• Home
  • »
  • News
  • »
  • breaking-news
  • »
  • Siddaramaiah: ನಾವು ಅಧಿಕಾರಕ್ಕೆ ಬಂದ್ರೆ ಹೆಣ್ಮಕ್ಕಳ ಸಾಲ ಮನ್ನಾ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ 10 ಸಾವಿರ ಕೋಟಿ! ಕೋಲಾರದಲ್ಲಿ ಸಿದ್ದರಾಮಯ್ಯ ಭರವಸೆ

Siddaramaiah: ನಾವು ಅಧಿಕಾರಕ್ಕೆ ಬಂದ್ರೆ ಹೆಣ್ಮಕ್ಕಳ ಸಾಲ ಮನ್ನಾ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ 10 ಸಾವಿರ ಕೋಟಿ! ಕೋಲಾರದಲ್ಲಿ ಸಿದ್ದರಾಮಯ್ಯ ಭರವಸೆ

'ಪ್ರಜಾಧ್ವನಿ' ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ

'ಪ್ರಜಾಧ್ವನಿ' ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ

"ನಾವು ಮತ್ತೆ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಹತ್ತು ಸಾವಿರ ಕೋಟಿ ಮೀಸಲಿಡ್ತೇವೆ, ಇಡೀ ರಾಜ್ಯದ ಸಹಕಾರಿ ಸಂಘಗಳಲ್ಲಿ ಹೆಣ್ಣು ಮಕ್ಕಳು ತೆಗೆದುಕೊಂಡಿರುವ ಸಾಲ ನಾವು ಮನ್ನಾ ಮಾಡುತ್ತೇವೆ" ಅಂತ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

  • Share this:

ಕೋಲಾರ: ವಿಧಾನಸಭೆ ಚುನಾವಣೆ (Karnataka Assembly Elections) ಘೋಷಣೆಗೂ ಮುನ್ನವೇ ರಾಜ್ಯ ಕಾಂಗ್ರೆಸ್ (Congress) ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದೆ. ‘ಪ್ರಜಾಧ್ವನಿ’ (Praja Dhwani) ಹೆಸರಲ್ಲಿ ನಡೆಯುತ್ತಿರುವ ಸಮಾವೇಶ ಇಂದು ಕೋಲಾರದಲ್ಲಿ (Kolar) ಆಯೋಜನೆಯಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸುತ್ತಾರೆ ಎನ್ನುವ ಕಾರಣಕ್ಕೆ ಪ್ರತಿಷ್ಠೆಯ ಕ್ಷೇತ್ರವಾಗಿರುವ ಕೋಲಾರದಲ್ಲಿ ಇಂದು ಸಿದ್ದರಾಮಯ್ಯ ಭರ್ಜರಿ ಭಾಷಣ ಮಾಡಿದ್ರು. ಈ ವೇಳೆ “ರಾಜ್ಯದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಹತ್ತು ಸಾವಿರ ಕೋಟಿ ಮೀಸಲಿಡ್ತೇವೆ, ಇಡೀ ರಾಜ್ಯದ ಸಹಕಾರಿ ಸಂಘಗಳಲ್ಲಿ ಹೆಣ್ಣು ಮಕ್ಕಳು ತೆಗೆದುಕೊಂಡಿರುವ ಸಾಲ ನಾವು ಮನ್ನಾ ಮಾಡುತ್ತೇವೆ” ಅಂತ ಭರವಸೆ ನೀಡಿದ್ದಾರೆ.


“ಮೋದಿ, ಅಮಿತ್ ಶಾ ನೂರು ಸಲ ಬಂದ್ರೂ ಕಾಂಗ್ರೆಸ್‌ಗೆ ಅಧಿಕಾರ”


ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸಲು ಪ್ರಾರಂಭ ವಾಗಿದೆ ಎಂದ ಸಿದ್ದರಾಮಯ್ಯ, ಹೀಗಾಗಿ ಬಿಜೆಪಿಯವರು ನರೇಂದ್ರ ಮೋದಿ ಅವ್ರನ್ನು ವಾರಕ್ಕೊಮ್ಮೆ ಕರೆಸಲು ಆರಂಭಿಸಿದ್ದಾರೆ. ನರೇಂದ್ರ ಮೋದಿ ಅವ್ರು ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರ ಕೂಡಿಸುತ್ತಾರೆ ಎಂಬ ಭ್ರಮೆಯಲ್ಲಿ ಬಿಜೆಪಿಯವರು ಇದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ನೂರು ಬಾರಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕ ಬರುವುದನ್ನು ತಡೆಯುವುದು ಅವರಿಗೆ ಆಗಲ್ಲ, ಇದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂಬುದನ್ನು ನಾನು ಹೇಳುತ್ತೇನೆ ಅಂತ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.


“ಬಿಜೆಪಿ ಸರ್ಕಾರದಷ್ಟು ಭ್ರಷ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ”


ಬಿಜೆಪಿ ಸರ್ಕಾರದಷ್ಟು ಭ್ರಷ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಪ್ರತಿ ಕಾಂಟ್ರಾಕ್ಟ್ ಗೂ ನಾವು 40% ಕಮೀಷನ್ ಕೊಡಬೇಕಾಗಿದೆ ಎಂದು ಕೆಂಪಣ್ಣ ಪ್ರಧಾನಿ‌ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಬೇಡಿಕೊಂಡಿದ್ದಾರೆ. ಅಧಿಕಾರಕ್ಕೆ ಬರುವ ಮೊದಲು ಮೋದಿನ ಖಾವುಂಗಾ ನ ಖಾನೆ ದೂಂಗಾ ಎಂದಿದ್ದರು. ಆದರೆ ಕೆಂಪಣ್ಣ ಪತ್ರ ಬರೆದು ಒಂದೂವರೆ ವರ್ಷ ಆದರೂ ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ರು. ತನಿಖೆ ಆರಂಭಿಸಿ ದಾಖಲಾತಿ ಕೊಡ್ತೇನೆ ಎಂದು ಕೆಂಪಣ್ಣ ಹೇಳಿದ್ದಾರೆ. ದಾಖಲೆ ಕೊಡಿ ಎಂದು ಬಸವರಾಜ ಬೊಮ್ಮಾಯಿ ಕೇಳುತ್ತಿದ್ದಾರೆ. ನೀವು ತನಿಖೆ ಆರಂಭಿಸಿ ನಾಚು ದಾಖಲೆ ಕೊಡುತ್ತೇವೆ. ದಾಖಲೆ ಕೊಡದಿದ್ದರೆ ನೀವು ಕೊಡುವ ಶಿಕ್ಷೆಗೆ ಸಿದ್ದರಿದ್ದೇವೆ ಅಂತ ಕೆಂಪಣ್ಣ ಹೇಳಿದ್ದಾರೆ ಅಂತ ಮಾಹಿತಿ ನೀಡಿದ್ರು.


ಇದನ್ನೂ ಓದಿ:  Minister Sudhakar: ಕಾಂಗ್ರೆಸ್ ಅವಧಿಯಲ್ಲಿ 35 ಸಾವಿರ ಕೋಟಿ ಭ್ರಷ್ಟಾಚಾರ! ಸಚಿವ ಸುಧಾಕರ್ ಗಂಭೀರ ಆರೋಪ


ಸ್ಪೀಕರ್ ವಿರುದ್ಧ ಗುಡುಗಿದ ಸಿದ್ದರಾಮಯ್ಯ


ನಾನು ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿಯೇ ಇಂತಹ ಸ್ಪೀಕರ್‌ ನೋಡಿರಲಿಲ್ಲ. 40% ಕಮೀಷನ್ ಬಗ್ಗೆ ಮಾತನಾಡಲು ಮೂರು ಬಾರಿ ವಿಧಾನಸಭೆಯಲ್ಲಿ ಪ್ರಯತ್ನಿಸಿದ್ದೆ. ಆದರೆ ಒಂದಲ್ಲ ಒಂದು ಕಾರಣ ಕೊಟ್ಟು ಪ್ರಸ್ತಾವನೆ ಮಾಡಲು ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶವನ್ನೇ ಕೊಡಲಿಲ್ಲ. ರಮೇಶ್ ಕುಮಾರ್ ಅವರೂ ಕೂಡ ಸ್ಪೀಕರ್ ಆಗಿದ್ದರು. ಆದರೆ ವಿಶ್ವೇಶ್ವರ್ ಹೆಗಡೆ ಕಾಗೇರಿ ಅಂಥ ಸ್ಪೀಕರ್ ಅನ್ನು ನಾನು ನನ್ನ ರಾಜಕೀಯ ಇತಿಹಾಸದ 40 ವರ್ಷಗಳಲ್ಲಿ ನೋಡಿಲ್ಲ ಅಂತ ವಾಗ್ದಾಳಿ ನಡೆಸಿದ್ರು.


“ನನ್ನ ಕಾಲದಲ್ಲಿ ಒಂದು ಪೈಸೆ ಲಂಚ ಇರಲಿಲ್ಲ”


ಹೋಟೆಲ್ ಗಳಲ್ಲಿ ತಿಂಡಿಗಳ ಬೆಲೆ ಬಗ್ಗೆ ಬೋರ್ಡ್ ಹಾಕಿರ್ತಾರೆ, ಅದೇ ತರ ಇವತ್ತು ಯಾವುದಕ್ಕೆ ಎಷ್ಟು ಲಂಚ ಅಂತಾ ಬೋರ್ಡ್ ಹಾಕಿದ್ರೆ ಒಳ್ಳೆಯದು, ವಿಧಾನಸೌಧದ ಗೋಡೆಗಳಿಗೆ ಕಿವಿಕೊಟ್ಟರೆ ಲಂಚ ಲಂಚ ಅಂತಾ ಕೇಳಿಸುತ್ತದೆ. ನನ್ನ ಕಾಲದಲ್ಲಿ ಒಂದು ಪೈಸೆ ಲಂಚ ಇರಲಿಲ್ಲ, ಯಾರಾದ್ರೂ ಸಾಬೀತು ಮಾಡಿ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ರು.


“ಎತ್ತಿನ ಹೊಳೆ ಯೋಜನೆಗೆ ಕುಮಾರಸ್ವಾಮಿ ವಿರೋಧ”


ಎತ್ತಿನ ಹೊಳೆ ಯೋಜನೆಗೆ, ಕೆಸಿ ವ್ಯಾಲಿ ಯೋಜನೆಗೆ ವಿರೋಧ ಮಾಡಿದವರು ಮಿ. ಎಚ್ ಡಿ ಕುಮಾರಸ್ವಾಮಿ. ನಮ್ಮ ಅಧಿಕಾರದ ನಂತರ ಯೋಜನೆಯನ್ನು ಮುಂದುವರೆಸಿಲ್ಲ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ಬಂದ ನಂತರ ಎತ್ತಿನ ಹೊಳೆ ಯೋಜನೆ ಜಾರಿ ಮಾಡ್ತೇವೆ. ಆ‌ ಮೂಲಕ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಿಗೆ ಕುಡಿಯುವ ನೀರು ಕೊಡ್ತೇವೆ ಅಂತ ಸಿದ್ದರಾಮಯ್ಯ ಶಪಥ ಮಾಡಿದ್ರು.


ಹೆಣ್ಣು ಮಕ್ಕಳ ಸಾಲ ಮನ್ನಾ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕ್ರಮ


ಇಡೀ ರಾಜ್ಯದ ಸಹಕಾರಿ ಸಂಘಗಳಲ್ಲಿ ಹೆಣ್ಣು ಮಕ್ಕಳು ತೆಗೆದುಕೊಂಡಿರುವ ಸಾಲ ನಾವು ಮನ್ನಾ ಮಾಡುತ್ತೇವೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತ ರ ಕಲ್ಯಾಣ ಕ್ಕೆ ಹತ್ತು ಸಾವಿರ ಕೋಟಿ ಮೀಸಲಿಡ್ತೇವೆ ಅಂತ ಭರವಸೆ ನೀಡಿದ್ರು.
“ಹೈಕಮಾಂಡ್ ಒಪ್ಪಿದ್ರೆ ಕೋಲಾರದಿಂದಲೇ ಸ್ಪರ್ಧೆ”


ಇನ್ನು ನಾನು ಈಗಾಗಲೇ ಹೇಳಿದ್ದೇನೆ, ಕೋಲಾರದಿಂದ ಸ್ಪರ್ಧೆ ಮಾಡಲು ನಾನು ತೀರ್ಮಾನ ಮಾಡಿದ್ದೇನೆ ಅಂತ. ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಮಾತ್ರ ಸ್ಪರ್ಧೆ ಮಾಡ್ತೇನೆ ಅಂತ ಹೇಳಿದ್ರು.

Published by:Annappa Achari
First published: