸಂತೋಷವನ್ನು ಇನ್ನಷ್ಟು ಇಮ್ಮುಡಿಗೊಳಿಸಿದೆ.

ಮೆರವಣಿಗೆಯ ದೃಶ್ಯ


ದೇಶದ ಅತೀ ಎತ್ತರದ ಧ್ವಜ ಹಾರಾಟ

ಬೆಳಗಾವಿ ನಗರವನ್ನ ಪ್ರವೇಶಿಸುವಾಗ ಇರುವ ಕೋಟೆ ಕೆರೆ ಆವರಣದಲ್ಲಿ ಹಾರಿಸಲಾದ ದೇಶದ ಅತಿ ಎತ್ತರದ ಏಕೈಕ ರಾಷ್ಟ್ರ ಧ್ವಜಸ್ತಂಭ. ಒಂದೂವರೆ ಕೋಟಿ ವೆಚ್ಚದಲ್ಲಿ ಇದನ್ನ ನಿರ್ಮಿಸಲಾಗಿದೆ. ನಿನ್ನೆ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ 110 ಮೀಟರ್ ಎತ್ತರದ ಧ್ವಜಸ್ತಂಭದ ಮೇಲೆ 75 ಕೆಜಿ ತೂಕದ ತಿರಂಗಾ ರಾರಾಜಿಸುತ್ತಿದೆ.

ಮೆರವಣಿಗೆಯ ದೃಶ್ಯ


ಅತ್ಯಂತ ಎತ್ತರದಲ್ಲಿ ಹಾರಾಡಿದ ಧ್ವಜ

ಶಾಸಕ‌ ಅನಿಲ್ ಬೆನಕೆ ಬಟನ್ ಒತ್ತುವ ಮೂಲಕ ದೇಶದ ಅತಿ ಎತ್ತರದ ರಾಷ್ಟ್ರದ ಧ್ವಜಾರೋಹಣ ನೆರವೇರಿಸಿದರು. ಈ ಧ್ವಜಾರೋಹಣವೂ ಪೂರ್ಣಗೊಳ್ಳಲು 10 ನಿಮಿಷಗಳ ಸಮಯ ತಗಲುತ್ತದೆ. ತಿರಂಗಾ ನೆಲದಿಂದ ಮೇಲಕ್ಕೆ ಏರಲು ಆರಂಭಿಸಿದ ಕ್ಷಣದಿಂದಲೂ, ಆಗಸದಲ್ಲಿ ರಾರಾಜಿಸುವ ವರೆಗೂ ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆಗಳು ಮೊಳಗಿದವು.

ಇದನ್ನೂ ಓದಿ: Hubballi: ಕೆಂಪುಕೋಟೆಯಲ್ಲಿ ಹಾರಾಡೋ ಧ್ವಜ ತಯಾರಾಗೋದು ನಮ್ಮ ಕರ್ನಾಟಕದಲ್ಲಿ! ವಿಶೇಷ ಏನು ನೋಡಿ

ಆಗಸಕ್ಕೆ ತಿರಂಗಾ ಮುತ್ತಿಡುತ್ತಿದ್ದಂತೆ ರಾಷ್ಟ್ರಗೀತೆಯನ್ನ ಹಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಅನಂತರ 75 ಅಡಿ ಉದ್ದದ ತಿರಂಗಾದ ಮರವಣಿಗೆ ಆರಂಭಗೊಂಡು ಚೆನ್ನಮ್ಮ ವೃತ್ತದಲ್ಲಿ ಮುಕ್ತಾಯಗೊಂಡಿತು..

ವಿಶೇಷ ದಿನಗಳಲ್ಲಿ ಧ್ವಜ ಹಾರಾಟ

ಇನ್ನೂ 2017-18 ರಲ್ಲಿಯೇ ಈ ದೇಶದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ ನಿರ್ಮಿಸಿ, ಧ್ವಜಾರೋಹಣ ಮಾಡಲಾಗಿತ್ತು.. ಆರಂಭದಲ್ಲಿ 365 ದಿನಗಳ ಕಾಲವೂ‌ ಈ‌ ರಾಷ್ಟ್ರಧ್ವಜ ಹಾರಿಸುವ ಉದ್ದೇಶದಿಂದಲೇ ಈ ಹೆಮ್ಮೆಯ ಧ್ವಜಸ್ತಂಭವನ್ನ ನಿರ್ಮಾಣ ಮಾಡಲಾಗಿತ್ತು.. ಆಗ 500 ಕೆಜಿ ತೂಕದ ಧ್ವಜವನ್ನ ಹಾರಿಸಲಾಗುತ್ತಿತ್ತು... ಆದ್ರೆ ಮಳೆ, ಗಾಳಿಯಿಂದ ರಾಷ್ಟ್ರಧ್ವಜ ಹರಿದು ಬೀಳಲು ಆರಂಭಿಸಿತ್ತು.. ಹೀಗಾಗಿ 500 ಕೆಜಿ ತೂಕ ಧ್ವಜದ ಭಾರವನ್ನ ತಗ್ಗಿಸಿ 75 ಕೆಜಿ ತೂಕದ ಧ್ವಜವನ್ನ ಹಾರಿಸಲಾಗುತ್ತಿದೆ. ಆದ್ರೆ ಈಗ ಈ ರಾಷ್ಟ್ರಧ್ವಜವನ್ನ ಆಗಷ್ಟ್15, ಗಣರಾಜ್ಯೋತ್ಸವ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಮಾತ್ರ ಹಾರಿಸಲಾಗುತ್ತಿದೆ.

ಇದನ್ನೂ ಓದಿ: Har Ghar Tiranga: ರಾಜ್ಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನ, ಮನೆ ಮನೆಯಲ್ಲೂ ಹಾರುತಿಹುದು ನೋಡು ನಮ್ಮ ಬಾವುಟ

ಆಜಾದಿಕಾ ಅಮೃತ ಮಹೋತ್ಸವ ಪ್ರಯುಕ್ತ ವಾಗಿ ಮೂರು ದಿನಗಳ ಕಾಲ ನಿರಂತರವಾಗಿ ಈ ತಿರಂಗಾ ಆಗಸದಲ್ಲಿ ರಾರಾಜಿಸಲಿದೆ. ಈ ಮುಂಚೆ ಹಾರಿಸುತ್ತಿದ್ದ 500 ಕೆಜಿ ತಿರಂಗಾಗೆ  3 ರಿಂದ 4 ಲಕ್ಷ ರೂಪಾಯಿ ತಗಲುತ್ತಿತ್ತು.. ಇವಾಗ ಹಾರಿಸುತ್ತಿರುವ 75 ಕೆಜಿ ತೂಕದ ತಿರಂಗಾ ಗ 70 ರಿಂದ 80 ಸಾವಿರ ರುಪಾಯಿ ಖರ್ಚು ಆಗುತ್ತಿದೆ. ಆಗಷ್ಟ್ 15 ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ದಿನ. ಅದರಲ್ಲೂ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಹೆಚ್ಚಾಗಲು ಕುಂದಾನಗರಿ ಬೆಳಗಾವಿ ಸಾಕ್ಷಿಯಾಗಿದೆ.
Published by:Annappa Achari
First published: